ಬಿಡುಗಡೆಯಾದ ಆರಂಭದಲ್ಲೇ ಭರ್ಜರಿ ಬೇಡಿಕೆ ಪಡೆದುಕೊಂಡ ಹೀರೋ ಹೊಸ ಎಲೆಕ್ಟ್ರಿಕ್ ಸ್ಕೂಟರ್

ಹೀರೋ ಎಲೆಕ್ಟ್ರಿಕ್ ಕಂಪನಿಯು ಕಳೆದ ವಾರವಷ್ಟೇ ತನ್ನ ಹೊಸ ಮಾದರಿಯ ಅತಿ ಹೆಚ್ಚು ಮೈಲೇಜ್‌ವುಳ್ಳ ಎನ್‌ವೈಎಕ್ಸ್ ಹೆಚ್ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ್ದು, ಹೊಸ ಸ್ಕೂಟರ್ ಮಾದರಿಯ ಬಿಡುಗಡೆ ಕೆಲವೇ ದಿನಗಳಲ್ಲಿ ಪ್ರಮುಖ ಡೆಲೆವರಿ ಕಂಪನಿಗಳಿಂದ ಭರ್ಜರಿ ಬೇಡಿಕೆ ಪಡೆದುಕೊಂಡಿದೆ.

ಭರ್ಜರಿ ಬೇಡಿಕೆ ಪಡೆದುಕೊಂಡ ಹೀರೋ ಹೊಸ ಎಲೆಕ್ಟ್ರಿಕ್ ಸ್ಕೂಟರ್

ಪ್ರಸ್ತುತ ಮಾರುಕಟ್ಟೆಯಲ್ಲಿ ಹಲವಾರು ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾರಾಟ ಹೊಂದಿರುವ ಹೀರೋ ಎಲೆಕ್ಟ್ರಿಕ್ ಕಂಪನಿಯು ಇದೀಗ ಹೊಸ ವಿನ್ಯಾಸದ ಮತ್ತು ಹೆಚ್ಚು ಮೈಲೇಜ್ ಹೊಂದಿರುವ ಎನ್‌ವೈಎಕ್ಸ್-ಹೆಚ್ಎಕ್ಸ್ ಇವಿ ಸ್ಕೂಟರ್ ಮಾದರಿಯನ್ನು ಬಿಡುಗಡೆ ಮಾಡುವ ಮೂಲಕ ಆಟೋ ಉದ್ಯಮದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಪ್ರತಿ ಚಾರ್ಜ್‌ಗೆ ಗರಿಷ್ಠ 210 ಕಿ.ಮೀ ಮೈಲೇಜ್ ಹಿಂದಿರುಗಿಸುವ ವೈಶಿಷ್ಟ್ಯತೆ ಹೊಂದಿದೆ.

ಭರ್ಜರಿ ಬೇಡಿಕೆ ಪಡೆದುಕೊಂಡ ಹೀರೋ ಹೊಸ ಎಲೆಕ್ಟ್ರಿಕ್ ಸ್ಕೂಟರ್

ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 64,640 ಬೆಲೆ ಪಡೆದುಕೊಂಡಿದ್ದು, ಅತಿ ಕಡಿಮೆ ಬೆಲೆಯೊಂದಿಗೆ ಹೆಚ್ಚಿನ ಮಟ್ಟದ ಮೈಲೇಜ್ ಹೊಂದಿರುವುದು ಬೇಡಿಕೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ.

ಭರ್ಜರಿ ಬೇಡಿಕೆ ಪಡೆದುಕೊಂಡ ಹೀರೋ ಹೊಸ ಎಲೆಕ್ಟ್ರಿಕ್ ಸ್ಕೂಟರ್

ಮತ್ತೊಂದು ಪ್ರಮುಖ ವಿಚಾರವೆಂದರೆ ಹೀರೋ ಎಲೆಕ್ಟ್ರಿಕ್ ಕಂಪನಿಯು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ವಾಣಿಜ್ಯ ಬಳಕೆಯ ಉದ್ದೇಶಗಳಿಗಾಗಿ ಮಾತ್ರ ಮಾರಾಟ ಮಾಡುತ್ತಿರುವ ಹಿನ್ನಲೆಯಲ್ಲಿ ಡೆಲಿವರಿ ಕಂಪನಿಗಳು ಹೆಚ್ಚಿನ ಮಟ್ಟದಲ್ಲಿ ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗೆ ಆಸಕ್ತಿ ತೊರುತ್ತಿವೆ.

