ಬಿಡುಗಡೆಯಾಯ್ತು ಸುಜುಕಿ ಜಿಎಸ್‌ಎಕ್ಸ್-ಎಸ್ 300 ಬೈಕ್

ಸುಜುಕಿ ಮೋಟಾರ್‌ಸೈಕಲ್ ತನ್ನ ಹೊಸ ಸುಜುಕಿ ಜಿಎಸ್‌ಎಕ್ಸ್-ಎಸ್ 300 ಬೈಕನ್ನು ಚೀನಾ ದೇಶದ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಸುಜುಕಿ ಜಿಎಸ್‌ಎಕ್ಸ್-ಎಸ್ 300 ಬೈಕಿನ ಬೆಲೆಯು ಸುಮಾರು ರೂ.3.55 ಲಕ್ಷಗಳಾಗಿದೆ.

ಬಿಡುಗಡೆಯಾಯ್ತು ಸುಜುಕಿ ಜಿಎಸ್‌ಎಕ್ಸ್-ಎಸ್ 300 ಬೈಕ್

ಈ ಹೊಸ ಸುಜುಕಿ ಜಿಎಸ್‌ಎಕ್ಸ್-ಎಸ್ 300 ಬೈಕಿನಲ್ಲಿ 298 ಸಿಸಿ, ಟ್ವಿನ್-ಸಿಲಿಂಡರ್, ಎಸ್‌ಒಹೆಚ್‌ಸಿ, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8,500 ಆರ್‌ಪಿಎಂನಲ್ಲಿ 29.23 ಬಿಹೆಚ್‍ಪಿ ಪವರ್ ಮತ್ತು 6,500 ಆರ್‌ಪಿಎಂನಲ್ಲಿ 27.8 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಅಳವಡಿಸಲಾಗಿದೆ. ಚೀನಾದ ದ್ವಿಚಕ್ರ ವಾಹನ ತಯಾರಕ ಕಂಪನಿಯೊಂದಿರ ಪಾಲುದಾರಿಕೆಯಲ್ಲಿ ಈ ಬೈಕನ್ನು ಬಿಡುಗಡೆಗೊಳಿಸಿದೆ.

ಬಿಡುಗಡೆಯಾಯ್ತು ಸುಜುಕಿ ಜಿಎಸ್‌ಎಕ್ಸ್-ಎಸ್ 300 ಬೈಕ್

300 ಸಿಸಿ ನೇಕೆಡ್ ಸ್ಪೋರ್ಟ್ಸ್ ಬೈಕ್ ಆದ ಸುಜುಕಿ ಜಿಎಸ್‌ಎಕ್ಸ್-ಎಸ್ 300 ಕ್ರಿಸ್ಟಲ್ ವೈಟ್, ಸ್ಟಾರ್‌ಲೈಟ್ ಬ್ಲ್ಯಾಕ್ ಮತ್ತು ಕೂಲ್ ರೆಡ್ ಎಂಬ 3 ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಈ ಸುಜುಕಿ ಜಿಎಸ್‌ಎಕ್ಸ್-ಎಸ್ 300 ಬೈಕ್ ಆಕರ್ಷಕ ಲುಕ್ ಅನ್ನು ಹೊಂದಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಬಿಡುಗಡೆಯಾಯ್ತು ಸುಜುಕಿ ಜಿಎಸ್‌ಎಕ್ಸ್-ಎಸ್ 300 ಬೈಕ್

ಈ ಹೊಸ ಸುಜುಕಿ ಜಿಎಸ್‌ಎಕ್ಸ್-ಎಸ್ 300 ಬೈಕಿನಲ್ಲಿ ಇಂಟಿಗ್ರೇಟೆಡ್ ಎಲ್ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್, ಎಲ್ಇಡಿ ಟೈಲ್ ಲ್ಯಾಂಪ್, ಮಸ್ಕ್ಯುಲರ್ ಟ್ಯಾಂಕ್ ಮತ್ತು ಫುಲ್ ಎಲ್ಇಡಿ ಹೆಡ್‌ಲ್ಯಾಂಪ್ ಹೊಂದಿದೆ. ಈ ಬೈಕಿನ ಮೋಟರ್ ಅಡಿಯಲ್ಲಿ ಎಂಜಿನ್ ಕೌಲ್ ಅನ್ನು ಇರಿಸಲಾಗಿದೆ.

