ಬಿಎಸ್-6 ಇನ್‌ಟ್ರುಡರ್ 150 ಬೈಕ್ ಬೆಲೆಯಲ್ಲಿ ಎರಡನೇ ಬಾರಿಗೆ ಹೆಚ್ಚಳ

ಲಾಕ್‌ಡೌನ್ ಸಂಕಷ್ಟದಿಂದ ಹೊಸ ವಾಹನಗಳ ಮಾರಾಟವು ಮೊದಲೇ ತೀವ್ರ ಕುಸಿತ ಕಂಡಿದೆ. ಸುಲಭ ಸಾಲ ಸೌಲಭ್ಯ, ವಿವಿಧ ಮಾದರಿಯ ಡಿಸ್ಕೌಂಟ್ ಹೊರತಾಗಿ ಬೇಡಿಕೆಯು ನೆಲಕಚ್ಚಿದ್ದು, ಹೀಗಿರುವಾಗ ಸುಜುಕಿ ಮೋಟಾರ್‌ಸೈಕಲ್ ಕಂಪನಿಯು ಹೊಸ ವಾಹನಗಳ ಬೆಲೆ ಏರಿಕೆ ಮಾಡಿದೆ.

ಬಿಎಸ್-6 ಇನ್‌ಟ್ರುಡರ್ 150 ಬೈಕ್ ಬೆಲೆಯಲ್ಲಿ ಎರಡನೇ ಬಾರಿಗೆ ಹೆಚ್ಚಳ

ಸುಜುಕಿ ಮೋಟಾರ್‌ಸೈಕಲ್ ಕಂಪನಿಯು ಕೂಡಾ ಲಾಕ್‌ಡೌನ್ ಸಂಕಷ್ಟದಿಂದ ಭಾರೀ ಪ್ರಮಾಣದ ನಷ್ಟ ಅನುಭವಿಸಿದ್ದು, ಇದೀಗ ವಾಹನ ಉತ್ಪಾದನೆ ಮತ್ತು ಮಾರಾಟಕ್ಕೆ ಅವಕಾಶವಿದ್ದರೂ ಹೊಸ ವಾಹನಗಳ ಖರೀದಿ ಪ್ರಕ್ರಿಯೆಯು ಸಾಕಷ್ಟು ಇಳಿಕೆ ಕಂಡಿದೆ. ಹೀಗಿರುವಾಗ ಉತ್ಪಾದನಾ ವೆಚ್ಚ ಸರಿದೂಗಿಸಲು ಕೆಲವು ಕಠಿಣ ಕ್ರಮ ಪ್ರಕಟಿಸಿರುವ ಸುಜುಕಿ ಮೋಟಾರ್‌ಸೈಕಲ್ ಕಂಪನಿಯು ಪ್ರಮುಖ ದ್ವಿಚಕ್ರ ವಾಹನಗಳ ಬೆಲೆಯಲ್ಲಿ ಏರಿಕೆ ಮಾಡಿದೆ.

ಬಿಎಸ್-6 ಇನ್‌ಟ್ರುಡರ್ 150 ಬೈಕ್ ಬೆಲೆಯಲ್ಲಿ ಎರಡನೇ ಬಾರಿಗೆ ಹೆಚ್ಚಳ

ಹೊಸ ಬೆಲೆ ಪಟ್ಟಿಯಲ್ಲಿ ಇನ್‌ಟ್ರುಡರ್ 150 ಬೈಕ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ 1,22,141 ಬೆಲೆ ಹೊಂದಿದ್ದು, ಬಿಎಸ್-6 ಎಂಜಿನ್ ಉನ್ನತೀಕರಿಸಿದ ನಂತರದ ಇದು ಎರಡನೇ ಬಾರಿಗೆ ದರ ಹೆಚ್ಚಳ ಪಡೆದುಕೊಂಡಿದೆ.

