ಟ್ರಾಫಿಕ್ ಪೊಲೀಸರಿಗೆ ಮಾಡಿಫೈಗೊಳಿಸಿದ ಬೈಕ್ ನೀಡಿದ ಸುಜುಕಿ

ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು, ಸಿಎಸ್ಆರ್ ಯೋಜನೆ ಮತ್ತು ರಸ್ತೆ ಸುರಕ್ಷತಾ ಭಾಗವಾಗಿ ತನ್ನ ಸರಣಿಯಲ್ಲಿರುವ ಜಿಕ್ಸರ್ 250 ಎಸ್‍ಎಫ್ ಬೈ‍ಕ್‍‍ಗಳನ್ನು ಸೂರತ್ ಟ್ರಾಫಿಕ್ ಪೊಲೀಸರಿಗೆ ನೀಡಿದೆ. ಸುಜುಕಿ ಕಂಪನಿಯು ಮಾಡಿಫೈ ಮಾಡಲಾದ ಜಿಕ್ಸರ್ 250 ಎಸ್ಎಫ್ ಬೈಕ್‍‍ಗಳನ್ನು ಪೊಲೀಸರಿಗೆ ಹಸ್ತಾಂತರಿಸಿದೆ.

ಟ್ರಾಫಿಕ್ ಪೊಲೀಸರಿಗೆ ಮಾಡಿಫೈಗೊಳಿಸಿದ ಬೈಕ್ ನೀಡಿದ ಸುಜುಕಿ

ಪೊಲೀಸರಿಗೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಆತ್ಯಾಧುನಿಕ ವಾಹನಗಳ ಅಗತ್ಯವಿರುತ್ತದೆ. ಎಲ್ಲಾ ಆದ್ಮೇಲೆ ಪೊಲೀಸರು ಬರುತ್ತಾರೆ ಎಂಬ ಅಪವಾದವಿದೆ ಪೊಲೀಸರ ಮೇಲೆ ಇದೆ. ಇಂತಹ ಸೂಪರ್ ಪಾಸ್ಟ್ ಬೈಕ್‍‍ಗಳನ್ನು ಹೊಂದಿದಾಗ ಪೊಲೀಸರು ಘಟನಾ ಸ್ಥಳಕ್ಕೆ ವೇಗವಾಗಿ ತಲುಪಬಹುದು.

ಟ್ರಾಫಿಕ್ ಪೊಲೀಸರಿಗೆ ಮಾಡಿಫೈಗೊಳಿಸಿದ ಬೈಕ್ ನೀಡಿದ ಸುಜುಕಿ

ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ತನ್ನ 5 ಜಿಕ್ಸರ್ 250 ಎಸ್‍ಎಫ್ ಬೈಕ್‍‍ಗಳನ್ನು ಸೂರತ್‌ನ ಪೊಲೀಸ್ ಆಯುಕ್ತ ಆರ್.ಬಿ.ಬ್ರಹ್ಮಭಟ್ ಅವರಿಗೆ ಹಸ್ತಾಂತರಿಸಿದೆ. ಸೂರತ್ ಟ್ರಾಫಿಕ್ ಪೊಲೀಸರಿಗೆ ನೀಡಲಾದ ಬಿಳಿ ಬಣ್ಣದ ಬೈಕ್ ಡೀಲರ್‍‍ಗಳ ಬಳಿ ಲಭ್ಯವಿರುವುದಿಲ್ಲ.

ಟ್ರಾಫಿಕ್ ಪೊಲೀಸರಿಗೆ ಮಾಡಿಫೈಗೊಳಿಸಿದ ಬೈಕ್ ನೀಡಿದ ಸುಜುಕಿ

ಇದನ್ನೂ ಪೊಲೀಸರಿಗಾಗಿ ವಿಶೇಷವಾಗಿ ಮಾಡಿಫೈ ಮಾಡಲಾಗಿದೆ. ಆದರೆ ಎಂಜಿನ್‍‍ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಪೊಲೀಸರಿಗೆ ನೀಡಿದ ಬೈಕಿನ ಮುಂಭಾಗದಲ್ಲಿ ಕೆಂಪು ಮತ್ತು ನೀಲಿ ಬೀಕನ್‍ಗಳನ್ನು ಒಳಗೊಂಡಿದೆ. ಇದರೊಂದಿಗೆ ಬೈಕಿನಲ್ಲಿ ಸೈಡ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಟ್ರಾಫಿಕ್ ಪೊಲೀಸರಿಗೆ ಮಾಡಿಫೈಗೊಳಿಸಿದ ಬೈಕ್ ನೀಡಿದ ಸುಜುಕಿ

ಬಾಡಿ ಪ್ಯಾನೆಲ್, ಸೈಡ್ ಬಾಕ್ಸ್ ಮತ್ತು ವಿಂಡ್‍‍ಷೀಲ್ಡ್ ಗಳಲ್ಲಿ ಪೊಲೀಸ್ ಎಂಬ ಸ್ಟಿಕ್ಕರಿಂಗ್ ಅನ್ನು ಅಂಟಿಸಿದ್ದಾರೆ. ಹಿಂಭಾಗದಲ್ಲಿ ಲಾಠಿ ಇಡಲು ಬ್ಯಾಟನ್ ಅನ್ನು ಅಳವಡಿಸಲಾಗಿದೆ. ಗುರಗಾಂವ್ ಪೊಲೀಸರಿಗೆ ಕಳೆದ ಬಾರಿ ಜಿಕ್ಸರ್ 250 ಎಸ್‍ಎಫ್ ಮಾದರಿಯ 155 ಬೈಕ್‍‍ಗಳನ್ನು ನೀಡಿದ್ದರು. ಈ ಬೈಕ್‍ಗಳನ್ನು ಕೂಡ ವಿಶೇಷವಾಗಿ ಮಾಡಿಫೈಗೊಳಿಸಲಾಗಿತ್ತು.

