Just In
Don't Miss!
- News
ಬಳ್ಳಾರಿ ಸಿಇಒ ಮಾದರಿ ಕೆಲಸ; ವಾಪಸ್ ಆಗಬೇಕಿದ್ದ ಅನುದಾನ ಬಳಕೆ
- Movies
ರೈತರ ಪ್ರತಿಭಟನೆ: ಕೆಂಪುಕೋಟೆ ಮೇಲೆ ಭಾವುಟ ಹಾರಿಸಿದ್ದು ಸಿನಿಮಾ ನಟ ದೀಪ್ ಸಿಧು?
- Finance
ಸತತ 4ನೇ ದಿನ ಇಳಿಕೆ ಕಂಡು ಒಂದು ತಿಂಗಳ ಕನಿಷ್ಠ ಮಟ್ಟಕ್ಕೆ ತಲುಪಿದ ಚಿನ್ನ
- Lifestyle
ಹೊಟ್ಟೆಯ ಬಲಭಾಗದಲ್ಲಿ ನೋವು, ಈ ತೊಂದರೆಗಳಿರಬಹುದು
- Sports
ವಿರಾಟ್ ಕೊಹ್ಲಿ ಮತ್ತು ನನ್ನ ಮಧ್ಯೆ ಏನೂ ಬದಲಾಗಿಲ್ಲ: ಅಜಿಂಕ್ಯ ರಹಾನೆ
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹಾರ್ಲೆ-ಹೀರೋ ಸಹಭಾಗಿತ್ವದ ಯೋಜನೆಯ ಮೊದಲ ಜಾಹೀರಾತು ವಿಡಿಯೋ ಬಿಡುಗಡೆ
ಭಾರತದಲ್ಲಿ ಹೀರೋ ಮೋಟೊಕಾರ್ಪ್ ಜೊತೆಗೂಡಿ ಸಹಭಾಗಿತ್ವ ಯೋಜನೆಗೆ ಚಾಲನೆ ನೀಡಿರುವ ಹಾರ್ಲೆ ಡೇವಿಡ್ಸನ್ ಕಂಪನಿಯು ಹೊಸ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿದ್ದು, ಹೊಸ ಯೋಜನೆಯ ಭಾಗವಾಗಿ ಮೊದಲ ಜಾಹೀರಾತು ವಿಡಿಯೋ ಬಿಡುಗಡೆ ಮಾಡಿದೆ.

ಭಾರತದಲ್ಲಿ ಈ ಮೊದಲು ಸ್ವತಂತ್ರವಾಗಿ ತನ್ನ ಐಷಾರಾಮಿ ಬೈಕ್ ಮಾದರಿಗಳನ್ನು ಅಭಿವೃದ್ದಿಗೊಳಿಸಿ ಮಾರಾಟ ಮಾಡುತ್ತಿದ್ದ ಹಾರ್ಲೆ ಡೇವಿಡ್ಸನ್ ಕಂಪನಿಯು ನಿರ್ವಹಣಾ ವೆಚ್ಚಗಳನ್ನು ಗಣನೀಯವಾಗಿ ತಗ್ಗಿಸಲು ದೇಶದ ಜನಪ್ರಿಯ ಬೈಕ್ ಉತ್ಪಾದನಾ ಕಂಪನಿಯಾಗಿರುವ ಹೀರೋ ಮೋಟೊಕಾರ್ಪ್ ಜೊತೆಗೂಡಿದ್ದು, ಬೈಕ್ ಮಾರಾಟ ಮತ್ತು ಗ್ರಾಹಕರ ಸೇವೆಗಳಿಗೆ ಸಮರ್ಥವಾಗಿ ಪೂರೈಸಲು ಸಹಭಾಗೀತ್ವ ಕಂಪನಿಯ ಪ್ಲ್ಯಾಟ್‌ಫಾರ್ಮ್‌ಗಳನ್ನು ಬಳಕೆ ಮಾಡಿಕೊಳ್ಳಲಿದೆ.

