Just In
Don't Miss!
- News
ಕೊರೊನಾ ಸೋಂಕು ಹೆಚ್ಚಳ: ವಿಧಾನಸೌಧಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ
- Movies
ಜಾಕಿ ಚಾನ್ ತಮ್ಮ ಮಗನಿಗೆ ಸಾವಿರಾರು ಕೋಟಿ ಆಸ್ತಿಯನ್ನು ಕೊಡುತ್ತಿಲ್ಲವೇಕೆ?
- Lifestyle
ಭಾನುವಾರದ ಭವಿಷ್ಯ: ಈ ದಿನ ಯಾವ ರಾಶಿಯವರಿಗೆ ಅದೃಷ್ಟದ ದಿನ
- Sports
ಹೈದರಾಬಾದ್ ಸೋಲಿಸಿ ಅಗ್ರ ಸ್ಥಾನಕ್ಕೇರಿದ ಮುಂಬೈ ಇಂಡಿಯನ್ಸ್
- Finance
ಮಹಾರಾಷ್ಟ್ರದಲ್ಲಿ ಲಾಕ್ಡೌನ್: ಕಾರುಗಳ ಉತ್ಪಾದನೆ ಮೇಲೆ ಭಾರೀ ಪರಿಣಾಮ
- Education
Ninasam Diploma Admission 2020-21: ಮೇ ತಿಂಗಳಲ್ಲಿ ನೀನಾಸಂ ಡಿಪ್ಲೋಮಾ ಪ್ರವೇಶಾತಿ ಆರಂಭ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಬಣ್ಣಗಳ ಆಯ್ಕೆಯಲ್ಲಿ ಡೀಲರ್ ಬಳಿ ಕಾಣಿಸಿಕೊಂಡ ಬಜಾಜ್ ಪಲ್ಸರ್ 220ಎಫ್ ಬೈಕ್
ಬಜಾಜ್ ಆಟೋ ಕಂಪನಿಯ ಪಲ್ಸರ್ ಸರಣಿಯ ಬೈಕ್‌ಗಳು ದೇಶಿಯ ಮಾರುಕಟ್ಟೆಯಲ್ಲಿ ಬಹುಜನಪ್ರಿಯತೆಯನ್ನು ಗಳಿಸಿದೆ. ಪಲ್ಸರ್ ಬೈಕ್‌ಗಳಿಗೆ ಭಾರತದಲ್ಲಿ ಪ್ರತ್ಯೇಕವಾದ ಅಭಿಮಾನಿ ವರ್ಗವಿದೆ. ಬಜಾಜ್ ಪಲ್ಸರ್ ಬೈಕ್‌ಗಳು ದೇಶಿಯ ಮಾರುಕಟ್ಟೆಯಲ್ಲಿ ಪ್ರಮುಖವಾಗಿ ಟಿವಿಎಸ್ ಅಪಾಚೆ ಬೈಕುಗಳಿಗೆ ಪೈಪೋಟಿ ನೀಡುತ್ತದೆ.

ಬಜಾಜ್ ಪಲ್ಸರ್ 220ಎಫ್ ಬೈಕ್ ಪಲ್ಸರ್ ಸರಣಿಯಲ್ಲಿ ಬೆಸ್ಟ್ ಸೆಲ್ಲರ್‌ಗಳಲ್ಲಿ ಒಂದಾಗಿದೆ. ಇತ್ತೀಚೆಗೆ ಬಜಾಜ್ ಆಟೋ ಭಾರತೀಯ ಮಾರುಕಟ್ಟೆಯಲ್ಲಿ 2021ರ ಪಲ್ಸರ್ 220ಎಫ್ ಬೈಕನ್ನು ಈ ವರ್ಷದ ಜನವರಿ ತಿಂಗಳಿನಲ್ಲಿ ಬಿಡುಗಡೆಗೊಳಿಸಿತ್ತು. 2021ರ ಬಜಾಜ್ ಪಲ್ಸರ್ 220ಎಫ್ ಬೈಕ್ ಕೆಲವು ಹೊಸ ಅಪ್ಡೇಟ್ ಗಳನ್ನು ಪಡೆದುಕೊಂಡಿತು. ಇದೀಗ ಹೊಸ ಬಣ್ಣದ ಆಯ್ಕೆಯೊಂದಿಗೆ ಬಜಾಜ್ ಪಲ್ಸರ್ 220ಎಫ್ ಬೈಕ್ ಡೀಲರ್ ಬಳಿ ತಲಪಲು ಪ್ರಾರಂಭವಾಗಿದೆ.

