ದುಬಾರಿ ಬೆಲೆಯ ಸ್ಟ್ರೀಟ್‌ಫೈಟರ್ ಬೈಕುಗಳನ್ನು ಬಿಡುಗಡೆಗೊಳಿಸಿದ ಡುಕಾಟಿ

ಡುಕಾಟಿ ಕಂಪನಿಯು ತನ್ನ ಬಹು ನಿರೀಕ್ಷಿತ 2021ರ ಸ್ಟ್ರೀಟ್‌ಫೈಟರ್ ವಿ 4 ಹಾಗೂ ವಿ 4 ಎಸ್ ಬೈಕುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. 2021ರ ಡುಕಾಟಿ ಸ್ಟ್ರೀಟ್‌ಫೈಟರ್ ವಿ 4 ಬೈಕಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ. 19.99 ಲಕ್ಷಗಳಾಗಿದೆ.

ದುಬಾರಿ ಬೆಲೆಯ ಸ್ಟ್ರೀಟ್‌ಫೈಟರ್ ಬೈಕುಗಳನ್ನು ಬಿಡುಗಡೆಗೊಳಿಸಿದ ಡುಕಾಟಿ

ಇನ್ನು ವಿ 4 ಎಸ್ ಪರ್ಫಾರ್ಮೆನ್ಸ್ ಸ್ಟ್ರೀಟ್ ನೇಕೆಡ್ ಬೈಕಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.22.99 ಲಕ್ಷಗಳಾಗಿದೆ. 2021ರ ಸ್ಟ್ರೀಟ್‌ಫೈಟರ್ ವಿ 4 ಹಾಗೂ ವಿ 4 ಎಸ್ ಬೈಕುಗಳಲ್ಲಿ ಹಲವಾರು ಅಪ್ ಡೇಟ್'ಗಳನ್ನು ಮಾಡಲಾಗಿದೆ. ಇವುಗಳಲ್ಲಿ ಹೊಸ ಎಲೆಕ್ಟ್ರಾನಿಕ್ಸ್ ಹಾಗೂ ಅಪ್ ಡೇಟ್ ಮಾಡಲಾದ ಮೋಟೋ ಜಿಪಿ ಪಡೆದ ಎಲೆಕ್ಟ್ರಿಕ್ ಯುನಿಟ್'ಗಳು ಸೇರಿವೆ.

ದುಬಾರಿ ಬೆಲೆಯ ಸ್ಟ್ರೀಟ್‌ಫೈಟರ್ ಬೈಕುಗಳನ್ನು ಬಿಡುಗಡೆಗೊಳಿಸಿದ ಡುಕಾಟಿ

ಸ್ಟ್ರೀಟ್‌ಫೈಟರ್ ವಿ 4 ಬೈಕ್ ಕಂಪನಿಯ ಪ್ರಮುಖ ನೇಕೆಡ್ ಬೈಕ್ ಆಗಿದೆ. ಹೊಸ ಸ್ಟ್ರೀಟ್‌ಫೈಟರ್ ವಿ 4 ಬೈಕ್ ಅನ್ನು ಡುಕಾಟಿ ರೆಡ್ ಬಣ್ಣದಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ. ಸ್ಟ್ರೀಟ್‌ಫೈಟರ್ ವಿ 4 ಎಸ್ ಬೈಕ್ ಅನ್ನು ಡುಕಾಟಿ ರೆಡ್ ಹಾಗೂ ಡಾರ್ಕ್ ಸ್ಟೆಲ್ತ್ ಎಂಬ ಎರಡು ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ದುಬಾರಿ ಬೆಲೆಯ ಸ್ಟ್ರೀಟ್‌ಫೈಟರ್ ಬೈಕುಗಳನ್ನು ಬಿಡುಗಡೆಗೊಳಿಸಿದ ಡುಕಾಟಿ

ಈ ಹೊಸ ಬೈಕುಗಳ ಬುಕ್ಕಿಂಗ್'ಗಳನ್ನು ಆರಂಭಿಸಲಾಗಿದ್ದು, ಲಾಕ್‌ಡೌನ್ ಮುಗಿದ ಕೂಡಲೇ ವಿತರಣೆಯನ್ನು ಆರಂಭಿಸಲಾಗುವುದು. 2021ರ ಹೊಸ ಸ್ಟ್ರೀಟ್‌ಫೈಟರ್ ವಿ 4 ಹಾಗೂ ವಿ 4 ಎಸ್ ಬೈಕುಗಳಲ್ಲಿ 1,103 ಸಿಸಿ ಡೆಸ್ಮೋಸೆಡಿಸಿ ಸ್ಟ್ರಾಡೇಲ್ 90 ವಿ 4 ಎಂಜಿನ್ ಅಳವಡಿಸಲಾಗಿದೆ.