ಸ್ವತಂತ್ರ ಬೈಕ್ ಮಾರಾಟ ಮಳಿಗೆಗಳಿಂದಾಗುತ್ತಿರುವ ವೆಚ್ಚವನ್ನು ಪರಿಣಾಮಕಾರಿಯಾಗಿ ತಗ್ಗಿಸಲು ಹೊಸ ಯೋಜನೆಗೆ ಚಾಲನೆ ನೀಡಿರುವ ಹಾರ್ಲೆ ಕಂಪನಿಯು ಆಯ್ದ ನಗರಗಳಲ್ಲಿನ ಪ್ರಮುಖ ಹೀರೋ ಮೋಟೊಕಾರ್ಪ್ ಡೀಲರ್ಸ್‌ಗಳಲ್ಲಿ ಪ್ರತ್ಯೇಕ ವ್ಯವಹಾರ ಸೌಲಭ್ಯಗಳನ್ನು ತೆರೆಯುತ್ತಿದೆ.
2021ರ ಜನವರಿಯಿಂದಲೇ ಹಾರ್ಲೆ ಡೇವಿಡ್ಸನ್ ಕಂಪನಿಯು ಹೀರೋ ಮೋಟೊಕಾರ್ಪ್ ಜೊತೆಗೂಡಿ ಕಾರ್ಯನಿರ್ವಹಣೆಯನ್ನು ಆರಂಭಿಸಲಿದ್ದು, ಇದಕ್ಕೂ ಮುನ್ನ ಹೊಸ ಯೋಜನೆಯ ಕುರಿತಂತೆ ಜಾಹೀರಾತು ವಿಡಿಯೋ ಬಿಡುಗಡೆಯೊಂದಿಗೆ ಭಾರತದಲ್ಲಿ ಮತ್ತೊಂದು ಹಂತದ ಯಶಸ್ವಿಯತ್ತ ಹೆಜ್ಜೆಯಿಸುತ್ತಿರುವ ವಿಶ್ವಾಸ ವ್ಯಕ್ತಪಡಿಸಿದೆ.

ಸತತ ಆರ್ಥಿಕ ಹಿನ್ನಡೆ ಮತ್ತು ಹೆಚ್ಚುತ್ತಿರುವ ಕಾರ್ಯಾಚರಣೆಯ ವೆಚ್ಚಗಳನ್ನು ತಗ್ಗಿಸುವ ಉದ್ದೇಶದಿಂದ ಸಹಭಾಗೀತ್ವ ಯೋಜನೆಯತ್ತ ಮುಖ ಮಾಡಿರುವ ಹಾರ್ಲೆ ಡೇವಿಡ್ಸನ್ ಕಂಪನಿಯು ಭಾರತದಲ್ಲೇ ಹೊಸ ಉತ್ಪನ್ನಗಳನ್ನು ಅಭಿವೃದ್ದಿಪಡಿಸುವ ಉದ್ದೇಶ ಹೊಂದಿದೆ. ಇದಕ್ಕಾಗಿ ಕಳೆದ ವರ್ಷವೇ ಹೀರೋ ಮೋಟೊಕಾರ್ಪ್ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿದ್ದ ಹಾರ್ಲೆ ಡೇವಿಡ್ಸನ್ ಕಂಪನಿಯು ಕರೋನಾ ವೈರಸ್ ಪರಿಣಾಮ ಹೊಸ ಯೋಜನೆ ಬಗ್ಗೆ ತಟಸ್ಥವಾಗಿತ್ತು.

ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಉದ್ಯಮ ವ್ಯವಹಾರಗಳು ತಿಳಿಗೊಂಡಿರುವ ಹಿನ್ನಲೆ ಸಹಭಾಗೀತ್ವ ಯೋಜನೆಗೆ ಅಧಿಕೃತವಾಗಿ ಒಪ್ಪಿಗೆ ಸೂಚಿಸಿದ್ದು, ಹೊಸ ಯೋಜನೆ ಅಡಿ ಹೀರೋ ಕಂಪನಿಯು ಹಾರ್ಲೆ ಬೈಕ್‌ಗಳ ಅಭಿವೃದ್ದಿ ಮತ್ತು ಮಾರಾಟ ಕಾರ್ಯಾಚರಣೆಗೆ ಪ್ರತ್ಯೇಕ ಸೌಲಭ್ಯಗಳೊಂದಿಗೆ ಪರಸ್ಪರ ಸಹಕರಿಸಲಿದೆ.

ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಲ್ಲೇ ಅತಿ ಹೆಚ್ಚು ದ್ವಿಚಕ್ರ ವಾಹನಗಳನ್ನು ಉತ್ಪಾದಿಸುವ ಹೀರೋ ಮೋಟೊಕಾರ್ಪ್ ಕಂಪನಿಯು ದೇಶಾದ್ಯಂತ ಮಾರಾಟ ಸರಪಳಿಯಲ್ಲಿ ಅತ್ಯುತ್ತಮ ಅವಕಾಶ ಹೊಂದಿದ್ದು, ಇದೇ ಕಾರಣಕ್ಕೆ ಹಾರ್ಲೆ ಕಂಪನಿಯು ಹೀರೋ ಕಂಪನಿಯ ಜೊತೆಗೆ ಕೈಜೋಡಿಸಿದೆ.
MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಜೊತೆಗೆ ಉದ್ಯಮ ವ್ಯವಹಾರಗಳನ್ನು ಸ್ಥಗಿತಗೊಳಿಸಿದ್ದರೂ ಹಾರ್ಲೆ ಡೇವಿಡ್ಸನ್ ಕಂಪನಿಯಲ್ಲಿನ ಭಾರತೀಯ ಉದ್ಯೋಗಿಗಳು ಹೀರೋ ಮೋಟೊಕಾರ್ಪ್ ಜೊತೆಗೂಡಿ ಕಾರ್ಯನಿರ್ವಹಿಸಲಿದ್ದು, ಅಧಿಕೃತ ಕಚೇರಿ, ಮಾರಾಟ ಮಳಿಗೆಗಳನ್ನು ಹೊರತುಪಡಿಸಿ ಇನ್ನುಳಿದ ವ್ಯವಹಾರಗಳು ಸಾಮಾನ್ಯ ಮಾದರಿಯಲ್ಲೇ ಹೀರೋ ಜೊತೆ ಮುಂದುವರಿಯಲಿವೆ.

ಇನ್ನು ಸಹಭಾಗೀತ್ವ ಯೋಜನೆ ಅಡಿಯಲ್ಲಿ ಹಾರ್ಲೆ ಡೇವಿಡ್ಸನ್ ಕಂಪನಿಯು ಭಾರತದಲ್ಲಿ ಹೊಸದಾಗಿ 350 ಸಿಸಿಯಿಂದ 500 ಸಿಸಿ ಸಾಮಾರ್ಥ್ಯದ ಕೆಲವು ಹೊಸ ಮೋಟಾರ್‌ಸೈಕಲ್ ಮಾದರಿಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಹಾರ್ಲೆ ಹೊಸ ಬೈಕ್‌ಗಳ ಮಾರಾಟಕ್ಕ ಹೀರೋ ಕಂಪನಿಯೇ ಪ್ರತ್ಯೇಕ ಪ್ಲ್ಯಾಟ್‌ಫಾರ್ಮ್ ಒದಗಿಸಲಿದ್ದು, ಮುಂಬರುವ ದಿನಗಳಲ್ಲಿ ಹೊಸ ಹಾರ್ಲೆ ಬೈಕ್ ಮಾದರಿಗಳು ಮಧ್ಯಮ ಕ್ರಮಾಂಕದ ಎಂಜಿನ್ ಆಯ್ಕೆಯೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿವೆ.