ಪ್ರತಿ ಲೀಟರ್ ಪೆಟ್ರೋಲಿಗೆ ಬಿ‍ಎಸ್ 6 ಹೋಂಡಾ ಆಕ್ಟಿವಾ 125 ಮೈಲೇಜ್ ಎಷ್ಟು ಗೊತ್ತಾ?

ಭಾರತದಲ್ಲಿ ದ್ವಿಚಕ್ರ ವಾಹನವಾಗಲಿ ಅಥವಾ ನಾಲ್ಕು ಚಕ್ರದ ವಾಹನವಾಗಲಿ ಅವುಗಳನ್ನು ಖರೀದಿಸುವಾಗ ಜನರು ಅವುಗಳ ಬೆಲೆಯ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾರೆ. ತಾವು ನೀಡುವ ಹಣಕ್ಕೆ ತಕ್ಕಂತೆ ಆ ವಾಹನದ ಬೆಲೆಯಿದೆಯೇ ಎಂಬುದನ್ನು ಪರೀಕ್ಷಿಸುತ್ತಾರೆ.

ಪ್ರತಿ ಲೀಟರ್ ಪೆಟ್ರೋಲಿಗೆ ಬಿ‍ಎಸ್ 6 ಹೋಂಡಾ ಆಕ್ಟಿವಾ 125 ಮೈಲೇಜ್ ಎಷ್ಟು ಗೊತ್ತಾ?

ಕೆಲವರು ಹಿಂದೆ ಮುಂದೆ ನೋಡದೇ ವಾಹನಗಳನ್ನು ಖರೀದಿಸಿದರೆ, ಬಹುತೇಕ ಭಾರತೀಯರು ಕಾರು, ಸ್ಕೂಟರ್ ಹಾಗೂ ಬೈಕ್‍‍ಗಳನ್ನು ಖರೀದಿಸುವ ಮುನ್ನ ಹಲವಾರು ಸಂಗತಿಗಳನ್ನು ಪರಿಶೀಲಿಸುತ್ತಾರೆ. ಇವುಗಳಲ್ಲಿ ವಾಹನದ ಮರು ಮಾರಾಟದ ಬೆಲೆ ಹಾಗೂ ಮೈಲೇಜ್‍‍ಗಳು ಸೇರಿರುತ್ತವೆ.

ಪ್ರತಿ ಲೀಟರ್ ಪೆಟ್ರೋಲಿಗೆ ಬಿ‍ಎಸ್ 6 ಹೋಂಡಾ ಆಕ್ಟಿವಾ 125 ಮೈಲೇಜ್ ಎಷ್ಟು ಗೊತ್ತಾ?

ಭಾರತೀಯರು ವಾಹನ ಖರೀದಿಗೂ ಮುನ್ನ ವಾಹನ ನೀಡುವ ಮೈಲೇಜ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ. ಇತ್ತೀಚಿಗೆ ಬಿಡುಗಡೆಯಾದ ಹೋಂಡಾ ಕಂಪನಿಯ ಆಕ್ಟಿವಾ 125 ಸ್ಕೂಟರಿನ ಮೈಲೇಜ್ ಅನ್ನು ಪರೀಕ್ಷಿಸಲಾಗಿದೆ. ಪರೀಕ್ಷಿಸುವ ಮುನ್ನ ಈ ಸ್ಕೂಟರಿನ ಫ್ಯೂಯಲ್ ಟ್ಯಾಂಕ್‍‍ನಲ್ಲಿದ್ದ ಪೆಟ್ರೋಲ್ ಅನ್ನು ಪೂರ್ತಿಯಾಗಿ ಹೊರ ತೆಗೆಯಲಾಗಿದೆ.

ಪ್ರತಿ ಲೀಟರ್ ಪೆಟ್ರೋಲಿಗೆ ಬಿ‍ಎಸ್ 6 ಹೋಂಡಾ ಆಕ್ಟಿವಾ 125 ಮೈಲೇಜ್ ಎಷ್ಟು ಗೊತ್ತಾ?

