Just In
- 1 hr ago
ಕಾರುಗಳ ರಫ್ತಿನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಮಾರುತಿ ಸುಜುಕಿ
- 3 hrs ago
ವಾರದ ಪ್ರಮುಖ ಸುದ್ದಿ: ಹೊಸ ಸಫಾರಿ ಬಿಡುಗಡೆ, ಟೋಲ್ ಸಂಗ್ರಹ ಹೆಚ್ಚಳ, ಇಳಿಕೆಯಾಗುತ್ತಾ ಪೆಟ್ರೋಲ್ ದರ?
- 13 hrs ago
ಬಿಡುಗಡೆಯಾಗಲಿರುವ ಓಲಾ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷತೆಗಳೇನು?
- 15 hrs ago
ಪರಿಸರ ಸ್ನೇಹಿ ವಾಹನಗಳ ವಿಭಾಗದಲ್ಲಿ ಟಾಟಾ ನೆಕ್ಸಾನ್ ಇವಿ ಕಾರಿಗೆ ಪ್ರತಿಷ್ಠಿತ ಪ್ರಶಸ್ತಿ
Don't Miss!
- News
ಅಮೆಜೊನಿಯಾ -1 ಹಾಗೂ 18 ಉಪಗ್ರಹಗಳು ಯಶಸ್ವಿ ಉಡಾವಣೆ
- Movies
ವಿಶೇಷ ಭಾನುವಾರ: ಮನೋರಂಜನಾ ಲೋಕದಲ್ಲಿ 'ಮದ-ಗಜ'ಗಳ ಕಾದಾಟ
- Sports
ಸ್ಪಿನ್ ಆಗಲು ಆರಂಭವಾದರೆ ಜಗತ್ತು ಅಳಲು ಆರಂಭಿಸುತ್ತದೆ: ಪಿಚ್ ಬಗ್ಗೆ ಟೀಕೆಗೆ ಆಸಿಸ್ ಸ್ಪಿನ್ನರ್ ತಿರುಗೇಟು
- Finance
ಭಾರತದಲ್ಲಿ ನೋಕಿಯಾ ಪವರ್ ಈಯರ್ಬಡ್ಸ್ ಲೈಟ್ಸ್ ಮಾರಾಟ
- Lifestyle
ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಡೀಲರ್ ಬಳಿ ತಲುಪಿದ ಹೊಸ ಬೆನೆಲ್ಲಿ ಟಿಆರ್‌ಕೆ 502 ಬೈಕ್
ಇಟಲಿ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬೆನೆಲ್ಲಿ ತನ್ನ ಟಿಆರ್‌ಕೆ 502 ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಬೆನೆಲ್ಲಿ ಟಿಆರ್‌ಕೆ 502 ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ.

ಹೊಸ ಬೆನೆಲ್ಲಿ ಟಿಆರ್‌ಕೆ 502 ಬೈಕಿನಲ್ಲಿ ಡಿಜಟಲ್ ಇನ್ ಟ್ರೂಮೆಂಟ್ ಕ್ಲಸ್ಟರ್, ರಿವೈಸಡ್ ಸೀಟ್ ಮತ್ತು ಹೊಸ ರೇರ್ ವ್ಯೂ ಮಿರರ್ ಅನ್ನು ಅಳವಡಿಸಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬೆನೆಲ್ಲಿ ಟಿಆರ್‌ಕೆ 502 ಬೈಕಿನಲ್ಲಿ ಸಾಮಾನ್ಯ ಇನ್ ಟ್ರೂಮೆಂಟ್ ಕನ್ಸೋಲ್ ಅನ್ನು ಹೊಂದಿತ್ತು. ಆದರೆ ಹೊಸ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ನಲ್ಲಿ ಸ್ಪೀಡ್, ಫ್ಯೂಲ್, ಟ್ರಿಪ್ ಮೀಟರ್ಸ್, ಓಡೋಮೀಟರ್, ಗೇರ್, ಇಂಡಿಕೇಟರ್ ಮತ್ತು ಎಂಜಿನ್ ಟ್ರೆಂಪ್ರಚರ್ ಮಾಹಿತಿಯನ್ನು ತೋರಿಸುತ್ತದೆ.

