ಮಿಟಿಯೊರ್ 350 ಬೈಕ್ ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ರಾಯಲ್ ಎನ್‌ಫೀಲ್ಡ್

ರಾಯಲ್ ಎನ್‌ಫೀಲ್ಡ್ ಕಂಪನಿಯು ತನ್ನ ಹೊಸ ಮಿಟಿಯೊರ್ 350 ಕ್ರೂಸರ್ ಬೈಕ್ ಮಾದರಿಯ ಮೂಲಕ ಕ್ಲಾಸಿಕ್ ಬೈಕ್ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಹೊಸ ಬೈಕ್ ಮಾದರಿಗಾಗಿ ಅಧಿಕೃತ ಆಕ್ಸೆಸರಿಸ್‌ಗಳನ್ನು ಪರಿಚಯಿಸಿದೆ.

ಮಿಟಿಯೊರ್ 350 ಬೈಕ್ ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ರಾಯಲ್ ಎನ್‌ಫೀಲ್ಡ್

ವಿವಿಧ ಮಾದರಿಯ ಬೈಕ್ ಆವೃತ್ತಿಗಳಿಗಾಗಿ ರಾಯಲ್ ಎನ್‌ಫೀಲ್ಡ್ ಕಂಪನಿಯೇ ಅಧಿಕೃತ ಪ್ರೀಮಿಯಂ ಆಕ್ಸೆಸರಿಸ್‌ಗಳ ಮಾರಾಟ ಸೌಲಭ್ಯವನ್ನು ಹೊಂದಿದ್ದು, ಹೊಸ ಬೈಕ್ ಖರೀದಿಸುವ ಮುನ್ನವೇ ಆನ್‌ಲೈನ್ ಕಾನ್ಫಿಗ್ರೆಷನ್ ಮೂಲಕ ಆಕ್ಸೆಸರಿಸ್‌ಗಳನ್ನು ಜೋಡಣೆ ಮಾಡಿಕೊಳ್ಳಬಹುದಾಗಿದೆ. ಸ್ಟ್ಯಾಂಡರ್ಡ್ ಫೀಚರ್ಸ್‌ಗಳನ್ನು ಹೊರತುಪಡಿಸಿ ಪ್ರೀಮಿಯಂ ಆಕ್ಸೆಸರಿಸ್‌ಗಳನ್ನು ದರ ಪಟ್ಟಿ ಹೊಂದಿದ್ದು, ಆಸಕ್ತ ಗ್ರಾಹಕರ ಬೇಡಿಕೆಯ ಆಧಾರ ಮೇಲೆ ಜೋಡಣೆ ಮಾಡಲಾಗುತ್ತದೆ.

ಮಿಟಿಯೊರ್ 350 ಬೈಕ್ ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ರಾಯಲ್ ಎನ್‌ಫೀಲ್ಡ್

ಆಕ್ಸೆಸರಿಸ್ ಪಟ್ಟಿಯಲ್ಲಿ ರಾಯಲ್ ಎನ್‌ಫೀಲ್ಡ್ ವಿವಿಧ ಮಾದರಿಗಳಿಗೆ ಅನುಗುಣವಾಗಿ ವಿವಿಧ ರೀತಿಯ ಪ್ಯಾಕೇಜ್ ಲಭ್ಯವಿದ್ದು, ಮಿಟಿಯೊರ್ 350 ಕ್ರೂಸರ್ ಬೈಕ್ ಮಾದರಿಗೂ ಹಲವಾರು ಆಕ್ಸೆಸರಿಸ್‌ಗಳನ್ನು ನೀಡಲಾಗಿದೆ.

ಮಿಟಿಯೊರ್ 350 ಬೈಕ್ ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ರಾಯಲ್ ಎನ್‌ಫೀಲ್ಡ್

ಮಿಟಿಯೊರ್ 350 ಕ್ರೂಸರ್ ಬೈಕ್ ಮಾದರಿಗಾಗಿ ಬ್ಯಾಕ್ ರೆಸ್ಟ್, ಸಿಲ್ವರ್ ಎಂಜಿನ್ ಗಾರ್ಡ್, ಲಾಂಗ್ ರೈಡಿಂಗ್ ಅನುಕೂಲಕ್ಕಾಗಿ ಫುಟ್ ಪೆಗ್ ಕಿಟ್, ಸೈಡ್ ಬಾಕ್ಸ್, ಹ್ಯಾಂಡಲ್ ಬಾರ್ ಆಂಡ್ ಮಿರರ್, ಫ್ಯೂಲ್ ಟ್ಯಾಂಕ್ ಮೇಲೆ ಕಸ್ಟಮ್ ಬಿಲ್ಟ್ ಬ್ಯಾಡ್ಜ್, ಆಕರ್ಷಕ ಸೈಲೆನ್ಸರ್, ಲೋ ರೈಡ್ ಸೀಟ್ ಮತ್ತು ವಿಂಡ್ ಸ್ಕೀನ್ ಪಡೆದುಕೊಳ್ಳಬಹುದಾಗಿದೆ.