ಮೂನ್ ವೈಟ್ ಮತ್ತು ಮ್ಯಾಟ್ ಬ್ಲ್ಯಾಕ್ ಬಣ್ಣಗಳನ್ನು ಒಳಗೊಂಡಿರುವ ಬಜಾಜ್ ಪಲ್ಸರ್ 220ಎಫ್ ಬೈಕ್ ಡೀಲರ್ ಬಳಿ ಕಾಣಿಸಿಕೊಂಡಿದೆ. ಇನ್ನು ಇದರ ಗ್ರಾಫಿಕ್ಸ್ ಅನ್ನು ಸಂಪೂರ್ಣವಾಗಿ ಪರಿಷ್ಕರಿಸಲಾಗಿದೆ. ಹೊಸ ಬಣ್ಣಗಳ ಆಯ್ಕೆಯಲ್ಲಿ ಜಾಜ್ ಪಲ್ಸರ್ 220ಎಫ್ ಬೈಕ್ ಆಕರ್ಷಕವಾಗಿದೆ.
MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಈ ಬಜಾಜ್ ಪಲ್ಸರ್ 220ಎಫ್ ಬೈಕ್ ಫ್ಯೂಯಲ್ ಟ್ಯಾಂಕ್ ಗ್ರಾಫಿಕ್ಸ್ ಆಕರ್ಷಕವಾಗಿದೆ. ಇದಲ್ಲದೆ ಹೆಡ್‌ಲೈಟ್ ಕೌಲ್‌ನಲ್ಲೂ ಕೆಂಪು ಬಣ್ಣದ ಗ್ರಾಫಿಕ್ಸ್ ಅನ್ನು ಪರಿಚಯಿಸಲಾಗಿದೆ. ನವೀಕರಿಸಿದ ಗ್ರಾಫಿಕ್ಸ್ ಅನ್ನು ಎಂಜಿನ್ ಕೌಲ್, ಫ್ರಂಟ್ ಫೆಂಡರ್ ಮತ್ತು ಹಿಂಭಾಗದ ಟೇಕ್ ಭಾಗದಲ್ಲಿ ಕಾಣಬಹುದು.

ಇನ್ನು ಕಲರ್ ಕೋಡೆಡ್ ಅಲಾಯ್ ವ್ಹೀಲ್ಸ್ ಡೆಕಲ್ಸ್ ಮೊದಲಿನಂತೆಯೇ ಇರುತ್ತದೆ. ಬೈಕಿನ ಫೆಂಡರ್, ಸೈಡ್ ಪ್ಯಾನಲ್ಗಳು, ಎಂಜಿನ್ ಕೌಲ್ ಮತ್ತು ಹಿಂಭಾಗದ ಟೇಲ್ ವಿಭಾಗದಲ್ಲಿ ಫಾಕ್ಸ್ ಕಾರ್ಬನ್ ಫೈಬರ್ ಅನ್ನು ಸಹ ಪಡೆಯುತ್ತದೆ.
MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಒಟ್ಟಾರೆಯಾಗಿ, ನವೀಕರಿಸಿದ ಬಜಾಜ್ ಪಲ್ಸರ್ 220ಎಫ್ ಬೈಕ್ ಬ್ಲ್ಯಾಕ್ ಔಟ್ ಪ್ರೊಫೈಲ್ ಹೊಂದಿದೆ. ಬ್ಲ್ಯಾಕ್ ಔಟ್ ಎಂಜಿನ್, ಹ್ಯಾಂಡಲ್ ಬಾರ್, ಅಲಾಯ್ ವ್ಹೀಲ್ ಮತ್ತು ಎಕ್ಸಾಸ್ಟ್ ಅನ್ನು ಹೊಂದಿದೆ.

