Just In
Don't Miss!
- Movies
'ದೀಪ್ ಸಿಧು ಜೊತೆ ನನಗೆ ಯಾವುದೇ ಸಂಬಂಧವಿಲ್ಲ': ಸಂಸದ, ನಟ ಸನ್ನಿ ಡಿಯೋಲ್ ಸ್ಪಷ್ಟನೆ
- News
ಭಾರತದಲ್ಲಿ ಬೇಕಾದಷ್ಟು ಲಸಿಕೆಯಿದೆ, ಆದರೆ... ಸಮಸ್ಯೆ ಬೇರೆಯೇ ಆಗಿದೆ
- Finance
ಬಜೆಟ್ 2021: ಸ್ಟ್ಯಾಂಡರ್ಡ್ ಡಿಡಕ್ಷನ್ ರು. 1 ಲಕ್ಷಕ್ಕೆ ಹೆಚ್ಚಳ ನಿರೀಕ್ಷೆ
- Sports
ಬೈರ್ಸ್ಟೋವ್ಗೆ 2 ಪಂದ್ಯಗಳ ವಿಶ್ರಾಂತಿ ನೀಡಿರುವುದನ್ನು ಸಮರ್ಥಿಸಿದ ಇಂಗ್ಲೆಂಡ್ ಕೋಚ್
- Education
WCD Chitradurga Recruitment 2021: ಅಂಗನವಾಡಿಯಲ್ಲಿ 129 ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ: ಇದರ ಅಪಾಯಗಳೇನು, ತಡೆಗಟ್ಟುವುದು ಹೇಗೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕ್ ಟೀಸರ್ ಬಿಡುಗಡೆ
ಸುಜುಕಿ ಮೋಟಾರ್‌ಸೈಕಲ್ ಕಂಪನಿಯು ತನ್ನ ಬಿಎಸ್ -6 ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಇದಿಗ ಸುಜುಕಿ ಕಂಪನಿಯು ತನ್ನ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕಿನ ಹೊಸ ಟೀಸರ್ ಅನ್ನು ಬಿಡುಗಡೆಗೊಳಿಸಿದೆ.

ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಸುಜುಕಿ ಕಂಪನಿಯು ತನ್ನ ಹೊಸ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ ಎಂದು ಮೊದಲ ಟೀಸರ್ ಚಿತ್ರವನ್ನು ಹಂಚಿಕೊಂಡಿದ್ದರು. ಆದರೆ ದೇಶದಲ್ಲಿ ಕರೋನಾ ಆರ್ಭಟ ಹೆಚ್ಚಾದ ಕಾರಣ ಈ ಹೊಸ ಬೈಕಿನ ಬಿಡುಗಡೆಯು ವಿಳಂಬವಾಗಿದೆ. ಇದೀಗ ಮತ್ತೊಮ್ಮೆ ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕಿನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. ಫೆಬ್ರವರಿ ತಿಂಗಳಲ್ಲಿ ನಡೆದ 2020ರ ಆಟೋ ಎಕ್ಸ್‌ಪೋದಲ್ಲಿ ಈ ಬಿಎಸ್ 6 ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕನ್ನು ಸುಜುಕಿ ಪ್ರದರ್ಶಿಸಿತು.

