ಸದ್ಯದಲ್ಲೇ ಬಿಡುಗಡೆಯಾಗಲಿವೆ ಸಿಎಫ್‌ಮೊಟೊ ಬಿಎಸ್ 6 ಬೈಕ್‌ಗಳು

ಕರೋನಾ ವೈರಸ್‌ ಕಾರಣದಿಂದಾಗಿ ಅನೇಕ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನ ತಯಾರಕ ಕಂಪನಿಗಳು ತಮ್ಮ ಬಿಎಸ್ 6 ವಾಹನಗಳ ಬಿಡುಗಡೆಯನ್ನು ಮುಂದೂಡಿವೆ. ಚೀನಾದ ಬೈಕ್ ತಯಾರಕ ಕಂಪನಿಯಾದ ಸಿಎಫ್‌ಮೊಟೊ ಕೂಡ ತನ್ನ ಬೈಕುಗಳ ಬಿಡುಗಡೆಯನ್ನು ಮುಂದೂಡಿದೆ.

ಸದ್ಯದಲ್ಲೇ ಬಿಡುಗಡೆಯಾಗಲಿವೆ ಸಿಎಫ್‌ಮೊಟೊ ಬಿಎಸ್ 6 ಬೈಕ್‌ಗಳು

ಕಂಪನಿಯು ಕಳೆದ ವರ್ಷವಷ್ಟೇ ದೇಶಿಯ ಮಾರುಕಟ್ಟೆಗೆ ಕಾಲಿಟ್ಟಿತು. ಸಿಎಫ್‌ಮೊಟೊ ತನ್ನ ಬೈಕ್‌ಗಳ ವಿತರಣೆಯನ್ನು ಕಳೆದ ವರ್ಷದ ನವೆಂಬರ್‌ನಿಂದ ಆರಂಭಿಸಿತು. ಕಂಪನಿಯು ತನ್ನ ಬೈಕುಗಳನ್ನು ತನ್ನ ಪ್ರತಿಸ್ಪರ್ಧಿ ಕಂಪನಿ ಬೈಕುಗಳಿಗಿಂತ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಕಂಪನಿಯು ತನ್ನ ಬೈಕ್‌ಗಳ ಬುಕ್ಕಿಂಗ್ ಗಳನ್ನು ಸ್ಥಗಿತಗೊಳಿಸಿತ್ತು.

ಸದ್ಯದಲ್ಲೇ ಬಿಡುಗಡೆಯಾಗಲಿವೆ ಸಿಎಫ್‌ಮೊಟೊ ಬಿಎಸ್ 6 ಬೈಕ್‌ಗಳು

ಅನ್ ಲಾಕ್ ಪ್ರಕ್ರಿಯೆ ಆರಂಭವಾದ ನಂತರ ಕಂಪನಿಯು ತನ್ನ ಬೈಕುಗಳ ಬುಕ್ಕಿಂಗ್ ಗಳನ್ನು ಪುನರಾರಂಭಿಸಿದೆ. ಮಾಹಿತಿಯ ಪ್ರಕಾರ, ಸಿಎಫ್‌ಮೊಟೊ ಕಂಪನಿಯು ತನ್ನ ಬಿಎಸ್ 6 ಸರಣಿಯ ಬೈಕುಗಳನ್ನು ಮುಂಬರುವ ವಾರಗಳಲ್ಲಿ ಬಿಡುಗಡೆಗೊಳಿಸಲಿದೆ.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಸದ್ಯದಲ್ಲೇ ಬಿಡುಗಡೆಯಾಗಲಿವೆ ಸಿಎಫ್‌ಮೊಟೊ ಬಿಎಸ್ 6 ಬೈಕ್‌ಗಳು

ಈ ಬೈಕ್‌ಗಳ ಟೆಸ್ಟ್ ರೈಡ್ ಗಳಿಗಾಗಿ ಕಂಪನಿಯು ತನ್ನ ವೆಬ್‌ಸೈಟ್‌ನಲ್ಲಿ ರಿಜಿಸ್ಟ್ರೇಷನ್ ಗಳನ್ನು ಆರಂಭಿಸಿದೆ. ಸಿಎಫ್‌ಮೊಟೊ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ 300 ಎನ್‌ಕೆ, 650 ಎನ್‌ಕೆ, 650 ಎಂಟಿ ಹಾಗೂ 650 ಜಿಟಿ ಬೈಕ್ ಗಳನ್ನು ಬಿಡುಗಡೆಗೊಳಿಸಲಿದೆ.

