Just In
- 1 hr ago
ಕಾರುಗಳ ರಫ್ತಿನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ಸುಜುಕಿ
- 3 hrs ago
ವಾರದ ಪ್ರಮುಖ ಸುದ್ದಿ: ಹೊಸ ಸಫಾರಿ ಬಿಡುಗಡೆ, ಟೋಲ್ ಸಂಗ್ರಹ ಹೆಚ್ಚಳ, ಇಳಿಕೆಯಾಗುತ್ತಾ ಪೆಟ್ರೋಲ್ ದರ?
- 13 hrs ago
ಬಿಡುಗಡೆಯಾಗಲಿರುವ ಓಲಾ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳೇನು?
- 15 hrs ago
ಪರಿಸರ ಸ್ನೇಹಿ ವಾಹನಗಳ ವಿಭಾಗದಲ್ಲಿ ಟಾಟಾ ನೆಕ್ಸಾನ್ ಇವಿ ಕಾರಿಗೆ ಪ್ರತಿಷ್ಠಿತ ಪ್ರಶಸ್ತಿ
Don't Miss!
- Movies
ವಿಶೇಷ ಭಾನುವಾರ: ಮನೋರಂಜನಾ ಲೋಕದಲ್ಲಿ 'ಮದ-ಗಜ'ಗಳ ಕಾದಾಟ
- News
ಎಬಿಪಿ ಸಮೀಕ್ಷೆ: ಬೆಂಗಾಳದಲ್ಲಿ ಬಿಜೆಪಿ ಏಳಿಗೆ ನಡುವೆ ಟಿಎಂಸಿಗೆ ಗೆಲುವು
- Sports
ಸ್ಪಿನ್ ಆಗಲು ಆರಂಭವಾದರೆ ಜಗತ್ತು ಅಳಲು ಆರಂಭಿಸುತ್ತದೆ: ಪಿಚ್ ಬಗ್ಗೆ ಟೀಕೆಗೆ ಆಸಿಸ್ ಸ್ಪಿನ್ನರ್ ತಿರುಗೇಟು
- Finance
ಭಾರತದಲ್ಲಿ ನೋಕಿಯಾ ಪವರ್ ಈಯರ್ಬಡ್ಸ್ ಲೈಟ್ಸ್ ಮಾರಾಟ
- Lifestyle
ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಸ್ಕೂಟರ್ ಉತ್ಪಾದನಾ ಘಟಕದೊಂದಿಗೆ ಹೊಸ ನೀರಿಕ್ಷೆಯಲ್ಲಿ ಎಥರ್ ಎನರ್ಜಿ
ಎಥರ್ ಎನರ್ಜಿ ಕಂಪನಿಯು ತನ್ನ ಪ್ರೀಮಿಯಂ ಸ್ಕೂಟರ್ ಮಾರಾಟ ವ್ಯಾಪ್ತಿ ಹೆಚ್ಚಳದೊಂದಿಗೆ ಗ್ರಾಹಕರ ಬೇಡಿಕೆಯೆಂತೆ ಸ್ಕೂಟರ್ ಉತ್ಪಾದನಾ ಪ್ರಮಾಣವನ್ನು ಸಹ ಹೆಚ್ಚಿಸಿದ್ದು, ಹೊಸ ಯೋಜನೆಯ ಭಾಗವಾಗಿ ಕಂಪನಿಯು ಬೆಂಗಳೂರಿನಲ್ಲಿದ್ದ ಸ್ಕೂಟರ್ ಉತ್ಪಾದನಾ ಘಟಕವನ್ನು ಇದೀಗ ತಮಿಳುನಾಡಿನ ಹೊಸೂರಿನಲ್ಲಿರುವ ಅತ್ಯಾಧುನಿಕ ವಾಹನ ಉತ್ಪಾದನಾ ಘಟಕಕ್ಕೆ ಸ್ಥಳಾಂತರಿಸಿದೆ.

2015ರಲ್ಲಿ ಇವಿ ಸ್ಕೂಟರ್ ಉತ್ಪಾದನೆ ಆರಂಭಿಸಿದ್ದ ಸಂದರ್ಭದಲ್ಲಿ ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಹೊಸ ಉತ್ಪಾದನಾ ಘಟಕವನ್ನು ತೆರೆದಿದ್ದ ಎಥರ್ ಎನರ್ಜಿ ಕಂಪನಿಯು ಇದೀಗ ತಮಿಳುನಾಡಿನ ಹೊಸೂರಿನಲ್ಲಿ ವಿಸ್ತರಿತ ವಾಹನ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದ್ದು, ಹೊಸ ಉತ್ಪಾದನಾ ಘಟಕದ ಮೂಲಕ ಗ್ರಾಹಕರ ಬೇಡಿಕೆಯನ್ನು ಅತಿ ಕಡಿಮೆ ಅವಧಿಯಲ್ಲಿ ಪೂರೈಸುವ ಗುರಿಹೊಂದಿದೆ.
ಹೊಸ ಘಟಕದಲ್ಲಿ ಸ್ಕೂಟರ್ ಉತ್ಪಾದನೆಗೆ ಅಧಿಕೃತವಾಗಿ ಚಾಲನೆ ನೀಡಿದ ನಂತರ ಘಟಕದ ಭೇಟಿಗಾಗಿ ಕಂಪನಿಯು ಇತ್ತೀಚೆಗೆ ಡ್ರೈವ್‌ಸ್ಪಾರ್ಕ್ ತಂಡವನ್ನು ಅಹ್ವಾನಿಸಿತ್ತು. ಘಟಕದ ಭೇಟಿ ವೇಳೆ ಉತ್ಪಾದನಾ ಹಂತಗಳು ಮತ್ತು ಕಂಪನಿಯ ಮುಂದಿನ ಯೋಜನೆಗಳ ಕುರಿತಾಗಿ ಮಾಹಿತಿಗಳು ಹಂಚಿಕೊಂಡಿತು.

