ಬುಕ್ಕಿಂಗ್'ಗಳನ್ನು ಪುನರಾರಂಭಿಸಿದ ರಿವೋಲ್ಟ್ ಮೋಟಾರ್ಸ್

ರಿವೋಲ್ಟ್ ಮೋಟಾರ್ಸ್ ಕಂಪನಿಯು ತನ್ನ ಹೆಜ್ಜೆ ಗುರುತನ್ನು ದೇಶಾದ್ಯಂತ ಹರಡಲು ಆರಂಭಿಸಿದೆ. ಕೆಲ ತಿಂಗಳ ಹಿಂದಷ್ಟೇ ರಿವೋಲ್ಟ್ ಕಂಪನಿಯು ಮುಂಬೈನಲ್ಲಿ ತನ್ನ ಡೀಲರ್ ಶಿಪ್ ಅನ್ನು ತೆರೆದಿತ್ತು.

ಬುಕ್ಕಿಂಗ್'ಗಳನ್ನು ಪುನರಾರಂಭಿಸಿದ ರಿವೋಲ್ಟ್ ಮೋಟಾರ್ಸ್

ರಿವೋಲ್ಟ್ ಕಂಪನಿಯು ಎರಡು ಬೈಕುಗಳನ್ನು ಮಾರಾಟ ಮಾಡುತ್ತಿದೆ. ಈ ಎರಡೂ ಬೈಕುಗಳ ಮಾರಾಟವು ಉತ್ತಮವಾಗಿದೆ. ರಿವೋಲ್ಟ್ ಬೈಕ್ ಅನ್ನು ಸದ್ಯಕ್ಕೆ 6 ನಗರಗಳಲ್ಲಿ ಮಾರಾಟ ಮಾಡಲಾಗುತ್ತದೆ. ನಿನ್ನೆ ಹಲವು ನಗರಗಳಲ್ಲಿ ಕೆಲ ಕಾರಣಗಳಿಂದಾಗಿ ಈ ಬೈಕುಗಳ ಬುಕ್ಕಿಂಗ್ ಅನ್ನು ಸ್ಥಗಿತಗೊಳಿಸಲಾಗಿತ್ತು.

ಬುಕ್ಕಿಂಗ್'ಗಳನ್ನು ಪುನರಾರಂಭಿಸಿದ ರಿವೋಲ್ಟ್ ಮೋಟಾರ್ಸ್

ಈಗ ಕಂಪನಿಯು ದೆಹಲಿ, ಪುಣೆ, ಅಹಮದಾಬಾದ್, ಚೆನ್ನೈ, ಹೈದರಾಬಾದ್, ಮುಂಬೈ ನಗರಗಳಲ್ಲಿ ಬುಕ್ಕಿಂಗ್ ಅನ್ನು ಪುನರಾರಂಭಿಸಿದೆ. ಸ್ಟಾಕ್‌ ಕಾರಣದಿಂದಾಗಿ ಈ ಬೈಕುಗಳ ಬುಕ್ಕಿಂಗ್ ಗಳನ್ನು ನಿಲ್ಲಿಸಲಾಗಿತ್ತು.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಬುಕ್ಕಿಂಗ್'ಗಳನ್ನು ಪುನರಾರಂಭಿಸಿದ ರಿವೋಲ್ಟ್ ಮೋಟಾರ್ಸ್

ರಿವೋಲ್ಟ್ ಕಂಪನಿಯು ಈ ವರ್ಷದ ಆರಂಭದಲ್ಲಿ ತನ್ನ ಎರಡೂ ಎಲೆಕ್ಟ್ರಿಕ್ ಬೈಕ್‌ಗಳ ಬೆಲೆಯನ್ನು ಹೆಚ್ಚಿಸಿತು. ರಿವೋಲ್ಟ್ ಬೈಕುಗಳ ಬೆಲೆಯನ್ನು ರೂ.10,000ಗಳಿಂದ ರೂ.14,200ಗಳವರೆಗೆ ಹೆಚ್ಚಿಸಲಾಗಿದೆ.

ಬುಕ್ಕಿಂಗ್'ಗಳನ್ನು ಪುನರಾರಂಭಿಸಿದ ರಿವೋಲ್ಟ್ ಮೋಟಾರ್ಸ್

ಬೆಲೆ ಏರಿಕೆಗೆ ಮುನ್ನ ರಿವೋಲ್ಟ್ ಆರ್‌ವಿ 400 ಬೈಕಿನ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.1,08,999ಗಳಾಗಿತ್ತು. ಬೆಲೆ ಏರಿಕೆಯ ನಂತರ ಈ ಬೈಕಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.1,18,999ಗಳಾಗಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಬುಕ್ಕಿಂಗ್'ಗಳನ್ನು ಪುನರಾರಂಭಿಸಿದ ರಿವೋಲ್ಟ್ ಮೋಟಾರ್ಸ್

ಈ ಬೈಕಿನ ಬುಕ್ಕಿಂಗ್ ಬೆಲೆಯನ್ನು ಸಹ ರೂ.4,200ಗಳವರೆಗೆ ಹೆಚ್ಚಿಸಲಾಗಿದೆ. ಕಂಪನಿಯು ಈ ಎರಡೂ ಬೈಕ್‌ಗಳನ್ನು ಇಎಂಐ ಮೂಲಕ ಮಾರಾಟ ಮಾಡುತ್ತದೆ. ರಿವೋಲ್ಟ್ ಆರ್ ವಿ 400 ಬೈಕ್ ಅನ್ನು 24 ತಿಂಗಳ ಹಾಗೂ 36 ತಿಂಗಳ ಇಎಂಐ ಯೋಜನೆಯಲ್ಲಿ ಮಾರಾಟ ಮಾಡಲಾಗುತ್ತದೆ.

ಬುಕ್ಕಿಂಗ್'ಗಳನ್ನು ಪುನರಾರಂಭಿಸಿದ ರಿವೋಲ್ಟ್ ಮೋಟಾರ್ಸ್

24 ತಿಂಗಳ ಇಎಂಐ ಯೋಜನೆಯಲ್ಲಿ ರೂ.6,075 ಹಾಗೂ 36 ತಿಂಗಳ ಇಎಂಐ ಯೋಜನೆಯಲ್ಲಿ ರೂ.4,399 ಪಾವತಿಸಬೇಕಾಗುತ್ತದೆ. ಇದರ ಜೊತೆಗೆ ಒಂದೇ ಬಾರಿಗೆ ಪೂರ್ತಿ ಹಣವನ್ನು ಪಾವತಿಸಿ ಈ ಬೈಕ್ ಅನ್ನು ಖರೀದಿಸಬಹುದು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಬುಕ್ಕಿಂಗ್'ಗಳನ್ನು ಪುನರಾರಂಭಿಸಿದ ರಿವೋಲ್ಟ್ ಮೋಟಾರ್ಸ್

ರೂ.1,26,198 ಪಾವತಿಸಿ ಈ ಬೈಕ್ ಅನ್ನು ಖರೀದಿಸಬಹುದು. ರಿವೋಲ್ಟ್ ಆರ್ ವಿ 400 ಹಾಗೂ ಆರ್ ವಿ 300 ಬೈಕುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಈ ಕಾರಣಕ್ಕೆ ಈ ಬೈಕುಗಳ ಕಾಯುವ ಅವಧಿಯನ್ನು ಹೆಚ್ಚಿಸಲಾಗಿತ್ತು. ಆದರೆ ಈಗ ಈ ಎಲೆಕ್ಟ್ರಿಕ್ ಬೈಕ್‌ಗಳ ಕಾಯುವ ಅವಧಿಯನ್ನು ತೆಗೆದು ಹಾಕಲಾಗಿದೆ.

ಬುಕ್ಕಿಂಗ್'ಗಳನ್ನು ಪುನರಾರಂಭಿಸಿದ ರಿವೋಲ್ಟ್ ಮೋಟಾರ್ಸ್

ರಿವೋಲ್ಟ್ ಎಲೆಕ್ಟ್ರಿಕ್ ಬೈಕ್‌ಗಳ ಜನಪ್ರಿಯತೆ ಹೆಚ್ಚುತ್ತಿರುವ ಕಾರಣಕ್ಕೆ ಕಂಪನಿಯು ತನ್ನ ಮೂರನೇ ಎಲೆಕ್ಟ್ರಿಕ್ ಬೈಕ್‌ ಅನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಈ ಬೈಕ್ ಕೆಫೆ ರೇಸರ್ ಶೈಲಿಯ ಎಲೆಕ್ಟ್ರಿಕ್ ಬೈಕ್ ಆಗಿರಲಿದ್ದು, ಶೀಘ್ರದಲ್ಲಿಯೇ ಈ ಬೈಕಿನ ಮಾಹಿತಿ ಬಹಿರಂಗಗೊಳ್ಳಲಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಬುಕ್ಕಿಂಗ್'ಗಳನ್ನು ಪುನರಾರಂಭಿಸಿದ ರಿವೋಲ್ಟ್ ಮೋಟಾರ್ಸ್

ಹೀರೋ ಎಇ -47, ಒಕಿನಾವಾ ಒಕಿ 100, ಟಾರ್ಕ್ ಟಿ 6 ಎಕ್ಸ್ ಮುಂತಾದ ಎಲೆಕ್ಟ್ರಿಕ್ ಬೈಕ್‌ಗಳು ಭಾರತದಲ್ಲಿ ರಿವೋಲ್ಟ್ ಎಲೆಕ್ಟ್ರಿಕ್ ಬೈಕುಗಳಿಗೆ ಪೈಪೋಟಿ ನೀಡಲು ಸಜ್ಜಾಗಿವೆ. ದೇಶಾದ್ಯಂತ ಎಲೆಕ್ಟ್ರಿಕ್ ಬೈಕ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ.

Most Read Articles

Kannada
English summary
Revolt motors starts bookings again. Read in Kannada.
Story first published: Wednesday, December 16, 2020, 19:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X