ಹೊಸ ಟ್ರಯಂಫ್ ಬೊನೆವೆಲ್ಲಿ ಬೈಕುಗಳ ಮೇಲೆ ಭರ್ಜರಿ ಆಫರ್

ಟ್ರಯಂಫ್ ಕಂಪನಿಯು ಬೊನೆವೆಲ್ಲಿ ಟಿ100 ಮತ್ತು ಬೊನೆವಿಲ್ಲೆ ಟಿ120 ಎಂಬ ಎರಡು ಮಾದರಿಗಳನ್ನು ಬಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಇದೀಗ ಟ್ರಯಂಫ್ ಕಂಪನಿಯು ಈ ಮಾರ್ಡನ್ ಕ್ಲಾಸಿಕ್ ಬೈಕುಗಳಿಗೆ ಭರ್ಜರಿ ಆಫರ್ ಅನ್ನು ನೀಡಿದೆ.

ಹೊಸ ಟ್ರಯಂಫ್ ಬೊನೆವೆಲ್ಲಿ ಬೈಕುಗಳ ಮೇಲೆ ಭರ್ಜರಿ ಆಫರ್

ಟ್ರಯಂಫ್ ಕಂಪನಿಯು ತನ್ನ ಬೊನೆವೆಲ್ಲಿ ಟಿ100 ಮತ್ತು ಬೊನೆವಿಲ್ಲೆ ಟಿ120 ಬೈಕುಗಳೊಂದಿಗೆ ರೂ.60,000 ಮೌಲ್ಯದ ಅಕ್ಸೆಸರೀಸ್‌ಗಳನ್ನು ಉಚಿತವಾಗಿ ನೀಡುತ್ತದೆ. ಈ ಆಫರ್ ಕೇವಲ ಸೀಮಿತ ಅವಧಿವರೆಗೆ ಮಾತ್ರ ಲಭ್ಯವಿರುತ್ತದೆ. ಟ್ರಯಂಫ್ ಬೊನೆವೆಲ್ಲಿ ಟಿ100 ಮತ್ತು ಬೊನೆವಿಲ್ಲೆ ಟಿ120 ಬೈಕುಗಳ ಬೆಲೆಯು ಕ್ರಮವಾಗಿ ಭಾರತೀಯ ಎಕ್ಸ್ ಶೋರೂಂ ಪ್ರಕಾರ ರೂ. 8.87 ಲಕ್ಷ ಮತ್ತು ರೂ.9.97 ಲಕ್ಷಗಳಾಗಿದೆ.

ಹೊಸ ಟ್ರಯಂಫ್ ಬೊನೆವೆಲ್ಲಿ ಬೈಕುಗಳ ಮೇಲೆ ಭರ್ಜರಿ ಆಫರ್

ಟ್ರಯಂಪ್ ಕಂಪನಿಯು ಬೊನೆವೆಲ್ಲಿ ಟಿ100 ಮತ್ತು ಬೊನೆವಿಲ್ಲೆ ಟಿ120 ಬೈಕುಗಳೊಂದಿಗೆ ಕಾಸ್ಮೆಟಿಕ್ ಮತ್ತು ಪರ್ಫಾಮೆನ್ಸ್ ಅಪ್‌ಗ್ರೇಡ್‌ ಅಕ್ಸೆಸರೀಸ್‌ಗಳನ್ನು ನಿಡಲಾಗುತ್ತದೆ. ಇದರಲ್ಲಿ ರೇರ್ ಗ್ರ್ಯಾಬ್ ರೈಲ್, ರೇರ್ ಲಗೇಜ್ ರ‍್ಯಾಕ್, ಪನೀರ್ ಲಗೇಜ್ ಬಾಕ್ಸ್, ರೈಡರ್ ಮತ್ತು ಪಿಲಿಯನ್ ಬ್ಯಾಕ್‌ರೆಸ್ಟ್, ಎಂಜಿನ್ ಬ್ಯಾಷ್ ಪ್ಲೇಟ್ ಮತ್ತು ಚೈನ್ ಗಾರ್ಡ್ ಗಳನ್ನು ಒಳಗೊಂಡಿವೆ.

MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಹೊಸ ಟ್ರಯಂಫ್ ಬೊನೆವೆಲ್ಲಿ ಬೈಕುಗಳ ಮೇಲೆ ಭರ್ಜರಿ ಆಫರ್

ಗ್ರಾಹಕರು ಕಾಸ್ಮೆಟಿಕ್ ಅಕ್ಸೆಸರೀಸ್‌ಗಳನ್ನು ಕೂಡ ಆಯ್ಕೆಮಾಡಿಕೊಳ್ಳಬಹುದಾಗಿದೆ, ಇವುಗಳಲ್ಲಿ ವಾಲ್ವ್ ಕ್ಯಾಪ್ಸ್, ಕ್ಲಚ್ ಕವರ್, ಬಾರ್-ಎಂಡ್ ಮಿರರ್‌ಗಳು, ಬ್ಲ್ಯಾಕ್-ಫಿನಿಷ್ಡ್ ವ್ಹಿಲ್ ಗಳು, ಬಣ್ಣದ ಫ್ಲೈ ಸ್ಕ್ರೀನ್ ಮತ್ತು ಇತರ ಅಕ್ಸೆಸರೀಸ್ ಸೇರಿವೆ.