ಸದ್ಯದಲ್ಲೇ ಬಿಡುಗಡೆಯಾಗಲಿವೆ ಸಿಎಫ್‌ಮೊಟೊ ಬಿಎಸ್ 6 ಬೈಕ್‌ಗಳು

ಬಿಎಸ್ 6 ಮಾಲಿನ್ಯ ನಿಯಮಗಳಿಗೆ ಅನುಸಾರವಾಗಿ ಸಿಎಫ್‌ಮೊಟೊ ಕಂಪನಿಯು ಈ ಎಲ್ಲಾ ಬೈಕ್‌ಗಳನ್ನು ಬಿಎಸ್ 6 ಎಂಜಿನ್ ನೊಂದಿಗೆ ಅಪ್‌ಗ್ರೇಡ್ ಮಾಡಿದೆ ಎಂದು ಹೇಳಲಾಗಿದೆ. ಸಿಎಫ್‌ಮೊಟೊ 300 ಎನ್‌ಕೆ ಬೈಕಿನಲ್ಲಿ 292.4 ಸಿಸಿಯ ಲಿಕ್ವಿಡ್ ಕೂಲ್ಡ್, ಡಿಒಹೆಚ್‌ಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಸದ್ಯದಲ್ಲೇ ಬಿಡುಗಡೆಯಾಗಲಿವೆ ಸಿಎಫ್‌ಮೊಟೊ ಬಿಎಸ್ 6 ಬೈಕ್‌ಗಳು

ಈ ಎಂಜಿನ್ 33 ಬಿಹೆಚ್‌ಪಿ ಪವರ್ ಹಾಗೂ 25 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‌ನೊಂದಿಗೆ 6-ಸ್ಪೀಡಿನ ಗೇರ್‌ಬಾಕ್ಸ್ ನೀಡಲಾಗಿದೆ. ಸಿಎಫ್‌ಮೊಟೊ 650 ಎನ್‌ಕೆ ಹಾಗೂ 650 ಎಂಟಿ ಬೈಕ್ ಗಳಲ್ಲಿ 659.3 ಸಿಸಿ ಎಂಜಿನ್ ಅಳವಡಿಸಲಾಗಿದೆ.

ಸದ್ಯದಲ್ಲೇ ಬಿಡುಗಡೆಯಾಗಲಿವೆ ಸಿಎಫ್‌ಮೊಟೊ ಬಿಎಸ್ 6 ಬೈಕ್‌ಗಳು

ಈ ಎಂಜಿನ್ 60 ಬಿಹೆಚ್‌ಪಿ ಪವರ್ ಹಾಗೂ 56 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‌ನೊಂದಿಗೆ 6-ಸ್ಪೀಡಿನ ಗೇರ್‌ಬಾಕ್ಸ್ ನೀಡಲಾಗಿದೆ. ಇದೇ ಎಂಜಿನ್ ಅನ್ನು ಸಿಎಫ್‌ಮೊಟೊ 650 ಜಿಟಿ ಬೈಕಿನಲ್ಲಿಯೂ ಅಳವಡಿಸಲಾಗಿದೆ. ಈ ಎಲ್ಲಾ ನಾಲ್ಕು ಬೈಕ್‌ಗಳಲ್ಲಿ ಪ್ರತ್ಯೇಕವಾದ ಡಿಸೈನ್ ಲ್ಯಾಂಗ್ವೇಜ್ ಬಳಸಲಾಗಿದೆ.

Most Read Articles

Kannada
English summary
CF moto company to launch its BS6 bikes in India soon. Read in Kannada.
Story first published: Friday, July 31, 2020, 14:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X