ಸಿಎಫ್‌ಮೊಟೊದೊಂದಿಗೆ ಹೊಸ 750ಸಿಸಿ ಬೈಕುಗಳನ್ನು ಅಭಿವೃದ್ಧಿಪಡಿಸುತ್ತಿದೆ ಕೆಟಿಎಂ

ಕೆಟಿಎಂ ಕಂಪನಿಯ 750ಸಿಸಿ ಬೈಕುಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದೆ. ಇದೀಗ ಕೆಟಿಎಂ ಕಂಪನಿಯು ಚೀನಾ ಮೂಲದ ಸಿಎಫ್‌ಮೊಟೊ ಕಂಪನಿಯೊಂದಿಗೆ ಕೈಜೋಡಿಸಿ ಹೊಸ 750ಸಿಸಿ ಬೈಕುಗಳನ್ನು ಅಭಿವೃದ್ದಿ ಪಡಿಸಲು ಮುಂದಾಗಿದೆ.

ಸಿಎಫ್‌ಮೊಟೊದೊಂದಿಗೆ ಹೊಸ 750ಸಿಸಿ ಬೈಕುಗಳನ್ನು ಅಭಿವೃದ್ಧಿಪಡಿಸುತ್ತಿದೆ ಕೆಟಿಎಂ

ಕೆಟಿಎಂ 750 ಡ್ಯೂಕ್, ಕೆಟಿಎಂ 750 ಅಡ್ವೆಂಚರ್ ಮತ್ತು ಕೆಟಿಎಂ 750 ಸೂಪರ್‌ಮೊಟೊ ಟಿ ಎಂಬ 750ಸಿಸಿ ಬೈಕುಗಳನ್ನು ಕೆಟಿಎಂ ಅಭಿವೃದ್ಧಿಪಡಿಸುತ್ತಿದೆ. ಈ ಎಲ್ಲಾ ಮಾದರಿಗಳನ್ನು ಚೀನಾದಲ್ಲಿ ಚೀನಾದಲ್ಲಿ ತಯಾರಿಸಲಾಗುವುದು. ಹೊಸ 750 ಸರಣಿಯನ್ನು ಕೆಟಿಎಂನ ಮೂಲ ಕಂಪನಿಯಾದ ಪಿಯರೆರ್ ಮೊಬಿಲಿಟಿ ಗ್ರೂಪ್‌ ಈ ಮಾಹಿತಿಯನ್ನು ಬಹಿರಂಗಪಡಿಸಿದೆ. ಚೀನಾದ ಉತ್ಪಾದಕ ಸಿಎಫ್‌ಮೊಟೊ ಜೊತೆ ಕೆಟಿಎಂ ಪಾಲುಗಾರಿಕೆಯ ನಿರ್ಣಾಯಕ ಭಾಗವಾಗಲಿದೆ.

ಸಿಎಫ್‌ಮೊಟೊದೊಂದಿಗೆ ಹೊಸ 750ಸಿಸಿ ಬೈಕುಗಳನ್ನು ಅಭಿವೃದ್ಧಿಪಡಿಸುತ್ತಿದೆ ಕೆಟಿಎಂ

ಚೀನಾದ ಮಾರುಕಟ್ಟೆಗೆ ಹಾಗೂ ಇತರ ಜಾಗತಿಕ ಮಾರುಕಟ್ಟೆಗಳಿಗೆ ಬೈಕುಗಳನ್ನು ಅಭಿವೃದ್ಧಿಪಡಿಸಲು ಕೆಟಿಎಂ 2017ರಲ್ಲಿ ಸಿಎಫ್‌ಮೊಟೊ ಜೊತೆ ಜಂಟಿ ಸಹಭಾಗಿತ್ವವನ್ನು ಪ್ರಕಟಿಸಿದ್ದರು.

MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಸಿಎಫ್‌ಮೊಟೊದೊಂದಿಗೆ ಹೊಸ 750ಸಿಸಿ ಬೈಕುಗಳನ್ನು ಅಭಿವೃದ್ಧಿಪಡಿಸುತ್ತಿದೆ ಕೆಟಿಎಂ

ಸಿಎಫ್‌ಮೊಟೊ ಜೊತೆಗಿನ ಪಾಲುಗಾರಿಕೆ ಭಾರತದ ಬಜಾಜ್ ಆಟೋ ಲಿಮಿಟೆಡ್‌ನೊಂದಿಗೆ ಇರುವ ಕೆಟಿಎಂ ಸಂಬಂಧಕ್ಕಿಂತ ಹೆಚ್ಚಾಗಿದೆ ಎಂದು ಹೇಳಬಹುದು. ಭಾರತದಲ್ಲಿ ಕೆಟಿಎಂನಲ್ಲಿ ಬಜಾಜ್ ಕಂಪನಿಯು ಶೇ.48 ರಷ್ಟು ಪಾಲನ್ನು ಹೊಂದಿದೆ.