ಕಳೆದ ವರ್ಷದಲ್ಲಿ ಆರಂಭದಲ್ಲಿ ಬಿಎಸ್ 4 ಪ್ರೇರಿತ ಬೈಕನ್ನು ಬಿಡುಗಡೆಗೊಳಿಸಲಾಗಿತ್ತು. ಬಿಎಸ್-4 ಮಾದರಿಯಲ್ಲಿ 645 ಸಿಸಿ ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8,800 ಆರ್‌ಪಿಎಂನಲ್ಲಿ 70 ಬಿಎಚ್‌ಪಿ ಪವರ್ ಮತ್ತು 6,500 ಆರ್‌ಪಿಎಂನಲ್ಲಿ 62 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಈ ಎಂಜಿನ್ ನೊಂದಿಗೆ ಆರು ಸ್ಪೀಡ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ. ಹೊಸ ಬಿಎಸ್-6 ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕಿನಲ್ಲಿ ಇದೇ ಎಂಜಿನ್ ಅನ್ನು ಅಳವಡಿಸಬಹುದು. ಬಿಹೆಚ್‍ಪಿ ಪವರ್ ನಲ್ಲಿ ಯಾವುದೆ ಬದಲಾವಣೆಗಳನ್ನು ಹೊಂದಿರುವುದಿಲ್ಲ ಆದರೆ 62 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಎಂಜಿನ್ ನೊಂದಿಗೆ 6-ಸ್ಫೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಸುಜುಕಿ ಕಂಪನಿಯು ಹಿಂದಿನ ಬಿಎಸ್-4 ಮಾದರಿಯ ಎಂಜಿನ್ ಅನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತದೆ. ಹೊಸ ಬಿಎಸ್-6 ಬೈಕಿನಲ್ಲಿ ಯಾವುದೇ ಹೆಚ್ಚಿನ ಬದಲಾವಣೆಗಳನ್ನು ಹೊಂದಿರುವುದಿಲ್ಲ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

2020ರ ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕಿನಲ್ಲಿ 43 ಎಂಎಂ ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸಸ್ಪೆಂಷನ್ ಸೆಟಪ್ ಅನ್ನು ಹೊಂದಿದೆ. ಈ ಬೈಕಿನ ಮುಂಭಾಗ 310 ಎಂಎಂ ಡ್ಯುಯಲ್ ಡಿಸ್ಕ್ ಮತ್ತು ಹಿಂಭಾಗದಲ್ಲಿ ಒಂದೇ 260 ಎಂಎಂ ಡಿಸ್ಕ್ ಅನ್ನು ಹೊಂದಿದೆ. ಇದರೊಂದಿಗೆ ಡ್ಯುಯಲ್ ಚಾನೆಲ್ ಎಬಿಎಸ್ ಸ್ಟ್ಯಾಂಡರ್ಡ್ ಅಗಿ ಜೋಡಿಸಲಾಗಿದೆ.

ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕು ಹಿಂದಿನ ಮಾದರಿಯಂತೆ ಅದೇ ಮಾದರಿಯ ಬಣ್ಣಗಳ ಆಯ್ಕೆಗಳನ್ನು ಹೊಂದಿರಲಿದೆ. ಇದು ಚಾಂಪಿಯನ್ ಹಳದಿ ಮತ್ತು ಗ್ಲೇಸಿಯರ್ ಬಿಳಿ ಬಣ್ಣಗಳಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹಿಂದಿನ ಮಾದರಿ ಬಿಎಸ್-4 ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.7.52 ಲಕ್ಷಗಳಾಗಿದೆ. ಇನ್ನು ಹೊಸ ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕಿನ ಬೆಲೆಯು ಹಿಂದಿನ ಮಾದರಿಗಿಂತ ತುಸು ಹೆಚ್ಚಾಗಿರಲಿದೆ.

ಸುಜುಕಿ ಕಂಪನಿಯು ಭಾರತದಲ್ಲಿ ಹೊಸ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕನ್ನು ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ. ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕನ್ನು ಸಿಕಿಡಿ ಮಾರ್ಗದ ಮೂಲಕ ಭಾರತಕ್ಕೆ ತರಲಾಗುತ್ತದೆ. ಈ ಹೊಸ ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕ್ ಭಾರತದಲ್ಲಿ ಬಿಡುಗಡೆಯಾದ ಬಳಿಕ ಕವಾಸಕಿ ವರ್ಸಿಸ್ 650 ಬೈಕಿಗೆ ಪೈಪೋಟಿ ನೀಡುತ್ತದೆ.