ಭಾರತದಲ್ಲಿ ಅತಿ ದುಬಾರಿ ಬೆಲೆಯ BMW C 400 GT ಸ್ಕೂಟರ್ ಬಿಡುಗಡೆ

ಐಷಾರಾಮಿ ದ್ವಿಚಕ್ರ ತಯಾರಕ ಕಂಪನಿಯಾದ ಬಿಎಂಡಬ್ಲ್ಯು ಮೋಟೊರಾಡ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹೊಸ ಸಿ 400 ಜಿಟಿ ಮ್ಯಾಕ್ಸಿ-ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಬಿಎಂಡಬ್ಲ್ಯು ಸಿ 400 ಜಿಟಿ ಮ್ಯಾಕ್ಸಿ-ಸ್ಕೂಟರ್ ಬೆಲೆಯು ರೂ.9,95,000 ಆಗಿದೆ.

ಭಾರತದಲ್ಲಿ ಅತಿ ದುಬಾರಿ ಬೆಲೆಯ BMW C 400 GT ಸ್ಕೂಟರ್ ಬಿಡುಗಡೆ

ಈ ಹೊಸ ಬಿಎಂಡಬ್ಲ್ಯು ಸಿ 400 ಜಿಟಿ(BMW C 400 GT) ಐಷಾರಾಮಿ ಮ್ಯಾಕ್ಸಿ-ಸ್ಕೂಟರ್ ಆಗಿದೆ. ಈ ಹೊಸ ಬಿಎಂಡಬ್ಲ್ಯು ಸಿ 400 ಜಿಟಿ ಭಾರತದಲ್ಲಿ ಬಿಎಂಡಬ್ಲ್ಯು ಮೊಟೊರಾಡ್‌ನ ಮೊದಲ ಮ್ಯಾಕ್ಸಿ-ಸ್ಕೂಟರ್ ಆಗಿದೆ. ಈ ಪ್ರೀಮಿಯಂ ಮಿಡ್ ಸೈಜ್ ಸ್ಕೂಟರ್‌ಗಾಗಿ ಭಾರತದಾದ್ಯಂತ ಬುಕ್ಕಿಂಗ್ ಆರಂಭವಾಗಿದ್ದು, ಇದು ಸಿಬಿಯು ಯುನಿಟ್ ಆಗಿ ಲಭ್ಯವಿರುತ್ತದೆ. ಈ ಹೊಸ ಬಿಎಂಡಬ್ಲ್ಯು ಸಿ 400 ಜಿಟಿ ಮ್ಯಾಕ್ಸಿ-ಸ್ಕೂಟರ್ ಆಲ್ಪೈನ್ ವೈಟ್ ಮತ್ತು ಸ್ಟೈಲ್ ಟ್ರಿಪಲ್ ಬ್ಲ್ಯಾಕ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿರುತ್ತದೆ.

ಭಾರತದಲ್ಲಿ ಅತಿ ದುಬಾರಿ ಬೆಲೆಯ BMW C 400 GT ಸ್ಕೂಟರ್ ಬಿಡುಗಡೆ

ಹೊಸ ಬಿಎಂಡಬ್ಲ್ಯು ಸಿ 400 ಜಿಟಿ ಸ್ಕೂಟರ್ ಮುಂಭಾಗದಲ್ಲಿ ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್ಸ್, ವಿಂಡ್‌ಶೀಲ್ಡ್, ಎರಡು ಗ್ಲೌಸ್ ಕಂಪಾರ್ಟ್‌ಮೆಂಟ್‌ಗಳು, ಸಿಂಗಲ್-ಸೆಕ್ಷನ್ ಸೀಟಿನ ಅಡಿಯಲ್ಲಿ ಒಂದು ಫ್ಲೆಕ್ಸ್‌ಕೇಸ್ ಮತ್ತು ಕೀಲೆಸ್ ರೈಡ್‌ನಂತಹ ಟ್ವಿನ್-ಪಾಡ್ ಎಲ್‌ಇಡಿ ಹೆಡ್‌ಲೈಟ್ ಅನ್ನು ಒಳಗೊಂಡಿದೆ.

