ಶೀಘ್ರದಲ್ಲೇ ಮುಂಬೈನಲ್ಲಿ ಬಿಡುಗಡೆಯಾಗಲಿವೆ ರಿವೋಲ್ಟ್ ಎಲೆಕ್ಟ್ರಿಕ್ ಬೈಕುಗಳು

ರಿವೋಲ್ಟ್ ಮೋಟಾರ್ಸ್ ಕಳೆದ ವರ್ಷ ಎಲೆಕ್ಟ್ರಿಕ್ ಬೈಕುಗಳನ್ನು ಬಿಡುಗಡೆಗೊಳಿಸುವ ಮೂಲಕ ದೇಶಿಯ ಮಾರುಕಟ್ಟೆಗೆ ಕಾಲಿಟ್ಟಿತು. ಕಂಪನಿಯು ಮೊದಲು ಪುಣೆ ಹಾಗೂ ದೆಹಲಿಯಲ್ಲಿ ತನ್ನ ಬೈಕುಗಳನ್ನು ಬಿಡುಗಡೆಗೊಳಿಸಿತು. ನಂತರ ಹೈದರಾಬಾದ್, ಅಹಮದಾಬಾದ್ ಹಾಗೂ ಚೆನ್ನೈನಲ್ಲಿ ಬಿಡುಗಡೆಗೊಳಿಸಿತು.

ಶೀಘ್ರದಲ್ಲೇ ಮುಂಬೈನಲ್ಲಿ ಬಿಡುಗಡೆಯಾಗಲಿವೆ ರಿವೋಲ್ಟ್ ಎಲೆಕ್ಟ್ರಿಕ್ ಬೈಕುಗಳು

ಈಗ ರಿವೋಲ್ಟ್ ಮೋಟಾರ್ಸ್ ಕಂಪನಿಯು ಮುಂಬೈನಲ್ಲಿ ತನ್ನ ಬೈಕುಗಳನ್ನು ಬಿಡುಗಡೆಗೊಳಿಸಲು ಮುಂದಾಗಿದೆ. ಈ ಕುರಿತು ಕಂಪನಿಯು ಹೊಸ ಟೀಸರ್ ಒಂದನ್ನು ಬಿಡುಗಡೆಗೊಳಿಸಿದೆ. ಕೆಲವೇ ದಿನಗಳಲ್ಲಿ ಮುಂಬಯಿಯಲ್ಲಿ ತನ್ನ ಬೈಕುಗಳನ್ನು ಬಿಡುಗಡೆಗೊಳಿಸುವುದಾಗಿ ಟೀಸರ್ ನಲ್ಲಿ ಹೇಳಲಾಗಿದೆ. ಆಗಸ್ಟ್ 30ರಿಂದ ರಿವೋಲ್ಟ್ ಮೋಟಾರ್ಸ್ ಮುಂಬೈನಲ್ಲಿ ತನ್ನ ಎಲೆಕ್ಟ್ರಿಕ್ ಬೈಕುಗಳ ಮಾರಾಟವನ್ನು ಆರಂಭಿಸಬಹುದು ಎಂದು ಹೇಳಲಾಗಿದೆ.

ಶೀಘ್ರದಲ್ಲೇ ಮುಂಬೈನಲ್ಲಿ ಬಿಡುಗಡೆಯಾಗಲಿವೆ ರಿವೋಲ್ಟ್ ಎಲೆಕ್ಟ್ರಿಕ್ ಬೈಕುಗಳು

ರಿವೋಲ್ಟ್ ಕಂಪನಿಯು ಸದ್ಯಕ್ಕೆ ಆರ್‌ವಿ 400 ಬೈಕ್ ಅನ್ನು ಎರಡು ರೀತಿಯಲ್ಲಿ ಮಾರಾಟ ಮಾಡುತ್ತಿದೆ. ಒಂದು ಬಾರಿ ಪೂರ್ತಿ ಮೊತ್ತವನ್ನು ಪಾವತಿಸುವ ಮೂಲಕ ಹಾಗೂ ಮೈ ರಿವೋಲ್ಟ್ ಪ್ಲಾನ್ ಚಂದಾದಾರಿಕೆಯಡಿಯಲ್ಲಿ ಈ ಬೈಕ್ ಅನ್ನು ಖರೀದಿಸಬಹುದು. ರೂ.5,000 ಬೆಲೆ ಹೆಚ್ಚಳದ ನಂತರ ರಿವೋಲ್ಟ್ ಆರ್‌ವಿ 400 ಬೈಕಿನ ಬೆಲೆ ರೂ.1,03,999ಗಳಾಗಿದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಶೀಘ್ರದಲ್ಲೇ ಮುಂಬೈನಲ್ಲಿ ಬಿಡುಗಡೆಯಾಗಲಿವೆ ರಿವೋಲ್ಟ್ ಎಲೆಕ್ಟ್ರಿಕ್ ಬೈಕುಗಳು

ಚಂದಾದಾರಿಕೆ ಯೋಜನೆಯಡಿಯಲ್ಲಿ ಪ್ರತಿ ತಿಂಗಳು ರೂ.3,999 ಪಾವತಿಸಬೇಕಾಗುತ್ತದೆ. ಈಗ ಒಂದು ತಿಂಗಳು ಹೆಚ್ಚಿಸಲಾಗಿದ್ದು, ರಿವೋಲ್ಟ್ ಆರ್‌ವಿ 400 ಬೈಕಿನ ಯೋಜನೆ 38 ತಿಂಗಳವರೆಗೆ ಇರಲಿದೆ. ಆರ್‌ವಿ 300 ಬೈಕಿನ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ.

