Just In
Don't Miss!
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿಫಲ ಹೇಗಿದೆ?
- News
ದೆಹಲಿ ಸರ್ಕಾರ ಹೇಳಿದ್ದಕ್ಕಿಂತ ಹೆಚ್ಚು ಕೊರೊನಾ ಸೋಂಕಿತರು ಸಾವು: ಮೇಯರ್
- Sports
ಸತತ ಮೂರನೇ ಸೋಲಿಗೆ ಬೇಸತ್ತ ಡೇವಿಡ್ ವಾರ್ನರ್ ಹೇಳಿದ್ದೇನು?
- Finance
UMANG APP: ಇಪಿಎಫ್ಗೆ ಸಂಬಂಧಿಸಿದ ಆ್ಯಪ್, ವೈಶಿಷ್ಟ್ಯಗಳೇನು ತಿಳಿಯಿರಿ
- Movies
ಜಾಕಿ ಚಾನ್ ತಮ್ಮ ಮಗನಿಗೆ ಸಾವಿರಾರು ಕೋಟಿ ಆಸ್ತಿಯನ್ನು ಕೊಡುತ್ತಿಲ್ಲವೇಕೆ?
- Education
Ninasam Diploma Admission 2020-21: ಮೇ ತಿಂಗಳಲ್ಲಿ ನೀನಾಸಂ ಡಿಪ್ಲೋಮಾ ಪ್ರವೇಶಾತಿ ಆರಂಭ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸುಧಾರಿತ ಬ್ಯಾಟರಿ ಪ್ರೇರಿತ ಈಸಿ ಪ್ಲಸ್ ಇವಿ ಮೊಪೆಡ್ ಬಿಡುಗಡೆ ಮಾಡಿದ ಡೆಟೆಲ್
ಬಜೆಟ್ ಬೆಲೆಯ ಈಸಿ ಎಲೆಕ್ಟ್ರಿಕ್ ಮೊಪೆಡ್ ಪರಿಚಯಿಸಿ ಗ್ರಾಹಕರನ್ನು ಸೆಳೆಯುತ್ತಿರುವ ಡೆಟೆಲ್ ಎಲೆಕ್ಟ್ರಿಕ್ ಮೊಬಿಲಿಟಿ ಕಂಪನಿಯು ಮತ್ತೊಂದು ಸುಧಾರಿತ ತಂತ್ರಜ್ಞಾನ ಪ್ರೇರಿತ ಬ್ಯಾಟರಿ ಪ್ಯಾಕ್ ಹೊಂದಿರುವ ಈಸಿ ಪ್ಲಸ್ ಮೊಪೆಡ್ ಬಿಡುಗಡೆ ಮಾಡಿದೆ.

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಈಸಿ ಪ್ಲಸ್ ಮೊಪೆಡ್ ಆವೃತ್ತಿಯಲ್ಲಿ ಹಲವಾರು ಬದಲಾವಣೆಗಳನ್ನು ಪರಿಚಯಿಸಿರುವ ಡೆಟೆಲ್ ಕಂಪನಿಯು ಇದೀಗ ಹೊಸ ಈಸಿ ಪ್ಲಸ್ ಮೊಪೆಡ್ ಆವೃತ್ತಿಯನ್ನು ಸ್ವಂತ ಬಳಕೆಯ ಜೊತೆಗೆ ಬಿಟುಬಿ(ಬ್ಯುಸಿನೆಸ್ ಟು ಬ್ಯುಸಿನೆಸ್) ಉದ್ದೇಶಗಳಿಗೂ ಬಿಡುಗಡೆ ಮಾಡಿದ್ದು, ಈಸಿ ಮೊಪೆಡ್‌ಗಿಂತಲೂ ಉತ್ತಮ ಸೌಲಭ್ಯಗಳನ್ನು ಹೊಂದಿರುವ ಈಸಿ ಪ್ಲಸ್ ಆವೃತ್ತಿಯು ವಿಸ್ತರಿತ ಬ್ಯಾಟರಿ ಪಡೆದುಕೊಂಡಿದೆ.

ಈಸಿ ಪ್ಲಸ್ ಮೊಪೆಡ್ ಎಲೆಕ್ಟ್ರಿಕ್ ಆವೃತ್ತಿಯು ನಗರಗಳ ಪ್ರದೇಶಗಳಲ್ಲಿನ ಸಂಚಾರಕ್ಕೆ ಸಾಕಷ್ಟು ಅನುಕೂಲಕರವಾದ ಸೌಲಭ್ಯಗಳನ್ನು ಹೊಂದಿದ್ದು, ಹೊಸ ಮೊಪೆಡ್ ಶೀಘ್ರದಲ್ಲೇ ಪ್ರಮುಖ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

ಹೊಸ ಈಸಿ ಪ್ಲಸ್ ಮೊಪೆಡ್ ಎಲೆಕ್ಟ್ರಿಕ್ ಮೊಪೆಡ್ ಮಾದರಿಯು 39,999 ಕ್ಕೆ ಖರೀದಿ ಲಭ್ಯವಿದ್ದು, ಪ್ರತಿ ಚಾರ್ಜ್‌ಗೆ ಗರಿಷ್ಠ 70ಕಿ.ಮೀ ಮೈಲೇಜ್ ಹೊಂದಿರಲಿದೆ. 20 ಎಹೆಚ್ ಲಿಥೀಯಂ ಅಯಾನ್ ಬ್ಯಾಟರಿ ಹೊಂದಿರುವ ಈ ಮೊಪೆಡ್ ಮಾದರಿಯು 4-5 ಗಂಟೆಗಳಲ್ಲಿ ಪೂರ್ಣ ಪ್ರಮಾಣ ಚಾರ್ಜ್ ಆಗಲಿದೆ.

