ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಆರ್‌ಆರ್ ಗ್ಲೋಬಲ್

ಪುಣೆ ಮೂಲದ ಆರ್‌ಆರ್ ಗ್ಲೋಬಲ್ ಕಂಪನಿಯು ತನ್ನ ಮೊದಲ ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಅನಾವರಣಗೊಳಿಸಿ ಬಿಡುಗಡೆ ಮಾಡಿದ್ದು, ಹೊಸ ಇವಿ ಸ್ಕೂಟರ್ ಮಾದರಿಯು ಹಲವಾರು ವಿಶೇಷತೆಗಳೊಂದಿಗೆ ರಸ್ತೆಗಿಳಿಯುತ್ತಿದೆ.

ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಆರ್‌ಆರ್ ಗ್ಲೋಬಲ್

ಸದ್ಯ ದೇಶಾದ್ಯಂತ ಹಲವಾರು ಆಟೋ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯತ್ತ ಹೆಚ್ಚು ಗಮನಹರಿಸುತ್ತಿದ್ದು, ದಿನಬಳಕೆಯ ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಆರ್‌ಆರ್ ಗ್ಲೋಬಲ್ ಕಂಪನಿಯು ಕೂಡಾ ಇದೀಗ ಎಲೆಕ್ಟ್ರಿಕ್ ಸ್ಕೂಟರ್ ನಿರ್ಮಾಣ ಮಾಡುವ ಮೂಲಕ ಆಟೋ ಉದ್ಯಮಕ್ಕೆ ಕಾಲಿಟ್ಟಿದೆ. ಆರ್‌ಆರ್ ಗ್ಲೋಬಲ್ ಕಂಪನಿಯು ಬಿಡುಗಡೆ ಮಾಡಿರುವ ಮೊದಲ ಎಲೆಕ್ಟ್ರಿಕ್ ಮಾದರಿಯು ಅತ್ಯುತ್ತಮ ಬ್ಯಾಟರಿ ಸೌಲಭ್ಯ ಹೊಂದಿದ್ದು, ಗ್ರಾಹಕರ ಬೇಡಿಕೆಯೆಂತೆ ಐದು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಆರ್‌ಆರ್ ಗ್ಲೋಬಲ್

ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಮೈಲೇಜ್ ರೇಂಜ್ ಆಧಾರದ ಮೇಲೆ A2 ಮತ್ತು B8 ಮಾದರಿಗಳನ್ನು ಬಿಡುಗಡೆ ಮಾಡಲಾಗುತ್ತಿದ್ದು, A2 ಮಾದರಿಯು ಲೀಡ್ ಆ್ಯಸಿಡ್ ಬ್ಯಾಟರಿ ಹೊಂದಲಿದ್ದರೆ B8 ಮಾದರಿಯು ಲೀಥಿಯಂ ಅಯಾನ್ ಬ್ಯಾಟರಿ ಹೊಂದಿರಲಿದೆ.

ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಆರ್‌ಆರ್ ಗ್ಲೋಬಲ್

ಪ್ರತಿ ವೆರಿಯೆಂಟ್‌‌ನಲ್ಲೂ ಲೋ, ಮಿಡ್ ಮತ್ತು ಹೈ ಸ್ಪೀಡ್ ರೇಂಜ್ ನೀಡಲಾಗಿದ್ದು, ಲೀಡ್ ಆ್ಯಸಿಡ್ ಬ್ಯಾಟರಿ ಪ್ರೇರಿತ ಬಿಗೌಸ್ ಸ್ಕೂಟರ್‌ ಮಾದರಿಯು ಪ್ರತಿ ಚಾರ್ಜ್‌ಗೆ 78 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದರೆ, ಲೀಥಿಯಂ ಅಯಾನ್ ಬ್ಯಾಟರಿ ಪ್ರೇರಿತ ಸ್ಕೂಟರ್ ಮಾದರಿಯು ಪ್ರತಿ ಚಾರ್ಜ್‌ಗೆ ಗರಿಷ್ಠ 70 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಆರ್‌ಆರ್ ಗ್ಲೋಬಲ್

ಲೀಡ್ ಆ್ಯಸಿಡ್ ಬ್ಯಾಟರಿಯು ಪೂರ್ಣಪ್ರಮಾಣದ ಚಾರ್ಜ್ ಆಗಲು ಗರಿಷ್ಠ 8 ಗಂಟೆ ತೆಗೆದುಕೊಳ್ಳಲಿದ್ದರೆ ಲೀಥಿಯಂ ಅಯಾನ್ ಬ್ಯಾಟರಿಯು ಪೂರ್ಣಪ್ರಮಾದ ಚಾರ್ಜ್ ಆಗಲು ಗರಿಷ್ಠ 2 ಗಂಟೆ 15 ನಿಮಿಷ ಸಮಯಾವಕಾಶ ತೆಗೆದುಕೊಳ್ಳಲಿದೆ.

ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಆರ್‌ಆರ್ ಗ್ಲೋಬಲ್

ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ(ಎಕ್ಸ್‌ಶೋರೂಂ ಪ್ರಕಾರ)

A2 ಲೀಡ್ ಆ್ಯಸಿಡ್ ವೆರಿಯೆಂಟ್- ರೂ. 52,499

B8 ಲೀಡ್ ಆ್ಯಸಿಡ್ ವೆರಿಯೆಂಟ್- ರೂ. 62,999

A2 ಲೀಥಿಯಂ ಅಯಾನ್ ವೆರಿಯೆಂಟ್- ರೂ. 67,999

B8 ಲೀಥಿಯಂ ಅಯಾನ್ ವೆರಿಯೆಂಟ್- ರೂ. 82,999

B8 ಲೀ-ಟೆಕ್ ವೆರಿಯೆಂಟ್- ರೂ. 88,999

ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಆರ್‌ಆರ್ ಗ್ಲೋಬಲ್

ಇನ್ನು ಬಿಗೌಸ್ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳ ಗರಿಷ್ಠ ವೇಗವನ್ನು 50ಕಿ.ಮೀ ಮಿತಗೊಳಿಸಲಾಗಿದ್ದು, ಹೊಸ ಸ್ಕೂಟರ್‌ಗಳಲ್ಲಿ ತೆಗೆದುಹಾಕಬಹುದಾದ ಬ್ಯಾಟರಿ, ಎಲ್ಇಡಿ ಇನ್‌ಸ್ಟ್ರುಮೆಂಟ್ ಪ್ಯಾನೆಲ್, ಯುಎಸ್‌ಬಿ ಚಾರ್ಚಿಂಗ್ ಸಾಕೆಟ್, ತ್ರಿ ರೈಡಿಂಗ್ ಮೋಡ್ಸ್, ರಿವರ್ಸ್ ಅಸಿಸ್ಟ್, ಎರಡು ಬದಿ ಚಕ್ರದಲ್ಲೂ ಡಿಸ್ಕ್‌ ಬ್ರೇಕ್, ಸೈಡ್ ಸ್ಯಾಂಡ್ ಸೆನ್ಸಾರ್ ಮತ್ತು ಮಲ್ಟಿ ಕಲರ್ ಡಿಜಿಟಲ್ ಡಿಸ್‌ಪ್ಲೇ ಪಡೆದುಕೊಂಡಿದೆ.

MOST READ: ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಆರ್‌ಆರ್ ಗ್ಲೋಬಲ್

ಜೊತೆಗೆ ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸ್ಮಾರ್ಟ್ ಫೋನ್‌ನಲ್ಲಿ ಪ್ರತ್ಯೇಕವಾದ ಆ್ಯಪ್ ಮೂಲಕ ಹಲವು ತಾಂತ್ರಿಕ ಅಂಶಗಳನ್ನು ನಿಯಂತ್ರಣ ಮಾಡಬಹುದಾಗಿದ್ದು, ಆ್ಯಪ್‌ ಮೂಲಕವೇ ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸ್ಟಾರ್ಟ್ ಮಾಡಬಹುದಲ್ಲದೆ ಸ್ಕೂಟರ್ ಇರುವ ಸ್ಥಳ ಗುರುತಿಸುವಿಕೆ ಮತ್ತು ಸೆಂಟರ್ ಸೀಟ್ ಲಾಕ್ ಅನ್ನು ಸಹ ನಿಯಂತ್ರಣ ಮಾಡಬಹುದಾಗಿದೆ.

ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಆರ್‌ಆರ್ ಗ್ಲೋಬಲ್

ಹೊಸ ಎಲೆಕ್ಟ್ರಿಕ್‌ಗಳನ್ನು ಮುಂದಿನ ತಿಂಗಳು ಅಗಸ್ಟ್ ಮಧ್ಯಂತರದಲ್ಲಿ ವಿತರಣೆ ಆರಂಭಿಸುವುದಾಗಿ ಹೇಳಿಕೊಂಡಿರುವ ಆರ್‌ಆರ್ ಗ್ಲೋಬಲ್ ಕಂಪನಿಯು ಅಧಿಕೃತವಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಿದ್ದು, ರೂ. 3 ಸಾವಿರ ಮುಂಗಡದೊಂದಿಗೆ ಆಸಕ್ತ ಗ್ರಾಹಕರು ಮುಂಗಡ ಪಾವತಿಸಬಹುದಾಗಿದೆ.

MOST READ: ದ್ವಿಚಕ್ರ ವಾಹನಗಳ ಖರೀದಿ ಮೇಲೆ ಹೊಸ ಲೋನ್ ಆಫರ್ ಘೋಷಿಸಿದ ಹೋಂಡಾ

ಬಿಗೌಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ ಆರ್‌ಆರ್ ಗ್ಲೋಬಲ್

ಪ್ರಸಕ್ತ ಆರ್ಥಿಕ ವರ್ಷದಲ್ಲಿ 80 ಸಾವಿರ ಯುನಿಟ್ ಉತ್ಪಾದನೆ ಮಾಡಲು ಯೋಜನೆ ರೂಪಿಸಿರುವ ಆರ್‌ಆರ್ ಗ್ಲೋಬಲ್ ಕಂಪನಿಯು ಹೊಸ ಇವಿ ಸ್ಕೂಟರ್ ಅನ್ನು ಆರಂಭಿಕವಾಗಿ ಪುಣೆ, ಮುಂಬೈ, ಬೆಂಗಳೂರು, ಚೆನ್ನೈ, ಹೈದ್ರಾಬಾದ್‌ನಲ್ಲಿ ಮಾತ್ರವೇ ಮಾರಾಟಕ್ಕೆ ಚಾಲನೆ ನೀಡುತ್ತಿದೆ.

Most Read Articles

Kannada
English summary
BGauss Commences Online Bookings For Its Electric Scooters In India. Read in Kannada.
Story first published: Wednesday, July 15, 2020, 16:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X