ಭಾರತದಲ್ಲಿ ಅತಿ ದುಬಾರಿ ಬೆಲೆಯ BMW C 400 GT ಸ್ಕೂಟರ್ ಬಿಡುಗಡೆ

ಈ ವೈಶಿಷ್ಟ್ಯದ ಪಟ್ಟಿಯು ಬ್ಲೂಟೂತ್-ಸಕ್ರಿಯಗೊಳಿಸಿದ 6.5-ಇಂಚಿನ ಪೂರ್ಣ-ಬಣ್ಣದ ಟಿಎಫ್ಟಿ ಸ್ಕ್ರೀನ್ ಮತ್ತು ಬಿಎಂಡಬ್ಲ್ಯು ಮೊಟೊರಾಡ್ ಮಲ್ಟಿ-ಕಂಟ್ರೋಲರ್ ಅನ್ನು ಒಳಗೊಂಡಿದೆ. ಬಿಎಂಡಬ್ಲ್ಯು ಮೋಟೊರಾಡ್ ಕನೆಕ್ಟಿವಿಟಿ ಆಪ್ ನ್ಯಾವಿಗೇಷನ್ ಕಾರ್ಯಕ್ಕೆ ಪ್ರವೇಶವನ್ನು ನೀಡುತ್ತದೆ. 400 ಜಿಟಿಯು ಸೈಡ್-ಸ್ಟ್ಯಾಂಡ್ ಮತ್ತು ಸೆಂಟರ್-ಸ್ಟ್ಯಾಂಡ್ ಅನ್ನು ಹೊಂದಿದೆ.

ಭಾರತದಲ್ಲಿ ಅತಿ ದುಬಾರಿ ಬೆಲೆಯ BMW C 400 GT ಸ್ಕೂಟರ್ ಬಿಡುಗಡೆ

ಇನ್ನು ಈ ಐಷಾರಾಮಿ ಬಿಎಂಡಬ್ಲ್ಯು ಸಿ 400 ಜಿಟಿ ಸ್ಕೂಟರ್ 350 ಸಿಸಿ, ಲಿಕ್ವಿಡ್-ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಒಳಗೊಂಡಿದೆ. ಈ ಎಂಜಿನ್ 7,500 ಆರ್‌ಪಿಎಂನಲ್ಲಿ 33.5 ಬಿಹೆಚ್‍ಪಿ ಪವರ್ ಮತ್ತು 5,750 ಆರ್‌ಪಿಎಂನಲ್ಲಿ 35 ಬಿಹೆಚ್‍ಪಿ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ಸಿವಿಟಿ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇನ್ನು ಈ ಸ್ಕೂಟರ್ 9.5 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ, ಇನ್ನು ಈ ಸ್ಕೂಟರ್ ಟಾಪ್-ಸ್ಫೀಡ್ 139 ಕಿ.ಮೀ ಆಗಿದೆ,

ಭಾರತದಲ್ಲಿ ಅತಿ ದುಬಾರಿ ಬೆಲೆಯ BMW C 400 GT ಸ್ಕೂಟರ್ ಬಿಡುಗಡೆ

ಈ ಹೊಸ ಬಿಎಂಡಬ್ಲ್ಯು ಸಿ 400 ಜಿಟಿ ಮ್ಯಾಕ್ಸಿ-ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದ ಬಳಿಕ ಬಿಎಂಡಬ್ಲ್ಯು ಗ್ರೂಪ್ ಇಂಡಿಯಾ ಅಧ್ಯಕ್ಷರಾದ ವಿಕ್ರಮ್ ಪವಾಹ್ ಅವರು ಮಾತನಾಡಿ, ಹೊಸ ಬಿಎಂಡಬ್ಲ್ಯು ಸಿ 400 ಜಿಟಿ ಬಿಡುಗಡೆ ಭಾರತದ ನಗರ ಚಲನಶೀಲತೆಯ ವಿಭಾಗದಲ್ಲಿ ಹೊಸ ಯುಗವನ್ನು ಘೋಷಿಸುತ್ತದೆ. ಈ ಪ್ರಗತಿಪರ ಮತ್ತು ಚುರುಕಾದ ಮಿಡ್ ಸೈಜ್ ಅನ್ನು ನಗರ ಮತ್ತು ದೀರ್ಘ ಪ್ರವಾಸಕ್ಕೆ ಸೂಕ್ತವಾಗುವ ರೀತೀಯಲ್ಲಿ ವಿನ್ಯಾಸಗೊಳಿಸಲಾಗಿದೆ.