ಬೆಂಗಳೂರಿನಲ್ಲಿದ್ದ ಹಳೆಯ ವಾಹನ ಉತ್ಪಾದನಾ ಘಟಕದಲ್ಲಿ ದಿನಕ್ಕೆ ಗರಿಷ್ಠ 7 ಸ್ಕೂಟರ್‌ಗಳನ್ನು ಉತ್ಪಾದನೆ ಮಾಡುತ್ತಿದ್ದ ಎಥರ್ ಕಂಪನಿಯು ಇದೀಗ ಹೊಸ ಉತ್ಪಾದನಾ ಘಟಕದ ಮೂಲಕ ವಾರ್ಷಿಕವಾಗಿ 1 ಲಕ್ಷದಿಂದ 1.20 ಲಕ್ಷ ಸ್ಕೂಟರ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ.

ಅತ್ಯಾಧುನಿಕ ಉತ್ಪಾದನಾ ತಂತ್ರಜ್ಞಾನ ಹೊಂದಿರುವ ಹೊಸ ಸ್ಕೂಟರ್ ಉತ್ಪಾದನಾ ಘಟಕದಲ್ಲಿ ಎಥರ್ ಕಂಪನಿಯು ಸದ್ಯ 450ಎಕ್ಸ್ ಮತ್ತು 450 ಪ್ಲಸ್ ಮಾದರಿಗಳನ್ನು ಉತ್ಪಾದನೆ ಮಾಡಲಾಗುತ್ತಿದ್ದು, ಹೊಸ ಘಟಕವು ಸುಮಾರು 1.23 ಲಕ್ಷ ಚದುರ ಅಡಿ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿದೆ.

ಹೊಸ ಘಟಕದಲ್ಲಿ ಬಿಡಿಭಾಗಗಳ ಸಂಗ್ರಹ ವಿಭಾಗ, ಬಿಡಿಭಾಗಗಳ ಪರೀಕ್ಷಾ ವಿಭಾಗ, ಬ್ಯಾಟರಿ ಸಂಗ್ರಹಕ್ಕಾಗಿ ಹವಾನಿಯಂತ್ರಿತ ಕೊಠಡಿ ಮತ್ತು ಬಿಡಿಭಾಗಗಳ ಜೋಡಣೆಗಾಗಿ 37 ಅಸೆಂಬ್ಲಿ ಲೈನ್‌ಗಳನ್ನು ನಿರ್ಮಾಣ ಮಾಡಲಾಗಿದ್ದು, ಪ್ರತಿ ಶಿಫ್ಟ್‌ನಲ್ಲಿ ಗರಿಷ್ಠ 90 ಸ್ಕೂಟರ್‌ಗಳು ಸಿದ್ದಪಡಿಸುವ ಸಾಮಾಥ್ಯ ಹೊಂದಿದೆ. ಉತ್ಪಾದನಾ ಅಸ್ಲೆಂಬಿ ಲೈನ್‌ನಲ್ಲಿ ಪ್ರತಿ ನಾಲ್ಕು ನಿಮಿಷಗಳಿಗೆ ಒಂದು ಸ್ಕೂಟರ್ ಸಿದ್ದಗೊಳ್ಳಲಿದ್ದು, ಒಟ್ಟಾರೆ ಬಿಡಿಭಾಗಗಳ ಸಂಗ್ರಹದಿಂದ ಹಿಡಿದು ಸ್ಟಾಕ್ ಯಾರ್ಡ್ ತಲುಪುವ ಹಂತದಲ್ಲಿ ಒಟ್ಟಾರೆ ಒಂದು ಸ್ಕೂಟರ್ ಸರಿಸಾರಿಯಾಗಿ 280 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

ಅಸ್ಲೆಂಬಿ ಲೈನ್‌ಗಳಲ್ಲಿನ 34ರಿಂದ 37ನೇ ಸಾಲುಗಳನ್ನು ಸ್ಕೂಟರ್ ಕಾರ್ಯಕ್ಷಮತೆಯ ಪರೀಕ್ಷೆಗಾಗಿ ಮೀಸಲು ಇಡಲಾಗಿದ್ದು, ಒಂದನೇ ಹಂತದ ಪರೀಕ್ಷೆ ಪೂರ್ತಿಗೊಂಡ ನಂತರ ಎರಡನೇ ಹಂತದಲ್ಲಿ ಡೈನೋ ಟೆಸ್ಟಿಂಗ್ ಮಾಡಾಗುತ್ತದೆ.

