ಒಂದೇ ದಿನ ಒಂದು ಸಾವಿರ ಬೈಕುಗಳನ್ನು ವಿತರಿಸಿದ ರಾಯಲ್ ಎನ್‌ಫೀಲ್ಡ್

ದೇಶಾದ್ಯಂತ ಹಬ್ಬಗಳು ಆರಂಭವಾಗಿವೆ. ಇದರ ಜೊತೆಗೆ ಅನ್ ಲಾಕ್ ಹಿನ್ನೆಲೆಯಲ್ಲಿ ವಾಹನಗಳ ಉತ್ಪಾದನೆಯು ಪುನರಾರಂಭಗೊಂಡು ವಾಹನಗಳು ಡೀಲರ್ ಗಳನ್ನು ತಲುಪುತ್ತಿವೆ.

ಒಂದೇ ದಿನ ಒಂದು ಸಾವಿರ ಬೈಕುಗಳನ್ನು ವಿತರಿಸಿದ ರಾಯಲ್ ಎನ್‌ಫೀಲ್ಡ್

ಈ ಸಂದರ್ಭದಲ್ಲಿ ದೇಶದ ಅತಿದೊಡ್ಡ ಬೈಕ್ ತಯಾರಕ ಕಂಪನಿಯು ಒಂದೇ ದಿನ ಸಾವಿರ ಬೈಕ್‌ಗಳನ್ನು ವಿತರಿಸಿದೆ. ರಾಯಲ್ ಎನ್‌ಫೀಲ್ಡ್ ಕಂಪನಿಯು ಕೇರಳದಲ್ಲಿ ತನ್ನ ಜನಪ್ರಿಯ ಬೈಕ್‌ಗಳಾದ ಕ್ಲಾಸಿಕ್ 350, ಬುಲೆಟ್, ಹಿಮಾಲಯನ್, 650 ಟ್ವಿನ್ಸ್ ಸೇರಿದಂತೆ ಒಂದೇ ದಿನ 1000 ಬೈಕ್‌ಗಳನ್ನು ವಿತರಿಸಿದೆ. ಕಂಪನಿಯ ಡೀಲರ್ ಗಳಿಗೆ ಇದೊಂದು ಮಹತ್ತರ ಸಾಧನೆಯಾಗಿದೆ.

ಒಂದೇ ದಿನ ಒಂದು ಸಾವಿರ ಬೈಕುಗಳನ್ನು ವಿತರಿಸಿದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಕಂಪನಿಯು ಕೇರಳದಲ್ಲಿ ಒಟ್ಟು 59 ಡೀಲರ್ ಗಳನ್ನು ಹಾಗೂ 25 ಸ್ಟುಡಿಯೋ ಸ್ಟೋರ್ ಗಳನ್ನು ಹೊಂದಿದೆ. ಕಂಪನಿಯು ಇವುಗಳ ಮೂಲಕ 1000 ಬೈಕ್‌ಗಳನ್ನು ವಿತರಿಸಿದೆ. ಇದರ ಜೊತೆಗೆ ರಾಯಲ್ ಎನ್‌ಫೀಲ್ಡ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಹೊಸ ಬೈಕ್ ಬಿಡುಗಡೆಗೊಳಿಸಲಿದೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಒಂದೇ ದಿನ ಒಂದು ಸಾವಿರ ಬೈಕುಗಳನ್ನು ವಿತರಿಸಿದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಕಂಪನಿಯು ಶೀಘ್ರದಲ್ಲೇ ಮೆಟಿಯೋರ್ 350 ಬೈಕ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಲಿದೆ. ಕಂಪನಿಯು ಈ ಬೈಕ್‌ನ್ನು ಹೊಸ ಪ್ಲಾಟ್‌ಫಾರ್ಮ್‌ನಲ್ಲಿ ಅಭಿವೃದ್ಧಿಪಡಿಸಿದೆ. ರಾಯಲ್ ಎನ್‌ಫೀಲ್ಡ್ ಕಂಪನಿಯು ತನ್ನ ಮೆಟಿಯೋರ್ 350 ಬೈಕಿನ ಮಾದರಿ ಹಾಗೂ ಬಣ್ಣಗಳ ಬಗೆಗಿನ ಮಾಹಿತಿಯನ್ನು ಬಹಿರಂಗಪಡಿಸಿದೆ.

