Just In
Don't Miss!
- News
ಗಗನಕ್ಕೇರಿದ ಪೆಟ್ರೋಲ್, ಡೀಸೆಲ್ ದರ: ಹೊಸ ದಾಖಲೆ ಸೃಷ್ಟಿ
- Sports
'ಭಾರತೀಯರಿಗೆ ಹೋಲಿಸಿದರೆ ಯುವ ಆಸೀಸ್ ಇನ್ನೂ ಪ್ರೈಮರಿ ಶಾಲೆಯಲ್ಲಿದೆ'
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಆಕರ್ಷಕ ಬೆಲೆಯೊಂದಿಗೆ ಅತ್ಯುತ್ತಮ ಮೈಲೇಜ್ ನೀಡಲಿದೆ ಒಕಿ100 ಎಲೆಕ್ಟ್ರಿಕ್ ಬೈಕ್
ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಳ ಮಾರಾಟದಲ್ಲಿ ಮುನ್ನಡೆ ಸಾಧಿಸುತ್ತಿರುವ ಒಕಿನಾವ ಕಂಪನಿಯು 2021ರಲ್ಲಿ ಮತ್ತಷ್ಟು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಇವಿ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ವರ್ಷದ ಆರಂಭದಲ್ಲಿ ಒಕಿ100 ಇವಿ ಬೈಕ್ ಸೇರಿದಂತೆ ಒಟ್ಟು ನಾಲ್ಕು ಹೊಸ ಇವಿ ವಾಹನಗಳನ್ನು ರಸ್ತೆಗಿಳಿಸಲಿದೆ.

ಒಕಿನಾವ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ವಿವಿಧ ಬ್ಯಾಟರಿ ರೇಂಜ್‌ವುಳ್ಳ ಪ್ರೈಸ್, ಆರ್30, ಲೈಟ್, ರಿಡ್ಜ್ ಪ್ಲಸ್, ಪ್ರೈಸ್ ಪ್ರೊ ಮತ್ತು ಐ-ಪ್ರೈಸ್ ಪ್ರೊ ಪ್ಲಸ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಭವಿಷ್ಯ ಯೋಜನೆಗಳಲ್ಲಿ ಒಕಿ100 ಸೇರಿದಂತೆ ಒಂದು ಮ್ಯಾಕ್ಸಿ ಸ್ಕೂಟರ್ ಮತ್ತು ಎರಡು ಹೈ ಸ್ಪೀಡ್ ಎಲೆಕ್ಟ್ರಿಕ್ ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಹೊಸ ಯೋಜನೆಗಳಿಗಾಗಿ ಭಾರೀ ಪ್ರಮಾಣದ ಹೂಡಿಕೆ ಮಾಡಿರುವ ಒಕಿನಾವ ಕಂಪನಿಯು ಹೊಸ ವಾಹನಗಳ ಜೊತೆ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಗಳನ್ನು ಸಹ ಉನ್ನತೀಕರಿಸು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.

ಸದ್ಯ ಕರೋನಾ ವೈರಸ್ ಪರಿಣಾಮ ಆಟೋ ಉತ್ಪಾದನಾ ವಿಭಾಗವು ತೀವ್ರ ಸಂಕಷ್ಟಕ್ಕೆ ಸಿಲುಕಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ವೈರಸ್ ಭೀತಿಯ ನಡುವೆಯೂ ಹೊಸ ವಾಹನಗಳ ಖರೀದಿ ಹೆಚ್ಚಳಕ್ಕೆ ಪ್ರಮುಖ ಕಾರಣವಾಗುತ್ತಿರುವುದು ಆಟೋ ಉತ್ಪಾದನಾ ಕಂಪನಿಗಳಿಗೆ ಮತ್ತಷ್ಟು ಬಲಬಂದಿದೆ.

ಕರೋನಾ ಸಂಕಷ್ಟದ ನಡುವೆಯೂ ಗ್ರಾಹಕರು ವೈರಸ್ ಭೀತಿಯಿಂದ ತಪ್ಪಿಸಿಕೊಳ್ಳಲು ಸ್ವಂತ ವಾಹನಗಳ ಬಳಕೆಯನ್ನು ಹೆಚ್ಚಿಸುತ್ತಿರುವುದು ಹೊಸ ವಾಹನಗಳ ಮಾರಾಟವು ಚೇತರಿಸಿಕೊಳ್ಳುತ್ತಿರುವುದಕ್ಕೆ ಪ್ರಮುಖ ಕಾರಣವಾಗಿದ್ದು, ಈ ಅವಕಾಶವನ್ನು ಬಳಸಿಕೊಳ್ಳುತ್ತಿರುವ ಆಟೋ ಕಂಪನಿಗಳು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹಲವಾರು ಹೊಸ ಮಾದರಿಯ ವಾಹನಗಳನ್ನು ಪರಿಚಯಿಸುತ್ತಿವೆ.