ಭರ್ಜರಿ ಬೇಡಿಕೆ ಪಡೆದುಕೊಂಡ ಹೀರೋ ಹೊಸ ಎಲೆಕ್ಟ್ರಿಕ್ ಸ್ಕೂಟರ್

ಇತ್ತೀಚೆಗೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಗಾಗಿ ಜೈಪ್ ಡೆಲಿವರಿ ಆ್ಯಪ್ ಕಂಪನಿಯು ಸುಮಾರು 1 ಸಾವಿರ ಯುನಿಟ್‌ಗೆ ಬೇಡಿಕೆ ಸಲ್ಲಿಸಿದ್ದು, ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮುಂದಿನ ಕೆಲವೇ ವಾರಗಳಲ್ಲಿ ಪೂರೈಕೆ ಮಾಡಲಿದೆ. ಜೈಪ್ ಕಂಪನಿಯು ವಿವಿಧ ಇ-ಕಾಮರ್ಸ್ ಕಂಪನಿಗಳ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಉತ್ಪನ್ನಗಳನ್ನು ತಲುಪಿಸಲು ಸಂಪೂರ್ಣವಾಗಿ ಎಲೆಕ್ಟಿಕ್ ವಾಹನಗಳನ್ನೇ ಬಳಕೆ ಮಾಡುವ ಗುರಿಹೊಂದಿದೆ.

ಭರ್ಜರಿ ಬೇಡಿಕೆ ಪಡೆದುಕೊಂಡ ಹೀರೋ ಹೊಸ ಎಲೆಕ್ಟ್ರಿಕ್ ಸ್ಕೂಟರ್

ಜೈಪ್ ಎಲೆಕ್ಟ್ರಿಕ್ ಕಂಪನಿಯು ಇ-ಕಾರ್ಮಸ್ ಕಂಪನಿಗಳ ಉತ್ಪನ್ನಗಳ ಪೂರೈಸಲು ಮಾತ್ರವಲ್ಲ ರೆಂಟಲ್ ವಾಹನಗಳನ್ನು ಸಹ ಒದಗಿಸಲಿದ್ದು, ಸಂಪೂರ್ಣವಾಗಿ ಎಲೆಕ್ಟ್ರಿಕ್ ವಾಹನಗಳನ್ನೇ ಬಳಕೆ ಮಾಡುವ ಗುರಿಹೊಂದಿರುವುದು ಹೊಸ ಬದಲಾವಣೆಯತ್ತ ಪ್ರಮುಖ ಹೆಜ್ಜೆಯಿರಿಸಿದೆ.

ಭರ್ಜರಿ ಬೇಡಿಕೆ ಪಡೆದುಕೊಂಡ ಹೀರೋ ಹೊಸ ಎಲೆಕ್ಟ್ರಿಕ್ ಸ್ಕೂಟರ್

ಜೈಪ್ ಎಲೆಕ್ಟ್ರಿಕ್ ಕಂಪನಿಯು ಈಗಾಗಲೇ ವಿವಿಧ ಕಂಪನಿಗಳ ಹಲವು ಎಲೆಕ್ಟ್ರಿಕ್ ವಾಹನಗಳ ಮಾದರಿಗಳನ್ನು ಬಳಕೆ ಮಾಡುತ್ತಿದ್ದು, ಇದೀಗ ಎನ್‌ವೈಎಕ್ಸ್ ಹೆಚ್ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಯ ಮೇಲೆ ಹೆಚ್ಚಿನ ಆಸಕ್ತಿ ತೋರುತ್ತಿದೆ.