ಪೆಟ್ರೋಲ್ ಅನ್ನು ಹೊರತೆಗೆದ ನಂತರ ಸ್ಕೂಟರ್ ಸವಾರ ಸ್ಕೂಟರ್ ಅನ್ನು ಸ್ಟಾರ್ಟ್ ಮಾಡಲು ಯತ್ನಿಸಿದ್ದಾನೆ. ಆದರೆ ಸ್ಕೂಟರ್ ಸ್ಟಾರ್ಟ್ ಆಗಿಲ್ಲ. ನಂತರ ಫ್ಯೂಯಲ್ ಟ್ಯಾಂಕಿನಲ್ಲಿ 100 ಎಂಎಲ್ ಪೆಟ್ರೋಲ್ ಹಾಕಿ, ಟ್ರಿಪ್ ಮೀಟರ್ ಅನ್ನು ಜೀರೊ ಮಾಡಿದ್ದಾನೆ.

ಪ್ರತಿ ಲೀಟರ್ ಪೆಟ್ರೋಲಿಗೆ ಬಿ‍ಎಸ್ 6 ಹೋಂಡಾ ಆಕ್ಟಿವಾ 125 ಮೈಲೇಜ್ ಎಷ್ಟು ಗೊತ್ತಾ?

ನಂತರ ಈ ಸ್ಕೂಟರ್ ಅನ್ನು ಜನ ದಟ್ಟಣೆಯಿರುವ ಪ್ರದೇಶಕ್ಕೆ ಕೊಂಡೊಯ್ದಿದ್ದಾನೆ. ಈ ವೇಳೆಯಲ್ಲಿ ಸ್ಕೂಟರ್ 40 ಕಿ.ಮೀ ವೇಗದಲ್ಲಿ ಚಲಿಸುತ್ತಿತ್ತು. ಸ್ಕೂಟರ್‍‍ನಲ್ಲಿದ್ದ 100 ಎಂಎಲ್ ಪೆಟ್ರೋಲ್ ಖಾಲಿಯಾಗುವವರೆಗೂ ಸವಾರನು ಸ್ಕೂಟರ್ ಅನ್ನು ಚಲಾಯಿಸಿದ್ದಾನೆ.

ಪ್ರತಿ ಲೀಟರ್ ಪೆಟ್ರೋಲಿಗೆ ಬಿ‍ಎಸ್ 6 ಹೋಂಡಾ ಆಕ್ಟಿವಾ 125 ಮೈಲೇಜ್ ಎಷ್ಟು ಗೊತ್ತಾ?

ಪೆಟ್ರೋಲ್ ಖಾಲಿಯಾದ ವೇಳೆ ಈ ಸ್ಕೂಟರ್ 7 ಕಿ.ಮೀವರೆಗೂ ಚಲಿಸಿದೆ. ಇದರಿಂದಾಗಿ 100 ಎಂಎಲ್‍‍ನಿಂದ 7 ಕಿ.ಮೀ ಚಲಿಸಿದರೆ, ಒಂದು ಲೀಟರಿಗೆ ಸುಮಾರು 70 ಕಿ.ಮೀ ಚಲಿಸಿ, ಪ್ರತಿ ಲೀಟರ್ ಪೆಟ್ರೋಲಿಗೆ 70 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಲೆಕ್ಕ ಹಾಕಲಾಗಿದೆ.

ಪ್ರತಿ ಲೀಟರ್ ಪೆಟ್ರೋಲಿಗೆ ಬಿ‍ಎಸ್ 6 ಹೋಂಡಾ ಆಕ್ಟಿವಾ 125 ಮೈಲೇಜ್ ಎಷ್ಟು ಗೊತ್ತಾ?

ಬಿಎಸ್ 6 ಎಂಜಿನ್ ಹೊಂದಿರುವ ಹೊಸ ಹೋಂಡಾ ಆಕ್ಟಿವಾ 125 ಸ್ಕೂಟರಿನಲ್ಲಿ ಪರಿಷ್ಕರಿಸಿದ ಎಲ್‍ಇ‍‍ಡಿ ಹೆಡ್‍‍ಲ್ಯಾಂಪ್, ಮುಂಭಾಗ ಹಾಗೂ ಸೈಡ್‍‍ನಲ್ಲಿ ಕ್ರೋಮ್ ಟ್ರಿಮ್ ಹಾಗೂ ಮುಂಭಾಗದಲ್ಲಿ ಹೊಸ ಎಪ್ರಾನ್‍‍ಗಳನ್ನು ನೀಡಲಾಗಿದೆ.