ಒಕಿನಾವ ಕಂಪನಿಯು ಕೂಡಾ ಲಾಕ್‌ಡೌನ್ ಸಡಿಲಿಕೆ ನಂತರ ತಜ್ಞರ ಅಭಿಪ್ರಾಯದ ಮೇಲೆ ಶೋರೂಂಗಳ ಸಂಖ್ಯೆಯನ್ನು ಹೆಚ್ಚಿಸುವುದ ಜೊತೆಗೆ ಮತ್ತಷ್ಟು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಿದ್ದು, ಹೊಸ ಇವಿ ಬೈಕ್ ಮತ್ತು ಮ್ಯಾಕ್ಸಿ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಪ್ರಮುಖ ಆಕರ್ಷಣೆಯಾಗಲಿದೆ.

2018ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡಿದ್ದ ಒಕಿ100 ಕಾನ್ಸೆಪ್ಟ್ ಮತ್ತು 2020ರ ಆಟೋ ಎಕ್ಸ್‌ಫೋದಲ್ಲಿ ಅನಾವರಣಗೊಳಿಸಲಾಗಿದ್ದ ಮ್ಯಾಕ್ಸಿ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನೇ ಉತ್ಪಾದನೆಗೆ ಸಿದ್ದತೆ ನಡೆಸಲಾಗಿದೆ.

ಎಲೆಕ್ಟ್ರಿಕ್ ಮಾದರಿಯಾದರೂ ಸಾಮಾನ್ಯ ವಾಹನ ಮಾದರಿಯಲ್ಲೇ ಸಿದ್ದಗೊಳ್ಳುತ್ತಿರುವ ಒಕಿ100 ಮತ್ತು ಮ್ಯಾಕ್ಸಿ ಸ್ಕೂಟರ್ ಮಾದರಿಗಳು ಹಲವಾರು ಹೊಸ ಮಾದರಿಯ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಅತ್ಯುತ್ತಮ ಮೈಲೇಜ್ ಮೂಲಕ ಗ್ರಾಹಕರ ಪ್ರಮುಖ ಆಕರ್ಷಣೆಯಾಗಲಿವೆ.
MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

125 ಸಿಸಿ ಸಾಮರ್ಥ್ಯದ ಸಾಮಾನ್ಯ ಬೈಕ್‌ಗಳಿಗೆ ಸಮನಾಗಿರುವ ಹೊಸ ಎಲೆಕ್ಟ್ರಿಕ್ ಬೈಕ್ ಮಾದರಿಯು ರಿವೋಲ್ಟ್ ಎಲೆಕ್ಟ್ರಿಕ್ ಬೈಕ್ ಮಾದರಿಗೆ ಪೈಪೋಟಿ ನೀಡಲಿದ್ದು, ಪ್ರತಿ ಚಾರ್ಜ್‌ಗೆ ವೇಗದ ಆಧಾರದ ಮೇಲೆ 120ಕಿ.ಮೀ ನಿಂದ 150 ಕಿ.ಮೀ ಮೈಲೇಜ್ ಹಿಂದಿರುಗಿಸಲಿದೆ ಎನ್ನಲಾಗಿದೆ.

ಹೊಸ ಇವಿ ಬೈಕ್ ಮಾದರಿಯು ಸ್ಥಳೀಯವಾಗಿ ಅಭಿವೃದ್ದಿ ಹೊಂದಿರುವ ಗರಿಷ್ಠ ಬಿಡಿಭಾಗಗಳನ್ನು ಪಡೆದುಕೊಂಡಿದ್ದು, ಹೊಸ ಬೈಕ್ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ.1 ಲಕ್ಷದಿಂದ ರೂ.1.20 ಲಕ್ಷ ಬೆಲೆ ಅಂತರದೊಂದಿಗೆ ಮುಂದಿನ ಫೆಬ್ರುವರಿ ಹೊತ್ತಿಗೆ ಮಾರುಕಟ್ಟೆ ಪ್ರವೇಶಿಸಲಿದೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಈ ಮೂಲಕ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಹೊಸ ಬದಲಾವಣೆಗೆ ಕಾರಣವಾಗಿರುವ ಒಕಿನಾವ ಕಂಪನಿಯು ಇಂಧನ ಚಾಲಿತ ವಾಹನಗಳಿಂದ ಇವಿ ವಾಹನಗಳತ್ತ ಗ್ರಾಹಕರನ್ನು ಸೆಳೆಯಲಿದ್ದು, ಹೊಸ ವಾಹನಗಳ ಉತ್ಪಾದನೆಗಾಗಿ ಕಂಪನಿಯು ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದೆ.