ಬೈಕ್ ಸವಾರರಿಗಾಗಿ ವಿಭಿನ್ನ ಬಗೆಯ ರೈಡ್ ಆಯೋಜಿಸಿದ ಕೆಟಿಎಂ

ಭಾರತದಲ್ಲಿ ವೇಗವಾಗಿ ಜನಪ್ರಿಯತೆಯನ್ನು ಪಡೆಯುತ್ತಿರುವ ಪ್ರೀಮಿಯಂ ಮೋಟಾರ್‌ಸೈಕಲ್ ಕಂಪನಿಯಾದ ಕೆಟಿಎಂ ಡಿಸೆಂಬರ್ 27ರಂದು ಹೈದರಾಬಾದ್ ಹಾಗೂ ಗುವಾಹಟಿಯಲ್ಲಿ ಕೆಟಿಎಂ ಪ್ರೊ-ಗೆಟ್‌ಅವೇ ರೈಡ್ ಅನ್ನು ಆಯೋಜಿಸಿತ್ತು.

ಬೈಕ್ ಸವಾರರಿಗಾಗಿ ವಿಭಿನ್ನ ಬಗೆಯ ರೈಡ್ ಆಯೋಜಿಸಿದ ಕೆಟಿಎಂ

ದಿನವಿಡೀ ಆಯೋಜನೆಗೊಂಡಿದ್ದ ಕೆಟಿಎಂ ಪ್ರೊ-ಗೆಟ್‌ಅವೇ ರೈಡ್'ನಲ್ಲಿ ಕೆಟಿಎಂ ಡ್ಯೂಕ್ ಹಾಗೂ ಕೆಟಿಎಂ ಆರ್‌ಸಿ ಬೈಕುಗಳ ಸವಾರರು ಭಾಗಿಯಾಗಿದ್ದರು. ಬೈಕ್ ಸವಾರಿ ಮಾಡುವಾಗ ಬೈಕ್ ಸವಾರರಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊ ಕಂಟೆಂಟ್ ತಯಾರಿಸಲು ತರಬೇತಿ ನೀಡುವುದು ಈ ರೈಡ್'ನ ಮುಖ್ಯ ಉದ್ದೇಶವಾಗಿತ್ತು.

ಬೈಕ್ ಸವಾರರಿಗಾಗಿ ವಿಭಿನ್ನ ಬಗೆಯ ರೈಡ್ ಆಯೋಜಿಸಿದ ಕೆಟಿಎಂ

ಹೈದರಾಬಾದ್‌ನ ನಾಗಾರ್ಜುನ ಸಾಗರ್ ಅಣೆಕಟ್ಟಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ರೈಡ್ ಅನ್ನು ಆರಂಭಿಸಲಾಯಿತು. ಇನ್ನು ಗುವಾಹಟಿಯಲ್ಲಿ ಮನಸ್ ರಾಷ್ಟ್ರೀಯ ಉದ್ಯಾನವನದಲ್ಲಿ ರೈಡ್ ಅನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ದೇಶಾದ್ಯಂತದ ಕೆಟಿಎಂ ಬೈಕ್ ಮಾಲೀಕರು ಭಾಗವಹಿಸಿದ್ದರು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಬೈಕ್ ಸವಾರರಿಗಾಗಿ ವಿಭಿನ್ನ ಬಗೆಯ ರೈಡ್ ಆಯೋಜಿಸಿದ ಕೆಟಿಎಂ

ಪ್ರೊ-ಗೆಟ್ಅವೇನಲ್ಲಿ ಸವಾರರನ್ನು ಮುನ್ನಡೆಸಲು ಕೆಟಿಎಂ ಕಂಪನಿಯು ಕೆಲವು ಮೋಟೋ-ವ್ಲಾಗರ್'ಗಳನ್ನು ನಿಯೋಜಿಸಿತ್ತು. ಈ ರೈಡ್ ಅನ್ನು ಆರಂಭಿಸುವ ಮೊದಲು, ಸವಾರರಿಗೆ ಬೈಕ್‌ನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗುತ್ತಿತ್ತು.

