ಬಿಡುಗಡೆಗೆ ಸಜ್ಜಾದ ಸಿಎಫ್‌ಮೊಟೊ ನಿರ್ಮಾಣದ ಮೊದಲ ಎಲೆಕ್ಟ್ರಿಕ್ ಸ್ಕೂಟರ್

ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟವು ಉತ್ತಮ ಬೆಳವಣಿಗೆ ಕಾಣುತ್ತಿದ್ದು, ಹಲವು ಆಟೋ ಕಂಪನಿಗಳು ಗ್ರಾಹಕರ ಬೇಡಿಕೆ ಅನುಸಾರವಾಗಿ ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿವೆ.

ಬಿಡುಗಡೆಗೆ ಸಜ್ಜಾದ ಸಿಎಫ್‌ಮೊಟೊ ನಿರ್ಮಾಣದ ಮೊದಲ ಇವಿ ಸ್ಕೂಟರ್

ಚೀನಿ ಮಾರುಕಟ್ಟೆಯಲ್ಲಿ ಕೆಟಿಎಂ ಪಾಲುದಾರ ಕಂಪನಿಯಾಗಿರುವ ಸಿಎಫ್‌ಮೊಟೊ ಭಾರತದಲ್ಲಿ ವಿವಿಧ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುತ್ತಿದ್ದು, ಮಧ್ಯಮ ಗಾತ್ರದ ಬೈಕ್ ಮಾದರಿಗಳ ಜೊತೆಗೆ ಭವಿಷ್ಯದ ವಾಹನ ಮಾದರಿಗಳ ಅಭಿವೃದ್ದಿ ಮೇಲೂ ಗಮನಹರಿಸಿದೆ. ಹೊಸ ಇವಿ ಉತ್ಪನ್ನಗಳು 2022ರ ಆರಂಭದಲ್ಲಿ ಅಧಿಕೃತವಾಗಿ ಖರೀದಿಗೆ ಲಭ್ಯವಾಗಲಿದ್ದು, ಪ್ರೀಮಿಯಂ ಇವಿ ಸ್ಕೂಟರ್ ಮಾರಾಟದಲ್ಲಿ ಸಿಎಫ್‌ಮೊಟೊ ಹೊಸ ಸಂಚಲನ ಮೂಡಿಸಲಿದೆ.

ಬಿಡುಗಡೆಗೆ ಸಜ್ಜಾದ ಸಿಎಫ್‌ಮೊಟೊ ನಿರ್ಮಾಣದ ಮೊದಲ ಇವಿ ಸ್ಕೂಟರ್

ಮೊಟೊ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಹೊ ಕಂಪನಿಯ ಕಾನ್ಸೆಪ್ಟ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳನ್ನು ಭಾರತದಲ್ಲಿ ಬದಲಿ ಹೆಸರಿನೊಂದಿಗೆ ಮಾರಾಟ ಮಾಡಲಿರುವ ಸಿಎಫ್‌ಮೊಟೊ ಕಂಂಪನಿಯು ಎಥರ್ 450ಎಕ್ಸ್ ಸ್ಕೂಟರ್‌ಗೆ ಉತ್ತಮ ಪೈಪೋಟಿ ನೀಡಲಿದೆ.

ಬಿಡುಗಡೆಗೆ ಸಜ್ಜಾದ ಸಿಎಫ್‌ಮೊಟೊ ನಿರ್ಮಾಣದ ಮೊದಲ ಇವಿ ಸ್ಕೂಟರ್

ಕಳೆದ ಕೆಲ ತಿಂಗಳ ತಿಂಗಳ ಹಿಂದಷ್ಟೇ ಜಿಹೊ ಕಂಪನಿಯು ಚೀನಿ ಮಾರುಕಟ್ಟೆಯಲ್ಲಿ ಸೈಬರ್ ಕಾನ್ಸೆಪ್ಟ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದ್ದು, ಇದೇ ಸ್ಕೂಟರ್ ಮಾದರಿಯ ಕೆಲವು ಪ್ರಮುಖ ಬದಲಾವಣೆಗಳೊಂದಿಗೆ ಭಾರತದಲ್ಲಿ ಬಿಡುಗಡೆಗೊಳಿಸುತ್ತಿದೆ.