ಹೊಸ ಟ್ರಯಂಫ್ ಬೊನೆವೆಲ್ಲಿ ಬೈಕುಗಳ ಮೇಲೆ ಭರ್ಜರಿ ಆಫರ್

ಇನ್ನು ಪರ್ಫಾಮೆನ್ಸ್ ಮತ್ತು ಎಲೆಕ್ಟ್ರಿಕ್ ಅಪ್‌ಗ್ರೇಡ್‌ ಅಕ್ಸೆಸರೀಸ್ ಗಳಲ್ಲಿ ಕಸ್ಟಮ್ ಹೆಡ್ ರಿಂಗ್ಸ್, ಎಲ್ಇಡಿ ಇಂಡಿಕೇಟರ್, ಕ್ರೂಸ್ ಕಂಟ್ರೋಲ್ ಕಿಟ್, ಹಿಟೆಡ್ ಗ್ರಿಪ್ಸ್, ಹೊಂದಾಣಿಕೆ ಮಾಡಬಹುದಾದ ಕ್ಲಚ್ ಮತ್ತು ಬ್ರೇಕ್ ಲಿವರುಗಳು ಮತ್ತು ಸ್ಮಾರ್ಟ್ ಫೋನ್ ಹೋಲ್ಡರ್ ಕಿಟ್ ಅನ್ನು ಒಳಗೊಂಡಿವೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಹೊಸ ಟ್ರಯಂಫ್ ಬೊನೆವೆಲ್ಲಿ ಬೈಕುಗಳ ಮೇಲೆ ಭರ್ಜರಿ ಆಫರ್

ಟ್ರಯಂಫ್ ಬೊನೆವಿಲ್ಲಿ ಟಿ100 ಮಾದರಿಯು 900 ಸಿಸಿ ಪ್ಯಾರೆಲಲ್ ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 5400 ಆರ್‌ಪಿಎಂನಲ್ಲಿ 54 ಬಿಹೆಚ್‌ಪಿ ಪವರ್ ಮತ್ತು 3230 ಆರ್‌ಪಿಎಂನಲ್ಲಿ 84 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ಇದು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲ್ಪಟ್ಟಿದೆ.

ಹೊಸ ಟ್ರಯಂಫ್ ಬೊನೆವೆಲ್ಲಿ ಬೈಕುಗಳ ಮೇಲೆ ಭರ್ಜರಿ ಆಫರ್

ಇನ್ನು ಟ್ರಯಂಫ್ ಬೊನೆವಿಲ್ಲೆ ಟಿ120 ಮಾದರಿಯಲ್ಲಿ 1,200 ಸಿಸಿ ಪ್ಯಾರೆಲಲ್ ಟ್ವಿನ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 6550 ಆರ್‌ಪಿಎಂನಲ್ಲಿ 79 ಬಿಹೆಚ್‌ಪಿ ಪವರ್ ಮತ್ತು 3100 ಆರ್‌ಪಿಎಂನಲ್ಲಿ 105 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲ್ಪಟ್ಟಿದೆ.

MOST READ: ಹೊಸ ಮಹೀಂದ್ರಾ ಮೊಜೊ 300 ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಹೊಸ ಟ್ರಯಂಫ್ ಬೊನೆವೆಲ್ಲಿ ಬೈಕುಗಳ ಮೇಲೆ ಭರ್ಜರಿ ಆಫರ್

ಈ ಎರಡು ಹೊಸ ಬೈಕುಗಳಲ್ಲಿ ಹಲವಾರು ಫೀಚರ್ಸ್ ಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್, ರೈಡ್-ಬೈ-ವೈರ್, ಡ್ಯುಯಲ್-ಚಾನೆಲ್ ಎಬಿಎಸ್, ಟ್ರ್ಯಾಕ್ಷನ್ ಕಂಟ್ರೋಲ್, ಮಲ್ಟಿಪಲ್ ರೈಡಿಂಗ್ ಮೋಡ್‌ಗಳು, ಕ್ಲಾಸಿಕ್ ಟ್ವಿನ್-ಪಾಡ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಎಂಜಿನ್ ಇಮೊಬೈಲೈಸರ್ ಒಳಗೊಂಡಿದೆ.

ಹೊಸ ಟ್ರಯಂಫ್ ಬೊನೆವೆಲ್ಲಿ ಬೈಕುಗಳ ಮೇಲೆ ಭರ್ಜರಿ ಆಫರ್

ಟ್ರಯಂಫ್ ಕಂಪನಿಯು ತನ್ನ ಬೊನೆವೆಲ್ಲಿ ಟಿ100 ಮತ್ತು ಬೊನೆವಿಲ್ಲೆ ಟಿ120 ಬೈಕುಗಳೊಂದಿಗೆ ರೂ.60,000 ಮೌಲ್ಯದ ಅಕ್ಸೆಸರೀಸ್‌ಗಳ ಆಫರ್ ಅನ್ನು ನೀಡುತ್ತಿದೆ. ಈ ಎರಡು ಮಾರ್ಡನ್ ಕ್ಲಾಸಿಕ್ ಬೈಕುಗಳಿಗೆ ಈ ಆಫರ್ ಕೇವಲ ಸೀಮಿತ ಅವಧಿಗೆ ಮಾತ್ರ ಲಭ್ಯವಿರುತ್ತದೆ.

Most Read Articles

Kannada
English summary
Triumph Bonneville Offered With Free Accessories For Limited Time. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X