Just In
- 10 hrs ago
ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು
- 11 hrs ago
ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಬಹುನೀರಿಕ್ಷಿತ ಫೋರ್ಸ್ ನ್ಯೂ ಜನರೇಷನ್ ಗೂರ್ಖಾ
- 11 hrs ago
ಸೀಮನ್ಸ್ ಕಂಪನಿಯ ಜೊತೆಗೂಡಿ ಆಧುನಿಕ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಘಟಕವನ್ನು ಅಭಿವೃದ್ದಿಪಡಿಸಲಿದೆ ಓಲಾ
- 11 hrs ago
ಹೊಸ ವಿನ್ಯಾಸದ ಡ್ಯುಯಲ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಒಕಿನಾವ
Don't Miss!
- News
ಬೆಂಗಳೂರು: 20 ವಾರ್ಡ್ಗಳಲ್ಲಿ 104 ಬೋರ್ವೆಲ್ ಕೊರೆಯಲಿದೆ ಬಿಬಿಎಂಪಿ
- Movies
ಸ್ಯಾಂಡಲ್ ವುಡ್ ಸುಂದರಿಯರು; ಅಪರೂಪದ ಫೋಟೋ ಹಂಚಿಕೊಂಡ ಮಾಲಾಶ್ರೀ, ಶ್ರುತಿ
- Lifestyle
ಶುಕ್ರವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್
- Sports
ಐಎಸ್ಎಲ್: ಈಸ್ಟ್ ಬೆಂಗಾಲ್ ಅಜೇಯ ನಡೆಗೆ ಬೆಸ್ಟ್ ಮುಂಬೈ ಸವಾಲು
- Finance
ಬಜೆಟ್ 2021: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಡೀಲರ್ ಬಳಿ ಕಾಣಿಸಿಕೊಂಡ ಹೊಸ ಕೆಟಿಎಂ 250 ಡ್ಯೂಕ್ ಬೈಕ್
ಕೆಟಿಎಂ ಬೈಕುಗಳ ಸರಣಿಯಲ್ಲಿ ಜನಪ್ರಿಯ ಮಾದರಿಗಳಲ್ಲಿ ಕೆಟಿಎಂ 250 ಡ್ಯೂಕ್ ಕೂಡ ಒಂದಾಗಿದೆ. ಬಿಎಸ್-6 ಕೆಟಿಎಂ 250 ಡ್ಯೂಕ್ ಬೈಕನ್ನು ಈ ವರ್ಷದ ಆರಂಭದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಇದೀಗ ಹೊಸ ಎಲ್ಇಡಿ ಹೆಡ್‌ಲ್ಯಾಂಪ್ ಹೊಂದಿರುವ 250 ಡ್ಯೂಕ್ ಡೀಲರ್ ಬಳಿ ಕಾಣಿಸಿಕೊಂಡಿದೆ.

ಹೊಸ ಕೆಟಿಎಂ ಬೈಕಿನಲ್ಲಿ ಕಾನ್ಫಿಗರ್ ಮಾಡಬಹುದಾದ ಕಲರ್ ಟಿಎಫ್‌ಟಿ ಡಿಸ್ ಪ್ಲೇ, ಫುಲ್ ಎಲ್ಇಡಿ ಹೆಡ್‌ಲ್ಯಾಂಪ್, 250 ಹ್ಯಾಲೊಜೆನ್ ಲ್ಯಾಂಪ್ (ಜೊತೆಗೆ ಎಲ್ಇಡಿ ಡಿಆರ್ಎಲ್) ಮತ್ತು ಅಂಬರ್-ಬ್ಯಾಕ್ಲಿಟ್ ಎಲ್ಸಿಡಿ ಇನ್ಸ್ಟ್ರುಮೆಂಟ್ ಕನ್ಸೋಲ್ ಅನ್ನು ಹೊಂದಿದೆ. 390 ಡ್ಯೂಕ್‌ನಂತೆಯೇ ನವೀಕರಿಸಿದ ಫುಲ್ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿರುವ 2020 ಕೆಟಿಎಂ 250 ಡ್ಯೂಕ್ ಚಿತ್ರಗಳು ರಶ್ಲೇನ್ ಬಹಿರಂಗಪಡಿಸಿದೆ. ಈ ಹೊಸ ಕೆಟಿಎಂ 250 ಡ್ಯೂಕ್ ಈಗಾಗಲೇ ಡೀಲರ್ ಬಳಿ ತಲುಪಲು ಪ್ರಾರಂಭವಾಗಿದೆ.

