ಚಲಿಸುವಾಗಲೇ ಮುರಿದುಬಿತ್ತು ಕೆಟಿಎಂ ಡ್ಯೂಕ್ 390 ಬೈಕಿನ ಎಂಜಿನ್ ಕೇಸ್

ಕೆಟಿಎಂ ಡ್ಯೂಕ್ 390 ಬೈಕಿನ ಎಂಜಿನ್ ಪೂರ್ತಿಯಾಗಿ ಮುರಿದು ಬಿದ್ದಿರುವುದನ್ನು ತೋರಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊದಲ್ಲಿ ರಸ್ತೆಯ ಬದಿಯಲ್ಲಿ ಕೆಟಿಎಂ ಡ್ಯೂಕ್ 390 ಬೈಕ್ ಅನ್ನು ಪಾರ್ಕ್ ಮಾಡಲಾಗಿದೆ.

ಚಲಿಸುವಾಗಲೇ ಮುರಿದುಬಿತ್ತು ಕೆಟಿಎಂ ಡ್ಯೂಕ್ 390 ಬೈಕಿನ ಎಂಜಿನ್ ಕೇಸ್

ಈ ಕೆಟಿಎಂ ಡ್ಯೂಕ್ 390 ಬೈಕಿನ ಕ್ರ್ಯಾಂಕ್ಶಾಫ್ಟ್ ಕೌಂಟರ್ ಬ್ಯಾಲೆನ್ಸರ್ ಎಂಜಿನ್ ಕೆಳಗೆ ತೂಗುತ್ತಿದ್ದು, ಬೈಕಿನ ಕೂಲೆಂಟ್ ಪೂರ್ತಿಯಾಗಿ ಸೋರಿಕೆಯಾಗುತ್ತಿದೆ. ಆದರೆ ಈ ವೀಡಿಯೊದಲ್ಲಿ ಬೈಕ್ ಎಂಜಿನ್‌ಗೆ ಹೇಗೆ ಹಾನಿಯಾಯಿತು ಎಂಬುದನ್ನು ಬಹಿರಂಗಪಡಿಸಿಲ್ಲ. ಮೂಲಗಳ ಪ್ರಕಾರ ಈ ಬೈಕ್ ಚಾಲನೆಯಲ್ಲಿರುವಾಗಲೇ ಎಂಜಿನ್ ಗೆ ಹಾನಿಯಾಗಿದೆ.

ಚಲಿಸುವಾಗಲೇ ಮುರಿದುಬಿತ್ತು ಕೆಟಿಎಂ ಡ್ಯೂಕ್ 390 ಬೈಕಿನ ಎಂಜಿನ್ ಕೇಸ್

ಈ ಬೈಕ್ ಅನ್ನು 2016ರ ಇಐಸಿಎಂಎನಲ್ಲಿ ಜಾಗತಿಕವಾಗಿ ಬಿಡುಗಡೆಗೊಳಿಸಲಾಗಿತ್ತು. 2017ರಲ್ಲಿ ಕೆಟಿಎಂ ಡ್ಯೂಕ್ 390 ಬೈಕ್ ಅನ್ನು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಯಿತು.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಚಲಿಸುವಾಗಲೇ ಮುರಿದುಬಿತ್ತು ಕೆಟಿಎಂ ಡ್ಯೂಕ್ 390 ಬೈಕಿನ ಎಂಜಿನ್ ಕೇಸ್

ಪುಣೆಯ ಚಕನ್‌ನಲ್ಲಿರುವ ಕಂಪನಿಯ ಉತ್ಪಾದನಾ ಘಟಕದಲ್ಲಿ ಈ ಬೈಕ್‌ನ್ನು ದೇಶಿಯ ಮಾರುಕಟ್ಟೆಗಾಗಿ ಉತ್ಪಾದಿಸಲಾಗುತ್ತದೆ. ಈ ಬೈಕಿನ ಎಂಜಿನ್ ಕೇಸ್ ಅನ್ನು ಕಾಸ್ಟ್ ಅಲ್ಯೂಮಿನಿಯಂ ಅಲಾಯ್ ನಿಂದ ತಯಾರಿಸಲಾಗಿದೆ. ಸಾಕಷ್ಟು ಬಲಿಷ್ಟವಾಗಿರುವ ಎಂಜಿನ್ ಅಷ್ಟು ಸುಲಭವಾಗಿ ಮುರಿಯುವುದಿಲ್ಲ.