ಒಂದೇ ದಿನ ಒಂದು ಸಾವಿರ ಬೈಕುಗಳನ್ನು ವಿತರಿಸಿದ ರಾಯಲ್ ಎನ್‌ಫೀಲ್ಡ್

ಮೆಟಿಯೋರ್ 350 ಬೈಕ್ ಹೊಸ ಏರ್-ಕೂಲ್ಡ್ ಎಂಜಿನ್ ಸೇರಿದಂತೆ ಹಲವಾರು ಆಧುನಿಕ ಫೀಚರ್ ಹಾಗೂ ಎಕ್ವಿಪ್ ಮೆಂಟ್ ಗಳನ್ನು ಹೊಂದಿದೆ. ಈ ಬೈಕ್ ಅನ್ನು ಹಲವಾರು ಬಾರಿ ಸ್ಪಾಟ್ ಟೆಸ್ಟ್ ಮಾಡಲಾಗಿದೆ. ಈ ಬೈಕ್ ಅನ್ನು ಥಂಡರ್ ಬರ್ಡ್ ಬೈಕಿನ ಬದಲಿಗೆ ಬಿಡುಗಡೆಗೊಳಿಸಲಾಗುವುದು.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಒಂದೇ ದಿನ ಒಂದು ಸಾವಿರ ಬೈಕುಗಳನ್ನು ವಿತರಿಸಿದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಮೆಟಿಯೋರ್ 350 ಬೈಕ್ ಅನ್ನು ಫೈರ್‌ಬಾಲ್‌, ಸ್ಟೆಲ್ಲಾರ್ ಹಾಗೂ ಸೂಪರ್ ನೋವಾ ಎಂಬ ಮೂರು ಮಾದರಿಗಳಲ್ಲಿ ಬಿಡುಗಡೆಗೊಳಿಸಲಾಗುವುದು. ಈ ಬೈಕ್ ಅನ್ನು ಫೈರ್‌ಬಾಲ್ ಯೆಲ್ಲೋ, ಫೈರ್‌ಬಾಲ್ ರೆಡ್, ಸ್ಟೆಲ್ಲರ್ ರೆಡ್ ಮೆಟಾಲಿಕ್, ಸ್ಟೆಲ್ಲರ್ ಬ್ಲಾಕ್ ಮ್ಯಾಟ್, ಸೂಪರ್‌ಬ್ರೌನ್ ಬ್ರೌನ್ ಡ್ಯುಯಲ್ ಟೋನ್ ಹಾಗೂ ಸೂಪರ್ ನೋವಾ ಬ್ಲೂ ಡ್ಯುಯಲ್ ಟೋನ್ ಎಂಬ ಏಳು ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು.

ಒಂದೇ ದಿನ ಒಂದು ಸಾವಿರ ಬೈಕುಗಳನ್ನು ವಿತರಿಸಿದ ರಾಯಲ್ ಎನ್‌ಫೀಲ್ಡ್

ಫೈರ್‌ಬಾಲ್‌ ಮಾದರಿಯ ಬಗೆಗಿನ ವಿವರಗಳನ್ನು ಬಹಿರಂಗಪಡಿಸಲಾಗಿದೆ. ಈ ಬೈಕಿನಲ್ಲಿ ಮೊದಲ ಬಾರಿಗೆ ಬ್ಲೂಟೂತ್ ಕೆನೆಕ್ಟಿವಿಟಿ ನೀಡಲಾಗುವುದು. ಮೆಟಿಯೋರ್ 350 ಬೈಕಿನಲ್ಲಿ 346 ಸಿಸಿಯ ಏರ್ ಕೂಲ್ಡ್ ಎಫ್‌ಐ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಒಂದೇ ದಿನ ಒಂದು ಸಾವಿರ ಬೈಕುಗಳನ್ನು ವಿತರಿಸಿದ ರಾಯಲ್ ಎನ್‌ಫೀಲ್ಡ್

ಈ ಎಂಜಿನ್ 20 ಬಿಹೆಚ್‌ಪಿ ಪವರ್ ಹಾಗೂ 28 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರ ಜೊತೆಗೆ 5 ಸ್ಪೀಡಿನ ಗೇರ್ ಬಾಕ್ಸ್ ಅಳವಡಿಸಲಾಗಿದೆ. ರಾಯಲ್ ಎನ್‌ಫೀಲ್ಡ್ ಮೆಟಿಯೋರ್ 350 ಬೈಕಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ.1.65 ಲಕ್ಷಗಳಾಗುವ ಸಾಧ್ಯತೆಗಳಿವೆ.

Most Read Articles

Kannada
English summary
Royal Enfield company delivers 1000 bikes in a single day. Read in Kannada.
Story first published: Monday, August 31, 2020, 14:12 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X