ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ಅತ್ಯುತ್ತಮ ಆಫರ್ ಪ್ರಕಟಿಸಿದ ಒಕಿನಾವ

ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಕಂಪನಿಯಾಗಿರುವ ಒಕಿನಾವ ತನ್ನ ವಿವಿಧ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳ ಖರೀದಿ ಮೇಲೆ ಹಲವಾರು ಆಫರ್‌ಗಳನ್ನು ಘೋಷಣೆ ಮಾಡಿದ್ದು, ಹೊಸ ಆಫರ್‌ಗಳನ್ನು ದೀಪಾವಳಿ ಸಂಭ್ರಮಕ್ಕಾಗಿ ನೀಡಲಾಗುತ್ತಿದೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ಅತ್ಯುತ್ತಮ ಆಫರ್ ಪ್ರಕಟಿಸಿದ ಒಕಿನಾವ

ದಸರಾ ನಂತರ ದೀಪಾವಳಿ ಸಂಭ್ರಮ ವೇಳೆ ಗರಿಷ್ಠ ಪ್ರಮಾಣದ ಹೊಸ ವಾಹನಗಳ ಮಾರಾಟದ ನೀರಿಕ್ಷೆಗಳಿದ್ದು, ವಿವಿಧ ಆಟೋ ಉತ್ಪಾದನಾ ಕಂಪನಿಗಳು ಆಕರ್ಷಕ ಆಫರ್‌ಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿವೆ. ಇದೀಗ ಒಕಿನಾವ ಕಂಪನಿಯು ಕೂಡಾ ವಿವಿಧ ಸ್ಕೂಟರ್ ಮಾದರಿಗಳ ಖರೀದಿ ಮೇಲೆ ಅತ್ಯುತ್ತಮ ಆಫರ್ ನೀಡುತ್ತಿದ್ದು, ಸ್ಕೂಟರ್ ಖರೀದಿಯನ್ನು ಸರಳಗೊಳಿಸಲು ಡಿಸ್ಕೌಂಟ್ ಜೊತೆಗೆ ಆಕರ್ಷಕ ಫೈನಾನ್ಸ್ ಆಯ್ಕೆಗಳನ್ನು ಸಹ ಪ್ರಕಟಿಸಿದೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ಅತ್ಯುತ್ತಮ ಆಫರ್ ಪ್ರಕಟಿಸಿದ ಒಕಿನಾವ

ಜೆಸ್ಟ್ ಮನಿ ಕಂಪನಿಯೊಂದಿಗೆ ಕೈಜೋಡಿಸಿರುವ ಒಕಿನಾವ ಕಂಪನಿಯು ವಿವಿಧ ಸ್ಕೂಟರ್‌ಗಳ ಮೇಲೆ ಆಕರ್ಷಕ ಸಾಲಸೌಲಭ್ಯಗಳೊಂದಿಗೆ ಅತಿ ಕಡಿಮೆ ಪ್ರಮಾಣದ ಇಎಂಐ ಮೊತ್ತಗಳನ್ನು ಪ್ರಕಟಿಸಿದೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ಅತ್ಯುತ್ತಮ ಆಫರ್ ಪ್ರಕಟಿಸಿದ ಒಕಿನಾವ

ಹೊಸ ಫೈನಾನ್ಸ್ ಸೌಲಭ್ಯದಡಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಸಾಲ ಮರುಪಾವತಿಗೆ ಹೆಚ್ಚಿನ ಅವಕಾಶ ದೊರೆಯಲಿದ್ದು, ಸ್ಕೂಟರ್ ಖರೀದಿ ಮಾಡಿದ ಮೊದಲ ಮೂರು ತಿಂಗಳು ಯಾವುದೇ ಇಎಂಐ ಪಾವತಿಸುವ ಅವಶ್ಯಕತೆಯಿಲ್ಲ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ಅತ್ಯುತ್ತಮ ಆಫರ್ ಪ್ರಕಟಿಸಿದ ಒಕಿನಾವ

ಮೊದಲ ತಿಂಗಳ ಇಎಂಐ ವಿನಾಯ್ತಿ ಮೊತ್ತವನ್ನು ಉಳಿದ ಇಎಂಐ ಮೊತ್ತದಲ್ಲಿ ಸೇರ್ಪಡೆಗೊಂಡಿರಲಿದ್ದು, ಸದ್ಯಕ್ಕೆ ಹಣಕಾಸಿನ ತೊಂದರೆ ಕಾರಣಕ್ಕೆ ವಾಹನ ಖರೀದಿಯನ್ನು ಮುಂದೂಡಿರುವ ಗ್ರಾಹಕರಿಗೆ ಇದು ಸಾಕಷ್ಛು ಸಹಕಾರಿ ಎನ್ನಬಹುದು. ಇನ್ನು ಸರಳ ಹಣಕಾಸು ಆಯ್ಕೆಗಳ ಜೊತೆಗೆ ಕ್ಯಾಶ್ ಕೂಪನ್ ಮತ್ತು ಆಯ್ದ ಗ್ರಾಹಕರಿಗೆ ಲಕ್ಕಿ ಡ್ರಾ ಸಹ ಪರಿಚಯಿಸಿದ್ದು, ಗ್ರಾಹಕರು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ಗರಿಷ್ಠ ಉಳಿತಾಯ ಮಾಡಬಹುದಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ಅತ್ಯುತ್ತಮ ಆಫರ್ ಪ್ರಕಟಿಸಿದ ಒಕಿನಾವ

