ಸೆಪ್ಟೆಂಬರ್ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ದ್ವಿಚಕ್ರ ವಾಹನಗಳಿವು

2020ರ ಸೆಪ್ಟೆಂಬರ್ ತಿಂಗಳ ದ್ವಿಚಕ್ರ ವಾಹನ ಮಾರಾಟದ ವರದಿ ಬಹಿರಂಗವಾಗಿದೆ. ವರದಿಯ ಪ್ರಕಾರ, ಭಾರತೀಯ ಮಾರುಕಟ್ಟೆಯಲ್ಲಿ ಹೀರೋ ಸ್ಪ್ಲೆಂಡರ್ ಮತ್ತು ಹೋಂಡಾ ಆಕ್ಟಿವಾ ತಮ್ಮ ವಿಭಾಗಗಳಲ್ಲಿ ಪ್ರಾಬಲ್ಯವನ್ನು ಮುಂದುವರೆಸಿದೆ.

ಸೆಪ್ಟೆಂಬರ್ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ದ್ವಿಚಕ್ರ ವಾಹನಗಳು

ಹೀರೋ ಸ್ಪ್ಲೆಂಡರ್ ಮತ್ತೊಮ್ಮೆ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನವಾಗಿದೆ .2020ರ ಸೆಪ್ಟೆಂಬರ್ ತಿಂಗಳಲ್ಲಿ ಸ್ಪ್ಲೆಂಡರ್ ಮಾದರಿಯ 2,80,250 ಯುನಿಟ್‌ಗಳು ಮಾರಾಟಾವಾಗಿವೆ. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ 2.30 ಲಕ್ಷ ಸ್ಪ್ಲೆಂಡರ್ ಬೈಕುಗಳು ಮಾರಾಟವಾಗಿತ್ತು. 2020ರ ಆಗಸ್ಟ್ ತಿಂಗಳ ಮಾರಾಟವನ್ನು ಹೋಲಿಸಿದರೆ 50,000 ಯುನಿಟ್‌ಗಳು ಹೆಚ್ಚು ಮಾರಾಟವಾಗಿವೆ.

ಸೆಪ್ಟೆಂಬರ್ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ದ್ವಿಚಕ್ರ ವಾಹನಗಳು

ಹಾಗಯೇ ಹೋಂಡಾ ಆಕ್ಟಿವಾ ಮತ್ತೆ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾದ ಸ್ಕೂಟರ್ ಆಗಿ ಮುಂದುವರೆದಿದೆ. ಪ್ರಸ್ತುತ ತನ್ನ ಆರನೇ ತಲೆಮಾರಿನ ಸ್ಕೂಟರ್ ಅನ್ನು ಮಾರಾಟವನ್ನು ಮಾಡುತ್ತಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಜಾಜ್ ಪಲ್ಸರ್ ಎನ್ಎಸ್ ಬೈಕುಗಳು

ಸೆಪ್ಟೆಂಬರ್ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ದ್ವಿಚಕ್ರ ವಾಹನಗಳು

ತಿಂಗಳಿನಿಂದ ತಿಂಗಳಿಗೆ ಉತ್ತಮವಾಗಿ ಮಾರಾಟವಾಗುತ್ತಿದೆ. 2020ರ ಸೆಪ್ಟೆಂಬರ್ ತಿಂಗಳಲ್ಲಿ ಹೋಂಡಾ ಆಕ್ಟಿವಾದ 2.57 ಲಕ್ಷ ಯುನಿಟ್‌ಗಳು ಮಾರಾಟವಾಗಿವೆ. ಆಗಸ್ಟ್‌ನಲ್ಲಿ ಮಾರಾಟಕ್ಕೆ ಹೋಲಿಸಿದರೆ 50,000 ಯುನಿಟ್‌ಗಳು ಹೆಚ್ಚಳವಾಗಿದೆ.

ಸೆಪ್ಟೆಂಬರ್ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ದ್ವಿಚಕ್ರ ವಾಹನಗಳು

ಈ ಪಟ್ಟಿಯಲ್ಲಿ ಅಗ್ರ-ಮೂರು ಸ್ಥಾನವನ್ನು ಮತ್ತೊಂದು ಹೀರೋ ಕಮ್ಯೂಟರ್ ಬೈಕ್ ಹೆಚ್ಎಫ್ ಡಿಲಕ್ಸ್ ಪಡೆದುಕೊಂಡಿದೆ. ಹೀರೋ ಹೆಚ್ಎಫ್ ಡಿಲಕ್ಸ್ ಹಿಂದಿನ ತಿಂಗಳಲ್ಲಿ 2,16,201 ಯುನಿಟ್‌ಗಳು ಮಾರಾಟವಾಗಿವೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಸೆಪ್ಟೆಂಬರ್ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ದ್ವಿಚಕ್ರ ವಾಹನಗಳು

ಜಪಾನಿನ ಬ್ರ್ಯಾಂಡ್‌ನ ಪ್ರೀಮಿಯಂ ಕಮ್ಯೂಟರ್ ಬೈಕ್ ಹೋಂಡಾ ಸಿಬಿ ಶೈನ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಸಿಬಿ ಶೈನ್ ಮಾದರಿಯ 118,004 ಯುನಿಟ್‌ಗಳು ಮಾರಾಟವಾಗಿವೆ. ಇದು ಆಗಸ್ಟ್‌ನಲ್ಲಿನ ಮಾರಾಟದಿಂದ ಹೆಚ್ಚಳವಾಗಿದ್ದರೂ, ಇದು ಅಗ್ರ-ಮೂರು ಮಾರಾಟದ ಸಂಖ್ಯೆಯಿಂದ ಬಹಳ ದೂರದಲ್ಲಿದೆ.