ಬಿಡುಗಡೆಗೆ ಸಜ್ಜಾದ ಸಿಎಫ್‌ಮೊಟೊ ನಿರ್ಮಾಣದ ಮೊದಲ ಇವಿ ಸ್ಕೂಟರ್

ಹೊಸ ಇವಿ ವಾಹನಗಳಿಗೆ ಜಿಹೊ ಕಂಪನಿಯೇ ವಿವಿಧ ರೇಂಜ್ ಹೊಂದಿರುವ ಹಲವು ಬ್ಯಾಟರಿ ಪ್ಯಾಕ್ ಸಿದ್ದಪಡಿಸಿದ್ದು, ಸೈಬರ್ ಕಾನ್ಸೆಪ್ಟ್ ಇವಿ ಸ್ಕೂಟರ್‌ ಮಾದರಿಯಲ್ಲಿ 4kWh ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಲಾಗಿದೆ. ಜಿಹೊ ಇವಿ ಸ್ಕೂಟರ್ ಮಾದರಿಯಲ್ಲಿ ಅತ್ಯತ್ತಮ ಪರ್ಫಾಮೆನ್ಸ್‌ನೊಂದಿಗೆ ಅಧಿಕ ಮಟ್ಟದ ಮೈಲೇಜ್ ರೇಂಜ್ ಹೊಂದಿದ್ದು, ಪ್ರತಿ ಗಂಟೆಗೆ 110ಕಿ.ಮೀ ಟಾಪ್ ಸ್ಪೀಡ್ ಹೊಂದಿರುವ ಈ ಇವಿ ಸ್ಕೂಟರ್ ಮಾದರಿಯು ಪ್ರತಿ ಚಾರ್ಜ್‌ಗೆ ಗರಿಷ್ಠ 130 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ.

ಬಿಡುಗಡೆಗೆ ಸಜ್ಜಾದ ಸಿಎಫ್‌ಮೊಟೊ ನಿರ್ಮಾಣದ ಮೊದಲ ಇವಿ ಸ್ಕೂಟರ್

ಗ್ರಾಹಕರನ್ನು ಸೆಳೆಯಲು ಹೊಸ ಸ್ಕೂಟರ್‌ನಲ್ಲಿರುವ ಮತ್ತೊಂದು ಪ್ರಮುಖ ಅಂಶವೆಂದರೆ ಅತಿ ಕಡಿಮೆ ಅವಧಿಯಲ್ಲಿ ಚಾರ್ಜ್ ಮಾಡಬಹುದಾದ ತಂತ್ರಜ್ಞಾನ ಹೊಂದಿದ್ದು, ಕೇವಲ 30 ನಿಮಿಷಗಳಲ್ಲಿ ಶೇ.80 ರಷ್ಟು ಚಾರ್ಜ್ ಮಾಡಿಕೊಳ್ಳಬಹುದಾಗಿದೆ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಬಿಡುಗಡೆಗೆ ಸಜ್ಜಾದ ಸಿಎಫ್‌ಮೊಟೊ ನಿರ್ಮಾಣದ ಮೊದಲ ಇವಿ ಸ್ಕೂಟರ್

ಜೊತೆಗೆ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಸುಧಾರಿತ ತಂತ್ರಜ್ಞಾನ ಪ್ರೇರಿತ ಕನೆಕ್ಟೆಡ್ ಫೀಚರ್ಸ್‌ಗಳಿದ್ದು, ಹೊಸ ಕನೆಕ್ಟೆಡ್ ಫೀಚರ್ಸ್ ಮೂಲಕ ಹೊಸ ವಾಹನಕ್ಕೆ ಗರಿಷ್ಠ ಭದ್ರತೆ ನೀಡುತ್ತವೆ.

ಬಿಡುಗಡೆಗೆ ಸಜ್ಜಾದ ಸಿಎಫ್‌ಮೊಟೊ ನಿರ್ಮಾಣದ ಮೊದಲ ಇವಿ ಸ್ಕೂಟರ್

ಹೀಗಾಗಿ ಸಿಎಫ್‌ಮೊಟೊ ಕಂಪನಿಯು ತನ್ನ ಸಹ ಬ್ರಾಂಡ್ ಮಾದರಿಯನ್ನು ಭಾರತದಲ್ಲೂ ಬಿಡುಗಡೆಗೆ ಉತ್ಸುಕವಾಗಿದ್ದು, ಗರಿಷ್ಠ ಮಟ್ಟದ ಗ್ರಾಹಕನ್ನು ತಲುಪಲು ದೇಶಾದ್ಯಂತ ಮತ್ತಷ್ಟು ಹೊಸ ಮಾರಾಟ ಮಳಿಗೆಗಳನ್ನು ತೆರೆಯಲು ನಿರ್ಧರಿಸಿದೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಬಿಡುಗಡೆಗೆ ಸಜ್ಜಾದ ಸಿಎಫ್‌ಮೊಟೊ ನಿರ್ಮಾಣದ ಮೊದಲ ಇವಿ ಸ್ಕೂಟರ್

ಸದ್ಯ ಬೆಂಗಳೂರು, ಮುಂಬೈ, ಪುಣೆ ಮತ್ತು ದೆಹಲಿ ಸೇರಿದಂತೆ ಕೆಲವೇ ಮಾಹಾನಗರಗಳಲ್ಲಿ ಮಾತ್ರ ಮಾರಾಟ ಮಳಿಗೆ ಹೊಂದಿರುವ ಸಿಎಫ್‌ಮೊಟೊ ಕಂಪನಿಯು ಶೀಘ್ರದಲ್ಲೇ ಮತ್ತಷ್ಟು ಹೊಸ ನಗರಗಳಲ್ಲಿ ಮಾರುಕಟ್ಟೆ ವಿಸ್ತರಿಸಲಿದ್ದು, ವಿವಿಧ ರೇಂಜ್‌ನೊಂದಿಗೆ ಬಿಡುಗಡೆಯಾಗಲಿರುವ ವಿವಿಧ ಇವಿ ಮಾದರಿಗಳು ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

Most Read Articles

Kannada
English summary
CFMoto is planning to launch new electric scooter in India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X