ಮಿಟಿಯೊರ್ 350 ಬೈಕ್ ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ರಾಯಲ್ ಎನ್‌ಫೀಲ್ಡ್

ಕಸ್ಟಮ್ ಆಕ್ಸೆಸರಿಸ್‌ಗಳಲ್ಲಿ ಕೆಲವು ಸೌಲಭ್ಯಗಳು ಮಿಟಿಯೊರ್ 350 ಟಾಪ್ ಎಂಡ್ ಮಾದರಿಯಲ್ಲಿ ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಇನ್ನುಳಿದ ಕೆಲವು ಆಕ್ಸೆಸರಿಸ್‌ಗಳನ್ನು ಹೆಚ್ಚುವರಿ ದರದಲ್ಲಿ ಖರೀದಿ ಮಾಡಬೇಕಾಗುತ್ತದೆ. ಹೊಸ ಪ್ರೀಮಿಯಂ ಆಕ್ಸೆಸರಿಸ್‌ಗಳು ರೂ. 1,200 ರಿಂದ 1,800 ಬೆಲೆ ಹೊಂದಿದ್ದು, ಹೊಸ ಬೈಕಿನ ಆಕರ್ಷಣೆಗೆ ಮತ್ತಷ್ಟು ಮೆರಗು ನೀಡಲು ಈ ಆಕ್ಸೆಸರಿಸ್‌ಗಳು ಪ್ರಮುಖ ಪಾತ್ರವಹಿಸಲಿವೆ.

ಮಿಟಿಯೊರ್ 350 ಬೈಕ್ ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ರಾಯಲ್ ಎನ್‌ಫೀಲ್ಡ್

ಇನ್ನು ಮಿಟಿಯೊರ್ 350 ಹೊಸ ಬೈಕ್ ಮಾದರಿಯು ಸುಧಾರಿತ ತಂತ್ರಜ್ಞಾನ ಪ್ರೇರಿತ ಫೀಚರ್ಸ್‌ಗಳೊಂದಿಗೆ ಪ್ರಮುಖ ಮೂರು ವೆರಿಯೆಂಟ್‌ಗಳೊಂದಿಗೆ ಖರೀದಿಗೆ ಲಭ್ಯವಿದ್ದು, ತಾಂತ್ರಿಕವಾಗಿ ಥಂಡರ್‌ಬರ್ಡ್ ಎಕ್ಸ್ ಮಾದರಿಗಿಂತಲೂ ಸಾಕಷ್ಟು ವಿಭಿನ್ನತೆಗಳನ್ನು ಹೊಂದಿದೆ. ಹೊಸ ಬೈಕ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಫೈರ್‌ಬಾಲ್, ಸ್ಟೆಲ್ಲಾರ್ ಮತ್ತು ಸೂಪರ್‌ನೊವಾ ಎಂಬ ಮೂರು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಆಕರ್ಷಕ ಬೆಲೆ ಪಡೆದುಕೊಂಡಿದೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

ಮಿಟಿಯೊರ್ 350 ಬೈಕ್ ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ರಾಯಲ್ ಎನ್‌ಫೀಲ್ಡ್

ಹೊಸ ಬೈಕ್ ಮಾದರಿಯು ಬೆಂಗಳೂರಿನಲ್ಲಿ ಆನ್‌ರೋಡ್ ಪ್ರಕಾರ ರೂ.2.18 ಲಕ್ಷ (ಫೈರ್‌ಬಾಲ್), ರೂ. 2.36 ಲಕ್ಷ (ಸ್ಟೆಲ್ಲಾರ್) ಮತ್ತು ಹೈ ಎಂಡ್ ಮಾದರಿಯಾದ (ಸೂಪರ್‌ನೊವಾ) ಮಾದರಿಯು ರೂ. 2.25 ಲಕ್ಷ ಬೆಲೆ ಹೊಂದಿದೆ.

ಮಿಟಿಯೊರ್ 350 ಬೈಕ್ ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ರಾಯಲ್ ಎನ್‌ಫೀಲ್ಡ್

ಡಬಲ್ ಡೌನ್‌ಟ್ಯೂಬ್ ಕ್ರೆಡಲ್ ಫ್ರೇಮ್ ಮೇಲೆ ಅಭಿವೃದ್ದಿಗೊಂಡಿರುವ ಹೊಸ ಬೈಕ್ ಮಾದರಿಯು ಥಂಡರ್‌ಬರ್ಡ್ ಮಾದರಿಗಿಂತಲೂ ಹೆಚ್ಚು ಅರಾಮದಾಯಕ ರೈಡಿಂಗ್ ಒದಗಿಸಲಿದ್ದು, ಮುಂಭಾಗದಲ್ಲಿ 41-ಎಂಎಂ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ 6 ಹಂತಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಟ್ವಿನ್ ಶಾಕ್‌ ಅಬ್ಸಾರ್ಬರ್‌ ನೀಡಲಾಗಿದೆ.

MOST READ: ಹೊಸ ಅವತಾರದಲ್ಲಿ ಬಿಡುಗಡೆಯಾಗಲಿದೆ ಟಿವಿಎಸ್ ಫಿಯರೊ 125 ಕಮ್ಯುಟರ್ ಬೈಕ್

ಮಿಟಿಯೊರ್ 350 ಬೈಕ್ ಮಾದರಿಗಾಗಿ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ರಾಯಲ್ ಎನ್‌ಫೀಲ್ಡ್

ಮಿಟಿಯೊರ್ 350 ಬೈಕ್ ಮಾದರಿಯು 349-ಸಿಸಿ ಫ್ಯೂಲ್ ಇಂಜೆಕ್ಷೆಡ್ ಸಿಂಗಲ್ ಸಿಲಿಂಡರ್ ಹೊಂದಿದ್ದು, 5-ಸ್ಪೀಡ್ ಗೇ‌ರ್‌ಬಾಕ್ಸ್‌ನೊಂದಿಗೆ 20.2-ಬಿಎಚ್‌ಪಿ ಮತ್ತು 27-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

Most Read Articles

Kannada
English summary
Royal Enfield Introduced Accessory Kits For All New Meteor 350.
Story first published: Tuesday, November 10, 2020, 21:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X