ಬೈಕ್‍‍ನಲ್ಲಿ ನಾಯಿ ಕರೆದೊಯ್ದ ಮಾಲೀಕನಿಗೆ ಬಿತ್ತು ದಂಡ..!

ಕೆಲವು ದಿನಗಳ ಹಿಂದೆ, ನಾಯಿಯೊಂದು ಬೈಕ್‍‍ನ ಹಿಂಬದಿಯ ಸೀಟಿನಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಈ ವೀಡಿಯೊದಲ್ಲಿ ನಾಯಿಯೊಂದು ಬೈಕ್ ಸವಾರನ ಹಿಂದೆ ಕುಳಿತಿತ್ತು.

ಬೈಕ್‍‍ನಲ್ಲಿ ನಾಯಿ ಕರೆದೊಯ್ದ ಮಾಲೀಕನಿಗೆ ಬಿತ್ತು ದಂಡ..!

ಈ ಘಟನೆ ನಡೆದಿರುವುದು ಕೇರಳದಲ್ಲಿ. ಈ ವೀಡಿಯೊವನ್ನು ಟೈಮ್ಸ್ ಆಫ್ ಇಂಡಿಯಾ ಅಪ್‍‍ಲೋಡ್ ಮಾಡಿದೆ. ನಾಯಿಯನ್ನು ಬೈಕಿನಲ್ಲಿ ಕರೆದೊಯ್ದ ಬೈಕ್ ಮಾಲೀಕನಿಗೆ ಅಲ್ಲಿನ ಸಾರಿಗೆ ಇಲಾಖೆ ದಂಡ ವಿಧಿಸಿದೆ. ಈ ವೀಡಿಯೊದಲ್ಲಿದ್ದ ನಂಬರ್ ಪ್ಲೇಟ್‍‍ನಿಂದ ಬೈಕ್ ಮಾಲೀಕನನ್ನು ಪತ್ತೆ ಹಚ್ಚಿದ ಸಾರಿಗೆ ಇಲಾಖೆಯು ದಂಡ ವಿಧಿಸಿದೆ.

ಬೈಕ್‍‍ನಲ್ಲಿ ನಾಯಿ ಕರೆದೊಯ್ದ ಮಾಲೀಕನಿಗೆ ಬಿತ್ತು ದಂಡ..!

ಬೈಕ್ ಚಾಲನೆ ಮಾಡುವ ವೇಳೆಯಲ್ಲಿ ಹೆಲ್ಮೆಟ್ ಧರಿಸಿಲ್ಲವೆಂಬ ಕಾರಣಕ್ಕೆ ಹಾಗೂ ಬೈಕಿನಲ್ಲಿ ನಾಯಿಯನ್ನು ಕರೆದೊಯ್ದು ಪ್ರಾಣಿಯ ಜೀವದ ಜೊತೆಗೆ ಆಟವಾಡಿರುವ ಎರಡು ಕಾರಣಗಳಿಗೆ ಸಾರಿಗೆ ಇಲಾಖೆಯು ಬೈಕ್ ಮಾಲೀಕನಿಗೆ ದಂಡ ವಿಧಿಸಿದೆ.

ಬೈಕ್‍‍ನಲ್ಲಿ ನಾಯಿ ಕರೆದೊಯ್ದ ಮಾಲೀಕನಿಗೆ ಬಿತ್ತು ದಂಡ..!

ಇದರ ಜೊತೆಗೆ ರಸ್ತೆಯಲ್ಲಿದ್ದ ಇತರ ಸಾರ್ವಜನಿಕರ ಜೀವಕ್ಕೆ ಕುತ್ತು ತಂದಿರುವ ಕಾರಣಕ್ಕೂ ದಂಡ ವಿಧಿಸಲಾಗಿದೆ. ಬೈಕ್ ಮಾಲೀಕನಿಗೆ ಕಳುಹಿಸಲಾಗಿರುವ ನೋಟಿಸ್‍‍ನಲ್ಲಿ ರೂ.2,500 ದಂಡ ವಿಧಿಸಲಾಗಿದೆ. ಬೈಕ್ ಮಾಲೀಕನು ಆರ್‍‍ಟಿ‍ಒ ಕಚೇರಿಯಲ್ಲಿ ಖುದ್ದು ಹಾಜರಿದ್ದು, ವಿವರಣೆ ನೀಡುವಂತೆ ತಿಳಿಸಲಾಗಿದೆ.

ಬೈಕ್‍‍ನಲ್ಲಿ ನಾಯಿ ಕರೆದೊಯ್ದ ಮಾಲೀಕನಿಗೆ ಬಿತ್ತು ದಂಡ..!

ಬೈಕ್ ಮಾಲೀಕನು ಆರ್‍‍ಟಿ‍ಒ ಅಧಿಕಾರಿಗಳನ್ನು ಭೇಟಿಯಾದ ನಂತರ ದಂಡವನ್ನು ಮನ್ನಾ ಮಾಡಲಾಯಿತೇ ಇಲ್ಲವೇ ಎಂಬ ಮಾಹಿತಿ ತಿಳಿದು ಬಂದಿಲ್ಲ. ಸಾಕು ನಾಯಿಯನ್ನು ಬೈಕಿನಲ್ಲಿ ಕರೆದೊಯ್ಯುತ್ತಿರುವ ಘಟನೆ ನಡೆದಿರುವುದು ಇದೇ ಮೊದಲ ಸಲವಲ್ಲ.

ಬೈಕ್‍‍ನಲ್ಲಿ ನಾಯಿ ಕರೆದೊಯ್ದ ಮಾಲೀಕನಿಗೆ ಬಿತ್ತು ದಂಡ..!

