ಬಿಡುಗಡೆಯಾಯ್ತು ಬಿಎಸ್-6 ಕೆಟಿಎಂ ಡ್ಯೂಕ್ 200 ಬೈಕಿನ ಟೀಸರ್

ಕೆಟಿಎಂ ಕಂಪನಿಯು ತನ್ನ ಬಿಎಸ್-6 ಡ್ಯೂಕ್ 200 ಬೈಕ್ ಅನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಇದರ ಭಾಗವಾಗಿ ಬಹುನಿರೀಕ್ಷಿತ ಕೆಟಿಎಂ ಹೊಸ ಡ್ಯೂಕ್ 200 ಬೈಕಿನ ಆಕರ್ಷಕ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

ಬಿಡುಗಡೆಯಾಯ್ತು ಬಿಎಸ್-6 ಕೆಟಿಎಂ ಡ್ಯೂಕ್ 200 ಬೈಕಿನ ಟೀಸರ್

ಭಾರತದಲ್ಲಿ ಹೊಸ ಬಿ‍ಎಸ್ 6 ಮಾಲಿನ್ಯ ನಿಯಮ ಏಪ್ರಿಲ್ 1ರಿಂದ ಜಾರಿಗೆಯಾಗಲಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ವಾಹನ ತಯಾರಕ ಕಂಪನಿಗಳು ತಮ್ಮ ವಾಹನಗಳನ್ನು ಬಿ‍ಎಸ್ 6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತಿದೆ. ಇದರಿಂದ ಜನಪ್ರಿಯ ಕೆಟಿ‍ಎಂ ಕಂಪನಿಯು ಸಹ ಹೊರತಾಗಿಲ್ಲ. ಕೆಟಿ‍ಎಂ ಕಂಪನಿಯು ಈ ಮೊದಲು ತನ್ನ 390 ಅಡ್ವೆಂಚರ್ ಬೈಕ್ ಅನ್ನು ಬಿ‍ಎಸ್ 6 ಎಂಜಿನ್‍‍ನೊಂದಿಗೆ ಬಿಡುಗಡೆಗೊಳಿಸಿತ್ತು. ಈಗ ಡ್ಯೂಕ್ 390 ಮತ್ತು ಡ್ಯೂಕ್ 250 ಬೈಕ್‍‍ಗಳನ್ನು ಸಹ ಬಿ‍ಎಸ್ 6 ಎಂಜಿನ್‍‍ನೊಂದಿಗೆ ಬಿಡುಗಡೆಗೊಳಿಸಿದೆ.

ಬಿಡುಗಡೆಯಾಯ್ತು ಬಿಎಸ್-6 ಕೆಟಿಎಂ ಡ್ಯೂಕ್ 200 ಬೈಕಿನ ಟೀಸರ್

ಇದೀಗ ತನ್ನ ಸರಣಿಯಲ್ಲಿರುವ ಡ್ಯೂಕ್ 200 ಬೈಕ್ ಅನ್ನು ಬಿಡುಗಡೆಗೊಳಿಸಲು ಮುಂದಾಗಿದ್ದಾರೆ. ಕೆಟಿಎಂ ಡ್ಯೂಕ್ 390 ಬೈಕ್ ಅನ್ನು 2017ರಲ್ಲಿ ನವೀಕರಿಸಲಾಗಿತ್ತು. ಆದರೆ ಕೆಟಿಎಂ ಕಂಪನಿಯು ಡ್ಯೂಕ್ 200 ಬೈಕ್ ಅನ್ನು ನವೀಕರಿಸಿಲ್ಲ. ಆದರೆ ಜನಪ್ರಿಯ ಕಾಂಪ್ಯಾಕ್ಟ್ ಡ್ಯೂಕ್ ಪ್ಲಾಟ್‍ಫಾರ್ಮ್ ಅನ್ನು ಆಧರಿಸಿ 250 ಸಿಸಿ ಬೈಕ್ ಅನ್ನು ಬಿಡುಗಡೆಗೊಳಿಸಿತ್ತು.