ಟ್ರಾಫಿಕ್ ಪೊಲೀಸರಿಗೆ ಮಾಡಿಫೈಗೊಳಿಸಿದ ಬೈಕ್ ನೀಡಿದ ಸುಜುಕಿ

ಸುಜುಕಿ ಕಂಪನಿಯು 2018ರಿಂದಲೇ ಪೊಲೀಸ್ ಪಡೆಗಳಿಗಾಗಿ ವಿಶೇಷವಾಗಿ ಮಾಡಿಫೈ ಮಾಡಲಾದ ಬೈಕ್‍‍ಗಳನ್ನು ಒದಗಿಸುತ್ತಿದೆ. ಕಂಪನಿಯು ಇನ್ನೂ 60 ಮಾಡಿಫೈ ಮಾಡಲಾದ ಬೈಕ್‍‍ಗಳನ್ನು ಪೊಲೀಸರಿಗೆ ನೀಡಲಿದೆ ಎಂದು ವರದಿಗಳು ಪ್ರಕಟವಾಗಿವೆ.

ಟ್ರಾಫಿಕ್ ಪೊಲೀಸರಿಗೆ ಮಾಡಿಫೈಗೊಳಿಸಿದ ಬೈಕ್ ನೀಡಿದ ಸುಜುಕಿ

ಜಿಕ್ಸರ್ 250 ಎಸ್ಎಫ್ ಬೈಕಿನಲ್ಲಿ 249 ಸಿಸಿ ಸಿಂಗಲ್ ಸಿಲಿಂಡರ್ ಆಯಿಲ್-ಕೂಲ್ಡ್ ಎಂಜಿನ್‌ ಅಳವಡಿಸಲಾಗಿದೆ. ಈ ಎಂಜಿನ್ 9000 ಆರ್‍‍ಪಿ‍ಎಂನಲ್ಲಿ 26.5 ಬಿ‍‍ಹೆ್ಚ್‍‍ಪಿ ಪವರ್ ಹಾಗೂ 7500 ಆರ್‍‍ಪಿ‍ಎಂನಲ್ಲಿ 22.6 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ ಆರು ಸ್ಪೀಡ್‍‍ನ ಗೇರ್‌ಬಾಕ್ಸ್‌ ಅನ್ನು ಅಳವಡಿಸಲಾಗಿದೆ.

ಟ್ರಾಫಿಕ್ ಪೊಲೀಸರಿಗೆ ಮಾಡಿಫೈಗೊಳಿಸಿದ ಬೈಕ್ ನೀಡಿದ ಸುಜುಕಿ

ಜಿಕ್ಸರ್ ಎಸ್‌ಎಫ್ 250 ಬೈಕ್, ಸ್ಟ್ಯಾಂಡರ್ಡ್ ಮಾದರಿಯ ಬೈಕಿನಲ್ಲಿರುವಂತಹ ಸಸ್ಪೆಂಷನ್ ಹಾಗೂ ಬ್ರೇಕ್‌ಗಳನ್ನು ಹೊಂದಿದೆ. ಈ ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಹಾಗೂ ಹಿಂಭಾಗದಲ್ಲಿ ಮೊನೊ ಶಾಕ್‍‍ಗಳಿವೆ.

ಟ್ರಾಫಿಕ್ ಪೊಲೀಸರಿಗೆ ಮಾಡಿಫೈಗೊಳಿಸಿದ ಬೈಕ್ ನೀಡಿದ ಸುಜುಕಿ

ಈ ಬೈಕಿನಲ್ಲಿ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಅಳವಡಿಸಲಾಗಿದೆ. ಈ ಬೈಕ್ ಮುಂಭಾಗದಲ್ಲಿ 110/70 ಹಾಗೂ ಹಿಂಭಾಗದಲ್ಲಿ 150/60 ಪ್ರೊಫೈಲ್‌‍‍ನ, 17 ಇಂಚಿನ ರೇಡಿಯಲ್ ಟ್ಯೂಬ್‌ಲೆಸ್ ಟಯರ್‌ಗಳನ್ನು ಹೊಂದಿದೆ.

ಟ್ರಾಫಿಕ್ ಪೊಲೀಸರಿಗೆ ಮಾಡಿಫೈಗೊಳಿಸಿದ ಬೈಕ್ ನೀಡಿದ ಸುಜುಕಿ

ಸುಜುಕಿ ಜಿಕ್ಸರ್ ಎಸ್‌ಎಫ್ 250 ಬೈಕಿನಲ್ಲಿ ಹಲವಾರು ಫೀಚರ್‍‍ಗಳನ್ನು ಅಳವಡಿಸಲಾಗಿದೆ. ಇವುಗಳು ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಎಲ್‌ಇಡಿ ಟೇಲ್‌ಲೈಟ್, ಸ್ಪೋರ್ಟಿ ಡ್ಯುಯಲ್ ಮಫ್ಲರ್ ಮತ್ತು ಪೂರ್ಣ ಪ್ರಮಾಣದ ಡಿಜಿಟಲ್ ಸ್ಪೀಡೊಮೀಟರ್‍‍ಗಳಾಗಿವೆ.

Most Read Articles

Kannada
English summary
Suzuki Gixxer 250 SF specially modified for Surat Trafffic Police. Read in Kannada
Story first published: Saturday, January 11, 2020, 15:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X