ದುಬಾರಿ ಬೆಲೆಯ ಸ್ಟ್ರೀಟ್‌ಫೈಟರ್ ಬೈಕುಗಳನ್ನು ಬಿಡುಗಡೆಗೊಳಿಸಿದ ಡುಕಾಟಿ

ಈ ಎಂಜಿನ್ 13,000 ಆರ್‌ಪಿಎಂನಲ್ಲಿ 206 ಬಿಹೆಚ್‌ಪಿ ಪವರ್ ಹಾಗೂ 9.500 ಆರ್‌ಪಿಎಂನಲ್ಲಿ 123 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್'ನೊಂದಿಗೆಆರು ಸ್ಪೀಡಿನ ಗೇರ್‌ಬಾಕ್ಸ್‌ (ಡಿಕ್ಯೂಎಸ್) ಡುಕಾಟಿ ಕ್ವಿಕ್ ಶಿಫ್ಟ್ ಇವಿಒ 2 ಬೈ ಡೈರೆಕ್ಷನಲ್ ಹಾಗೂ ಸ್ಲಿಪ್-ಅಸಿಸ್ಟೆಡ್ ಕ್ಲಚ್‌ ಜೋಡಿಸಲಾಗಿದೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ದುಬಾರಿ ಬೆಲೆಯ ಸ್ಟ್ರೀಟ್‌ಫೈಟರ್ ಬೈಕುಗಳನ್ನು ಬಿಡುಗಡೆಗೊಳಿಸಿದ ಡುಕಾಟಿ

ಸ್ಟ್ರೀಟ್‌ಫೈಟರ್ ವಿ 4 ಬೈಕ್ 201 ಕೆ.ಜಿ ತೂಕವನ್ನು ಹೊಂದಿದ್ದರೆ, ವಿ 4 ಎಸ್‌ 199 ಕೆ.ಜಿ ತೂಕವನ್ನು ಹೊಂದಿದೆ. ಅಕ್ರಾಪೊವಿಕ್ ಫುಲಿ ರೇಸಿಂಗ್ ಡುಕಾಟಿ ಪರ್ಫಾರ್ಮೆನ್ಸ್ ಎಕ್ಸಾಸ್ಟ್ ಅಳವಡಿಸುವ ಮೂಲಕ ಈ ಬೈಕಿನ ಪವರ್ ಹಾಗೂ ಟಾರ್ಕ್ ಅಂಕಿಅಂಶಗಳನ್ನು 217 ಬಿಹೆಚ್‌ಪಿ ಪವರ್ ಹಾಗೂ 130 ಎನ್ಎಂಗಳಿಗೆ ಹೆಚ್ಚಿಸಬಹುದು.

ದುಬಾರಿ ಬೆಲೆಯ ಸ್ಟ್ರೀಟ್‌ಫೈಟರ್ ಬೈಕುಗಳನ್ನು ಬಿಡುಗಡೆಗೊಳಿಸಿದ ಡುಕಾಟಿ

ಇದು ಬೈಕ್ ತೂಕವನ್ನು 6 ಕೆ.ಜಿಗಳಷ್ಟು ಕಡಿಮೆ ಮಾಡುತ್ತದೆ. ಈ ಬೈಕ್ 3 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ಈ ಬೈಕಿನ ಟಾಪ್ ಸ್ಪೀಡ್ ಅನ್ನು ಎಲೆಕ್ಟ್ರಾನಿಕ್ ಆಗಿ 270 ಕಿ.ಮೀಗಳಿಗೆ ಸೀಮಿತಗೊಳಿಸಲಾಗಿದೆ.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ದುಬಾರಿ ಬೆಲೆಯ ಸ್ಟ್ರೀಟ್‌ಫೈಟರ್ ಬೈಕುಗಳನ್ನು ಬಿಡುಗಡೆಗೊಳಿಸಿದ ಡುಕಾಟಿ

