Just In
- 19 hrs ago
ಹೊಸ ಫೀಚರ್ಸ್ಗಳನ್ನು ಪಡೆಯಲಿದೆ ನ್ಯೂ ಜನರೇಷನ್ ಫೋಕ್ಸ್ವ್ಯಾಗನ್ ಪೊಲೊ
- 21 hrs ago
ಫೋರ್ಡ್ ಮುಸ್ಟಾಂಗ್ ಕಾರಿನಂತೆ ಮಾಡಿಫೈಗೊಂಡ ಬಲೆನೊ ಸೆಡಾನ್ ಕಾರು
- 23 hrs ago
ವಾರದ ಸುದ್ದಿ: ಸಿಟ್ರನ್ ಕಾರು ಬಿಡುಗಡೆ, ಹೊಸ ವಾಹನ ಬೆಲೆ ಹೆಚ್ಚಳ, ಅಲ್ಕಾಜರ್ ಅನಾವರಣ, ಯುಗಾದಿ ಆಫರ್ ಘೋಷಣೆ!
- 1 day ago
ಎಕ್ಸ್ಯುವಿ700 ಎಸ್ಯುವಿ ಕಾರಿನ ಮತ್ತಷ್ಟು ಹೊಸ ಮಾಹಿತಿ ಹಂಚಿಕೊಂಡ ಮಹೀಂದ್ರಾ
Don't Miss!
- News
ಮಹಾರಾಷ್ಟ್ರದಲ್ಲಿ ಒಂದೇ ದಿನ 63294 ಮಂದಿಗೆ ಕೊರೊನಾವೈರಸ್!
- Lifestyle
ಸೋಮವಾರದ ದಿನ ಭವಿಷ್ಯ: ಈ ದಿನ ನಿಮ್ಮ ರಾಶಿಫಲ ಹೇಗಿದೆ ನೋಡಿ
- Sports
ಐಪಿಎಲ್ 2021: ಕೊಲ್ಕತ್ತಾ ವಿರುದ್ಧದ ಸೋಲಿಗೆ ಕಾರಣ ಹೇಳಿದ ಡೇವಿಡ್ ವಾರ್ನರ್
- Movies
ಸೋನು ಸೂದ್ಗೆ ವಿಶೇಷ ಗೌರವ ನೀಡಿದ ಪಂಜಾಬ್ ಸರ್ಕಾರ
- Finance
ಟಾಪ್ 10ರಲ್ಲಿ 4 ಕಂಪನಿಗಳ ಮೌಲ್ಯ 1.14 ಲಕ್ಷ ಕೋಟಿ ರುಗೇರಿಕೆ
- Education
Bank Of Baroda Recruitment 2021: 512 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ವಿನ್ಯಾಸದ ಕಬ್ ಡಿ4 ಡಿಕೋರ್ ಹೆಲ್ಮೆಟ್ ಬಿಡುಗಡೆಗೊಳಿಸಿದ ಸ್ಟಡ್ಸ್
ಹೆಲ್ಮೆಟ್ ಮತ್ತು ಆಕ್ಸೆಸರಿಸ್ ಉತ್ಪಾದನಾ ಕಂಪನಿಯಾಗಿರುವ ಸ್ಟಡ್ಸ್ ಡಿ ಸರಣಿ ಹೆಲ್ಮೆಟ್‌ನಲ್ಲಿ ಹೊಸದಾಗಿ ಕಬ್ ಡಿ4 ಡಿಕೋರ್ ಹೆಲ್ಮೆಟ್ ಬಿಡುಗಡೆ ಮಾಡಿದ್ದು, ಹೊಸ ವಿನ್ಯಾಸ ಹೊಂದಿರುವ ಕಬ್ ಡಿ4 ಡಿಕೋರ್ ಮಾದರಿಯು 2020ರ ಬಿಎಸ್ಐ ಸ್ಟ್ಯಾಂಡರ್ಡ್ ನಿಯಮಾನುಸಾರವಾಗಿ ಅಭಿವೃದ್ದಿಗೊಂಡಿದೆ.

ಸ್ಟಡ್ಸ್ ಕಂಪನಿಯ ಥಂಡರ್ ಡಿ ಸರಣಿಯಲ್ಲಿರುವ ಪ್ರಮುಖ ಹೆಲ್ಮೆಟ್ ಮಾದರಿಗಳಲ್ಲೇ ತುಸು ವಿಭಿನ್ನ ವಿನ್ಯಾಸ ಹೊಂದಿರುವ ಕಬ್ ಡಿ4 ಡಿಕೋರ್ ಹೆಲ್ಮೆಟ್ ಮಾದರಿಯು ಬೈಕ್ ಸವಾರರಿಗೆ ಗರಿಷ್ಠ ಸುರಕ್ಷತೆಯನ್ನು ಖಾತ್ರಿಪಡಿಸಲಿದ್ದು, ಹೆಲ್ಮೆಟ್ ಬಳಕೆಯು ಸುಲಭವಾಗಿಸಲು ಒಳಭಾಗದ ವಿನ್ಯಾಸದಲ್ಲಿ ಸಾಕಷ್ಟು ಹೊಸತನ ಪರಿಚಯಿಸುವ ಮೂಲಕ ಬೈಕ್ ಸವಾರಿಯನ್ನು ಮತ್ತಷ್ಟು ಆರಾಮಗೊಳಿಸುತ್ತದೆ.