ಸಿಎಫ್‌ಮೊಟೊದೊಂದಿಗೆ ಹೊಸ 750ಸಿಸಿ ಬೈಕುಗಳನ್ನು ಅಭಿವೃದ್ಧಿಪಡಿಸುತ್ತಿದೆ ಕೆಟಿಎಂ

ಆದರೆ ಚೀನಾದಲ್ಲಿ ಕೆಟಿಎಂ ಜೊತೆಗಿನ ಪಾಲುಗಾರಿಗೆಯಲ್ಲಿ ಸಿಎಫ್‌ಮೊಟೊ ಬಹುಪಾಲು ಶೇ.51 ರಷ್ಟು ಪಾಲನ್ನು ಹೊಂದಿದೆ. ಉಳಿದ ಶೇ.49 ರಷ್ಟು ಪಾಲು ಕೆಟಿಎಂ ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಸಿಎಫ್‌ಮೊಟೊದೊಂದಿಗೆ ಹೊಸ 750ಸಿಸಿ ಬೈಕುಗಳನ್ನು ಅಭಿವೃದ್ಧಿಪಡಿಸುತ್ತಿದೆ ಕೆಟಿಎಂ

ಹೊಸ ಸರಣಿಯ 750ಸಿಸಿ ಟ್ವಿನ್-ಸಿಲಿಂಡರ್ ಕೆಟಿಎಂ ಡ್ಯೂಕ್, ಅಡ್ವೆಂಚರ್ ಮತ್ತು ಸೂಪರ್‌ಮೊಟೊ ಮಾದರಿಗಳನ್ನು ಚೀನಾದ ಹ್ಯಾಂಗಝೋನಲ್ಲಿ ತಯಾರಿಸಲಾಗುತ್ತದೆ. ಕೆಟಿಎಂ ತನ್ನ ಕೆಲವು ಮಧ್ಯಮ ಗಾತ್ರದ ಎಂಜಿನ್‌ಗಳನ್ನು ತಯಾರಿಸಲು ಸಿಎಫ್‌ಮೊಟೊ ಜೊತೆ ಕೈಜೋಡಿಸಿದೆ.

ಸಿಎಫ್‌ಮೊಟೊದೊಂದಿಗೆ ಹೊಸ 750ಸಿಸಿ ಬೈಕುಗಳನ್ನು ಅಭಿವೃದ್ಧಿಪಡಿಸುತ್ತಿದೆ ಕೆಟಿಎಂ

ಇನ್ನು ಸಿಎಫ್‌ಮೊಟೊ ಕಂಪನಿಯು ತನ್ನ ಬಹುನಿರೀಕ್ಷಿತ ಸಿಎಫ್‌ಮೊಟೊ 700ಸಿಎಲ್-ಎಕ್ಸ್ ಮಾದರಿಗಳನ್ನು ಚೀನಾ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಅನಾವರಣಗೊಳಿಸಿತು. ಈ ಹೊಸ ಸಿಎಫ್‌ಮೊಟೊ 700ಸಿಎಲ್-ಎಕ್ಸ್ ಮಾದರಿಗಳು ಮುಂದಿನ ವರ್ಷದ ಆರಂಭದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ಸಿಎಫ್‌ಮೊಟೊದೊಂದಿಗೆ ಹೊಸ 750ಸಿಸಿ ಬೈಕುಗಳನ್ನು ಅಭಿವೃದ್ಧಿಪಡಿಸುತ್ತಿದೆ ಕೆಟಿಎಂ

ಈ ಸಿಎಫ್‌ಮೊಟೊ 700 ಸಿಎಲ್-ಎಕ್ಸ್ ಮಾದರಿಗಳಲ್ಲಿ ಆನ್-ಬೋರ್ಡ್ ಕಂಪ್ಯೂಟರ್ ಎಕಾನಮಿ ಮತ್ತು ಸ್ಪೋರ್ಟ್ ಎಂಬ ಎರಡು ರೈಡಿಂಗ್ ಮೋಡ್‌ಗಳನ್ನು ಹೊಂದಿದೆ. ಸಿಎಫ್‌ಮೊಟೊ 700 ಸಿಎಲ್-ಎಕ್ಸ್ ಸಹ ಕ್ರೂಸ್ ಕಂಟ್ರೋಲ್ ಜೊತೆಗೆ ಯುಎಸ್‌ಬಿ ಚಾರ್ಜಿಂಗ್ ಪಾಯಿಂಟ್ ಅನ್ನು ನೀಡುತ್ತದೆ.

ಸಿಎಫ್‌ಮೊಟೊದೊಂದಿಗೆ ಹೊಸ 750ಸಿಸಿ ಬೈಕುಗಳನ್ನು ಅಭಿವೃದ್ಧಿಪಡಿಸುತ್ತಿದೆ ಕೆಟಿಎಂ

ಕೆಟಿಎಂ ಕಂಪನಿಯು ಸಿಎಫ್‌ಮೊಟೊ ಜೊತೆ ಜಂಟಿಯಾಗಿ ಹೊಸ 750ಸಿಸಿ ಸರಣಿಯ ಹೊಸ ಬೈಕುಗಳನ್ನು ಚೀನಾದಲ್ಲಿ ಅಭಿವೃದ್ದಿ ಪಡಿಸಲು ಶೀಘ್ರದಲ್ಲೇ ಪ್ರಾರಂಭಿಸಲಿದೆ. ಇನ್ನು ಈ ಹೊಸ ಮಾದರಿಗಳ ಬಗ್ಗೆ ಹೆಚ್ಚಿನ ಮಾಹಿತಿಗಳು ಶೀಘ್ರದಲ್ಲೇ ಬಹಿರಂಗವಾಗಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
Read more on ಕೆಟಿಎಂ ktm
English summary
KTM Developing 750 cc Motorcycles With CFMoto Details. Read In Kannada.
Story first published: Sunday, September 6, 2020, 13:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X