ಇನ್ನು ಜನವರಿಯಲ್ಲಿ ಬಿಡುಗಡೆಗೊಂಡ 2021ರ ಬಜಾಜ್ ಪಲ್ಸರ್ 220ಎಫ್ ಬೈಕಿನಲ್ಲಿ ಪ್ರಮುಖ ಅಪ್ಡೇಟ್ ಅಂದರೆ ಹೊಸ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಆಗಿದೆ. ಇದು ಇನ್ನು ಸೆಮಿ ಡಿಜಿಟಲ್ ಕನ್ಸೋಲ್ ಆಗಿದ್ದು, ಇದು ಅನಲಾಗ್ ಟ್ಯಾಕೋಮೀಟರ್ ಮತ್ತು ಡಿಜಿಟಲ್ ರೀಡ್ ಔಟ್(ಬ್ಲೂ ಬ್ಯಾಕ್‌ಲೈಟಿಂಗ್) ನೊಂದಿಗೆ ಇತರ ಮಾಹಿತಿಗಳನ್ನು ಒದಗಿಸುತ್ತದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಇದೀಗ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ನಲ್ಲಿ ಫ್ಯುಯಲ್ ಗೇಜ್ ಈಗ ಡಿಸ್ ಪ್ಲೇಯ ಕೆಳಗಿನ ಭಾಗದಲ್ಲಿದೆ, ಟ್ರಿಪ್- ಮತ್ತು ಓಡೋಮೀಟರ್ ಅನ್ನು ಬಲಭಾಗಕ್ಕೆ ಸರಿಸಲಾಗಿದೆ. ಮಧ್ಯಭಾಗದಲ್ಲಿ ಸ್ಪೀಡೋಮೀಟರ್ ಒಳಗೊಂಡಿದೆ. ಇನ್ನು ಸೈಡ್-ಸ್ಟ್ಯಾಂಡ್ ವಾರ್ನಿಂಗ್ ಮೇಲ್ಭಾಗದಲ್ಲಿದೆ.

ಹೊಸ ಬಣ್ಣದ ಅಯ್ಕೆಯ ಬಜಾಜ್ ಪಲ್ಸರ್ 220ಎಫ್ ಬೈಕಿನಲ್ಲಿ ಅದೇ 220ಸಿಸಿ, ಏರ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8,500 ಆರ್‌ಪಿಎಂನಲ್ಲಿ 20.4 ಬಿಹೆಚ್‍ಪಿ ಪವರ್ ಮತ್ತು 7,000 ಆರ್‌ಪಿಎಂನಲ್ಲಿ 18.55 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಸೀಕ್ವೆನ್ಷಿಯಲ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಇನ್ನು ಈ ಬಜಾಜ್ ಪಲ್ಸರ್ 220ಎಫ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಡ್ಯುಯಲ್ ನೈಟ್ರಾಕ್ಸ್ ಶಾಕ್ಪ್ ಅಬ್ಸಾರ್ಬರ್‌ಗಳನ್ನು ಒಳಗೊಂಡಿದೆ.

ಇನ್ನು ಪ್ರಮುಖವಾಗಿ ಇದರ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 280 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 230 ಎಂಎಂ ಡಿಸ್ಜ್ ಬ್ರೇಕ್ ಅನ್ನು ಅಳವಡಿಸಿದ್ದಾರೆ. ಇದರೊಂದಿಗೆ ಸಿಂಗಲ್-ಚಾನೆಲ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಿದೆ.

ಹೊಸ ಬಜಾಜ್ ಪಲ್ಸರ್ 220ಎಫ್ ಬೈಕ್ ಹೊಸ ಬಣ್ಣದ ಆಯ್ಕೆಯಲ್ಲಿ ಆಕರ್ಷಕ ಲುಕ್ ಅನ್ನು ಹೊಂದಿದೆ. ಇನ್ನು ಈ ಹೊಸ ಬಜಾಜ್ ಪಲ್ಸರ್ 220ಎಫ್ ಬೈಕ್ ಡೀಲರುಗಳ ಬಳಿ ತಲುಪಲು ಪ್ರಾರಂಭವಾಗಿರುವುದರಿಂದ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು.
Image Courtesy: Jet wheels