ಈ ವರ್ಷದ ಆರಂಭದಲ್ಲಿ ಬಿಎಸ್ 6 ಅಪ್‌ಡೇಟ್ ಪಡೆದ ಕೆಟಿಎಂ 250 ಡ್ಯೂಕ್ ಬೈಕನ್ನು ಎಕ್ಸ್ ಶೋರೂಂ ಪ್ರಕಾರ ರೂ.2 ಲಕ್ಷಕ್ಕೆ ಮಾರಾಟ ಮಾಡುತ್ತಿದೆ. ಇನ್ನು ಹೆಡ್‌ಲ್ಯಾಂಪ್ ಅಪ್‌ಡೇಟ್ ಪಡೆದ ಬೈಕಿನ ಬೆಲೆಯು ತುಸು ದುಬಾರಿಯಾಗಿರಲಿದೆ.
MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಕೆಟಿಎಂ 250 ಡ್ಯೂಕ್ ಬೈಕ್ 248 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದ್ದು, 9,000 ಆರ್‍ಪಿಎಂನಲ್ಲಿ 30 ಬಿಎಚ್‍ಪಿ ಪವರ್ ಮತ್ತು 7,500 ಆರ್‍ಪಿಎಂನಲ್ಲಿ 24 ಎನ್‍ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಎಂಜಿನ್ ನೊಂದಿಗೆ 6 ಸ್ಪೀಡ್ ಗೇರ್‍ಬಾಕ್ಸ್ ನೊಂದಿಗೆ ಸ್ಲಿಪ್ ಅಸಿಸ್ಟೆಡ್ ಕ್ಲಚ್ ಜೋಡಿಸಲಾಗಿದೆ. ಇನ್ನು ಈ ಕೆಟಿಎಂ 250 ಡ್ಯೂಕ್ ಬೈಕಿನಲ್ಲಿ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ ಅಪ್‍ಸೈಡ್ ಡೌನ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ ಶಾಕ್ ಸಸ್ಪೆಂಷನ್ ಹೊಂದಿದೆ.
MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಬೈಕಿನಲ್ಲಿ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಬ್ರೇಕ್‍ಗಳಿಗಾಗಿ ಮುಂಭಾಗದಲ್ಲಿ 300 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 230 ಎಂಎಂ ಯುನಿಟ್ ಅನ್ನು ಅಳವಡಿಸಲಾಗಿದೆ. ಸ್ಟ್ಯಾಂಡರ್ಡ್ ಡ್ಯುಯಲ್ ಚಾನೆಲ್ ಎಬಿಎಸ್ ಸಿಸ್ಟಂ ಅನ್ನು ಅಳವಡಿಸಿ ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ.

ಡ್ಯೂಕ್ 250 ತನ್ನ ಶ್ರೇಣಿಯ ಡ್ಯೂಕ್ 390 ಬೈಕಿನಿಂದ ವಿನ್ಯಾಸ ಸೇರಿದಂತೆ ಅನೇಕ ಅಂಶಗಳನ್ನು ಎರವಲು ಪಡೆದಿದೆ. ಇದರಲ್ಲಿ ಚಾಸಿಸ್, ಸ್ವಿಂಗ್ಆರ್ಮ್,ಫುಲ್ ಎಲ್ಇಡಿ ಹೆಡ್‍ಲ್ಯಾಂಪ್ ಅನ್ನು ಒಳಗೊಂಡಿದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಬಜಾಜ್ ಪಲ್ಸರ್ ಎನ್ಎಸ್200 ಬೈಕ್

ಹೊಸ ಕೆಟಿಎಂ 250 ಡ್ಯೂಕ್ ಭಾರತದಲ್ಲಿ ಯಮಹಾ ಎಫ್‌ಜೆಡ್ಎಸ್ 25 ಮತ್ತು ಸುಜುಕಿ ಜಿಕ್ಸರ್ 250 ಬೈಕುಗಳಿಗೆ ಪೈಪೋಟಿಯನ್ನು ನೀಡುತ್ತದೆ. ಪ್ರತಿಸ್ಪರ್ಧಿಗಳ ಬೆಲೆಯನ್ನು ಹೋಲಿಸಿದರೆ ಕೆಟಿಎಂ 250 ಡ್ಯೂಕ್ ದುಬಾರಿಯಾಗಿದೆ. ಆದರೆ ಕೆಟಿಎಂ 250 ಡ್ಯೂಕ್ ಬೈಕ್ ಪ್ರತಿಸ್ಪರ್ಧಿ ಬೈಕುಗಳಿಗಿಂತ ಹೆಚ್ಚಿನ ಪವರ್ ಅನ್ನು ಉತ್ಪಾದಿಸುತ್ತದೆ.

ಎಲ್ಇಡಿ ಹೆಡ್‌ಲ್ಯಾಂಪ್, ಹೊಂದಿರುವ 250 ಡ್ಯೂಕ್ ಅನ್ನು ಮುಂದಿನ ವಾರಗಳಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಬಹುದೆಂದು ನಿರೀಕ್ಷಿಸುತ್ತೇವೆ. ಕೆಟಿಎಂ ಬೈಕುಗಳು ಭಾರತದಲ್ಲಿ ಹೆಚ್ಚಿನ ಯುವ ಗ್ರಾಹಕರನ್ನು ಸೆಳೆಯುವಲ್ಲಿ ಯಶ್ವಸಿಯಾಗಿದೆ.