ಬಿಡುಗಡೆಯಾಯ್ತು ಬಿಎಸ್-6 ಕೆಟಿಎಂ ಡ್ಯೂಕ್ 200 ಬೈಕಿನ ಟೀಸರ್

ಕಂಪನಿಯು ಡ್ಯೂಕ್ 200 ಬೈಕಿನ ಉತ್ತರಾಧಿಕಾರಿ ಡ್ಯೂಕ್ 250 ಎಂದು ತಿಳಿಸಿತ್ತು. ಆದರೆ ಆಸ್ಟ್ರೀಯನ್ ಬ್ರ್ಯಾಂಡ್ ಹಳೆಯ ಡ್ಯೂಕ್ 250 ಅದರ ಮೂಲ ವಿನ್ಯಾಸದಲ್ಲಿ ಇರಿಸಲು ಬಯಸಿದ್ದರು. ಭಾರತದಲ್ಲಿ ಈ ಮಾದರಿಯು ಅಪಾರ ಜನಪ್ರಿಯತೆಯನ್ನು ಗಳಿಸಿತ್ತು.

ಬಿಡುಗಡೆಯಾಯ್ತು ಬಿಎಸ್-6 ಕೆಟಿಎಂ ಡ್ಯೂಕ್ 200 ಬೈಕಿನ ಟೀಸರ್

ಇದೀಗ ಕೆ‍ಟಿಎಂ ಡ್ಯೂಕ್ 200 ಅಭಿಮಾನಿಗಳಿಗೆ ಕಂಪನಿಯು ಹೊಸ ಸಿಹಿ ಸುದ್ದಿ ನೀಡಿದೆ. ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ಡ್ಯೂಕ್ 200 ಬೈಕ್ ಅನ್ನು ನವೀಕರಿಸಲು ನಿರ್ಧರಿಸಿದೆ. 2020ರ ಕೆಟಿಎಂ ಡ್ಯೂಕ್ 200 ಚಿತ್ರಗಳು ಆನ್‍‍ಲೈನ್‍‍ನಲ್ಲಿ ಬಹಿರಂಗವಾಗಿದೆ.

ಬಿಡುಗಡೆಯಾಯ್ತು ಬಿಎಸ್-6 ಕೆಟಿಎಂ ಡ್ಯೂಕ್ 200 ಬೈಕಿನ ಟೀಸರ್

ಕೆಟಿಎಂ ಕಂಪನಿಯು ಡ್ಯೂಕ್ 200 ಬೈಕ್ ಅನ್ನು ಹೊಸ ವಿನ್ಯಾಸದೊಂದಿಗೆ ಬಿಡುಗಡೆ ಮಾಡಲು ನಿರ್ಧರಿಸಿದೆ. ಹೊಸ ಡ್ಯೂಕ್ 200 ಬೈಕ್ ಮುಂಭಾಗ ಟ್ರೈಗಲರ್ ಹೆಡ್‍ಲ್ಯಾಂಪ್ ಅನ್ನು ಅಳವಡಿಸಲಾಗಿದೆ. ಇನ್ನೂ ಫುಲ್ ಎಲ್‍ಇಡಿ ಯುನಿಟ್‍ ಆಕರ್ಷಕವಾಗಿದೆ. ಕೆಟಿಎಂ ಕಂಪನಿಯ ಜನಪ್ರಿಯ ಡ್ಯೂಕ್ ಬೈಕಿನ ಸರಣಿಯಲ್ಲಿರುವ ಇತರ ಬೈಕ್‍‍ಗಳಂತೆ ಈ ಬೈಕಿನ ಫ್ಯೂಯಲ್ ಟ್ಯಾಂಕ್ ದೊಡ್ಡದಾಗಿದೆ.