ಓಪನ್ ಫೇಸ್ ವೈಶಿಷ್ಟ್ಯತೆಯ ಕಬ್ ಡಿ4 ಡಿಕೋರ್ ಹೆಲ್ಮೆಟ್ ಮಾದರಿಯು ಪ್ರತಿಸ್ಪರ್ಧಿ ಕಂಪನಿಗಳ ಹೆಲ್ಮೆಟ್ ಮಾದರಿಗಿಂತಲೂ ಉತ್ತಮ ತಾಂತ್ರಿಕ ಸೌಲಭ್ಯಗಳೊಂದಿಗೆ ಅಭಿವೃದ್ದಿಗೊಂಡಿದ್ದು, ಹೊಸ ಹೆಲ್ಮೆಟ್ ಬೆಲೆಯನ್ನು ಆರಂಭಿಕವಾಗಿ ರೂ. 1,175ಕ್ಕೆ ನಿಗದಿಪಡಿಸಿದೆ.

ಸ್ಟಡ್ಸ್ ಕಂಪನಿಯು ಕಬ್ ಡಿ4 ಡಿಕೋರ್ ಹೆಲ್ಮೆಟ್ ಮಾದರಿಯನ್ನು ಮೀಡಿಯಂ, ಲಾರ್ಜ್ ಮತ್ತು ಎಕ್ಸ್ಟಾ ಲಾರ್ಜ್ ವಿನ್ಯಾಸದಲ್ಲಿ ಬಿಡುಗಡೆ ಮಾಡಿದ್ದು, ಬೈಕ್ ಸವಾರರು ತಮ್ಮ ಬೇಡಿಕೆಗೆ ಅನುಗುಣವಾಗಿ ಮೀಡಿಯಂ(570-ಎಂಎಂ), ಲಾರ್ಜ್(580-ಎಂಎಂ) ಮತ್ತು ಎಕ್ಸ್ಟಾ ಲಾರ್ಜ್(600-ಎಂಎಂ) ಮಾದರಿಗಳನ್ನು ಖರೀದಿ ಮಾಡಬಹುದು.

ಜೊತೆಗೆ ಕಬ್ ಡಿ4 ಡಿಕೋರ್ ಹೆಲ್ಮೆಟ್ ಒಟ್ಟು ಆರು ವಿವಿಧ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಪಿಂಕ್, ರೆಡ್, ಮ್ಯಾಟ್ ಬ್ಲ್ಯೂ, ಮ್ಯಾಟ್ ರೆಡ್, ಮ್ಯಾಟ್ ಗನ್ ಗ್ರೇ ಮತ್ತು ನಿಯಾನ್ ಯೆಲ್ಲೊ ಬಣ್ಣಗಳನ್ನು ಆಯ್ಕೆ ಮಾಡಬಹುದಾಗಿದೆ. ಹೊಸ ಹೆಲ್ಮೆಟ್ ಮಾದರಿಯು ಯುವಿ ರೆಸಿಸ್ಟೆಂಟ್ ಪೇಂಟ್, ಚಿನ್ ಸ್ಟ್ಯಾಪ್‌ನೊಂದಿಗೆ ಗಲ್ಲದ ಭಾಗಕ್ಕೆ ಪೂರ್ಣ ಪ್ರಮಾಣದ ಸುರಕ್ಷತೆ ನೀಡಲಿದ್ದು, ಒಳಭಾಗದಲ್ಲಿ ಪ್ರೀಮಿಯಂ ಫ್ರ್ಯಾಬಿಕ್ ಬಟ್ಟೆಯನ್ನು ಬಳಕೆ ಮಾಡಲಾಗಿದೆ.

ಹಾಗೆಯೇ ಹೊಸ ಹೆಲ್ಮೆಟ್ ಸ್ಕ್ರ್ಯಾಚ್ ಫ್ರೀ ವೈಶಿಷ್ಟ್ಯತೆ ಹೊಂದಿರುವುದರಿಂದ ಹೆಲ್ಮೆಟ್ ಯಾವಗಲೂ ಹೊಸರಂತೆ ಕಾಣಲಿದ್ದು, ಬಿಸಿಲು, ಮಳೆಗಾಲ ಸಂದರ್ಭದಲ್ಲೂ ಈ ಹೆಲ್ಮೆಟ್ ಅನ್ನು ಸುಲಭವಾಗಿ ಬಳಕೆ ಮಾಡಬಹುದಾಗಿದೆ.

