450ಎಕ್ಸ್ ಮಾದರಿಯ ಕನೆಕ್ಟೆಡ್ ಫೀಚರ್ಸ್ ಉನ್ನತೀಕರಿಸಿದ ಎಥರ್ ಎನರ್ಜಿ

ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಎಥರ್ ಎನರ್ಜಿ ಕಂಪನಿಯು ತನ್ನ ಸ್ಕೂಟರ್ ಉತ್ಪನ್ನಗಳನ್ನು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಉನ್ನತೀಕರಿಸುತ್ತಿದ್ದು, ಇದೀಗ ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಪರಿಚಯಿಸಲಾಗಿರುವ ಕನೆಕ್ಟೆಡ್ ಫೀಚರ್ಸ್ ಅನ್ನು ಉನ್ನತೀಕರಿಸಿದೆ.

450ಎಕ್ಸ್ ಮಾದರಿಯ ಕನೆಕ್ಟೆಡ್ ಫೀಚರ್ಸ್ ಉನ್ನತೀಕರಿಸಿದ ಎಥರ್ ಎನರ್ಜಿ

ಎಥರ್ ಕಂಪನಿಯು ತನ್ನ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಸ್ಟ್ಯಾಂಡರ್ಡ್ ಆಗಿ ಕನೆಕ್ಟೆಡ್ ಫೀಚರ್ಸ್‍ಗಳನ್ನು ಜೋಡಿಸುತ್ತಿದ್ದು, ಹೊಸ ಫೀಚರ್ಸ್ ಬಿಡುಗಡೆಯ ನಂತರ ಹಲವಾರು ಬಾರಿ ಉನ್ನತೀಕರಿಸಲಾಗಿದೆ. ಕನೆಕ್ಟೆಡ್ ಫೀಚರ್ಸ್‌ಗಳನ್ನು ಸ್ಕೂಟರ್ ಸವಾರರು ಮೊಬೈಲ್ ಅಪ್ಲಿಕೇಷನ್ ಮೂಲಕವೇ ಬಹುತೇಕ ತಾಂತ್ರಿಕ ಅಂಶಗಳನ್ನು ನಿಯಂತ್ರಣ ಮಾಡಬಹುದಾಗಿದ್ದು, ಬಳಕೆದಾರರ ಸಲಹೆ ಮೇರೆಗೆ ಕನೆಕ್ಟೆಡ್ ಫೀಚರ್ಸ್ ಅಪ್ಲಿಕೇಷನ್‌ನಲ್ಲಿ ಕೆಲವು ಬದಲಾವಣೆ ತರಲಾಗಿದೆ.

450ಎಕ್ಸ್ ಮಾದರಿಯ ಕನೆಕ್ಟೆಡ್ ಫೀಚರ್ಸ್ ಉನ್ನತೀಕರಿಸಿದ ಎಥರ್ ಎನರ್ಜಿ

ಆಂಡ್ರಾಯ್ಡ್ ಮತ್ತು ಐಒಎಸ್‌ ಬಳಕೆದಾರರಿಗಾಗಿ ಪ್ರತ್ಯೇಕ ಅಪ್ಲಿಕೇಷನ್ ಅಭಿವೃದ್ದಿಗೊಳಿಸಿರುವ ಎಥರ್ ಎನರ್ಜಿ ಕಂಪನಿಯು ಇದೀಗ ಅಪ್ಲಿಕೇಷನ್‌ನಲ್ಲಿ ಬ್ಲೂಟೂಥ್ ಸರ್ಪೊಟ್‌ನೊಂದಿಗೆ ರೈಡರ್‌ಗಳು ಕರೆ ಸ್ವಿಕಾರ ಮತ್ತು ಸಂಗೀತವನ್ನು ಆಸ್ವಾದಿಸಬಹುದಾಗಿದೆ.

450ಎಕ್ಸ್ ಮಾದರಿಯ ಕನೆಕ್ಟೆಡ್ ಫೀಚರ್ಸ್ ಉನ್ನತೀಕರಿಸಿದ ಎಥರ್ ಎನರ್ಜಿ

ಸಂಗೀತ ಆಸ್ವಾದಿಸುವಾದ ಕರೆ ಸ್ವಿಕಾರಕ್ಕೆ ಮತ್ತು ಕರೆ ಸ್ಥಗಿತಗೊಳಿಸಲು ಸರಳ ಆಯ್ಕೆಗಳನ್ನು ನೀಡಿದ್ದು, ಇನ್ ಬಿಲ್ಟ್ ಗೂಗಲ್ ಮ್ಯಾಪ್ ಮೂಲಕ ಸ್ಕೂಟರ್ ಸವಾರರಿಗೆ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸಿದೆ.

450ಎಕ್ಸ್ ಮಾದರಿಯ ಕನೆಕ್ಟೆಡ್ ಫೀಚರ್ಸ್ ಉನ್ನತೀಕರಿಸಿದ ಎಥರ್ ಎನರ್ಜಿ

ಹೊಸ ಸ್ಕೂಟರ್‌ನಲ್ಲಿ ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ವೈಶಿಷ್ಟ್ಯತೆಯನ್ನು 450ಎಕ್ಸ್‌ ಮಾದರಿಗೆ ಸೇರ್ಪಡಿಸುವ ಯೋಜನೆ ನಡೆಯುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಎಥರ್ ಕಂಪನಿಯು ಇದುವರೆಗೆ ಸುಮಾರು 13 ಬಾರಿಗೆ ಕನೆಕ್ಟೆಡ್ ಫೀಚರ್ಸ್ ಯುನಿಟ್ ಅನ್ನು ಅಪ್‌ಡೇಟ್ ಮಾಡಿದೆ.