ಸೆಪ್ಟೆಂಬರ್ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ದ್ವಿಚಕ್ರ ವಾಹನಗಳು

ಪಟ್ಟಿಯಲ್ಲಿ ಐದನೇ ಸ್ಥಾನವನ್ನು ಬಜಾಜ್ ಪಲ್ಸರ್ ಸರಣಿಯು ಆಕ್ರಮಿಸಿಕೊಂಡಿದೆ. ಬಜಜ್ ಪಲ್ಸರ್ 102,698 ಯುನಿಟ್‌ಗಳು ಮಾರಾಟವಾಗಿವೆ. ಪಲ್ಸರ್ ಸರಣಿಯು ಪಲ್ಸರ್ 125 ದಿಂದ 220ಎಫ್ ವರೆಗೆ ಲಭ್ಯವಿದೆ. ಸರಣಿಯ ಪ್ರಮುಖ ಮಾದರಿಗಳು 200ಎನ್ಎಸ್ ಮತ್ತು 200ಆರ್‍ಎಸ್ ಮಾದರಿಗಳಾಗಿವೆ.

MOST READ: ದುಬಾರಿಯಾಯ್ತು ಬಿಎಸ್-6 ಟಿವಿಎಸ್ ಎನ್‌ಟಾರ್ಕ್ 125 ಸ್ಕೂಟರ್

ಸೆಪ್ಟೆಂಬರ್ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ದ್ವಿಚಕ್ರ ವಾಹನಗಳು

ಹೀರೋ ಗ್ಲ್ಯಾಮರ್ ಮಾದರಿಯು ಟಿವಿಎಸ್ ಎಕ್ಸ್‌ಎಲ್ ಮಾರಾಟವನ್ನು ಹಿಂದಿಕ್ಕಿ 2020ರ ಸೆಪ್ಟೆಂಬರ್‌ನಲ್ಲಿ ಆರನೇ ಸ್ಥಾನವನ್ನು ಪಡೆದುಕೊಂಡಿದೆ. ಗ್ಲ್ಯಾಮರ್ ಮಾದರಿಯ 69,477 ಯುನಿಟ್‌ಗಳು ಮಾರಾಟವಾಗಿವೆ. ಇದು ಟಿವಿಎಸ್ ಮೋಟಾರ್ ಕಂಪನಿಯ ಮೊಪೆಡ್ ಗಿಂತ ಕೇವಲ 1000 ಯುನಿಟ್‌ಗಳಷ್ಟು ಹೆಚ್ಚಾಗಿದೆ.

Rank Models Sep-20
1 Hero Splendor 2,80,250
2 Honda Activa 2,57,900
3 Hero HF Deluxe 2,16,201
4 Honda CB Shine 1,18,004
5 Bajaj Pulsar 1,02,698
6 Hero Glamour 69,477
7 TVS XL Moped 68,929
8 Hero Passion 63,296
9 TVS Jupiter 56,085
10 Bajaj Platina 55,496

Table Courtesy: Autopunditz.com

ಸೆಪ್ಟೆಂಬರ್ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ದ್ವಿಚಕ್ರ ವಾಹನಗಳು

ಇನ್ನು ಮಾರಾಟದ ಪಟ್ಟಿಯಲ್ಲಿ ಹೀರೋ ಪ್ಯಾಶನ್ ಪಟ್ಟಿಯಲ್ಲಿ ಎಂಟನೇ ಸ್ಥಾನವನ್ನು ಪಡೆದುಕೊಂಡಿದೆ. 2020ರ ಸೆಪ್ಟೆಂಬರ್ ತಿಂಗಳಲ್ಲಿ ಹೀರೋ ಪ್ಯಾಶನ್ ಮಾದರಿಯ 63,296 ಯುನಿಟ್‌ಗಳು ಮಾರಾಟವಾಗಿವೆ.

ಸೆಪ್ಟೆಂಬರ್ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್-10 ದ್ವಿಚಕ್ರ ವಾಹನಗಳು

ಅಂತಿಮ ಎರಡು ಸ್ಥಾನಗಳನ್ನು ಟಿವಿಎಸ್ ಗುರು ಮತ್ತು ಬಜಾಜ್ ಪ್ಲ್ಯಾಟಿನಾ ಆಕ್ರಮಿಸಿಕೊಂಡಿದೆ. 2020ರ ಸೆಪ್ಟೆಂಬರ್ ತಿಂಗಳಲ್ಲಿ ಟಿವಿಎಸ್ ಜೂಪಿಟರ್ ಸ್ಕೂಟರ್ 56,085 ಯುನಿಟ್‌ಗಳು ಮಾರಾಟವಾಗಿವೆ. ಬಜಾಜ್ ಪ್ಲ್ಯಾಟಿನಾ ಇದೇ ಅವಧಿಯಲ್ಲಿ 55,496 ಯುನಿಟ್‌ಗಳು ಮಾರಾಟವಾಗಿವೆ

Most Read Articles

Kannada
English summary
Best-Selling Bikes & Scooters In India For September 2020. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X