ಒಕಿನಾವ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ ಎಂಟ್ರಿ ಲೆವಲ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯಾದ ಲಿಡ್ ಆ್ಯಸಿಡ್ ಬ್ಯಾಟರಿ ಪ್ರೇರಣೆಯ ರಿಡ್ಜ್ 30 ಜೊತೆಗೆ ಹೈ ಎಂಡ್ ಮಾದರಿಯಾಗಿ ಲೀಥಿಯಂ-ಅಯಾನ್ ಬ್ಯಾಟರಿ ಪ್ರೇರಿತ ಐ-ಪ್ರೈಸ್ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಮಾರಾಟ ಮಾಡುತ್ತಿದೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ಅತ್ಯುತ್ತಮ ಆಫರ್ ಪ್ರಕಟಿಸಿದ ಒಕಿನಾವ

ಪ್ರತಿ ಸ್ಕೂಟರ್ ಮಾದರಿಯ ಮೇಲೂ ಗ್ರಾಹಕರಿಗೆ ರೂ. 6 ಸಾವಿರ ಕ್ಯಾಶ್ ಕೂಪನ್ ನೀಡಲಾಗುತ್ತಿದ್ದು, 10 ಗ್ರಾಹಕರು ಲಕ್ಕಿ ಡ್ರಾ ಪಡೆದುಕೊಳ್ಳಲಿದ್ದಾರೆ. ಅಕ್ಟೋಬರ್ 24ರಿಂದ ನವೆಂಬರ್ 15ರ ಅವಧಿಯಲ್ಲಿ ಸ್ಕೂಟರ್ ಖರೀದಿಸುವ ಗ್ರಾಹಕರು ಹೊಸ ಆಫರ್‌ಗೆ ಅರ್ಹರಾಗಿದ್ದು, ಅಕ್ಟೋಬರ್ 24ರಂದು ಲಕ್ಕಿ ಡ್ರಾ ಗ್ರಾಹಕರಿಗೆ ವಿಶೇಷ ಉಡುಗೊರೆ ಸಿಗಲಿದೆ.

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ಅತ್ಯುತ್ತಮ ಆಫರ್ ಪ್ರಕಟಿಸಿದ ಒಕಿನಾವ

ಲಕ್ಕಿ ಡ್ರಾ ಪಡೆದುಕೊಳ್ಳುವ 10 ಗ್ರಾಹಕರಲ್ಲಿ ಮೊದಲ ಗ್ರಾಹಕನಿಗೆ ಕಂಪನಿಯ ಲೋ ಸ್ಪೀಡ್ ಸ್ಕೂಟರ್ ಮಾದರಿಯಾದ ಆರ್ 30 ಗೆಲ್ಲುವ ಅವಕಾಶ ನೀಡಿದ್ದು, ಇನ್ನುಳಿದ ಒಂಬತ್ತು ಗ್ರಾಹಕರಿಗೆ ಟಿವಿ, ಪ್ರಿಡ್ಜ್, ಒವೆನ್, ಮೊಬೈಲ್ ಸೇರಿದಂತೆ ವಿವಿಧ ಬಹಮಾನಗಳು ದೊರಲಿವೆ.

MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಮೇಲೆ ಅತ್ಯುತ್ತಮ ಆಫರ್ ಪ್ರಕಟಿಸಿದ ಒಕಿನಾವ

ಇದರೊಂದಿಗೆ ದೇಶಾದ್ಯಂತ 350ಕ್ಕೂ ಹೆಚ್ಚು ಅಧಿಕೃತ ಮಾರಾಟ ಮಳಿಗೆಗಳನ್ನು ಹೊಂದಿರುವ ಒಕಿನಾವ ಕಂಪನಿಯು 2020-21ರ ಆರ್ಥಿಕ ವರ್ಷದ ಅಂತ್ಯಕ್ಕೆ 500 ಶೋರೂಂ ತೆರೆಯುವ ಗುರಿಹೊಂದಿದ್ದು, ಒಕಿನಾವ ಕಂಪನಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸದ್ಯ ರಿಡ್ಜ್ 30, ರಿಡ್ಜ್, ಪ್ರೈಸ್, ಆರ್30, ಲೈಟ್, ರಿಡ್ಜ್ ಪ್ಲಸ್, ಪ್ರೈಸ್ ಪ್ರೊ ಮತ್ತು ಐ-ಪ್ರೈಸ್ ಪ್ರೊ ಪ್ಲಸ್ ಮಾದರಿಗಳನ್ನು ಮಾರಾಟ ಮಾಡುತ್ತಿದೆ.

Most Read Articles

Kannada
English summary
Okinawa Introduces New Finance Schemes During Festive Season.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X