450ಎಕ್ಸ್ ಮಾದರಿಯ ಕನೆಕ್ಟೆಡ್ ಫೀಚರ್ಸ್ ಉನ್ನತೀಕರಿಸಿದ ಎಥರ್ ಎನರ್ಜಿ

ಇನ್ನು ದೇಶದ ಪ್ರಮುಖ 11 ನಗರಳಲ್ಲಿ ಇವಿ ಸ್ಕೂಟರ್ ಮಾರಾಟ ಆರಂಭಿಸಿರುವ ಎಥರ್ ಎನರ್ಜಿ ಕಂಪನಿಯು 2021ರ ಅಂತ್ಯಕ್ಕೆ ಒಟ್ಟು 15 ರಾಜ್ಯಗಳ 27 ನಗರಗಳಲ್ಲಿ ಮಾರಾಟ ಸೌಲಭ್ಯ ಹೊಂದಿರುವುದಾಗಿ ಭರವಸೆ ನೀಡಿದ್ದು, ತಮಿಳುನಾಡಿನ ಹೊಸೂರಿನಲ್ಲಿ ನಿರ್ಮಾಣವಾಗಿರುವ ಹೊಸ ಉತ್ಪಾದನಾ ಘಟಕದ ಮೂಲಕ ಇವಿ ಸ್ಕೂಟರ್ ಉತ್ಪಾದನೆಯನ್ನು ತೀವ್ರಗೊಳಿಸಿದೆ.

450ಎಕ್ಸ್ ಮಾದರಿಯ ಕನೆಕ್ಟೆಡ್ ಫೀಚರ್ಸ್ ಉನ್ನತೀಕರಿಸಿದ ಎಥರ್ ಎನರ್ಜಿ

ಎಥರ್ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ 450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, 450ಎಕ್ಸ್ ಮಾದರಿಯು 450 ಪ್ಲಸ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್ ಮತ್ತು ಅಧಿಕ ಮೈಲೇಜ್ ಪಡೆದುಕೊಂಡಿದೆ.

450ಎಕ್ಸ್ ಮಾದರಿಯ ಕನೆಕ್ಟೆಡ್ ಫೀಚರ್ಸ್ ಉನ್ನತೀಕರಿಸಿದ ಎಥರ್ ಎನರ್ಜಿ

ಸ್ಟ್ಯಾಂಡರ್ಡ್ 450 ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಮಾರಾಟದಿಂದ ಸ್ಥಗಿತಗೊಳಿಸಿರುವ ಎಥರ್ ಕಂಪನಿಯು 450 ಪ್ಲಸ್ ಮತ್ತು 450ಎಕ್ಸ್ ಮಾದರಿಯ ಮೇಲೆ ಹೆಚ್ಚು ಗಮನಹರಿಸಿದ್ದು, 450ಎಕ್ಸ್ ಸೀರಿಸ್ 1 ಸ್ಕೂಟರ್ ಮಾದರಿಯು ಸ್ಪೆಷಲ್ ಎಡಿಷನ್ ಆಗಿ ಮಾರಾಟಗೊಳ್ಳುತ್ತಿದೆ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

450ಎಕ್ಸ್ ಮಾದರಿಯ ಕನೆಕ್ಟೆಡ್ ಫೀಚರ್ಸ್ ಉನ್ನತೀಕರಿಸಿದ ಎಥರ್ ಎನರ್ಜಿ

450ಎಕ್ಸ್ ಸ್ಕೂಟರ್ ಮಾದರಿಯು ಬೆಂಗಳೂರು ಎಕ್ಸ್‌ಶೋರೂಂ ಪ್ರಕಾರ ರೂ. 1.59 ಲಕ್ಷ ಬೆಲೆ ಹೊಂದಿದ್ದು, ಬಣ್ಣದ ಆಯ್ಕೆ ಹೊರತುಪಡಿಸಿ ಸ್ಟ್ಯಾಂಡರ್ಡ್ ಮಾದರಿಯಾದ 450ಎಕ್ಸ್ ಮಾದರಿಯಲ್ಲೇ ಸ್ಪೆಷಲ್ ಎಡಿಷನ್ ಕೂಡಾ ಒಂದೇ ಮಾದರಿಯ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದೆ.

450ಎಕ್ಸ್ ಮಾದರಿಯ ಕನೆಕ್ಟೆಡ್ ಫೀಚರ್ಸ್ ಉನ್ನತೀಕರಿಸಿದ ಎಥರ್ ಎನರ್ಜಿ

ಸ್ಟ್ಯಾಂಡರ್ಡ್ 450 ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಪ್ಲಸ್ ಮತ್ತು ಪ್ರೊ ಎನ್ನುವ ಎರಡು ಪ್ರಮುಖ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಗ್ರೇ, ವೈಟ್ ಮತ್ತು ಗ್ರೀನ್ ಬಣ್ಣಗಳ ಆಯ್ಕೆ ಹೊಂದಿದೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

450ಎಕ್ಸ್ ಮಾದರಿಯ ಕನೆಕ್ಟೆಡ್ ಫೀಚರ್ಸ್ ಉನ್ನತೀಕರಿಸಿದ ಎಥರ್ ಎನರ್ಜಿ

2.9kWh ಬ್ಯಾಟರಿ ಪ್ಯಾಕ್ ಹೊಂದಿರುವ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಗರಿಷ್ಠ 6kW ಬ್ಯಾಟರಿ ಬ್ಯಾಟರಿ ಪ್ಯಾಕ್‌ನೊಂದಿಗೆ 26 ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಮೂಲಕ ಪ್ರತಿ ಚಾರ್ಜ್‌ಗೆ ಗರಿಷ್ಠ 85 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

Most Read Articles

Kannada
English summary
Ather 450X gets 13th OTA update receives new bluetooth calling and music streaming feature. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X