ಬೈಕ್ ಸವಾರರಿಗಾಗಿ ವಿಭಿನ್ನ ಬಗೆಯ ರೈಡ್ ಆಯೋಜಿಸಿದ ಕೆಟಿಎಂ

ಬೈಕ್‌ನಲ್ಲಿರುವ ಫೀಚರ್, ಎಕ್ವಿಪ್ ಮೆಂಟ್ ಹಾಗೂ ಗೇರ್‌ಗಳ ಬಗ್ಗೆ ಮಾಹಿತಿ ನೀಡಲಾಯಿತು. ಈ ರೈಡ್'ನಲ್ಲಿ 90%ನಷ್ಟು ಮಾರ್ಗಗಳನ್ನು ಆಫ್-ರೋಡ್'ಗಾಗಿ ಆಯ್ಕೆ ಮಾಡಲಾಗಿದ್ದರೆ, 10%ನಷ್ಟು ಮಾರ್ಗಗಳು ಈ ರೈಡ್ ಅನ್ನು ಆಸಕ್ತಕರವನ್ನಾಗಿಸಿದವು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಬೈಕ್ ಸವಾರರಿಗಾಗಿ ವಿಭಿನ್ನ ಬಗೆಯ ರೈಡ್ ಆಯೋಜಿಸಿದ ಕೆಟಿಎಂ

ಈ ರೈಡ್'ನಲ್ಲಿ ಭಾಗಿಯಾಗಿದ್ದ ಮೋಟೋ-ವ್ಲಾಗರ್'ಗಳು ಬೈಕ್‌ ಸವಾರರಿಗೆ ಕ್ಯಾಮೆರಾ ಮೂಲಕ ವೀಡಿಯೊಗಳನ್ನು ಹೇಗೆ ರೆಕಾರ್ಡ್ ಮಾಡಬೇಕೆಂದು ತಿಳಿಸಿದರು. ಇದರ ಜೊತೆಗೆ ಸಾಮಾಜಿಕ ಜಾಲತಾಣಕ್ಕಾಗಿ ಗುಣಮಟ್ಟದ ವೀಡಿಯೊಗಳನ್ನು ಹೇಗೆ ತಯಾರಿಸಬೇಕೆಂಬುದರ ಬಗ್ಗೆ ತರಬೇತಿ ನೀಡಿದರು.

ಬೈಕ್ ಸವಾರರಿಗಾಗಿ ವಿಭಿನ್ನ ಬಗೆಯ ರೈಡ್ ಆಯೋಜಿಸಿದ ಕೆಟಿಎಂ

ಕೆಟಿಎಂ ಕಂಪನಿಯು ಇನ್ನೂ 10 ನಗರಗಳಲ್ಲಿ ಈ ರೀತಿಯ ಪ್ರೊ-ಗೆಟ್‌ಅವೇಗಳನ್ನು ಆರಂಭಿಸಲಿದೆ. ಇದರಿಂದಾಗಿ ಕೆಟಿಎಂ ಬೈಕ್ ಸವಾರರು ಸಾಮಾನ್ಯ ಬೈಕುಗಳ ಸವಾರರಿಗಿಂತ ಭಿನ್ನವಾದ ಅನುಭವವನ್ನು ಪಡೆಯಲಿದ್ದಾರೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಬೈಕ್ ಸವಾರರಿಗಾಗಿ ವಿಭಿನ್ನ ಬಗೆಯ ರೈಡ್ ಆಯೋಜಿಸಿದ ಕೆಟಿಎಂ