ಹೊಸ ಬೆನೆಲ್ಲಿ ಟಿಆರ್‌ಕೆ 502 ಬೈಕ್ ಡೀಲರುಗಳ ಬಳಿ ತಲುಪಿದೆ. ಹೊಸ ಬೆನೆಲ್ಲಿ ಟಿಆರ್‌ಕೆ 502 ಬೈಕ್ ಡೀಲರ್ ಬಳಿ ತಲುಪಿರುವ ಚಿತ್ರಗಳನ್ನು ಆಟೋಕಾರ್ ಬಹಿರಂಗಪಡಿಸಿದೆ. ಇದರಿಂದಾಗಿ ಈ ಹೊಸ ಬೆನೆಲ್ಲಿ ಟಿಆರ್‌ಕೆ 502 ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಹೊಸ ಬೆನೆಲ್ಲಿ ಬೈಕಿನಲ್ಲಿ ವಿಂಡ್‌ಸ್ಕ್ರೀನ್, ಏರ್ ಡಿಫ್ಲೆಕ್ಟರ್‌ಗಳೊಂದಿಗೆ ಸೆಮಿ ಫೇರಿಂಗ್ ಡಿಸೈನ್ ಹಾಗೂ ಇತರ ಫೀಚರ್‍ಗಳ ನಡುವೆ ಎಲ್ಇಡಿ ಡಿಆರ್‌ಎಲ್‌ಗಳೊಂದಿಗೆ ಟ್ವಿನ್ ಪಾಡ್ ಹೆಡ್‌ಲೈಟ್‍ಗಳನ್ನು ಅಳವಡಿಸಲಿದೆ.

ಹೊಸ ಹ್ಯಾಂಡಲ್‌ಬಾರ್ ಹಾಗೂ ಕ್ಲಚ್ ಲಿವರ್ ಈಗ ಅಡ್ಜಸ್ಟಬಲ್ ಆಗಿವೆ. ಅಲ್ಯೂಮಿನಿಯಂ ಅಲಾಯ್ ಹಾಗೂ ಹೊಸ ಸೀಟುಗಳಿರುವ ಹಿಂಭಾಗದಲ್ಲಿ ರೇರ್ ಪ್ಯಾನಿಯರ್ ರ್‍ಯಾಕ್‍ಗಳಲ್ಲಿ ಬದಲಾವಣೆ ಮಾಡಲಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಟಿಆರ್‌ಕೆ 502 ಬೈಕಿನಲ್ಲಿಯೂ ಸಹ 19 ಇಂಚಿನ ಅಲ್ಯೂಮಿನಿಯಂ ಅಲಾಯ್ ವ್ಹೀಲ್ ಹಾಗೂ 17 ಇಂಚಿನ ರೇರ್ ವ್ಹೀಲ್‍ಗಳಿದ್ದು, ಕ್ರಮವಾಗಿ 110/80-19 ಹಾಗೂ 150/70-17 ಸೆಕ್ಷನ್ ಟಯರ್‌ಗಳನ್ನು ಹೊಂದಿರಲಿದೆ. ರಸ್ತೆ ಆಧಾರಿತ ಬೈಕಿನ ಎರಡೂ ಬದಿಯಲ್ಲಿ 17 ಇಂಚಿನ ಅಲಾಯ್ ವ್ಹೀಲ್‍ಗಳಿದ್ದು, ಟ್ಯೂಬ್‍ಲೆಸ್ ಟಯರ್‍ಗಳಿವೆ.

ಹೊಸ ಬೆನೆಲ್ಲಿ ಟಿಆರ್‌ಕೆ 502 ಬೈಕಿನಲ್ಲಿ ಅದೇ 499ಸಿಸಿ ಇನ್ ಲೈನ್ ಟ್ವಿನ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್, 8-ವಾಲ್ವ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 8,500 ಆರ್‌ಪಿಎಂನಲ್ಲಿ 47.6 ಬಿಹೆಚ್‌ಪಿ ಪವರ್ ಹಾಗೂ 6,000 ಆರ್‌ಪಿಎಂನಲ್ಲಿ 46 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.
MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಈ ಎಂಜಿನ್‍ನಲ್ಲಿ 6 ಸ್ಪೀಡಿನ ಗೇರ್‍ಬಾಕ್ಸ್ ಅಳವಡಿಸಲಾಗಿದೆ. ಈ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, =ಮುಂಭಾಗದಲ್ಲಿ 50 ಎಂಎಂನ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಮೊನೊಶಾಕ್ ಸೆಟಪ್ ಅನ್ನು ಹೊಂದಿದೆ.

ಈ ಹೊಸ ಬೆನೆಲ್ಲಿ ಟಿಆರ್‌ಕೆ 502 ಬೈಕ್ ಡೀಲರ್ ಬಳಿ ತಲುಪಿರುವುದರಿಂದ ಶೀಘ್ರದಲ್ಲೇ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ಬೆನೆಲ್ಲಿ ಟಿಆರ್‌ಕೆ 502 ತುಸು ದುಬಾರಿಯಾಗಿರುತದೆ.