ಭಾರತದಲ್ಲಿ ಅತಿ ದುಬಾರಿ ಬೆಲೆಯ BMW C 400 GT ಸ್ಕೂಟರ್ ಬಿಡುಗಡೆ

ನಗರ ಕೇಂದ್ರಿಕರಿಸಿದ ಸವಾರಿಗೆ, ಕಚೇರಿಗೆ ಪ್ರಯಾಣಕ್ಕೆ ಅಥವಾ ವಿಕೇಂಡ್ ಪ್ರಾವಸ ಎಂಜಾಯ್ ಮಾಡಲು ಈ ಹೊಸ ಬಿಎಂಡಬ್ಲ್ಯು ಸಿ 400 ಜಿಟಿ ಮ್ಯಾಕ್ಸಿ-ಸ್ಕೂಟರ್ ಪರಿಪೂರ್ಣ ಸಂಗಾತಿ-ಕೇವಲ ಒಬ್ಬರೇ ಅಲ್ಲ, ಪ್ರಯಾಣಿಕರ ಜೊತೆಗೂ ಸಹ ಎಂದು ಅವರು ಹೇಳಿದ್ದಾರೆ,

ಭಾರತದಲ್ಲಿ ಅತಿ ದುಬಾರಿ ಬೆಲೆಯ BMW C 400 GT ಸ್ಕೂಟರ್ ಬಿಡುಗಡೆ

ಈ ಹೊಸ ಬಿಎಂಡಬ್ಲ್ಯು ಸಿ 400 ಜಿಟಿ ಮ್ಯಾಕ್ಸಿ-ಸ್ಕೂಟರ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಡಬಲ್ ಅಲ್ಯೂಮಿನಿಯಂ ಸ್ವಿಂಗಾರ್ಮ್ ಟೈಪ್ ಸಸ್ಪೆಂಕ್ಷನ್ ಅನ್ನು ಡಬಲ್ ಸ್ಪ್ರಿಂಗ್ ಸ್ಟ್ರಟ್ಗಳೊಂದಿಗೆ ಹೊಂದಿದೆ. ಇನ್ನು ಈ ಐಷಾರಾಮಿ ಸ್ಕೂಟರ್ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಡಬಲ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್ ಸಿಸ್ಟಂ ಅನ್ನು ಒಳಗೊಂಡಿದೆ. ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ ಸಿಬಿಎಸ್ ಸಿಸ್ಟಂ ಅನ್ನು ಒಳಗೊಂಡಿದೆ.

ಭಾರತದಲ್ಲಿ ಅತಿ ದುಬಾರಿ ಬೆಲೆಯ BMW C 400 GT ಸ್ಕೂಟರ್ ಬಿಡುಗಡೆ

ಸ್ಕೂಟರ್ ಪ್ರಮಾಣಿತ ಖಾತರಿಯೊಂದಿಗೆ 'ಮೂರು ವರ್ಷಗಳು, ಅನಿಯಮಿತ ಕಿಲೋಮೀಟರ್', ವಾರಂಟಿಯನ್ನು ನಾಲ್ಕನೇ ಮತ್ತು ಐದನೇ ವರ್ಷಕ್ಕೆ ವಿಸ್ತರಿಸುವ ಆಯ್ಕೆಯೊಂದಿಗೆ ಬರುತ್ತದೆ. ಕಂಪನಿಯು 24 × 7 365 ದಿನಗಳ ಪ್ಯಾಕೇಜ್‌ನೊಂದಿಗೆ ರಸ್ತೆ ಬದಿಯ ಸಹಾಯವನ್ನು ನೀಡುತ್ತಿದೆ.

ಭಾರತದಲ್ಲಿ ಅತಿ ದುಬಾರಿ ಬೆಲೆಯ BMW C 400 GT ಸ್ಕೂಟರ್ ಬಿಡುಗಡೆ

ಇನ್ನು ಬಿಎಂಡಬ್ಲ್ಯು ಮೊಟೊರಾಡ್ ಇಂಡಿಯಾ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹೊಸ ಬಿಎಂಡಬ್ಲ್ಯು ಜಿ 310 ಜಿಎಸ್ಬೈಕನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ, ಬಿಎಂಡಬ್ಲ್ಯು ಕಂಪನಿಯು ಭಾರತದಲ್ಲಿ ಈ ಹೊಸ ಜಿ 310 ಜಿಎಸ್ ಬೈಕಿನ ಖರೀದಿಗಾಗಿ ಬುಕ್ಕಿಂಗ್ ಆರಂಭಿಸಿದೆ. ಈ 2022ರ ಜಿ 310 ಜಿಎಸ್ ಬೈಕ್ ಟ್ರಿಪಲ್ ಬ್ಲಾಕ್. ಎಂಬ ಹೊಸ ಬಣ್ಣದ ಆಯ್ಕೆಯನ್ನು ಪಡೆಯಲಿದೆ, ಇತ್ತೀಚೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡ 2022ರ ಜಿ 310 ಜಿಎಸ್ ಬೈಕ್ ಟ್ರಿಪಲ್ ಬ್ಲ್ಯಾಕ್ ಎಂಬ ಹೊಸ ಬಣ್ಣವನ್ನು ಪಡೆದಿದೆ.