ಕೆಟಿಎಂ ಕಂಪನಿಯು ಶೀಘ್ರದಲ್ಲೇ 500 ಸಿಸಿ ಬೈಕ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದೆ. ಈ ಬೈಕ್ 890 ಸಿಸಿಯ ಬೈಕಿನ ಕಾನ್ಫಿಗರೇಶನ್ ಹೊಂದಿರುತ್ತದೆ ಎಂದು ಕಂಪನಿ ತಿಳಿಸಿದೆ. ಪುಣೆಯಲ್ಲಿರುವ ಬಜಾಜ್ ಉತ್ಪಾದನಾ ಘಟಕದಲ್ಲಿ ಈ ಬೈಕಿನ ಆರ್ ಅಂಡ್ ಡಿ ಮಾಡಲಾಗುವುದು ಎಂದು ಕಂಪನಿ ತಿಳಿಸಿದೆ.

ಬೈಕ್ ಸವಾರರಿಗಾಗಿ ವಿಭಿನ್ನ ಬಗೆಯ ರೈಡ್ ಆಯೋಜಿಸಿದ ಕೆಟಿಎಂ

ಕೆಟಿಎಂ ಕಂಪನಿಯ ಹಸ್ಕ್ ವರ್ನಾ ಕೂಡ ಬೈಕಿನ ಅಭಿವೃದ್ಧಿಯಲ್ಲಿ ಸಹಕರಿಸಲಿದೆ. ಕೆಟಿಎಂ ಹಾಗೂ ಹಸ್ಕ್ ವರ್ನಾ ಬೈಕ್ ಗಳನ್ನು ಭಾರತದಲ್ಲಿರುವ ಬಜಾಜ್ ಆಟೋ ಕಂಪನಿಯ ಉತ್ಪಾದನಾ ಘಟಕದಲ್ಲಿ ಉತ್ಪಾದಿಸಲಾಗುತ್ತದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಬೈಕ್ ಸವಾರರಿಗಾಗಿ ವಿಭಿನ್ನ ಬಗೆಯ ರೈಡ್ ಆಯೋಜಿಸಿದ ಕೆಟಿಎಂ

ಹಸ್ಕ್ ವರ್ನಾ ಈ ವರ್ಷ ಭಾರತದಲ್ಲಿ ಎರಡು 250 ಸಿಸಿ ಬೈಕ್‌ಗಳನ್ನು ಬಿಡುಗಡೆಗೊಳಿಸಿದೆ. ಅಂಕಿಅಂಶಗಳ ಪ್ರಕಾರ, ನವೆಂಬರ್‌ನಲ್ಲಿ ಕೆಟಿಎಂ ಹಾಗೂ ಹಸ್ಕ್ ವರ್ನಾದ 8,000ಕ್ಕೂ ಹೆಚ್ಚು ಬೈಕ್‌ಗಳು ಮಾರಾಟವಾಗಿವೆ.

ಬೈಕ್ ಸವಾರರಿಗಾಗಿ ವಿಭಿನ್ನ ಬಗೆಯ ರೈಡ್ ಆಯೋಜಿಸಿದ ಕೆಟಿಎಂ

ಕಂಪನಿಯು 2021ರಲ್ಲಿ 1,80,000 ಬೈಕುಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ. ಕೆಟಿಎಂ ಹಾಗೂ ಹಸ್ಕ್ ವರ್ನಾ ಕಂಪನಿಗಳು ಇತ್ತೀಚಿಗೆ ತಮ್ಮ ಬೈಕುಗಳ ದರವನ್ನು ಹೆಚ್ಚಿಸಿವೆ. ಎರಡೂ ಕಂಪನಿಗಳು ಬೈಕ್‌ಗಳ ಬೆಲೆಯನ್ನು ರೂ.1,300ಗಳಿಂದ ರೂ.8,500ಗಳವರೆಗೆ ಹೆಚ್ಚಿಸಿವೆ.

Most Read Articles

Kannada
Read more on ಕೆಟಿಎಂ ktm
English summary
KTM company conducts pro getaway rides for its bike riders. Read in Kannada.
Story first published: Wednesday, December 30, 2020, 10:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X