Just In
Don't Miss!
- Sports
ಆಸಿಸ್ ಬೌಲರ್ಗಳಿಗೆ ಪಾಂಟಿಂಗ್ ಚಾಟಿ: ಶಾರ್ದೂಲ್- ಸುಂದರ್ ಆಟಕ್ಕೆ ಮೆಚ್ಚುಗೆ
- Finance
ಪ್ರತಿ ಲೀಟರ್ ಪೆಟ್ರೋಲ್- ಡೀಸೆಲ್ ಗೆ ನೀವು ನೀಡುವ ಬೆಲೆಯಲ್ಲಿ 48% ಕೇಂದ್ರದ ಸುಂಕ
- News
ಕರ್ನಾಟಕ ಆಕ್ರಮಿತ ಪ್ರದೇಶ ಶೀಘ್ರ ಮಹಾರಾಷ್ಟ್ರಕ್ಕೆ ಸೇರ್ಪಡೆ: ಉದ್ಧವ್ ಠಾಕ್ರೆ
- Movies
ಶಿವಮೊಗ್ಗದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್: 'ಬೆಸ್ಟ್ ವೀಕೆಂಡ್ ಎವರ್' ಎಂದ ನಟಿ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದುಬಾರಿಯಾಗಲಿದೆ ಹೊಸ ಟ್ರಯಂಫ್ ಬೊನೆವೆಲ್ಲಿ ಬೈಕುಗಳು
ಟ್ರಯಂಫ್ ಕಂಪನಿಯು ತನ್ನ ಬೊನೆವೆಲ್ಲಿ ಸರಣಿಯಲ್ಲಿರುವ ಎಲ್ಲಾ ಬೈಕುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಬೊನೆವೆಲ್ಲಿ ಸರಣಿಯ ಬೈಕುಗಳು ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗುತ್ತಿವೆ.

ಟ್ರಯಂಫ್ ಬೊನೆವೆಲ್ಲಿ ಸರಣಿಯಲ್ಲಿ ಸ್ಟ್ರೀಟ್ ಟ್ವಿನ್, ಬೊನೆವೆಲ್ಲಿ ಟಿ100 ಮತ್ತು ಬೊನೆವಿಲ್ಲೆ ಟಿ120 ಮತ್ತು ಬೊನೆವೆಲ್ಲಿ ಸ್ಪೀಡ್ ಮಾಸ್ಟರ್ ಬೈಕುಗಳನ್ನು ಒಳಗೊಂಡಿದೆ. ಈ ಬೈಕುಗಳನ್ನು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಲಾಗಿದೆ. ಕೆಲವು ವರದಿಗಳ ಪ್ರಕಾರ ಟ್ರಯಂಫ್ ಕಂಪನಿಯು ಬೊನೆವೆಲ್ಲಿ ಸರಣಿಯಲ್ಲಿರುವ ಬೈಕುಗಳ ಬೆಲೆಯನ್ನು ಹೆಚ್ಚಿಸಲಿದೆ. ಈ ಜುಲೈ ತಿಂಗಳಲ್ಲಿ ಈ ಬೈಕುಗಳ ಬೆಲೆಯನ್ನು ಏರಿಕೆ ಮಾಡಬೇಕಾಗಿತ್ತು. ಆದರೆ ಕರೋನಾ ಸೋಂಕಿನ ಭೀತಿಯಿಂದ ಮುಂದೂಡಲ್ಪಟ್ಟಿತು. ಆದರೆ ಮುಂದಿನ ತಿಂಗಳಲ್ಲಿ ಟ್ರಯಂಫ್ ಕಂಪನಿಯು ಬೊನೆವೆಲ್ಲಿ ಸರಣಿಯ ಎಲ್ಲಾ ಬೈಕುಗಳ ಬೆಲೆಯನ್ನು ಹೆಚ್ಚಿಸಬಹುದು.

ಟ್ರಯಂಫ್ ಕಂಪನಿಯು ಬೊನೆವೆಲ್ಲಿ ಟಿ100 ಮತ್ತು ಬೊನೆವಿಲ್ಲೆ ಟಿ120 ಬ್ಲ್ಯಾಕ್-ಎಡಿಷನ್ ಎಂಬ ಎರಡು ಮಾದರಿಗಳನ್ನು ಬಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಟ್ರಯಂಫ್ ಬೊನೆವೆಲ್ಲಿ ಟಿ100 ಬ್ಲ್ಯಾಕ್ ಮತ್ತು ಬೊನೆವಿಲ್ಲೆ ಟಿ120 ಬ್ಲ್ಯಾಕ್ ಎಡಿಷನ್ ಬೈಕುಗಳ ಬೆಲೆಯು ಕ್ರಮವಾಗಿ ಭಾರತೀಯ ಎಕ್ಸ್ ಶೋರೂಂ ಪ್ರಕಾರ ರೂ. 8.87 ಲಕ್ಷ ಮತ್ತು ರೂ.9.97 ಲಕ್ಷಗಳಾಗಿದೆ.
MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಎರಡು ಬೈಕುಗಳಲ್ಲಿ ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದೆ. ಎರಡು ಬೈಕುಗಳು ಆಧುನಿಕ ಕ್ಲಾಸಿಕ್ ಲುಕ್ ಅನ್ನು ಹೊಂದಿದೆ. ಟ್ರಯಂಫ್ ಕಂಪನಿಯು ತನ್ನ ಬೊನೆವಿಲ್ಲೆ ಸರಣಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ವಿಸ್ತರಿಸುತ್ತಿವೆ.