ಶೀಘ್ರದಲ್ಲೇ ಮುಂಬೈನಲ್ಲಿ ಬಿಡುಗಡೆಯಾಗಲಿವೆ ರಿವೋಲ್ಟ್ ಎಲೆಕ್ಟ್ರಿಕ್ ಬೈಕುಗಳು

ರಿವೋಲ್ಟ್ ಆರ್‌ವಿ 400 ಹಾಗೂ ಆರ್‌ವಿ 300 ಎರಡೂ ಬೈಕುಗಳಿಗೆ ಬೇಡಿಕೆ ಹೆಚ್ಚಿರುವ ಕಾರಣಕ್ಕೆ ಈ ಬೈಕುಗಳ ವೇಟಿಂಗ್ ಪಿರಿಯಡ್ ಅನ್ನು ಹೆಚ್ಚಿಸಲಾಗಿತ್ತು. ಆದರೆ ಹೊಸದಾಗಿ ಬಿಡುಗಡೆಯಾಗುವ ನಗರಗಳಲ್ಲಿ ಈ ಎಲೆಕ್ಟ್ರಿಕ್ ಬೈಕ್‌ಗಳನ್ನು ಶೀಘ್ರದಲ್ಲೇ ವಿತರಿಸುವ ಸಾಧ್ಯತೆಗಳಿವೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಶೀಘ್ರದಲ್ಲೇ ಮುಂಬೈನಲ್ಲಿ ಬಿಡುಗಡೆಯಾಗಲಿವೆ ರಿವೋಲ್ಟ್ ಎಲೆಕ್ಟ್ರಿಕ್ ಬೈಕುಗಳು

ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚು ಉತ್ತೇಜನ ನೀಡಲಾಗುತ್ತಿದೆ. ಸರ್ಕಾರವು ಇತ್ತೀಚೆಗಷ್ಟೇ ಎಲೆಕ್ಟ್ರಿಕ್ ವಾಹನಗಳ ಖರೀದಿಯ ಮೇಲೆ ಹಲವಾರು ರಿಯಾಯಿತಿಗಳನ್ನು ಘೋಷಿಸಿದೆ. ಸದ್ಯಕ್ಕೆ ಈ ಎಲೆಕ್ಟ್ರಿಕ್ ಬೈಕ್‌ಗೆ ದೇಶಿಯ ಮಾರುಕಟ್ಟೆಯಲ್ಲಿ ಯಾವುದೇ ಪ್ರತಿಸ್ಪರ್ಧಿಗಳಿಲ್ಲ.

ಶೀಘ್ರದಲ್ಲೇ ಮುಂಬೈನಲ್ಲಿ ಬಿಡುಗಡೆಯಾಗಲಿವೆ ರಿವೋಲ್ಟ್ ಎಲೆಕ್ಟ್ರಿಕ್ ಬೈಕುಗಳು

ಮುಂಬರುವ ದಿನಗಳಲ್ಲಿ ಹೀರೋ ಎಇ -47, ಒಕಿನಾವಾ ಒಕಿ 100, ಟಾರ್ಕ್ ಟಿ 6 ಎಕ್ಸ್ ಬೈಕ್‌ಗಳು ಬಿಡುಗಡೆಯಾಗಲಿದ್ದು, ರಿವೋಲ್ಟ್ ಬೈಕ್‌ಗಳಿಗೆ ಪೈಪೋಟಿ ನೀಡಲಿವೆ. ದೇಶದಲ್ಲಿ ಎಲೆಕ್ಟ್ರಿಕ್ ಬೈಕ್‌ಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಹೊಸ ಹೊಸ ಕಂಪನಿಗಳು ಈ ಸೆಗ್ ಮೆಂಟಿನಲ್ಲಿ ಬೈಕುಗಳನ್ನು ಬಿಡುಗಡೆಗೊಳಿಸುತ್ತಿವೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಶೀಘ್ರದಲ್ಲೇ ಮುಂಬೈನಲ್ಲಿ ಬಿಡುಗಡೆಯಾಗಲಿವೆ ರಿವೋಲ್ಟ್ ಎಲೆಕ್ಟ್ರಿಕ್ ಬೈಕುಗಳು

ಮುಂಬೈನಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ಹೆಚ್ಚುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಮುಂಬೈನಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿವೆ. ಈ ಹಿನ್ನೆಲೆಯಲ್ಲಿ ರಿವೋಲ್ಟ್ ಕಂಪನಿಯ ಬೈಕುಗಳು ಸಹ ಮುಂಬೈನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಬಹುದು.

Most Read Articles

Kannada
English summary
Revolt launching its electric bikes in Mumbai soon. Read in Kannada.
Story first published: Wednesday, August 26, 2020, 17:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X