MOST READ: ದೀಪಾವಳಿ ಆಫರ್: ಒಕಿನಾವ ಇವಿ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಭರ್ಜರಿ ಡಿಸ್ಕೌಂಟ್

ಭರ್ಜರಿ ಬೇಡಿಕೆ ಪಡೆದುಕೊಂಡ ಹೀರೋ ಹೊಸ ಎಲೆಕ್ಟ್ರಿಕ್ ಸ್ಕೂಟರ್

ಮೊದಲ ಹಂತವಾಗಿ 1 ಸಾವಿರ ಯುನಿಟ್ ಖರೀದಿ ಮಾಡಿರುವ ಜೈಪ್ ಎಲೆಕ್ಟ್ರಿಕ್ ಕಂಪನಿಯು ಗ್ರಾಹಕರು ಮತ್ತು ಸಹಭಾಗೀತ್ವ ಕಂಪನಿಗಳ ಬಳಕೆದಾರರ ಅಭಿಪ್ರಾಯದ ಆಧಾರದ ಮತ್ತಷ್ಟು ಹೊಸ ಸ್ಕೂಟರ್ ಖರೀದಿ ಮಾಡಲಿದ್ದು, ಎನ್‌ವೈಎಕ್ಸ್ ಹೆಚ್ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಅತ್ಯುತ್ತಮ ಫೀಚರ್ಸ್ ಹೊತ್ತು ಬಂದಿದೆ.

ಭರ್ಜರಿ ಬೇಡಿಕೆ ಪಡೆದುಕೊಂಡ ಹೀರೋ ಹೊಸ ಎಲೆಕ್ಟ್ರಿಕ್ ಸ್ಕೂಟರ್

ವಿಶೇಷವಾಗಿ ಬಿಜಿನೆಸ್ ಟು ಬಿಜಿನೆಸ್(ಬಿಟುಬಿ) ಉದ್ದೇಶಗಳಿಗೆ ಬಿಡುಗಡೆಯಾಗಿರುವ ಎನ್‌ವೈಎಕ್ಸ್-ಹೆಚ್ಎಕ್ಸ್ ಇವಿ ಸ್ಕೂಟರ್ ಮಾದರಿಯು ಲಾಸ್ಟ್ ಮೈಲ್ ಡೆಲಿವರಿಗಾಗಿ ಗ್ರಾಹಕರು ಹತ್ತು ವಿಭಿನ್ನ ರೀತಿಯಲ್ಲಿ ಹೊಸ ಸ್ಕೂಟರ್ ಅನ್ನು ಮಾಡಿಫೈಗೊಳಿಸಬಹುದಾಗಿದೆ.

MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

ಭರ್ಜರಿ ಬೇಡಿಕೆ ಪಡೆದುಕೊಂಡ ಹೀರೋ ಹೊಸ ಎಲೆಕ್ಟ್ರಿಕ್ ಸ್ಕೂಟರ್

ಇದಲ್ಲದೆ ಹೆಚ್ಚಿನ ಮಟ್ಟದ ಇವಿ ಸ್ಕೂಟರ್ ಖರೀದಿಸುವ ಉದ್ಯಮ ಸಂಸ್ಥೆಗಳಿಗೆ ಅತಿ ಸುಲಭವಾದ ಚಾರ್ಜಿಂಗ್ ಪಾಯಿಂಟ್‌ಗಳ ವ್ಯವಸ್ಥೆಯನ್ನು ಕಂಪನಿಯೇ ಅಳವಡಿಸಿಕೊಡಲಿದ್ದು, ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯಲ್ಲಿ ಸ್ಮಾರ್ಟ್‌ಫೋನ್ ಕನೆಕ್ವಿಟಿ, ರಿಮೋಟ್ ಕಂಟ್ರೋಲ್, ಕಾಂಬಿ ಬ್ರೇಕಿಂಗ್ ಸಿಸ್ಟಂನೊಂದಿಗೆ ಉದ್ಯಮ ವ್ಯವಹಾರಗಳ ಕಾರ್ಯಾಚರಣೆ ವೆಚ್ಚವನ್ನು ತಗ್ಗಿಸಲು ಸಾಕಷ್ಟು ಸಹಕಾರಿಯಾಗಿವೆ.

Most Read Articles

Kannada
English summary
Hero To Provide eScooters To Zypp. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X