Just In
Don't Miss!
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿಫಲ ಹೇಗಿದೆ?
- News
ದೆಹಲಿ ಸರ್ಕಾರ ಹೇಳಿದ್ದಕ್ಕಿಂತ ಹೆಚ್ಚು ಕೊರೊನಾ ಸೋಂಕಿತರು ಸಾವು: ಮೇಯರ್
- Sports
ಸತತ ಮೂರನೇ ಸೋಲಿಗೆ ಬೇಸತ್ತ ಡೇವಿಡ್ ವಾರ್ನರ್ ಹೇಳಿದ್ದೇನು?
- Finance
UMANG APP: ಇಪಿಎಫ್ಗೆ ಸಂಬಂಧಿಸಿದ ಆ್ಯಪ್, ವೈಶಿಷ್ಟ್ಯಗಳೇನು ತಿಳಿಯಿರಿ
- Movies
ಜಾಕಿ ಚಾನ್ ತಮ್ಮ ಮಗನಿಗೆ ಸಾವಿರಾರು ಕೋಟಿ ಆಸ್ತಿಯನ್ನು ಕೊಡುತ್ತಿಲ್ಲವೇಕೆ?
- Education
Ninasam Diploma Admission 2020-21: ಮೇ ತಿಂಗಳಲ್ಲಿ ನೀನಾಸಂ ಡಿಪ್ಲೋಮಾ ಪ್ರವೇಶಾತಿ ಆರಂಭ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ತಾಂತ್ರಿಕ ಕಾರಣಗಳಿಂದ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆಯನ್ನು ತಾತ್ಕಾಲಿಕವಾಗಿ ಮುಂದೂಡಿದ ಎಥರ್ ಎನರ್ಜಿ
ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟವನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಫೇಮ್ 2 ಸಬ್ಸಡಿ ಯೋಜನೆ ಮೂಲಕ ಇವಿ ವಾಹನಗಳನ್ನು ಬಳಕೆಯನ್ನು ಹೆಚ್ಚಿಸುತ್ತಿದ್ದು, ಫೇಮ್ 2 ಯೋಜನೆ ಅಡಿ ವಿತರಣೆ ಮಾಡುವ ಸಬ್ಸಡಿ ಹಂಚಿಕೆಯಲ್ಲಿ ತಾಂತ್ರಿಕ ಗೊಂದಲ ಉಂಟಾಗಿರುವ ಹಿನ್ನಲೆಯಲ್ಲಿ ಎಥರ್ ಇವಿ ಸ್ಕೂಟರ್ ವಿತರಣೆಯ ಮೇಲೆ ಪರಿಣಾಮ ಬೀರಿದೆ.

ಸದ್ಯಕ್ಕೆ ಕರ್ನಾಟಕದಲ್ಲಿ ಫೇಮ್ 2 ಯೋಜನೆ ಅಡಿ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಕೇಂದ್ರ ಸಾರಿಗೆ ಇಲಾಖೆಯೊಂದಿಗೆ ಜೊತೆಗೂಡಿ ಒನ್ ಟೈಮ್ ಪಾಸ್‌ವರ್ಡ್ ಸಿಸ್ಟಂ ಸರಳಗೊಳಿಸುತ್ತಿರುವ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರೈ) ಕಂಪನಿಯು ಹೊಸ ವಿಧಾನ ಅಳವಡಿಸಿಕೊಡಿಸಿಕೊಳ್ಳುತ್ತಿರುವುದರಿಂದ ಎಲೆಕ್ಟ್ರಿಕ್ ವಾಹನಗಳ ವಿತರಣೆ ಪ್ರಕ್ರಿಯೆಯಲ್ಲಿ ತುಸು ವಿಳಂಬವಾಗುತ್ತಿದೆ.