ಆದರೆ ಓಪನ್ ಫೇಸ್ ಹೆಲ್ಮೆಟ್ ಮಾದರಿಗಳು ಟ್ರಾಫಿಕ್ ದಟ್ಟಣೆಯಿಂದ ಕೂಡಿರುವ ನಗರ ಪ್ರದೇಶಗಳಲ್ಲಿ ಮಾತ್ರ ಬಳಕೆಗೆ ಸೂಕ್ತವಾಗಿದ್ದು, ಹೆದ್ದಾರಿಗಳಲ್ಲಿ ಯಾವಗಲೂ ಫುಲ್ ಫೇಸ್ ಹೆಲ್ಮೆಟ್ ಬಳಕೆಯೇ ಉತ್ತಮ ಎನ್ನಬಹುದು.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಇನ್ನು ದೇಶಾದ್ಯಂತ ಬಹುತೇಕ ರಾಜ್ಯಗಳಲ್ಲಿ ಬೈಕ್ ಸವಾರರ ಸವಾರರ ಜೊತೆಗೆ ಹಿಂಬದಿಯ ಸವಾರರಿಗೂ ಹೆಲ್ಮೆಟ್ ಬಳಕೆಯನ್ನು ಕಡ್ಡಾಯಗೊಳಿಸಿದ್ದರೂ ದಂಡದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಕಳಪೆ ಹೆಲ್ಮೆಟ್‌ಗಳ ಬಳಕೆಯು ಹೆಚ್ಚಳವಾಗಿದ್ದು, ಇವು ಬೈಕ್ ಸವಾರರಿಗೆ ರಕ್ಷಣೆ ನೀಡುವ ಬದಲಾಗಿ ಪ್ರಾಣಕ್ಕೆ ಕುತ್ತು ತರುತ್ತಿವೆ ಎಂದರೆ ತಪ್ಪಾಗುವುದಿಲ್ಲ.

ಭಾರತದಲ್ಲಿ ಬೈಕ್ ಸವಾರರಿಗೆ ಕಡ್ಡಾಯವಾಗಿ ಹೆಲ್ಮೆಟ್ ಬಳಕೆಯನ್ನು ಜಾರಿಗೆ ತರುವಲ್ಲಿ ಆಯಾ ರಾಜ್ಯಗಳ ಸಾರಿಗೆ ಇಲಾಖೆಗಳು ಉತ್ತಮ ಬದಲಾವಣೆ ತರುವಲ್ಲಿ ಯಶಸ್ವಿಯಾಗುತ್ತಿದ್ದರೂ ಕಳಪೆ ಹೆಲ್ಮೆಟ್ ಬಳಕೆಯನ್ನು ತಡೆಯುವಲ್ಲಿ ವಿಫಲವಾಗುತ್ತಿವೆ. ವಾಹನ ಸವಾರರು ದುಬಾರಿ ದಂಡದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಗುಣಮಟ್ಟದ ಬಗ್ಗೆ ತಡೆಕೆಡಿಸಿಕೊಳ್ಳದೆ ಮಾರುಕಟ್ಟೆಯಲ್ಲಿ ಲಭ್ಯವಾಗುವ ಕಳಪೆ ಗುಣಮಟ್ಟದ ಹೆಲ್ಮೆಟ್‌ಗಳನ್ನು ಬಳಸುತ್ತಿರುವುದು ವಾಹನ ಸವಾರರ ಪ್ರಾಣ ಹಾನಿಗೆ ಕಾರಣವಾಗುತ್ತಿವೆ.
MOST READ: ಅತಿ ಕಡಿಮೆ ಬೆಲೆಯಲ್ಲಿ ಬಿಎಸ್ಐ ಸರ್ಟಿಫೈಡ್ ಟ್ರೆಡ್ ಹೆಲ್ಮೆಟ್ ಬಿಡುಗಡೆ

ಇದೇ ವಿಚಾರವಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿರುವ ಕೇಂದ್ರ ಸಾರಿಗೆ ಇಲಾಖೆಯು ಸುಪ್ರೀಂಕೋರ್ಟ್ ನಿರ್ದೇಶನದಂತೆ ಹೊಸ ನಿಯಮವೊಂದನ್ನು ಜಾರಿಗೆ ತಂದಿದ್ದು, 2021ರ ಜೂನ್ 1 ರಿಂದ ಐಎಸ್ಐ ಪ್ರಮಾಣೀಕೃತ ಹೆಲ್ಮೆಟ್‌ಗಳನ್ನು ಮಾತ್ರ ಬಳಕೆ ಮಾಡಬೇಕು ಎಂಬ ಆದೇಶ ಹೊರಡಿಸಿದೆ.