ಪ್ರತಿ ಲೀಟರ್ ಪೆಟ್ರೋಲಿಗೆ ಬಿ‍ಎಸ್ 6 ಹೋಂಡಾ ಆಕ್ಟಿವಾ 125 ಮೈಲೇಜ್ ಎಷ್ಟು ಗೊತ್ತಾ?

ಈ ಸ್ಕೂಟರ್ ಅನ್ನು ಮಹಿಳಾ ಹಾಗೂ ಪುರುಷ ಸವಾರರಿಗೆ ಆರಾಮದಾಯಕ ಸವಾರಿಯನ್ನು ನೀಡಲು ಅನುವಾಗುವಂತ ತಯಾರಿಸಲಾಗಿದೆ. ವಿಶ್ವಾಸಾರ್ಹವಾದ ಹಾಗೂ ಹೆಚ್ಚು ಮೈಲೇಜ್ ನೀಡುವ ಈ ಆಟೋಮ್ಯಾಟಿಕ್ ಸ್ಕೂಟರ್ ಅನ್ನು ನಗರದ ರಸ್ತೆಗಳಿಗೆ ಹೊಂದಿಕೊಳ್ಳುವಂತೆ ನಿರ್ಮಿಸಲಾಗಿದೆ.

ಪ್ರತಿ ಲೀಟರ್ ಪೆಟ್ರೋಲಿಗೆ ಬಿ‍ಎಸ್ 6 ಹೋಂಡಾ ಆಕ್ಟಿವಾ 125 ಮೈಲೇಜ್ ಎಷ್ಟು ಗೊತ್ತಾ?

ಈ ಸ್ಕೂಟರಿನಲ್ಲಿ 125 ಸಿಸಿಯ ಸಿಂಗಲ್ ಸಿಲಿಂಡರ್ ಫೋರ್ ಸ್ಟ್ರೋಕ್ ಫ್ಯೂಯಲ್ ಇಂಜೆಕ್ಟೆಡ್ ಬಿ‍ಎಸ್ 6 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 8.1 ಬಿ‍‍ಹೆಚ್‍‍ಪಿ ಪವರ್ ಉತ್ಪಾದಿಸುತ್ತದೆ. ಈ ಫ್ಯೂಯಲ್ ಎಂಜೆಕ್ಷನ್ ಎಂಜಿನ್ ಸ್ಕೂಟರ್ ಅನ್ನು ಹೆಚ್ಚು ಎಫಿಶಿಯಂಟ್ ಮಾಡುತ್ತದೆ.

ಹೊಸ ಆಕ್ಟಿವಾ 125 ಸ್ಕೂಟರ್ ಅನ್ನು ಸ್ಟಾಂಡರ್ಡ್, ಅಲಾಯ್ ಹಾಗೂ ಡೀಲಕ್ಸ್ ಎಂಬ ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಸ್ಟಾಂಡರ್ಡ್ ಮಾದರಿಯ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.67,490ಗಳಾಗಿದೆ. ಮೈಲೇಜ್ ಪರೀಕ್ಷಿಸುತ್ತಿರುವ ವೀಡಿಯೊವನ್ನು ಇಲ್ಲಿ ಕಾಣಬಹುದು.

ಪ್ರತಿ ಲೀಟರ್ ಪೆಟ್ರೋಲಿಗೆ ಬಿ‍ಎಸ್ 6 ಹೋಂಡಾ ಆಕ್ಟಿವಾ 125 ಮೈಲೇಜ್ ಎಷ್ಟು ಗೊತ್ತಾ?

ಅಲಾಯ್ ಮಾದರಿಯ ಬೆಲೆ ರೂ.70,990ಗಳಾದರೆ, ಡೀಲಕ್ಸ್ ಮಾದರಿಯ ಬೆಲೆ ರೂ.74,490ಗಳಾಗಿದೆ. ಆಕ್ಟಿವಾ ಸ್ಕೂಟರ್, ಹೋಂಡಾ ಕಂಪನಿಯು ಭಾರತದಲ್ಲಿ ಮಾರಾಟ ಮಾಡುವ ಪ್ರಮುಖ ವಾಹನವಾಗಿದೆ.

Most Read Articles

Kannada
English summary
Honda Activa 125 BS6 mileage test. Read in Kannada.
Story first published: Friday, January 24, 2020, 12:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X