ಪ್ರೀಮಿಯಂ ಸ್ಕೂಟರ್ ಮಾರಾಟದಲ್ಲಿ ಸದ್ಯ ಮುಂಚೂಣಿ ಸಾಧಿಸುತ್ತಿರುವ ಎಥರ್ ಎನರ್ಜಿ ಕಂಪನಿಯು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಇವಿ ಸ್ಕೂಟರ್ ಮಾರಾಟ ಜಾಲ ಹೊಂದಿದ್ದು, ಹೊಸ ಉತ್ಪಾದನಾ ಘಟಕ ನಿರ್ಮಾಣದ ನಂತರ ವಿತರಣೆ ಪ್ರಕ್ರಿಯೆಯನ್ನು ತೀವ್ರಗೊಳಿಸುತ್ತಿದೆ. ಆದರೆ ಬೆಂಗಳೂರಿನಲ್ಲಿರುವ ಎಥರ್ ಮಾರಾಟಗಾರು ಟ್ರೈ ಕಂಪನಿಯ ತಾಂತ್ರಿಕ ಕಾರಣಗಳಿಂದಾಗಿ ಇವಿ ಸ್ಕೂಟರ್ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಪರಿಸ್ಥಿತಿ ಎದುರಾಗಿದೆ.

ಹಂತ-ಹಂತವಾಗಿ ವಿವಿಧ ರಾಜ್ಯಗಳಲ್ಲಿನ ಫೇಮ್ 2 ಸಬ್ಸಡಿ ಯೋಜನೆಯ ಒನ್ ಟೈಮ್ ಪಾಸ್‌ವರ್ಡ್ ಸಿಸ್ಟಂ ಸರಳಗೊಳಿಸುತ್ತಿರುವ ಟ್ರೈ ಕಂಪನಿಯು ಸದ್ಯ ಕರ್ನಾಟಕದಲ್ಲಿ ಹೊಸ ಸೌಲಭ್ಯವನ್ನು ಜಾರಿಗೆ ತರುತ್ತಿದ್ದು, ಹೊಸ ವಿಧಾನ ಅಳಡಿಕೆಯ ತನಕ ಹೊಸ ಇವಿ ಸ್ಕೂಟರ್‌ಗಳ ವಿತರಣೆಯನ್ನು ಎಥರ್ ಎನರ್ಜಿ ಕಂಪನಿಯು ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಿದೆ.

ಹೊಸದಾಗಿ ಅಪ್‌ಡೇಟ್ ಮಾಡಲಾಗುತ್ತಿರುವ ಒನ್ ಟೈಮ್ ಪಾಸ್‌ವರ್ಡ್ ವಿಧಾನದ ಕುರಿತು ಎಥರ್ ಕಂಪನಿಯೇ ಮಾಹಿತಿ ಹಂಚಿಕೊಂಡಿದ್ದು, ಹೊಸ ಸ್ಕೂಟರ್ ವಿತರಣೆಯನ್ನು ಶೀಘ್ರದಲ್ಲೇ ಪುನಾರಂಭಿಸುವ ಭರವಸೆ ನೀಡಿದೆ. ಫೇಮ್ 2 ಯೋಜನೆಯಡಿ ಸಬ್ಸಡಿ ಪಡೆದುಕೊಳ್ಳಲು ಸಾರಿಗೆ ಇಲಾಖೆಯಿಂದ ಗ್ರಾಹಕರಿಗೆ ಒನ್ ಟೈಮ್ ಪಾಸ್‌ವರ್ಡ್ ಅವಶ್ಯವಾಗಿದ್ದು, ಶೀಘ್ರದಲ್ಲೇ ಹೊಸ ವಿಧಾನ ಅಳಡಿಕೆಯೊಂದಿಗೆ ಗ್ರಾಹಕರಿಗೆ ಹೊಸ ಇವಿ ವಾಹನಗಳ ವಿತರಣೆಯು ಪುನಾರಂಭವಾಗಲಿದೆ.