ಬಿಡುಗಡೆಯಾಯ್ತು ಬಿಎಸ್-6 ಕೆಟಿಎಂ ಡ್ಯೂಕ್ 200 ಬೈಕಿನ ಟೀಸರ್

2020ರ ಕೆಟಿಎಂ ಡ್ಯೂಕ್ 200 ಬೈಕಿನಲ್ಲಿ ದೊಡ್ಡ ಸ್ಪ್ಲಿಟ್ ಸೀಟ್ ಮತ್ತು ಹೊಸ ಎಲ್‍ಇಡಿ ಟೇಲ್‍‍ಲೈಟ್‍ನೊಂದಿಗೆ ಹೊಸ ರೇರ್ ಸಬ್ ಫ್ರೇಮ್ ಅನ್ನು ಹೊಂದಿದೆ. ಈ ಬೈಕ್ ಹಳೆಯ ಡಿಜಟಲ್ ಕ್ಲಸ್ಟರ್, ಹ್ಯಾಂಡಲ್‍‍ಬಾರ್ ಮತ್ತು ಸ್ವಿಚ್‍‍ಗೇರ್ ಅನ್ನು ಹೊಂದಿದೆ. ಹೊಸ ಬಣ್ಣ ಮತ್ತು ಆಕರ್ಷಕ ವಿನ್ಯಾಸವನ್ನು ಈ ಬೈಕ್ ಹೊಂದಿದೆ.

ಬಿಡುಗಡೆಯಾಯ್ತು ಬಿಎಸ್-6 ಕೆಟಿಎಂ ಡ್ಯೂಕ್ 200 ಬೈಕಿನ ಟೀಸರ್

ಹೊಸ ಕೆಟಿಎಂ ಡ್ಯೂಕ್ 200 ಬೈಕ್ 17 ಇಂಚಿನ ಅಲಾಯ್ ವ್ಹೀಲ್, 300 ಎಂಎಂ ಫ್ರಂಟ್ ಡಿಸ್ಕ್, 230 ಎಂಎಂ ರೇರ್ ಡಿಸ್ಕ್, ಡಬ್ಲ್ಯೂಪಿ ಇನ್ವಟೆರ್ಡ್ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ ಮತ್ತು ರೇರ್ ಮೊನೊಶಾಕ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ಸಿಂಗಲ್ ಚಾನೆಲ್ ಎಬಿ‍ಎಸ್ ಅನ್ನು ಹೊಂದಿದೆ.

ಬಿಡುಗಡೆಯಾಯ್ತು ಬಿಎಸ್-6 ಕೆಟಿಎಂ ಡ್ಯೂಕ್ 200 ಬೈಕಿನ ಟೀಸರ್

ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ 2020ರ ಡ್ಯೂಕ್ ಬೈಕಿನ ಟೀಸರ್ ಅನ್ನು ಅನ್‍ಲೈನ್‍ನಲ್ಲಿ ಬಿಡಗಡೆಗೊಳಿಸಲಾಗಿದೆ. ಟೀಸರ್ ಪ್ರಕಾರ 2020ರ ಡ್ಯೂಕ್ ಹೊಸ ವಿನ್ಯಾಸ ಮತ್ತು ಸ್ಟೈಲ್ ಸೂಪರ್ ಡ್ಯೂಕ್ ಮಾದರಿಯಲ್ಲಿ ಇರಲಿದೆ. ಈ ಹೊಸ ಬೈಕ್ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಇರಲಿದೆ.

ಬಿಡುಗಡೆಯಾಯ್ತು ಬಿಎಸ್-6 ಕೆಟಿಎಂ ಡ್ಯೂಕ್ 200 ಬೈಕಿನ ಟೀಸರ್

2020ರ ಕೆಟಿಎಂ ಡ್ಯೂಕ್ 200 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.6 ಲಕ್ಷಗಳಾಗಿರಬಹುದು ಎಂದು ಅಂದಾಜಿಸಲಾಗಿದೆ. ಹೊಸ ಕೆಟಿಎಂ 200 ಬೈಕ್ ಶೀಘ್ರದಲ್ಲೇ ಡೀಲರ್‍‍ಗಳನ್ನು ತಲಪಲು ಪ್ರಾರಂಭವಾಗಬಹುದು. ಇನ್ನೂ ಡ್ಯೂಕ್ 125 ಬೈಕ್ ಅನ್ನು ಕೂಡ ಮುಂದಿನ ದಿನಗಳಲ್ಲಿ ನವೀಕರಿಸಬಹುದು ಎಂದು ನಿರೀಕ್ಷಿಸುತ್ತೇವೆ.

Most Read Articles

Kannada
Read more on ಕೆಟಿಎಂ ktm
English summary
2020 KTM Duke 200 Officially Teased; 2-Channel ABS Confirmed. Read in Kananda.
Story first published: Tuesday, January 28, 2020, 19:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X