Just In
Don't Miss!
- Movies
ಜನವರಿ 22ರಂದು ಐದು ಕನ್ನಡ ಸಿನಿಮಾ ಬಿಡುಗಡೆ
- News
ಲಿಂಗಾಂಬೂದಿಪಾಳ್ಯ ಕೆರೆಗೆ ಹರಿಯಲಿದೆ ಕೆಆರ್ಎಸ್ ನೀರು
- Lifestyle
ಈ 3 ವಸ್ತುಗಳನ್ನು ಹಾಕಿ ಮಾಡಿದ ಜ್ಯೂಸ್ ಕುಡಿದರೆ ಬೊಜ್ಜು ಕರುಗುತ್ತೆ, ಸೌಂದರ್ಯ ಹೆಚ್ಚುತ್ತೆ
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Sports
ತವರಿಗೆ ಮರಳಿದ ಟೀಮ್ ಇಂಡಿಯಾ: ಮುಂಬೈನಲ್ಲಿ ರಹಾನೆಗೆ ಅದ್ದೂರಿ ಸ್ವಾಗತ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದುಬಾರಿ ಬೆಲೆಯ ಸೂಪರ್ ಬೈಕುಗಳನ್ನು ಖರೀದಿಸಿದ ಜಾನ್ ಅಬ್ರಹಾಂ
ಬಾಲಿವುಡ್ ಜನಪ್ರಿಯ ನಟ ಜಾನ್ ಅಬ್ರಹಾಂ ಕೇವಲ ಸಿನಿಪ್ರಿಯರಲ್ಲದೇ ಕಾರು ಮತ್ತು ಬೈಕುಗಳ ಪ್ರಿಯರಾಗಿದ್ದು ಅವರ ಬಳಿ ಹಲವಾರು ದುಬಾರಿ ಬೆಲೆಯ ಐಷಾರಾಮಿ ಕಾರುಗಳು ಮತ್ತು ಸೂಪರ್ ಬೈಕುಗಳ ಕಲೆಕ್ಷನ್ ಅನ್ನು ಹೊಂದಿದ್ದಾರೆ.

ಭಾರತದ ಜನಪ್ರೀಯ ನಟರಲ್ಲಿ ಒಬ್ಬರಾದ ಜಾನ್ ಅಬ್ರಹಾಂ ಓರ್ವ ಯಶಸ್ವಿ ಬಾಲಿವುಡ್ ನಟ, ನಿರ್ಮಾಪಕ ಅಂತೆಯೇ ಮಾಡೆಲ್ ಕೂಡ ಆಗಿದ್ದರೆ. ಸೌಂದರ್ಯದ ಮೂಲಕ ಮಾತ್ರವಲ್ಲದೇ ತನ್ನ ಬಾಡಿ ಪ್ರದರ್ಶನದ ಮೂಲಕ ಕೂಡ ಬಾಲಿವುಡ್‌ನಲ್ಲಿ ಮಿಂಚಿದ ತಾರೆ ಜಾನ್ ಅಬ್ರಹಾಂ ಬಾಲಿವುಡ್‌ನ ಶ್ರೀಮಂತ ನಟರಲ್ಲಿ ಒಬ್ಬರು. ಇವರಿಗೆ ಕೇವಲ ಸಿನಿಮಾದ ಮೇಲೆ ವ್ಯಾಮೋಹ ಮಾತ್ರವಲ್ಲದೇ ಕಾರು, ಬೈಕು ಇತ್ಯಾದಿ ವಾಹನಗಳನ್ನು ಕಲೆ ಹಾಕುವುದರಲ್ಲೂ ಕೂಡ ಅಪಾರ ಆಸಕ್ತಿಯನ್ನು ಹೊಂದಿದ್ದಾರೆ. ಇದರಿಂದ ಇವರು ಹೊಸ ಐಷಾರಾಮಿ ಕಾರು ಮತ್ತು ಬೈಕುಗಳನ್ನು ಖರೀದಿಸುತ್ತಾರೆ.