ಟ್ರಯಂಫ್ ಬೊನೆವೆಲ್ಲಿ ಟಿ100 ಬ್ಲ್ಯಾಕ್ ಮತ್ತು ಬೊನೆವಿಲ್ಲೆ ಟಿ120 ಬ್ಲ್ಯಾಕ್ ಬೈಕುಗಳಲ್ಲಿ ಕ್ರೋಮ್ ಅಂಶಗಳನ್ನು ಕಡಿಮೆಗೊಳಿಸಿ ಹಲವಾರು ಕಪ್ಪು ಎಲಿಮೆಂಟ್ ಅಂಶಗಳನ್ನು ಹೊಂದಿದೆ. ಈ ಎರಡು ಬೈಕುಗಳಲ್ಲಿ ಬ್ಲ್ಯಾಕ್ ಔಟ್ ವ್ಹೀಲ್, ಎಂಜಿನ್ ಕವರ್, ಮಿರರ್ ಮತ್ತು ಎಕ್ಸಾಸ್ಟ್ ಗಳನ್ನು ಒಳಗೊಂಡಿದೆ.
MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ಹೊಸ ಟ್ರಯಂಫ್ ಬೊನೆವಿಲ್ಲೆ ಟಿ100 ಬ್ಲ್ಯಾಕ್ ಮತ್ತು ಬೊನೆವಿಲ್ಲೆ ಟಿ120 ಬ್ಲ್ಯಾಕ್ ಮಾದರಿಗಳು ಕೇವಲ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಇನ್ನು ಈ ಬ್ಲ್ಯಾಕ್ ಮಾದರಿಗಳು ಆಕರ್ಷಕ ಲುಕ್ ಅನ್ನು ಹೊಂದಿದೆ.

ಹೊಸ ಟ್ರಯಂಫ್ ಬೊನೆವಿಲೆ ಟಿ100 ಬ್ಲ್ಯಾಕ್ ಎಡಿಷನ್ ಮಾದರಿಯು 900 ಸಿಸಿ ಪ್ಯಾರೆಲಲ್ ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 5400 ಆರ್‌ಪಿಎಂನಲ್ಲಿ 54 ಬಿಹೆಚ್‌ಪಿ ಪವರ್ ಮತ್ತು 3230 ಆರ್‌ಪಿಎಂನಲ್ಲಿ 84 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ಇದು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲ್ಪಟ್ಟಿದೆ.
MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಇನ್ನು ಹೊಸ ಟ್ರಯಂಫ್ ಬೊನೆವಿಲ್ಲೆ ಟಿ120 ಬ್ಲ್ಯಾಕ್ ಎಡಿಷನ್ ಮಾದರಿಯಲ್ಲಿ 1,200 ಸಿಸಿ ಪ್ಯಾರೆಲಲ್ ಟ್ವಿನ್ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 6550 ಆರ್‌ಪಿಎಂನಲ್ಲಿ 79 ಬಿಹೆಚ್‌ಪಿ ಪವರ್ ಮತ್ತು 3100 ಆರ್‌ಪಿಎಂನಲ್ಲಿ 105 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಈ ಎರಡು ಹೊಸ ಬೈಕುಗಳಲ್ಲಿ ಹಲವಾರು ಫೀಚರ್ಸ್ ಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್, ರೈಡ್-ಬೈ-ವೈರ್, ಡ್ಯುಯಲ್-ಚಾನೆಲ್ ಎಬಿಎಸ್, ಟ್ರ್ಯಾಕ್ಷನ್ ಕಂಟ್ರೋಲ್, ಮಲ್ಟಿಪಲ್ ರೈಡಿಂಗ್ ಮೋಡ್‌ಗಳು, ಕ್ಲಾಸಿಕ್ ಟ್ವಿನ್-ಪಾಡ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಎಂಜಿನ್ ಇಮೊಬೈಲೈಸರ್ ಒಳಗೊಂಡಿದೆ.