ಈ ಹಿಂದೆಯೂ ಈ ರೀತಿಯ ಅನೇಕ ಘಟನೆಗಳು ನಡೆದಿದ್ದವು. ಕೆಲವು ದಿನಗಳ ಹಿಂದೆ ಬೈಕ್ ಸವಾರನ ತನ್ನ ಸಾಕು ನಾಯಿಗೆ ಹೆಲ್ಮೆಟ್ ಹಾಕಿ ಹಿಂಬದಿಯಲ್ಲಿ ಕೂರಿಸಿಕೊಂಡು ಸವಾರಿ ಮಾಡುತ್ತಿದ್ದ ವೀಡಿಯೊ ವೈರಲ್ ಆಗಿತ್ತು.

ಬೈಕ್‍‍ನಲ್ಲಿ ನಾಯಿ ಕರೆದೊಯ್ದ ಮಾಲೀಕನಿಗೆ ಬಿತ್ತು ದಂಡ..!

ತಮ್ಮ ಸಾಕು ನಾಯಿಗಳನ್ನು ಹಿಂಬದಿ ಸೀಟಿನಲ್ಲಿ ಕೂರಿಸಿಕೊಂಡು ಬೈಕ್ ಚಾಲನೆ ಮಾಡುವ ದೃಶ್ಯಗಳು ಹೆಚ್ಚಾಗುತ್ತಿವೆ. ಇದರಿಂದಾಗಿ ಕೇವಲ ನಾಯಿಗಳಿಗೆ ಮಾತ್ರವಲ್ಲದೇ, ರಸ್ತೆಯಲ್ಲಿ ಚಲಿಸುವ ಇತರ ಸಾರ್ವಜನಿಕರಿಗೂ ತೊಂದರೆಯಾಗಲಿದೆ.

ಬೈಕ್‍‍ನಲ್ಲಿ ನಾಯಿ ಕರೆದೊಯ್ದ ಮಾಲೀಕನಿಗೆ ಬಿತ್ತು ದಂಡ..!

ಇದು ಅಪಘಾತಗಳಿಗೂ ಕಾರಣವಾಗಬಹುದು. ಪ್ರಾಣಿಗಳ ವರ್ತನೆಯ ಬಗ್ಗೆ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಅವುಗಳ ಚಲನೆಯಿಂದಾಗಿ ಬೈಕ್ ಸವಾರನು ಬೈಕ್ ಅನ್ನು ನಿಯಂತ್ರಿಸಲು ಸಾಧ್ಯವಾಗದೇ ಹೋಗಬಹುದು.

ಬೈಕ್‍‍ನಲ್ಲಿ ನಾಯಿ ಕರೆದೊಯ್ದ ಮಾಲೀಕನಿಗೆ ಬಿತ್ತು ದಂಡ..!

ಹೆಚ್ಚು ವಾಹನಗಳಿರುವ ಸ್ಥಳಗಳಲ್ಲಿ ಈ ಘಟನೆಯು ವಿಕೋಪಕ್ಕೂ ಹೋಗಬಹುದು. ಮೊದಲೇ ಭಾರತದಲ್ಲಿ ವಾಹನ ಸವಾರರು ಸಂಚಾರಿ ನಿಯಮಗಳನ್ನು ಪಾಲಿಸುವುದಿಲ್ಲ. ಇನ್ನು ಈ ರೀತಿಯ ಘಟನೆಗಳು ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರನ್ನು ವಿಚಲಿತಗೊಳಿಸುತ್ತವೆ.

ಈ ಘಟನೆಗಳನ್ನು ಗಮನಿಸುವ ಸಾರ್ವಜನಿಕರ ವಾಹನಗಳು ಅಪಘಾತಕ್ಕೆ ಒಳಗಾಗುವ ಸಾಧ್ಯತೆಗಳಿರುತ್ತವೆ. ಪ್ರಾಣಿಗಳನ್ನು ಹಿಂಬರಿಯ ಸೀಟಿನಲ್ಲಿ ಕೂರಿಸಿಕೊಂಡು ದ್ವಿ ಚಕ್ರ ವಾಹನ ಚಲಾಯಿಸುವ ಯಾವುದೇ ಕಾನೂನು ಭಾರತದಲ್ಲಿಲ್ಲ.

ಬೈಕ್‍‍ನಲ್ಲಿ ನಾಯಿ ಕರೆದೊಯ್ದ ಮಾಲೀಕನಿಗೆ ಬಿತ್ತು ದಂಡ..!

ತಮ್ಮ ಮುದ್ದಿನ ನಾಯಿಗಳನ್ನು ಬೈಕಿನಲ್ಲಿ ಕೂರಿಸಿಕೊಂಡು ಚಾಲನೆ ಮಾಡುವ ಆಸೆಯುಳ್ಳವರು ಖಾಸಗಿ ಸ್ಥಳಗಳಲ್ಲಿ ಪ್ರಯತ್ನಿಸುವುದು ಸೂಕ್ತ. ಸಾರ್ವಜನಿಕ ರಸ್ತೆಗಳಲ್ಲಿ ವಾಹನ ಚಾಲನೆ ಮಾಡುವಾಗ ಮೈಯೆಲ್ಲಾ ಕಣ್ಣಾಗಿರಬೇಕು. ಇಲ್ಲದಿದ್ದರೆ ಅಪಘಾತವಾಗುವುದು ಖಚಿತ.

Most Read Articles

Kannada
English summary
Man fined for carrying dog on bike. Read in Kannada.
Story first published: Saturday, February 1, 2020, 13:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X