ಬಿಎಸ್-6 ಇನ್‌ಟ್ರುಡರ್ 150 ಬೈಕ್ ಬೆಲೆಯಲ್ಲಿ ಎರಡನೇ ಬಾರಿಗೆ ಹೆಚ್ಚಳ

ಕಳೆದ ಏಪ್ರಿಲ್‌ನಲ್ಲಿ ಬಿಎಸ್-6 ಎಂಜಿನ್ ಪಡೆದುಕೊಂಡಾಗ ಎಕ್ಸ್‌ಶೋರೂಂ ಪ್ರಕಾರ ರೂ.1.20 ಲಕ್ಷ ಬೆಲೆ ಪಡೆದುಕೊಂಡಿದ್ದ ಇನ್‌ಟ್ರುಡರ್ ಬೈಕ್ ಮಾದರಿಯ ಬೆಲೆಯಲ್ಲಿ ಇದೀಗ ರೂ. 2,141 ಏರಿಕೆಯಾಗಿದೆ.

ಬಿಎಸ್-6 ಇನ್‌ಟ್ರುಡರ್ 150 ಬೈಕ್ ಬೆಲೆಯಲ್ಲಿ ಎರಡನೇ ಬಾರಿಗೆ ಹೆಚ್ಚಳ

ಬಿಎಸ್-6 ಎಂಜಿನ್ ನಂತರ ಇನ್‌ಟ್ರುಡರ್ 150 ಬೈಕ್ ಬೆಲೆಯಲ್ಲಿ ರೂ. 10 ಸಾವಿರದಿಂದ ರೂ.13 ಸಾವಿರದಷ್ಟು ಏರಿಕೆಯಾಗಿದ್ದು, ಬಿಎಸ್-4 ಮಾದರಿಗಿಂತ ಹೊಸ ಬೈಕ್ ಬೆಲೆಯಲ್ಲಿ ಒಟ್ಟು ರೂ.15 ಸಾವಿರದಷ್ಟು ಏರಿಕೆಯಾಗಿದೆ.

ಬಿಎಸ್-6 ಇನ್‌ಟ್ರುಡರ್ 150 ಬೈಕ್ ಬೆಲೆಯಲ್ಲಿ ಎರಡನೇ ಬಾರಿಗೆ ಹೆಚ್ಚಳ

ಇನ್ನು ಬಿಎಸ್-6 ಎಂಜಿನ್‌ನಿಂದಾಗಿ ಹೊಸ ಬೈಕ್ ಮಾಲಿನ್ಯ ಪ್ರಮಾಣದ ಗಣನೀಯ ಇಳಿಕೆಯಾಗಿರುವುದಲ್ಲದೆ ಮೈಲೇಜ್ ಪ್ರಮಾಣದಲ್ಲೂ ಹೆಚ್ಚಳವಾಗಿದೆ. ಆದರೆ ಹೊಸ ಬೈಕಿನ ಬೆಲೆಯಲ್ಲಿ ಗಣನೀಯ ಏರಿಕೆ ಮಾಡಿರುವುದು ಗ್ರಾಹಕರಿಗೆ ಹೊರೆಯಾಗಲಿದೆ.

ಬಿಎಸ್-6 ಇನ್‌ಟ್ರುಡರ್ 150 ಬೈಕ್ ಬೆಲೆಯಲ್ಲಿ ಎರಡನೇ ಬಾರಿಗೆ ಹೆಚ್ಚಳ

ಬಿಎಸ್ ವೈಶಿಷ್ಟ್ಯತೆಯ 154.9 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ಇನ್‌ಟ್ರುಡರ್ 150 ಬೈಕ್ ಮಾದರಿಯು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ 13-ಬಿಎಚ್‌ಪಿ ಮತ್ತು 13.8-ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಮೂಲಕ ಈ ಹಿಂದಿನ ಆವೃತ್ತಿಗಿಂತಲೂ ಶೇ.15 ರಷ್ಟು ಹೆಚ್ಚು ಇಂಧನ ಪಡೆದುಕೊಂಡಿದೆ. ಪರ್ಫಾಮೆನ್ಸ್ ವಿಚಾರದಲ್ಲಿ ಹೊಸ ಬೈಕ್‌ನಲ್ಲಿ ತುಸು ಇಳಿಕೆ ಮಾಡಲಾಗಿದ್ದು, ಎಂಜಿನ್ ಸಾಮಾರ್ಥ್ಯಕ್ಕೆ ತಕ್ಕಂತೆ ಹಾರ್ಸ್ ಪವರ್ ನಿಗದಿ ಮಾಡಲಾಗಿದೆ.