ಸದ್ಯ ಮಾರುಕಟ್ಟೆಯಲ್ಲಿ ಡೆಟೆಲ್ ಎಲೆಕ್ಟ್ರಿಕ್ ಮೊಬಿಲಿಟಿ ಕಂಪನಿಯು ಆರಂಭಿಕ ಈಸಿ ಮೊಪೆಡ್ ಮಾದರಿಯನ್ನು ರೂ.19,999ಕ್ಕೆ ಮಾರಾಟ ಮಾಡುತ್ತಿದ್ದು, ಪ್ರತಿ ಗಂಟೆಗೆ 25 ಕಿ.ಮೀಗಳಾಗಿರುವುದರಿಂದ ಡೆಟೆಲ್ ಮೊಪೆಡ್‌ಗಳನ್ನು ಅನ್ನು ಯಾವುದೇ ರಿಜಿಸ್ಟರ್ ಇಲ್ಲದೆಯೇ ಮತ್ತು ಡಿಎಲ್ ಇಲ್ಲದೆಯೇ ರೈಡ್ ಮಾಡಬಹುದಾಗಿದೆ.

ಇನ್ನು ಡೆಟೆಲ್ ಎಲೆಕ್ಟ್ರಿಕ್ ಮೊಬಿಲಿಟಿ ಕಂಪನಿಯು 2017ರಲ್ಲಿ ಸ್ಥಾಪನೆಯಾಗಿದ್ದು, ಇದಕ್ಕೂ ಮುನ್ನ ಕಂಪನಿಯು ಹಲವಾರು ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಬಿಡುಗಡೆಗೊಳಿಸಿತ್ತು. ಡೆಟೆಲ್ ವಿಶ್ವದ ಅಗ್ಗದ ಎಲ್ಇಡಿ ಟೆಲಿವಿಷನ್ ಅನ್ನು ಕೇವಲ ರೂ.4,000ಗಳಿಗೆ ಬಿಡುಗಡೆಗೊಳಿಸಿತ್ತು.

ಇದರ ಜೊತೆಗೆ ಕಂಪನಿಯು ವಿಶ್ವದ ಅಗ್ಗದ ಫೀಚರ್ ಫೋನ್ ಅನ್ನು ಸಹ ಬಿಡುಗಡೆಗೊಳಿಸಿತ್ತು. ಕಂಪನಿಯು ಬಿಡುಗಡೆಗೊಳಿಸಿದ ಫೀಚರ್ ಫೋನ್ ಬೆಲೆ ರೂ.299 ಗಳಾಗಿತ್ತು. 2020ರಲ್ಲಿ ಮೊದಲ ಬಾರಿಗೆ ಡೆಟೆಲ್ ಕಂಪನಿಯು ಈಸಿ ಎಲೆಕ್ಟ್ರಿಕ್ ಮೊಪೆಡ್ ಅನ್ನು ಕೈಗೆಟಕುವ ಬೆಲೆಯಲ್ಲಿ ಬಿಡುಗಡೆ ಮಾಡಿತು.
MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಡೆಟೆಲ್ ಮೊಪೆಡ್‌ಗಳನ್ನು ಕಚೇರಿ, ಶಾಪಿಂಗ್ ಅಥವಾ ಸಿಟಿಯೊಳಗಿನ ಪ್ರಯಾಣಕ್ಕಾಗಿ ಬಳಸಲು ಸೂಕ್ತವಾಗಿದ್ದು, ಇದೀಗ ಬಿಡುಗಡೆಯಾಗಿರುವ ಹೊಸ ಈಸಿ ಪ್ಲಸ್ ಮೊಪೆಡ್ ಎಲೆಕ್ಟ್ರಿಕ್ ಮೊಪೆಡ್ ಮಾದರಿಯು ಮತ್ತಷ್ಟು ಗ್ರಾಹಕರನ್ನು ಸೆಳೆಯಲು ಸಿದ್ದವಾಗಿದೆ.

ಡೆಟೆಲ್ ಮೊಪೆಡ್‌ಗಳ ನಿರ್ವಹಣೆ ಮಾಡುವುದು ಕೂಡಾ ಬಹಳ ಸುಲಭವಾಗಿದ್ದು, ಈ ಮೊಪೆಡ್ ವೇಗವಾಗಿ ಚಾರ್ಜ್ ಆಗುತ್ತದೆ. ಈ ಎಲೆಕ್ಟ್ರಿಕ್ ಮೊಪೆಡ್ ಸಣ್ಣ ಬೈಸಿಕಲ್ ಆಕಾರವನ್ನು ಹೊಂದಿದ್ದು, ಅತಿ ಕಡಿಮೆ ತೂಕವನ್ನು ಹೊಂದಿದೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಡೆಟೆಲ್ ಮೊಪೆಡ್ ನಲ್ಲಿರುವ ಚೈನ್ ಪ್ಯಾಡಲ್ ಸಹಾಯದಿಂದ ಚಾರ್ಜ್ ಮುಗಿದ ನಂತರವೂ ಸಹ ಈ ಮೊಪೆಡ್ ಅನ್ನು ಚಲಾಯಿಸಬಹುದಾಗಿದ್ದು, ವಿವಿಧ ಮಾದರಿಗಳಿಗೆ ಅನುಗುಣವಾಗಿ ವಿವಿಧ ರೇಂಜ್ ಹೊಂದಿರುವ ಲಿಥಿಯಂ ಐಯಾನ್ ಬ್ಯಾಟರಿಯನ್ನು ಅಳವಡಿಸಲಾಗಿದೆ.