ಮಾಡಿಫೈಗೊಂಡು ಮಿಂಚಿದ ಹಸ್ಕ್​ವರ್ನಾ ವಿಟ್‌ಪಿಲೆನ್ 250 ಬೈಕ್

ಹಸ್ಕ್​ವರ್ನಾ ಕಂಪನಿಯು ಪ್ರಸ್ತುತ ಭಾರತಿಯ ಮಾರುಕಟ್ಟೆಯಲ್ಲಿ ಸ್ವಾರ್ಟ್‌ಪಿಲೆನ್ 250 ಹಾಗೂ ವಿಟ್‌ಪಿಲೆನ್ 250 ಬೈಕುಗಳನ್ನು ಮಾರಾಟಗೊಳಿಸುತ್ತಿದ್ದಾರೆ. ಈ ಹಸ್ಕ್​ವರ್ನಾ ಬೈಕುಗಳು ಭಾರತೀಯ ಮಾರುಕಟ್ಟೆಯ ಗ್ರಾಹಕರನ್ನು ಸೆಳೆಯುವಲ್ಲಿ ಯಶ್ವಸಿಯಾಗಿದೆ.

ಮಾಡಿಫೈಗೊಂಡು ಮಿಂಚಿದ ಹಸ್ಕ್​ವರ್ನಾ ವಿಟ್‌ಪಿಲೆನ್ 250 ಬೈಕ್

ಹಸ್ಕ್​ವರ್ನಾ ಸ್ವಾರ್ಟ್‌ಪಿಲೆನ್ 250 ಹಾಗೂ ವಿಟ್‌ಪಿಲೆನ್ 250 ಬೈಕುಗಳು ವಿಶಿಷ್ಟ ಮತ್ತು ಆಕರ್ಷಕ ಸ್ಟೈಲಿಂಗ್‌ಗೆ ಹೆಸರುವಾಸಿಯಾಗಿದ್ದು, ಸಾಮಾನ್ಯ ಜನಸಂದಣಿ ಇದ್ದ ಕಡೆ ಎಲ್ಲಾರ ಗಮನವನ್ನು ಸೆಳೆಯುವಂತಿದೆ. ಇನ್ನು ಹಸ್ಕ್​ವರ್ನಾ ವಿಟ್‌ಪಿಲೆನ್ 250 ಸ್ಕ್ರ್ಯಾಂಬ್ಲರ್ ಬೈಕ್ ಸ್ವಲ್ಪ ಸ್ಪೋರ್ಟಿಯರ್ ಆಗಿ ಕಾಣುತ್ತದೆ, ಇದು ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ಗಳನ್ನು ಹೊಂದಿವೆ. ಇದು ಮತ್ತಷ್ಟು ಅಗ್ರೇಸಿವ್ ಆಗಿ ಕಾಣಲು ನೆರವಾಗಿದೆ.

ಮಾಡಿಫೈಗೊಂಡು ಮಿಂಚಿದ ಹಸ್ಕ್​ವರ್ನಾ ವಿಟ್‌ಪಿಲೆನ್ 250 ಬೈಕ್

250ಸಿಸಿ ಕೆಫೆ ರೇಸರ್ ಇನ್ನಷ್ಟು ಸ್ಪೋರ್ಟಿಯರ್ ಆಗಿ ಕಾಣುವಂತೆ, ವಿಟ್‌ಪಿಲೆನ್ 250 ಬೈಕನ್ನು ಕಸ್ಟಮ್ ಯೆಲ್ಲೋ ಬಣ್ಣವನ್ನು ನೀಡಿ ಬೈಕ್ ಪ್ರಿಯರು ಒಬ್ಬರು ಕಸ್ಟಮೈಸ್ ಮಾಡಿದ್ದಾರೆ. ಇದರಿಂದ ಹಸ್ಕ್​ವರ್ನಾ ವಿಟ್‌ಪಿಲೆನ್ 250 ಬೈಕ್ ಆಕರ್ಷಕವಾಗಿ ಕಾಣುತ್ತದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಮಾಡಿಫೈಗೊಂಡು ಮಿಂಚಿದ ಹಸ್ಕ್​ವರ್ನಾ ವಿಟ್‌ಪಿಲೆನ್ 250 ಬೈಕ್

ಹಸ್ಕ್​ವರ್ನಾ ವಿಟ್‌ಪಿಲೆನ್ 250 ಬೈಕಿನ ಬಾಡಿವರ್ಕ್ ಯೆಲ್ಲೋ ಬಣ್ಣಕ್ಕೆ ತಿರುಗಿಸಲಾಗಿದೆ ಎಂದು ಮೇಲಿನ ಚಿತ್ರದಲ್ಲಿ ಕಾಣಬಹುದು. ಉಳಿದಂತೆ ಬ್ಲ್ಯಾಕ್ ಔಟ್ ಎಂಜಿನ್, ಅಲಾಯ್ ವ್ಹೀಲ್ಸ್ , ಫ್ರೇಮ್, ಯುಎಸ್ಡಿ ಫ್ರಂಟ್ ಫೋರ್ಕ್ಸ್ ಮತ್ತು ಸ್ವಿಂಗಾರ್ಮ್ ಗಳಿಗೆ ಬ್ಲ್ಯಾಕ್ ಬಣ್ಣದಲ್ಲಿದೆ.