ಬಾಲಿವುಡ್ ಜನಪ್ರಿಯ ನಟ ಜಾನ್ ಅಬ್ರಹಾಂ ಇತ್ತೀಚೆಗೆ ಹೊಸ ದುಬಾರಿ ಬಿಎಂಡಬ್ಲ್ಯು ಎಸ್ 1000 ಆರ್‌ಆರ್ ಮತ್ತು ಹೋಂಡಾ ಸಿಬಿಆರ್1000ಆರ್‌ಆರ್-ಆರ್ ಬೈಕುಗಳನ್ನು ಖರಿದಿಸಿದ್ದಾರೆ. ಜಾನ್ ಅಬ್ರಹಾಂ ಅವರು ಇತ್ತೀಚೆಗೆ ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ 'ನ್ಯೂ ಸ್ವೀಟ್ ಚೈಲ್ಡ್ ಆಫ್ ಮೈನ್' ಎಂಬ ಶೀರ್ಷಿಕೆಯೊಂದಿಗೆ ಹೊಸ ಬೈಕುಗಳ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಚಿತ್ರದಲ್ಲಿ ಹೊಸ ಬಿಎಂಡಬ್ಲ್ಯು ಎಸ್ 1000 ಆರ್‌ಆರ್ ಬೈಕ್ ಬ್ಲ್ಯಾಕ್ ಸ್ಟಾರ್ಮ್ ಮೆಟಾಲಿಕ್ ಬಣ್ಣದಿಂದ ಕೂಡಿದೆ. ಈ ಹೊಸ ಬಿಎಂಡಬ್ಲ್ಯು ಎಸ್ 1000 ಆರ್‌ಆರ್ ಬೈಕನ್ನು ತನ್ನ ಇತರ ಸೂಪರ್ ಬೈಕುಗಳ ಜೊತೆಗೆ ನಿಲ್ಲಿಸಲಾಗಿದೆ.

ಜಾನ್ ಅಬ್ರಹಾಂ ಅವರು ಖರೀದಿಸಿದ ಹೊಸ ಹೋಂಡಾ ಸಿಬಿಆರ್1000ಆರ್‌ಆರ್-ಆರ್ ಜನಪ್ರಿಯ ಸೂಪರ್ ಬೈಕುಗಳಲ್ಲಿ ಒಂದಾಗಿದೆ. ಈ ಹೊಸ ಹೋಂಡಾ ಸಿಬಿಆರ್1000ಆರ್‌ಆರ್-ಆರ್ ಬೈಕ್ ಈ ವರ್ಷದ ಜುಲೈನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿತ್ತು.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಬಾಲಿವುಡ್ ಜನಪ್ರಿಯ ನಟ ಜಾನ್ ಅಬ್ರಹಾಂ ಅವರ ಬಳಿ ಈ ಎರಡು ಹೊಸ ಬೈಕುಗಳ ಜೊತೆ ಇತರ ಜವಾಸಕಿ ನಿಂಜಾ ಝಡ್‌ಎಕ್ಸ್-14 ಆರ್, ಡುಕಾಟಿ ಪಾನಿಗಲೆ ವಿ4, ಎಂವಿ ಅಗುಸ್ಟಾ ಎಫ್3 800, ಮತ್ತು ಯಮಹಾ ವಿಮ್ಯಾಕ್ಸ್‌ನಂತಹ ಸೂಪರ್ ಬೈಕುಗಳನ್ನು ಕೂಡ ಹೊಂದಿದ್ದಾರೆ.

ಹೊಸ ಬಿಎಂಡಬ್ಲ್ಯು ಎಸ್ 1000 ಆರ್‌ಆರ್ ಬೈಕಿನಲ್ಲಿ 999 ಸಿಸಿ, ಇನ್-ಲೈನ್ ನಾಲ್ಕು ಸಿಲಿಂಡರ್ ವಾಟರ್/ಆಯಿಲ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಎಂಜಿನ್ ಜೊತೆಗೆ ಎಂಡಬ್ಲ್ಯು ಶಿಫ್ಟ್‌ಕ್ಯಾಮ್ ಬರುತ್ತದೆ.
MOST READ: ಅಕ್ಟೋಬರ್ ತಿಂಗಳಿನಲ್ಲಿ 8 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್

ಈ ಎಂಜಿನ್ 13,500 ಆರ್‌ಪಿಎಂನಲ್ಲಿ 203.8 ಬಿಹೆಚ್‍ಪಿ ಪವರ್ ಮತ್ತು 11,000 ಆರ್‌ಪಿಎಂನಲ್ಲಿ 113 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಜೋಡೀಸಲಾಗಿದೆ..

ಹೊಸ ಹೋಂಡಾ ಸಿಬಿಆರ್1000ಆರ್‌ಆರ್-ಆರ್ ಬೈಕಿನಲ್ಲಿ 1000 ಸಿಸಿ ಇನ್-ಲೈನ್ ನಾಲ್ಕು-ಸಿಲಿಂಡರ್ 4-ಸ್ಟ್ರೋಕ್ 16-ವಾಲ್ವ್ ಡಿಒಹೆಚ್‌ಸಿ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 214.5 ಬಿಹೆಚ್‌ಪಿ ಪವರ್ ಮತ್ತು 113 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.