Just In
Don't Miss!
- News
ಎಂಇಎಸ್, ಉದ್ಧಟವ್ ಠಾಕ್ರೆ ಇಷ್ಟು ಬೆಳೆಯಲು ಕಾರಣ ಬಿಜೆಪಿಯ ಸಲುಗೆ
- Sports
ಅಡಿಲೇಡ್ ಸೋಲಿನ ನಂತರ ಗೆಲುವಿನ ಹಾದಿ ಹಿಡಿದ ರೋಚಕ ಸಂಗತಿ ವಿವರಿಸಿದ ಹನುಮ ವಿಹಾರಿ
- Movies
Breaking: ನಟಿ ರಾಗಿಣಿಗೆ ಜಾಮೀನು ನೀಡಿದ ಸುಪ್ರೀಂಕೋರ್ಟ್
- Finance
ಕಾನ್ ಸ್ಟೇಬಲ್ ಡೆಬಿಟ್ ಕಾರ್ಡ್ ನಿಂದ 40 ಸಾವಿರ ರು. ಎಗರಿಸಿದ ದುಷ್ಕರ್ಮಿ
- Lifestyle
ನೀವು ರಾತ್ರಿ ಭಾರೀ ಭೋಜನ ಮಾಡೋರಾದ್ರೆ ಈ ಸ್ಟೋರಿ ಓದಲೇಬೇಕು...!
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಹೋಂಡಾ ಯೂನಿಕಾರ್ನ್ ಬೈಕಿನ ಮೇಲೆ ಭರ್ಜರಿ ಕ್ಯಾಶ್‌ಬ್ಯಾಕ್ ಆಫರ್
ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ಈಗಾಗಲೇ ತನ್ನ ಎಸ್‌ಪಿ 125, ಹಾರ್ನೆಟ್ 2.0, ಆಕ್ಟಿವಾ 6ಜಿ, ಸಿಡಿ 110 ಡ್ರೀಮ್, ಮತ್ತು ಗ್ರಾಜಿಯಾ 125 ಮಾದರಿಗಳ ಮೇಲೆ ಕ್ಯಾಶ್‌ಬ್ಯಾಕ್ ಆಫರ್ ಅನ್ನು ಘೋಷಿಸಲಾಗಿದೆ. ಇದೀಗ ಹೋಂಡಾ ತನ್ನ ಸರಣಿಯ ಮತ್ತೊಂದು ಜನಪ್ರಿಯ ಮಾದರಿಯಾದ ಯೂನಿಕಾರ್ನ್ ಮೇಲೆಯು ಕ್ಯಾಶ್‌ಬ್ಯಾಕ್ ಆಫರ್ ನೀಡಿದೆ.

ಹೊಸ ಹೋಂಡಾ ಯೂನಿಕಾರ್ನ್ ಬೈಕ್ ಮೇಲೆ ರೂ.5,000 ಗಳವರೆಗಿನ ಕ್ಯಾಶ್‌ಬ್ಯಾಕ್ ಅನ್ನು ಹೋಂಡಾ ನೀಡುತ್ತಿದೆ. ಆದರೆ ಹೋಂಡಾ ಕಂಪನಿಯ ಪಾಲುದಾರ ಬ್ಯಾಂಕುಗಳ ಮೂಲಕ ನೀವು ಹಣ ಪಾವತಿಸಿದರೆ ಮಾತ್ರ ಹೊಸ ಹೋಂಡಾ ಯೂನಿಕಾರ್ನ್ ಬೈಕ್ ಮೇಲೆ ಕ್ಯಾಶ್‌ಬ್ಯಾಕ್ ನಿಮಗೆ ಲಭಿಸುತ್ತದೆ. ಅವುಗಳೆಂದರೆ ಬ್ಯಾಂಕ್ ಆಫ್ ಬರೋಡಾ, ಫೆಡರಲ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಸ್ಟ್ಯಾಂಡರ್ಡ್ ಚಾರ್ಟರ್ಡ್ ಮತ್ತು ಯೆಸ್ ಬ್ಯಾಂಕ್ ಗಳಾಗಿವೆ.

ಬಿಎಸ್-6 ಯೂನಿಕಾರ್ನ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದೆ, ಈ ಬಿಎಸ್-6 ಯೂನಿಕಾರ್ನ್ ಬೈಕಿನಲ್ಲಿ 162.7 ಸಿಸಿ, ಸಿಂಗಲ್ ಸಿಲಿಂಡರ್, ಫ್ಯೂಯಲ್-ಇಂಜೆಕ್ಟ್ ಎಂಜಿನ್ ಅನ್ನು ಹೊಂದಿದೆ.

ಈ ಎಂಜಿನ್ 7,500 ಆರ್‌ಪಿಎಂನಲ್ಲಿ 12.5 ಬಿಹೆಚ್‍ಪಿ ಪವರ್ ಮತ್ತು 5,500 ಆರ್‌ಪಿಎಂನಲ್ಲಿ 14 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಹೋಂಡಾ ಯೂನಿಕಾರ್ನ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಇಂಪೀರಿಯಲ್ ರೆಡ್ ಮೆಟಾಲಿಕ್, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್, ಪರ್ಲ್ ಇಗ್ನಿಯಸ್ ಬ್ಲ್ಯಾಕ್ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಬಿಎಸ್-6 ಹೋಂಡಾ ಯೂನಿಕಾರ್ನ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ಅಳವಡಿಸಲಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಇನ್ನು ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ,ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಸಿಂಗಲ್-ಚಾನೆಲ್ ಎಬಿಎಸ್ ಅನ್ನು ನೀಡಲಾಗಿದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಬಿಎಸ್-6 ಹೋಂಡಾ ಯೂನಿಕಾರ್ನ್ ಬೈಕಿನಲ್ಲಿ ಮುಂಭಾಗದ ಕೌಲ್, ಅರೆ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಬದಿಯಲ್ಲಿ ಕ್ರೋಮ್ ಎಕ್ಸಾಸ್ಟ್, ನೇಮ್‌ಪ್ಲೇಟ್‌ಗಾಗಿ ಕ್ರೋಮ್ ಅಕ್ಷರಗಳು ಮತ್ತು ಡಿ ಹೋಂಡಾ ಲೋಗೊವನ್ನು ಒಳಗೊಂಡಿದೆ.

ಹೋಂಡಾ ಕಂಪನಿಯು ತಮ್ಮ ಸರಣಿಯ ಬೈಕುಗಳನ್ನು ಖದೀದಿಸಲು ಬಯಸುವ ಗ್ರಾಹಕರಿಗಾಗಿ ಭರ್ಜರಿ ಕ್ಯಾಶ್‌ಬ್ಯಾಕ್ ಆಪರ್ ಅನ್ನು ಕೆಲವು ಆಯ್ದ ಮಾದರಿಗಳಿಗೆ ನೀಡಲಾಗಿದೆ. ಹೋಂಡಾ ಯೂನಿಕಾರ್ನ್ ಬೈಕನ್ನು ಖರೀದಿಸಲು ಬಯಸುವ ಗ್ರಾಹಕರು ಕಂಪನಿಯ ಪಾಲುದಾರ ಬ್ಯಾಂಕುಗಳ ಮೂಲಕ ನೀವು ಹಣ ಪಾವತಿ ಕ್ಯಾಶ್‌ಬ್ಯಾಕ್ ಆಫರ್ ಪಡೆಯಬಹುದಾಗಿದೆ.