ಡೈನೋ ಟೆಸ್ಟಿಂಗ್ ನಂತರ ಮೂರನೇ ಹಂತದ ಪರೀಕ್ಷೆಗೆ ಒಳಪಡುವ ಹೊಸ ಸ್ಕೂಟರ್‌ಗಳು ಪೂರ್ವ ವಿತರಣಾ ಪರಿಶೀಲಿಸಿ ಆನ್ ರೋಡ್ ಚಾಲನೆಗೆ ಒಪ್ಪಿಗೆ ದೊರೆಯಲಿದ್ದು, ಹೊಸ ಎಲೆಕ್ಟ್ರಿಕ್ ಉತ್ಪಾದನಾ ಘಟಕದಲ್ಲಿನ ಇ-ತ್ಯಾಜ್ಯ ನಿರ್ವಹಣೆ ಮತ್ತು ಮರುಬಳಕೆಯ ನಿಭಾಯಿಸುವಿಕೆ ಕೂಡಾ ಸಾಕಷ್ಟು ಸುಧಾರಿತ ಸೌಲಭ್ಯವನ್ನು ಹೊಂದಿದೆ.
MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಇನ್ನು ಎಲೆಕ್ಟ್ರಿಕ್ ಸ್ಕೂಟರಿನಲ್ಲಿ ಶೇ.90 ರಷ್ಟು ಸ್ಥಳೀಯವಾಗಿ ನಿರ್ಮಾಣವಾಗುತ್ತಿರುವ ಬಿಡಿಭಾಗಗಳನ್ನೇ ಬಳಕೆ ಮಾಡುತ್ತಿರುವ ಎಥರ್ ಕಂಪನಿಯು ಲಿಥೀಯಂ ಅಯಾನ್ ಬ್ಯಾಟರಿ ಸೌಲಭ್ಯಕ್ಕಾಗಿ ದಕ್ಷಿಣ ಕೊರಿಯಾ ಕಂಪನಿಯೊಂದಿಗೆ ಸಹಭಾಗಿತ್ವ ಹೊಂದಿದ್ದು, ಮುಂಬರುವ ದಿನಗಳಲ್ಲಿ ಭಾರತದಲ್ಲೇ ಅಭಿವೃದ್ದಿಗೊಳ್ಳಲು ಸಿದ್ದವಾಗುತ್ತಿರುವ ಸ್ವದೇಶಿ ನಿರ್ಮಿತ ಬ್ಯಾಟರಿ ಪ್ಯಾಕ್ ಬಳಕೆ ಮಾಡುವ ಯೋಜನೆಯಲ್ಲಿದೆ.

ಸದ್ಯದ ಬೆಂಗಳೂರು, ಚೆನ್ನೈ, ಮುಂಬೈ, ಹೈದ್ರಾಬಾದ್, ಅಹಮದಾಬಾದ್ ಸ್ಕೂಟರ್ ಮಾರಾಟ ಸೌಲಭ್ಯ ಹೊಂದಿರುವ ಎಥರ್ ಕಂಪನಿಯು 2021ರ ಕೊನೆಯಲ್ಲಿ ಒಟ್ಟು 15 ರಾಜ್ಯಗಳ 27 ನಗರಗಳಲ್ಲಿ ಮಾರಾಟ ಸೌಲಭ್ಯ ಹೊಂದಿರುವುದಾಗಿ ಭರವಸೆ ನೀಡಿದ್ದು, ಹೊಸ ಉತ್ಪಾದನಾ ಘಟಕದೊಂದಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುವ ವಿಶ್ವಾಸ ಹೊಂದಿದ್ದೆವೆ ಎಂದು ಎಥರ್ ಸಂಸ್ಥಾಪಕ ಮತ್ತು ಸಿಇಒ ತರುಣ್ ಮೆಹ್ತಾ ಹೊಸ ನೀರಿಕ್ಷೆಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಎರಡನೇ ಹಂತದ ಮಾರುಕಟ್ಟೆ ವಿಸ್ತರಣೆಯಲ್ಲಿ ರಾಜ್ಯದ ಪ್ರಮುಖ ವಾಣಿಜ್ಯ ಕೇಂದ್ರವಾದ ಹುಬ್ಬಳ್ಳಿ ಮತ್ತು ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಸಹ ಎಥರ್ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟವನ್ನು ಚಾಲನೆ ಪಡೆದುಕೊಳ್ಳುತ್ತಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ 450ಎಕ್ಸ್ ಮತ್ತು 450 ಪ್ಲಸ್ ಮಾದರಿಗಳೊಂದಿಗೆ ಮುಂಬರುವ ಕೆಲವೇ ದಿನಗಳಲ್ಲಿ ಮತ್ತಷ್ಟು ಹೊಸ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಬೈಕ್‌ಗಳು ಬಿಡುಗಡೆಯಾಗಲಿವೆ.