ಸ್ಥಗಿತವಾಯ್ತು ಹೀರೋ ಕಂಪನಿಯ ಪ್ಲೆಶರ್ ಸ್ಕೂಟರ್

ಹೀರೋ ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ ನಂಬರ್ 1 ಸ್ಥಾನದಲ್ಲಿದೆ. ಹೀರೋ ಕಂಪನಿಯು ಕೆಲವು ವರ್ಷಗಳ ಹಿಂದೆ ಹೋಂಡಾ ಸಹಭಾಗಿತ್ವದಲ್ಲಿ ಭಾರತದಲ್ಲಿ ದ್ವಿಚಕ್ರ ವಾಹನಗಳ ತಯಾರಿಕೆ ಹಾಗೂ ಮಾರಾಟದಲ್ಲಿ ಭಾಗಿಯಾಗಿತ್ತು.

ಸ್ಥಗಿತವಾಯ್ತು ಹೀರೋ ಕಂಪನಿಯ ಪ್ಲೆಶರ್ ಸ್ಕೂಟರ್

ಈ ಸಹಭಾಗಿತ್ವದಲ್ಲಿ ಹೀರೋ ಪ್ಲೆಶರ್ ಸ್ಕೂಟರ್‌ಗಳನ್ನು ಮಾರಾಟ ಮಾಡಲಾಗುತ್ತಿತ್ತು. ಈ ಸ್ಕೂಟರ್ ಅನ್ನು ಭಾರತದಲ್ಲಿ ಮೊದಲ ಬಾರಿಗೆ 2006ರಲ್ಲಿ ಬಿಡುಗಡೆಗೊಳಿಸಲಾಯಿತು. ಹೋಂಡಾ ಪ್ಲೆಶರ್ ಎಂಬ ಹೆಸರಿನಲ್ಲಿ ಬಿಡುಗಡೆಗೊಳಿಸಲಾಗಿತ್ತು.

ಸ್ಥಗಿತವಾಯ್ತು ಹೀರೋ ಕಂಪನಿಯ ಪ್ಲೆಶರ್ ಸ್ಕೂಟರ್

ನಂತರದ ದಿನಗಳಲ್ಲಿ ಹೀರೋ ಪ್ಲೆಶರ್ ಎಂಬ ಹೆಸರಿನಲ್ಲಿ ಮಾರಾಟ ಮಾಡಲಾಯಿತು. ಮೊದಲ ತಲೆಮಾರಿನ ಪ್ಲೆಶರ್ ಸ್ಕೂಟರ್ ಸದ್ಯದಲ್ಲೇ ಇತಿಹಾಸದ ಪುಟ ಸೇರಲಿದೆ. ಪ್ಲೆಶರ್ ಸ್ಕೂಟರ್‌ಗಳು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಸ್ಥಗಿತಗೊಳ್ಳಲಿವೆ. ಆಟೋಕಾರ್ ಇಂಡಿಯಾ ಈ ಮಾಹಿತಿಯನ್ನು ದೃಢಪಡಿಸಿದೆ.

ಸ್ಥಗಿತವಾಯ್ತು ಹೀರೋ ಕಂಪನಿಯ ಪ್ಲೆಶರ್ ಸ್ಕೂಟರ್

ಇದರ ಜೊತೆಗೆ ಮೊದಲ ತಲೆಮಾರಿನ ಪ್ಲೆಶರ್ ಸ್ಕೂಟರಿನ ಹೆಸರು ಹಾಗೂ ಫೋಟೋಗಳನ್ನು ಹೀರೋ ಕಂಪನಿಯ ಅಧಿಕೃತ ವೆಬ್‌ಸೈಟ್ ನಲ್ಲಿರುವ ಸ್ಕೂಟರ್‌ಗಳ ಪಟ್ಟಿಯಿಂದ ತೆಗೆದುಹಾಕಲಾಗಿದೆ.

ಸ್ಥಗಿತವಾಯ್ತು ಹೀರೋ ಕಂಪನಿಯ ಪ್ಲೆಶರ್ ಸ್ಕೂಟರ್

ಹೀರೋ ಕಂಪನಿಯ ಈ ಕ್ರಮವು ಈ ಸ್ಕೂಟರಿನ ಅಭಿಮಾನಿಗಳಲ್ಲಿ ನಿರಾಶೆಯನ್ನುಂಟು ಮಾಡಿದೆ. ಈ ಸ್ಕೂಟರ್ ಕಳೆದ 14 ವರ್ಷಗಳಿಂದ ಭಾರತೀಯರ ಬಳಕೆಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ. ಈ ಸ್ಕೂಟರ್ ಮಹಿಳೆಯರ ನೆಚ್ಚಿನ ಸ್ಕೂಟರ್‌ಗಳಲ್ಲಿ ಒಂದಾಗಿದೆ.