ಚಲಿಸುವಾಗಲೇ ಮುರಿದುಬಿತ್ತು ಕೆಟಿಎಂ ಡ್ಯೂಕ್ 390 ಬೈಕಿನ ಎಂಜಿನ್ ಕೇಸ್

ಕೆಟಿಎಂ ಕಂಪನಿಯು ತನ್ನ ಬೈಕುಗಳನ್ನು ಅತ್ಯುತ್ತಮ ಗುಣಮಟ್ಟದ ವಸ್ತುಗಳಿಂದ ತಯಾರಿಸಲಾಗುತ್ತದೆ ಎಂದು ಹೇಳಿದೆ. ಆದರೆ ಈ ಡ್ಯೂಕ್ 390 ಬೈಕಿನ ಎಂಜಿನ್ ತಾಂತ್ರಿಕ ಕಾರಣಗಳಿಂದ ಮುರಿದು ಬಿದ್ದಿರುವ ಸಾಧ್ಯತೆಗಳಿವೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಚಲಿಸುವಾಗಲೇ ಮುರಿದುಬಿತ್ತು ಕೆಟಿಎಂ ಡ್ಯೂಕ್ 390 ಬೈಕಿನ ಎಂಜಿನ್ ಕೇಸ್

ಹೆಚ್ಚಿನ ಪ್ರಮಾಣದಲ್ಲಿ ಬಿಸಿಯಾಗಿರುವ ಕಾರಣಕ್ಕೆ ಎಂಜಿನ್ ಕೇಸ್ ವಿಸ್ತರಣೆಗೊಂಡು ಮುರಿದುಹೋಗಿರುವ ಸಾಧ್ಯತೆಗಳಿವೆ. ಇದನ್ನು ತಡೆಗಟ್ಟಲು ಆಂಟಿಫ್ರೀಜ್ ಬ್ಲಾಕ್ ಮೂಲಕ ಎಂಜಿನ್ ಅನ್ನು ಸುರಕ್ಷಿತ ತಾಪಮಾನಕ್ಕೆ ತರಲು ಹೋಗಿರಬಹುದು.

ಚಲಿಸುವಾಗಲೇ ಮುರಿದುಬಿತ್ತು ಕೆಟಿಎಂ ಡ್ಯೂಕ್ 390 ಬೈಕಿನ ಎಂಜಿನ್ ಕೇಸ್

ಆದರೆ ಸೋರಿಕೆಯಿಂದಾಗಿ ಆಂಟಿಫ್ರೀಜ್ ಎಂಜಿನ್ ಅನ್ನು ಕೂಲ್ ಮಾಡಲು ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಎಂಜಿನ್ ಹೆಚ್ಚಿನ ಪ್ರಮಾಣದಲ್ಲಿ ಬಿಸಿಯಾಗಿದೆ. ಮತ್ತೊಂದು ಕಾರಣವೆಂದರೆ ಎಂಜಿನ್ ನಲ್ಲಿ ಉತ್ಪಾದನಾ ದೋಷವೂ ಆಗಿರಬಹುದು.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಚಲಿಸುವಾಗಲೇ ಮುರಿದುಬಿತ್ತು ಕೆಟಿಎಂ ಡ್ಯೂಕ್ 390 ಬೈಕಿನ ಎಂಜಿನ್ ಕೇಸ್

ಮೊಲ್ಡಿಂಗ್ ಮಾಡುವ ಸಮಯದಲ್ಲಿ ಸರಿಯಾಗಿ ಕಾಳಜಿ ವಹಿಸದಿದ್ದರೆ, ಕೆಲವು ಸ್ಥಳಗಳಲ್ಲಿ ಮೆಟಲ್ ತೆಳ್ಳಗಾಗುತ್ತದೆ. ನಂತರ ಈ ರೀತಿಯ ಅಪಘಾತಗಳಿಗೆ ಕಾರಣವಾಗುತ್ತದೆ.

Most Read Articles

Kannada
Read more on ಕೆಟಿಎಂ ktm
English summary
Engine case of KTM Duke 390 breaks while moving. Read in Kannada.
Story first published: Friday, August 7, 2020, 15:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X