MOST READ: ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

ಬಿಎಸ್-6 ಇನ್‌ಟ್ರುಡರ್ 150 ಬೈಕ್ ಬೆಲೆಯಲ್ಲಿ ಎರಡನೇ ಬಾರಿಗೆ ಹೆಚ್ಚಳ

ಹಾಗೆಯೇ ಸುಜುಕಿ ಸಂಸ್ಥೆಯು ಬಿಎಸ್-6 ಎಂಜಿನ್ ಬೈಕ್ ಮಾದರಿಗಳಲ್ಲಿ ಸುಜುಕಿ ಇಕೋ ಪರ್ಫಾಮೆನ್ಸ್(ಎಸ್ಇಪಿ) ತಂತ್ರಜ್ಞಾನ ಬಳಕೆ ಮಾಡಿದ್ದು, ಪರ್ಫಾಮೆನ್ಸ್ ಸುಧಾರಣೆಯೊಂದಿಗೆ ಇಂಧನ ದಕ್ಷತೆ ಹೆಚ್ಚಿಸುವಲ್ಲಿ ಸಹಕರಿಸುತ್ತದೆ.

ಬಿಎಸ್-6 ಇನ್‌ಟ್ರುಡರ್ 150 ಬೈಕ್ ಬೆಲೆಯಲ್ಲಿ ಎರಡನೇ ಬಾರಿಗೆ ಹೆಚ್ಚಳ

ಇನ್ನುಳಿದಂತೆ ಹೊಸ ಬೈಕ್ ಮಾದರಿಯು ಈ ಹಿಂದಿನ ತಾಂತ್ರಿಕ ಸೌಲಭ್ಯಗಳನ್ನೇ ಪಡೆದುಕೊಂಡಿದ್ದು, ಎಂಟ್ರಿ ಲೆವಲ್ ಕ್ರೂಸರ್ ಬೈಕ್ ಮಾದರಿಗಳಲ್ಲೇ ಇದು ಅತ್ಯುತ್ತಮ ಆಯ್ಕೆಯಾಗಿರಲಿದೆ.

MOST READ: ದ್ವಿಚಕ್ರ ವಾಹನಗಳ ಖರೀದಿ ಮೇಲೆ ಹೊಸ ಲೋನ್ ಆಫರ್ ಘೋಷಿಸಿದ ಹೋಂಡಾ

ಬಿಎಸ್-6 ಇನ್‌ಟ್ರುಡರ್ 150 ಬೈಕ್ ಬೆಲೆಯಲ್ಲಿ ಎರಡನೇ ಬಾರಿಗೆ ಹೆಚ್ಚಳ

ಟ್ರಯಾಂಗಲ್ ಹೆಡ್‌ಲ್ಯಾಂಪ್ ಮತ್ತು ಇಂಧನ ಟ್ಯಾಂಕ್ ವಿಸ್ತರಣೆಗಳನ್ನು ಒಳಗೊಂಡಂತೆ ಎಂ1800ಆರ್ ಮೋಟಾರ್ ಸೈಕಲ್‌ನ ಎಲ್ಲಾ ಪ್ರಮುಖ ಡಿಸೈನ್‌ಗಳು ಹೊಸ ಇನ್‌ಟ್ರುಡರ್ 150 ಬೈಕ್ ಹೊಂದಿದ್ದು, ಮುಂಭಾಗದ ಇಂಡಿಕೇಟರ್‌ಗಳು ಚೂಪಾದ ವಿನ್ಯಾಸದೊಂದಿಗೆ ಹಿಂಬದಿಯ ನೋಟದ ಕನ್ನಡಿಗಳು ಕ್ರೋಮ್ ಲೇಪನ ಹೊಂದಿರುತ್ತವೆ.

Most Read Articles

Kannada
English summary
Suzuki Intruder Receives A Price Hike. Read in Kannada.
Story first published: Thursday, July 9, 2020, 20:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X