ಸ್ಥಗಿತವಾಯ್ತು ಹೀರೋ ಕಂಪನಿಯ ಪ್ಲೆಶರ್ ಸ್ಕೂಟರ್

2000ರ ದಶಕದಲ್ಲಿ ಮಾರಾಟವಾಗುತ್ತಿದ್ದ ಟಿವಿಎಸ್ ಸ್ಕೂಟಿ ಕೈನೆಟಿಕ್ ಜಿಂಗ್ ಹಾಗೂ ಬಜಾಜ್ ಸ್ಪಿರಿಟ್ ಗಳಿಗಿಂತ ಹೆಚ್ಚು ಸಮರ್ಥವಾದ ಸ್ಕೂಟರ್ ಆಗಿದೆ. ಸ್ಕೂಟರ್ ವಿವಿಧ ಕಾರಣಗಳಿಂದಾಗಿ ಈ ಸ್ಕೂಟರಿನ ಉತ್ಪಾದನೆಯನ್ನು ಬಹಳ ಹಿಂದೆಯೇ ನಿಲ್ಲಿಸಲಾಗಿದೆ. 2020ರ ವೇಳೆಗೆ ಈ ಸ್ಕೂಟರ್ ಮಾರಾಟವು ಸ್ಥಗಿತಗೊಳ್ಳಲಿದೆ.

ಸ್ಥಗಿತವಾಯ್ತು ಹೀರೋ ಕಂಪನಿಯ ಪ್ಲೆಶರ್ ಸ್ಕೂಟರ್

ಮೊದಲ ತಲೆಮಾರಿನ ಪ್ಲೆಶರ್ ಸ್ಕೂಟರ್ ಅನ್ನು ಸ್ತಗಿತಗೊಳಿಸಲಾದರೂ, ಪ್ಲೆಶರ್ ಪ್ಲಸ್ ಮಾದರಿಯ ಮಾರಾಟವು ಮುಂದುವರೆಯಲಿದೆ. ಹೀರೋ ಪ್ಲೆಶರ್ ಸ್ಕೂಟರ್‌ನಲ್ಲಿ 110 ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿತ್ತು.

ಸ್ಥಗಿತವಾಯ್ತು ಹೀರೋ ಕಂಪನಿಯ ಪ್ಲೆಶರ್ ಸ್ಕೂಟರ್

ಹೀರೋ ಕಂಪನಿಯು ಪ್ಲೆಶರ್ ಸ್ಕೂಟರ್‌ನಲ್ಲಿ ಅಳವಡಿಸಲಾಗಿದ್ದ 110.9 ಸಿಸಿ ಎಂಜಿನ್ ಅನ್ನು ಡ್ಯುಯೆಟ್ ಹಾಗೂ ಸ್ಟ್ಯಾಂಡರ್ಡ್ ಮೆಸ್ಟ್ರೋ ಎಡ್ಜ್ ಸ್ಕೂಟರ್‌ಗಳಲ್ಲಿಯೂ ಸಹ ಅಳವಡಿಸಿದೆ. ಈ ಎಂಜಿನ್ ಗರಿಷ್ಠ 8.1 ಬಿಹೆಚ್ ಪಿ ಪವರ್ ಹಾಗೂ 8.7 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಸ್ಥಗಿತವಾಯ್ತು ಹೀರೋ ಕಂಪನಿಯ ಪ್ಲೆಶರ್ ಸ್ಕೂಟರ್

ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಈ ಸ್ಕೂಟರ್‌ಗಳನ್ನು ಹೊಸ ವಿನ್ಯಾಸದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಸ್ಕೂಟರ್ ಗಳು ರೆಟ್ರೊ ಶೈಲಿಯನ್ನು ಹೊಂದಿವೆ.

Most Read Articles

Kannada
English summary
First generation Hero Pleasure discontinued. Read in Kannada.
Story first published: Wednesday, March 18, 2020, 11:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X