ಟ್ರೈ ತಾಂತ್ರಿಕ ಕಾರಣಗಳಿಂದ ಎಲೆಕ್ಟ್ರಿಕ್ ವಾಹನಗಳ ವಿತರಣೆಯಲ್ಲಿ ಮಾತ್ರವೇ ವಿಳಂಬವಾಗಿದ್ದು, ಹೊಸ ಎಲೆಕ್ಟ್ರಿಕ್ ವಾಹನಗಳ ಖರೀದಿ ಮತ್ತು ಗ್ರಾಹಕರ ಸೇವೆಗಳಲ್ಲಿ ಯಾವುದೇ ರೀತಿಯ ಬದಲಾವಣೆಗಳಾಗಿಲ್ಲ.

ಇನ್ನು ದೇಶದ ಪ್ರಮುಖ 11 ನಗರಗಳಲ್ಲಿ ಮಾರಾಟ ಮಳಿಗೆ ಆರಂಭಿಸಿರುವ ಎಥರ್ ಕಂಪನಿಯು ಈ ವರ್ಷಾಂತ್ಯಕ್ಕೆ ಒಟ್ಟು 15 ರಾಜ್ಯಗಳ 27 ನಗರಗಳಲ್ಲಿ ಹೊಸ ವಾಹನ ಮಾರಾಟ ಸೌಲಭ್ಯ ತೆರೆಯುವ ಸಿದ್ದತೆಯಲ್ಲಿದ್ದು, ಹೊಸ ಉತ್ಪಾದನಾ ಘಟಕದೊಂದಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುವ ವಿಶ್ವಾಸದಲ್ಲಿದೆ.

ಎಥರ್ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ 450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, 450ಎಕ್ಸ್ ಮಾದರಿಯು 450 ಪ್ಲಸ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್ ಮತ್ತು ಅಧಿಕ ಮೈಲೇಜ್ ಪಡೆದುಕೊಂಡಿದೆ.
MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಸ್ಟ್ಯಾಂಡರ್ಡ್ 450 ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಮಾರಾಟದಿಂದ ಸ್ಥಗಿತಗೊಳಿಸಿರುವ ಎಥರ್ ಕಂಪನಿಯು 450 ಪ್ಲಸ್ ಮತ್ತು 450ಎಕ್ಸ್ ಮಾದರಿಯ ಮೇಲೆ ಹೆಚ್ಚು ಗಮನಹರಿಸಿದ್ದು, 450ಎಕ್ಸ್ ಸೀರಿಸ್ 1 ಸ್ಕೂಟರ್ ಮಾದರಿಯು ಸ್ಪೆಷಲ್ ಎಡಿಷನ್ ಆಗಿ ಮಾರಾಟಗೊಳ್ಳುತ್ತಿದೆ.

450ಎಕ್ಸ್ ಸ್ಕೂಟರ್ ಮಾದರಿಯು ಬೆಂಗಳೂರು ಎಕ್ಸ್‌ಶೋರೂಂ ಪ್ರಕಾರ ರೂ. 1.59 ಲಕ್ಷ ಬೆಲೆ ಹೊಂದಿದ್ದು, ಬಣ್ಣದ ಆಯ್ಕೆ ಹೊರತುಪಡಿಸಿ ಸ್ಟ್ಯಾಂಡರ್ಡ್ ಮಾದರಿಯಾದ 450ಎಕ್ಸ್ ಮಾದರಿಯಲ್ಲೇ ಸ್ಪೆಷಲ್ ಎಡಿಷನ್ ಕೂಡಾ ಒಂದೇ ಮಾದರಿಯ ತಾಂತ್ರಿಕ ಸೌಲಭ್ಯಗಳನ್ನು ಹೊಂದಿದೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಸ್ಟ್ಯಾಂಡರ್ಡ್ 450 ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಪ್ಲಸ್ ಮತ್ತು ಪ್ರೊ ಎನ್ನುವ ಎರಡು ಪ್ರಮುಖ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಗ್ರೇ, ವೈಟ್ ಮತ್ತು ಗ್ರೀನ್ ಬಣ್ಣಗಳ ಆಯ್ಕೆ ಹೊಂದಿದೆ.