Just In
Don't Miss!
- Lifestyle
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ: ಇದರ ಅಪಾಯಗಳೇನು, ತಡೆಗಟ್ಟುವುದು ಹೇಗೆ?
- Sports
ಭಾರತೀಯರ ನಿಂದಿಸಿದ ಕಿಡಿಗೇಡಿಗಳ ಕಂಡುಹಿಡಿಯುವಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ವಿಫಲ
- News
ಶಶಿಕಲಾ ಈಗ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾಮಾನ್ಯ ರೋಗಿ
- Movies
ಎಸ್ಎಸ್ ರಾಜಮೌಳಿ ನಿರ್ಧಾರಕ್ಕೆ ಬೇಸರಗೊಂಡ ನಿರ್ಮಾಪಕ ಬೋನಿ ಕಪೂರ್
- Finance
ಹೊಸ ಸಾರ್ವಕಾಲಿಕ ದಾಖಲೆ ಬರೆದ ಪೆಟ್ರೋಲ್- ಡೀಸೆಲ್ ದರ; ಯಾವ ನಗರದಲ್ಲಿ ಎಷ್ಟು?
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
2020ರ ಅವಧಿಯಲ್ಲಿ ಬಿಡುಗಡೆಗೊಂಡ ಅತ್ಯುತ್ತಮ ಅಡ್ವೆಂಚರ್ ಬೈಕ್‌ಗಳಿವು..
ದೇಶಿಯ ಮಾರುಕಟ್ಟೆಯಲ್ಲಿ ಕಳೆದ ಐದು ವರ್ಷಗಳಿಂದ ಅಡ್ವೆಂಚರ್ ಬೈಕ್ ಮಾರಾಟವು ಸಾಕಷ್ಟು ಬೆಳವಣಿಗೆ ಸಾಧಿಸಿದ್ದು, ಹಲವಾರು ವಿದೇಶಿ ಬೈಕ್ ಮಾರಾಟ ಕಂಪನಿಗಳು ತಮ್ಮ ಜನಪ್ರಿಯ ಅಡ್ವೆಂಚರ್ ಮಾದರಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿವೆ.

2020ರ ಅವಧಿಯಲ್ಲೂ ಹಲವಾರು ಅಡ್ವೆಂಚರ್ ಬೈಕ್‌ಗಳು ಮಾರುಕಟ್ಟೆ ಪ್ರವೇಶಿಸಿದ್ದು, ಕರೋನಾ ವೈರಸ್ ಭೀತಿ ನಡುವೆಯೂ ಹೊಸ ಅಡ್ವೆಂಚರ್ ಬೈಕ್ ಮಾರಾಟವು ಸ್ಥಿರತೆ ಕಾಯ್ದುಕೊಂಡಿದೆ. ಆಫ್ ರೋಡ್ ಜೊತೆಗೆ ದೀರ್ಘಕಾಲದ ಬೈಕ್ ಸವಾರಿಗೆ ಸಹಕಾರಿಯಾಗಿರುವ ಅಡ್ವೆಂಚರ್ ಟೂರರ್ ಮಾದರಿಗಳಿಗೆ ಹೆಚ್ಚು ಬೇಡಿಕೆಯಿದ್ದು, 2020ರ ಅವಧಿಯಲ್ಲಿ ಮಾರುಕಟ್ಟೆ ಪ್ರವೇಶಿಸಿರುವ ಪ್ರಮುಖ ಅಡ್ವೆಂಚರ್ ಬೈಕ್ ಮಾದರಿಗಳ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಕೆಟಿಎಂ 250 ಅಡ್ವೆಂಚರ್
ಭಾರತದಲ್ಲಿ ತನ್ನ ಸರಣಿ ಬೈಕ್‌ಗಳ ಮಾರಾಟವನ್ನು ಹೆಚ್ಚಿಸುತ್ತಿರುವ ಕೆಟಿಎಂ ಕಂಪನಿಯು ಕಳೆದ ಎರಡು ವರ್ಷಗಳ ಅವಧಿಯಲ್ಲಿ ಐದು ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಿದ್ದು, ಹೊಸದಾಗಿ ಬಿಡುಗಡೆಯಾದ 250 ಅಡ್ವೆಂಚರ್ ಮಾದರಿಯು 390 ಅಡ್ವೆಂಚರ್ ಬೈಕಿನಲ್ಲಿರುವಂತಹ ಪ್ರಮುಖ ಅಂಶಗಳಾದ ವಿನ್ಯಾಸ, ಚಾಸಿಸ್ ಹಾಗೂ ಫ್ರೇಂಗಳನ್ನು ಎರವಲು ಪಡೆದುಕೊಂಡಿದೆ.