ಮಾಡಿಫೈಗೊಂಡು ಮಿಂಚಿದ ಹಸ್ಕ್​ವರ್ನಾ ವಿಟ್‌ಪಿಲೆನ್ 250 ಬೈಕ್

ಇನ್ನು ಹಸ್ಕ್​ವರ್ನಾ ವಿಟ್‌ಪಿಲೆನ್ 250 ಬೈಕ್ ಆಫ್ಟರ್ ಮಾರ್ಕೆಟ್ ಬಾರ್-ಎಂಡ್ ಮೀರರ್ ಅನ್ನು ಕೂಡ ಅಳವಡಿಸಲಾಗಿದೆ. ಸೀರೆ ಗಾರ್ಡ್ ಮತ್ತು ಹಿಂಭಾಗದ ಟೈರ್ ಹಗ್ಗರ್ ಅನ್ನು ತೆಗೆದುಹಾಕಿ ಕಸ್ಟಮ್ ಟೈಲ್ ಅನ್ನು ಅಳವಡಿಸಲಾಗಿದೆ. ಉಳಿದಂತೆ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಮಾಡಿಫೈಗೊಂಡು ಮಿಂಚಿದ ಹಸ್ಕ್​ವರ್ನಾ ವಿಟ್‌ಪಿಲೆನ್ 250 ಬೈಕ್

ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಹಸ್ಕ್​ವರ್ನಾದ ಸ್ವಾರ್ಟ್‍‍ಪಿಲೆನ್ 250 ಹಾಗೂ ವಿಟ್‍‍ಪಿಲೆನ್ 250 ಬೈಕ್‍‍ಗಳನ್ನು ಕೆಟಿಎಂ ಡ್ಯೂಕ್ 250 ಬೈಕಿನ ಆಧಾರದ ಮೇಲೆ ತಯಾರಿಸಲಾಗಿದೆ. ಈ ಎರಡೂ ಬೈಕ್‍‍ಗಳಲ್ಲಿ ಡ್ಯೂಕ್ 250 ಬೈಕಿನಲ್ಲಿರುವಂತಹ ಬಿಡಿಭಾಗ ಹಾಗೂ ಎಂಜಿನ್‍‍ಗಳನ್ನು ಅಳವಡಿಸಲಾಗಿದೆ.

ಮಾಡಿಫೈಗೊಂಡು ಮಿಂಚಿದ ಹಸ್ಕ್​ವರ್ನಾ ವಿಟ್‌ಪಿಲೆನ್ 250 ಬೈಕ್

ಇದರ ಜೊತೆಗೆ ಎರಡು ಬೈಕ್‍‍ಗಳು ಕೆಟಿಎಂ ಬೈಕ್‍‍ಗಳಂತೆ ವಿಶಿಷ್ಟವಾದ ಡಿಸೈನ್ ಫೀಚರ್‍‍ಗಳನ್ನು ಹೊಂದಿವೆ. ಸ್ವಾರ್ಟ್‍‍ಪಿಲೆನ್ 250 ಬೈಕ್ ಸ್ಕ್ರಾಂಬ್ಲರ್‍‍ನಂತಿದ್ದರೆ, ವಿಟ್‍‍ಪಿಲೆನ್ ಕೆಫೆ ರೇಜರ್ ಬೈಕಿನಂತಿದೆ. ಸ್ವಾರ್ಟ್‍‍ಪಿಲೆನ್ 250 ಬೈಕಿನಲ್ಲಿ ಡ್ಯುಯಲ್ ಪರ್ಪಸ್ ಟಯರ್‍‍ಗಳನ್ನು ಅಳವಡಿಸಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಮಾಡಿಫೈಗೊಂಡು ಮಿಂಚಿದ ಹಸ್ಕ್​ವರ್ನಾ ವಿಟ್‌ಪಿಲೆನ್ 250 ಬೈಕ್

ವಿಭಿನ್ನವಾದ ಕೆಫೆ ರೇಜರ್ ಬೈಕ್ ಆದ ವಿಟ್‍‍ಪಿಲೆನ್ 250 ಬೈಕ್, ಹ್ಯಾಂಡಲ್‍‍ಬಾರ್ ಮೇಲೆ ಕ್ಲಿಪ್ ಹಾಗೂ ಮುಂಭಾಗಕ್ಕೆ ಬಾಗಿರುವ ಸೀಟಿಂಗ್ ಸಿಸ್ಟಂಗಳನ್ನು ಹೊಂದಿದೆ. ಈ ಬೈಕ್‍‍ಗಳಲ್ಲಿ ಕೆಟಿ‍ಎಂ ಡ್ಯೂಕ್ 250 ಬೈಕಿನಲ್ಲಿರುವಂತಹ 248.8 ಸಿಸಿಯ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ.

ಮಾಡಿಫೈಗೊಂಡು ಮಿಂಚಿದ ಹಸ್ಕ್​ವರ್ನಾ ವಿಟ್‌ಪಿಲೆನ್ 250 ಬೈಕ್

ಈ ಎಂಜಿನ್ 29.5 ಬಿ‍‍ಹೆಚ್‍‍ಪಿ ಪವರ್ ಹಾಗೂ 24 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು ಸಸ್ಪೆಂಷನ್‍‍ಗಳಿಗಾಗಿ ಈ ಬೈಕ್‍‍ಗಳ ಮುಂಭಾಗದಲ್ಲಿ 43 ಎಂಎಂ ಡಬ್ಲ್ಯುಪಿ ಅಪೆಕ್ಸ್ ಅಪ್‍‍ಸೈಡ್ ಡೌನ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಡಬ್ಲ್ಯುಪಿ ಅಪೆಕ್ಸ್ ಮೊನೊ ಶಾಕ್ ಅಬ್ಸರ್ವರ್‍‍ಗಳನ್ನು ನೀಡಲಾಗಿದೆ.

Most Read Articles

Kannada
English summary
Husqvarna Vitpilen 250 Looks Sportier. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X