ಬಿಡುಗಡೆಯಾಯ್ತು ಸುಜುಕಿ ಜಿಎಸ್‌ಎಕ್ಸ್-ಎಸ್ 300 ಬೈಕ್

ಈ ಹೊಸ ಜಿಎಸ್‌ಎಕ್ಸ್-ಎಸ್ 300 ಬೈಕಿನಲ್ಲಿ ಫುಲ್-ಡಿಜಿಟಲ್ ಎಲ್‌ಡಿಸಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸ್ಟೈಲಿಶ್ ಅಲಾಯ್ ವೀಲ್, ಸ್ಪ್ಲಿಟ್ ಸೀಟ್ ಸೆಟಪ್, ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ಗಳು, ಯುಎಸ್‌ಬಿ ಚಾರ್ಜಿಂಗ್, ಬ್ಯಾಕ್‌ಲಿಟ್ ಸ್ವಿಚ್‌ಗಿಯರ್ ಮತ್ತು ಹಚರ್ಟ್ ಲ್ಯಾಂಪ್ ಅನ್ನು ಹೊಂದಿದೆ.

MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಬಿಡುಗಡೆಯಾಯ್ತು ಸುಜುಕಿ ಜಿಎಸ್‌ಎಕ್ಸ್-ಎಸ್ 300 ಬೈಕ್

ಇನ್ನು ಈ ಬೈಕಿನ ಮುಂಭಾಗದಲ್ಲಿ ಕೆವೈಬಿ ಯುಎಸ್‌ಡಿ ಫೋರ್ಕ್ಸ್ ಅಪ್ ಮತ್ತು ಹಿಂಭಾಗದಲ್ಲಿ 7-ಹಂತದ ಪೂರ್ವ ಲೋಮೊನೊಶಾಕ್ ಸೆಟಪ್ ಅನ್ನು ಹೊಂದಿದೆ. ಈ ಹೊಸ ಜಿಎಸ್‌ಎಕ್ಸ್-ಎಸ್ 300 ಬೈಕ್ 177 ಕೆಜಿ ತೂಕವನ್ನು ಹೊಂದಿದೆ

ಬಿಡುಗಡೆಯಾಯ್ತು ಸುಜುಕಿ ಜಿಎಸ್‌ಎಕ್ಸ್-ಎಸ್ 300 ಬೈಕ್

ಇನ್ನು ಈ ಬೈಕಿನ ಬ್ರೇಕಿಂಗ್ ಸೇಟಪ್ ಬಗ್ಗೆ ಹೇಳುವುದಾದರೆ ಮುಂಭಾಗದಲ್ಲಿ ಪೆಟಲ್-ಟೈಪ್ ಬ್ರೆಕ್ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಸಿಸ್ಟಂ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.

MOST READ: ಬಿಎಸ್-6 ಹೋಂಡಾ ಗ್ರಾಜಿಯಾ ಸ್ಕೂಟರ್ ಟೀಸರ್ ಬಿಡುಗಡೆ

ಬಿಡುಗಡೆಯಾಯ್ತು ಸುಜುಕಿ ಜಿಎಸ್‌ಎಕ್ಸ್-ಎಸ್ 300 ಬೈಕ್

ಹೊಸ ಜಿಎಸ್‌ಎಕ್ಸ್-ಎಸ್ 300 ಬೈಕ್ 2,075 ಎಂಎಂ ಉದ್ದ, 720 ಎಂಎಂ ಅಗಲ, 1,050 ಎಂಎಂ ಎತ್ತರ ಮತ್ತು 1,420 ಎಂಎಂ ಉದ್ದದ ವ್ಹೀಲ್‌ಬೇಸ್ ಹೊಂದಿದೆ. ಇದರೊಂದಿಗೆ 185 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿದೆ.

ಬಿಡುಗಡೆಯಾಯ್ತು ಸುಜುಕಿ ಜಿಎಸ್‌ಎಕ್ಸ್-ಎಸ್ 300 ಬೈಕ್

ಈ ಬೈಕಿನ ಸೀಟ್ 785 ಎತ್ತರವನ್ನು ಹೊಂದಿದೆ, ಇದು ಎಲ್ಲಾ ಗಾತ್ರದ ಸವಾರರಿಗೆ ಸಹಕಾರಿಯಾಗಿರಲಿದೆ. ಜಿಎಸ್‌ಎಕ್ಸ್-ಎಸ್ 300 ಬೈಕ್ ಚೀನಾ ಮಾರುಕಟ್ಟೆಯಲ್ಲಿ ಕವಾಸಕಿ ಝಡ್ 250, ಕೆಟಿಎಂ 390 ಡ್ಯೂಕ್ ಮತ್ತು ಯಮಹಾ ಎಂಟಿ -03 ಬೈಕುಗಳಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
English summary
Suzuki GSX-S300 (Haojue DR300) Launched At CNY 33,080. Read In Kannada.
Story first published: Friday, June 19, 2020, 19:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X