ಭಾರತದಲ್ಲಿ ಅತಿ ದುಬಾರಿ ಬೆಲೆಯ BMW C 400 GT ಸ್ಕೂಟರ್ ಬಿಡುಗಡೆ

ಈ ಹೊಸ ಬೈಕಿನಲ್ಲಿ ಹೊಸ ಬಣ್ಣದ ಆಯ್ಕೆಯನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಬದಲಾವಣೆಗಳನ್ನು ಹೊಂದಿಲ್ಲ. ಭಾರತದಲ್ಲಿ ಬಿಡುಗಡೆಯಾಗಲಿರುವ 2022ರ ಜಿ 310 ಜಿಎಸ್ ಬೈಕ್ ಕೂಡ ಹೊಸ ಬಣ್ಣದ ಆಯ್ಕೆಯನ್ನು ಹೊರತುಪಡಿಸಿ ಉಳಿದಂತೆ ಯಾವುದೇ ಬದಲಾವಣೆಗಳನ್ನು ಹೊಂದಿರುವುದಿಲ್ಲ. ಈ ಜಿ 310 ಜಿಎಸ್ ಬಿಎಂಡಬ್ಲ್ಯು ಮೋಟರ್‌ರಾಡ್‌ನ ಸಣ್ಣ ವಿಭಾಗದಲ್ಲಿ ಸಾಕಷ್ಟು ಜನಪ್ರಿಯ ಕೊಡುಗೆಯಾಗಿದೆ. ಈ ಬಿಎಂಡಬ್ಲ್ಯು ಜಿ 310 ಜಿಎಸ್ ಬೈಕಿನಲ್ಲಿ ಹೊಸ ಹೆಡ್‌ಲೈಟ್ ಒಳಗೊಂಡಿರುತ್ತದೆ.

ಭಾರತದಲ್ಲಿ ಅತಿ ದುಬಾರಿ ಬೆಲೆಯ BMW C 400 GT ಸ್ಕೂಟರ್ ಬಿಡುಗಡೆ

ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯ ಬಿಎಂಡಬ್ಲ್ಯು ಸಿ 400 ಜಿಟಿ ಮ್ಯಾಕ್ಸಿ-ಸ್ಕೂಟರ್ ಸ್ಟ್ಯಾಂಡರ್ಡ್ ವಾರಂಟಿಯೊಂದಿಗೆ ಮೂರು ವರ್ಷಗಳು, ಅನಿಯಮಿತ ಕಿಲೋಮೀಟರ್', ವಾರಂಟಿಯನ್ನು ನಾಲ್ಕನೇ ಮತ್ತು ಐದನೇ ವರ್ಷಕ್ಕೆ ವಿಸ್ತರಿಸುವ ಆಯ್ಕೆಯೊಂದಿಗೆ ಬರುತ್ತದೆ. ಕಂಪನಿಯು 24×7 365 ದಿನಗಳ ಪ್ಯಾಕೇಜ್‌ನೊಂದಿಗೆ ರೀಡ್ ಸೈಡ್ ಅಸಿಸ್ಟ್ ಅನ್ನು ಒಳಗೊಂಡಿರುತ್ತದೆ. ಇದು ಈ ಹೊಸ ಎಂಡಬ್ಲ್ಯು ಸಿ 400 ಜಿಟಿ ಭಾರತದ ಅತಿ ದುಬಾರಿ ಸ್ಕೂಟರ್ ಆಗಿದೆ, ಇದು ಪ್ರೀಮಿಯಂ ಸ್ಕೂಟರ್ ಗಳನ್ನು ಇಷ್ಟಪಡುವ ಗ್ರಾಹಕರನ್ನು ಸೆಳೆಯಬಹುದು.

Most Read Articles

Kannada
English summary
Bmw motorrad launched new c 400 gt maxi scooter in india price features details
Story first published: Tuesday, October 12, 2021, 14:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X