250 ಅಡ್ವೆಂಚರ್ ಬೈಕ್ ಮಾದರಿಯಲ್ಲಿ 249 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಜೋಡಣೆ ಮಾಡಲಾಗಿದ್ದು, ಹೊಸ ಎಂಜಿನ್ ಲಿಕ್ವಿಡ್ ಕೂಲ್ಡ್ ಮಾದರಿಯಾಗಿದೆ. ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 2.48 ಲಕ್ಷ ಬೆಲೆ ಹೊಂದಿದ್ದು, ಎಂಟ್ರಿ ಲೆವಲ್ ಅಡ್ವೆಂಚರ್ ಬೈಕ್ ಖರೀದಿದಾರರಿಗೆ ಅತ್ಯುತ್ತಮ ಆಯ್ಕೆಯಾಗಿದೆ.

ಬಿಎಂಡಬ್ಲ್ಯು ಜಿ310 ಜಿಎಸ್(ಬಿಎಸ್-6)
ಬಿಎಂಡಬ್ಲ್ಯು ಆರ್ 1250 ಜಿಎಸ್ ಮಾದರಿಗಳಿಂದ ಹಲವಾರು ಫೀಚರ್ಸ್‌ಗಳನ್ನು ಪಡೆದುಕೊಂಡಿರುವ ಜಿ310 ಜಿಎಸ್ ಅಡ್ವೆಂಚರ್ ಮಾದರಿಯು ಕಂಪನಿಯ ಎಂಟ್ರಿ ಲೆವಲ್ ಅಡ್ವೆಂಚರ್ ಆವೃತ್ತಿಯಾಗಿದ್ದು, 313 ಸಿಸಿ ಸಿಂಗಲ್-ಸಿಲಿಂಡರ್ ಲಿಕ್ವಿಡ್-ಕೂಲ್ಡ್ ಎಂಜಿನ್‌ನೊಂದಿಗೆ 34 ಬಿಹೆಚ್ಪಿ ಮತ್ತು 28 ಎನ್ಎಂ ಟಾರ್ಕ್‌ನೊಂದಿಗೆ ಉತ್ತಮ ಬೇಡಿಕೆ ಹೊಂದಿದೆ. 2018ರಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿದ್ದ ಜಿ310 ಜಿಎಸ್ ಮಾದರಿಯು ಇದೀಗ ಬಿಎಸ್-6 ಮಾದರಿಯೊಂದಿಗೆ ಮಾರಾಟವಾಗುತ್ತಿದ್ದು, ಹೊಸ ಬೈಕ್ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 2.85 ಲಕ್ಷ ಬೆಲೆ ಹೊಂದಿದೆ.

ಕೆಟಿಎಂ 390 ಅಡ್ವೆಂಚರ್
ಕೆಟಿಎಂ ಇಂಡಿಯಾ ಕಂಪನಿಯು ತನ್ನ ಬಹುನಿರೀಕ್ಷಿತ 390 ಅಡ್ವೆಂಚರ್ ಬೈಕ್ ಮಾದರಿಯನ್ನು ಈ ವರ್ಷದ ಆರಂಭದಲ್ಲೇ ಬಿಡುಗಡೆ ಮಾಡಿದೆ. 250 ಅಡ್ವೆಂಚರ್ ಮಾದರಿಗಿಂತಲೂ ಮೊದಲೇ ಬಿಡುಗಡೆಯಾಗಿರುವ 390 ಅಡ್ವೆಂಚರ್ ಮಾದರಿಯು 373.2 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಆಯ್ಕೆಯೊಂದಿಗೆ 43 ಬಿಹೆಚ್‍ಪಿ ಮತ್ತು 37 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

390 ಅಡ್ವೆಂಚರ್ ಬೈಕಿನಲ್ಲಿ 200ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 855ಎಂಎಂ ಸೀಟ್ ಎತ್ತರವನ್ನು ನೀಡಲಾಗಿದ್ದು, ಹೊಸ ಬೈಕ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 3.04 ಲಕ್ಷ ಬೆಲೆ ಹೊಂದಿದೆ.

ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬಿಎಸ್-6
ರಾಯಲ್ ಎನ್‌ಫೀಲ್ಡ್ ಕಂಪನಿಯು ಹಿಮಾಲಯನ್ ಅಡ್ವೆಂಚರ್-ಟೂರರ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ 2016ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಿತ್ತು. ತದನಂತರ ಹಲವಾರು ಬಾರಿ ಅಪ್‌ಡೇಟ್ ಮಾಡಲಾಗಿದ್ದು, ಕಳೆದ ಜುಲೈನಲ್ಲಿ ಬಿಎಸ್-6 ಎಂಜಿನ್‌ನೊಂದಿಗೆ ಉನ್ನತೀಕರಿಸಿದೆ. ಹೊಸ ಬೈಕ್ ಮಾದರಿಯು 411 ಸಿಸಿ ಸಿಂಗಲ್ ಸಿಲಿಂಡರ್ ಆಯಿಲ್-ಕೂಲ್ಡ್ ಎಂಜಿನ್ ಹೊಂದಿದ್ದು, ಹೊಸ ಬೈಕ್ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.1.91 ಲಕ್ಷದಿಂದ ರೂ.1.95 ಲಕ್ಷ ಬೆಲೆ ಹೊಂದಿದೆ.
MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಟ್ರಯಂಫ್ ಟೈಗರ್ 900
ಬ್ರಿಟಿಷ್ ದ್ವಿಚಕ್ರ ತಯಾರಕ ಕಂಪನಿಯಾದ ಟ್ರಯಂಫ್ ಮೋಟರ್‌ಸೈಕಲ್ ತನ್ನ ಹೊಸ ಟ್ರಯಂಫ್ ಟೈಗರ್ 900 ಅಡ್ವೆಂಚರ್ ಟೂರರ್ ಬೈಕ್ ಮಾದರಿಯನ್ನು ಕಳೆದ ಜೂನ್‌ನಲ್ಲಿ ದೇಶಿಯ ಮಾರುಕಟ್ಟೆಗೆ ಪರಿಚಯಿಸಿದ್ದು, ಹೊಸ ಟೈಗರ್ 900 ಬೈಕ್ ಮಾದರಿಯು 888 ಸಿಸಿ ಇನ್‍ಲೈನ್ 3 ಸಿಲಿಂಡರ್ ಎಂಜಿನ್‌ನೊಂದಿಗೆ ಜಿಟಿ, ರ‍್ಯಾಲಿ ಮತ್ತು ರೇಂಜ್ ಟಾಪಿಂಗ್ ರ‍್ಯಾಲಿ ಪ್ರೊ ಎಂಬ ಮೂರು ರೂಪಾಂತರಗಳಲ್ಲಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.13.70 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.15.50 ಲಕ್ಷ ಬೆಲೆ ಹೊಂದಿದೆ.

2020ರ ಹೋಂಡಾ ಆಫ್ರಿಕಾ ಟ್ವಿನ್
ಹೋಂಡಾ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು ತನ್ನ ಹೊಸ ಆಫ್ರಿಕಾ ಟ್ವಿನ್ ಬೈಕ್ ಮಾದರಿಯನ್ನು ಈ ವರ್ಷದ ಆರಂಭದಲ್ಲಿ ಬಿಡುಗಡೆ ಮಾಡಿತ್ತು. 1,084ಸಿಸಿ ಎಂಜಿನ್‌ನೊಂದಿಗೆ ಎಕ್ಸ್ ಶೋರೂಂ ಪ್ರಕಾರ ಹೊಸ ಅಡ್ವೆಂಚರ್ ಬೈಕ್ ಮಾದರಿಯು ಆರಂಭಿಕವಾಗಿ ರೂ.15.35 ಲಕ್ಷ ಬೆಲೆ ಹೊಂದಿದೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

2020ರ ಡುಕಾಟಿ ಮಲ್ಟಿಸ್ಟ್ರಾಡಾ 950ಎಸ್
ಡುಕಾಟಿ ಕಂಪನಿಯು ತನ್ನ ಬಹುನಿರೀಕ್ಷಿತ 2020ರ ಮಲ್ಟಿಸ್ಟ್ರಾಡಾ 950 ಎಸ್ ಅಡ್ವೆಂಚರ್-ಟೂರರ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. 2020ರ ಡುಕಾಟಿ ಮಲ್ಟಿಸ್ಟ್ರಾಡಾ 950 ಎಸ್ ಬೈಕ್ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.15.49 ಲಕ್ಷ ಬೆಲೆ ಹೊಂದಿದ್ದು, ಹೊಸ ಬೈಕಿನಲ್ಲಿ 937 ಸಿಸಿ, ಟ್ವಿನ್-ಸಿಲಿಂಡರ್, ಟೆಸ್ಟಾಸ್ಟ್ರೆಟಾ 11 ಎಂಜಿನ್‌ನೊಂದಿಗೆ 112 ಬಿಹೆಚ್ಪಿ ಮತ್ತು 96 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.