ಸ್ಟ್ರೀಟ್‌ಫೈಟರ್ ವಿ 4 ಬೈಕಿನಲ್ಲಿ ಇನ್ಸ್'ಟ್ರೂಮೆಂಟ್ ಕನ್ಸೋಲ್‌ಗಾಗಿ 5 ಇಂಚಿನ ಟಿಎಫ್‌ಟಿ ಕಲರ್ ಡಿಸ್ ಪ್ಲೇ ನೀಡಲಾಗಿದೆ. ಈ ಬೈಕಿನಲ್ಲಿ ಮಲ್ಟಿ ರೈಡಿಂಗ್ ಮೋಡ್, ವಿವಿಧ ಪವರ್ ಮೋಡ್‌, ಕಾರ್ನರಿಂಗ್ ಎಬಿಎಸ್ ಇವಿಒ, (ಡಿಟಿಸಿ) ಡುಕಾಟಿ ಟ್ರಾಕ್ಷನ್ ಕಂಟ್ರೋಲ್ ಇವಿಒ 2, (ಡಿಡಬ್ಲ್ಯೂಸಿ) ಡುಕಾಟಿ ವ್ಹೀಲೀ ಕಂಟ್ರೋಲ್ ಇವಿಒ, (ಡಿಎಸ್‌ಸಿ) ಡುಕಾಟಿ ಸ್ಲೈಡ್ ಕಂಟ್ರೋಲ್, (ಇಬಿಸಿ) ಎಂಜಿನ್ ಬ್ರೇಕ್ ಕಂಟ್ರೋಲ್ ಇವಿಒ ಸೇರಿದಂತೆ ಹಲವಾರು ಫೀಚರ್'ಗಳನ್ನು ನೀಡಲಾಗಿದೆ.

ದುಬಾರಿ ಬೆಲೆಯ ಸ್ಟ್ರೀಟ್‌ಫೈಟರ್ ಬೈಕುಗಳನ್ನು ಬಿಡುಗಡೆಗೊಳಿಸಿದ ಡುಕಾಟಿ

ಈ ಬೈಕಿನಲ್ಲಿ ಆಕರ್ಷವಾದ ಎಲ್‌ಇಡಿ ಹೆಡ್‌ಲ್ಯಾಂಪ್‌, ಟೇಲ್‌ಲ್ಯಾಂಪ್‌, ಮಸ್ಕ್ಯುಲರ್ ಫ್ಯೂಯಲ್ ಟ್ಯಾಂಕ್, ಬೃಹತ್ ರೇಡಿಯೇಟರ್ ಗ್ರಿಲ್, ಲೋಡ್-ಫಿನಿಶ್ಡ್ ಫೋರ್ಕ್‌ ಹಾಗೂ ಸಿಂಗಲ್ ಸೈಡ್ ಸ್ವಿಂಗಾರ್ಮ್ ನೀಡಲಾಗಿದೆ.

MOST READ:ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ದುಬಾರಿ ಬೆಲೆಯ ಸ್ಟ್ರೀಟ್‌ಫೈಟರ್ ಬೈಕುಗಳನ್ನು ಬಿಡುಗಡೆಗೊಳಿಸಿದ ಡುಕಾಟಿ

ಈ ಬೈಕಿನಲ್ಲಿ ಸಸ್ಪೆಂಷನ್'ಗಾಗಿ ಮುಂಭಾಗದಲ್ಲಿ 43 ಎಂಎಂ ಫುಲಿ ಅಡ್ಜಸ್ಟಬಲ್ ಯುಎಸ್‌ಡಿ ಶೋವಾ ಬಿಪಿಎಫ್ ಹಾಗೂ ಹಿಂಭಾಗದಲ್ಲಿ ಅಡ್ಜಸ್ಟಬಲ್ ಸ್ಯಾಚ್ಸ್ ಮೊನೊ ಶಾಕ್ ಯುನಿಟ್'ಗಳನ್ನು ನೀಡಲಾಗಿದೆ.

ದುಬಾರಿ ಬೆಲೆಯ ಸ್ಟ್ರೀಟ್‌ಫೈಟರ್ ಬೈಕುಗಳನ್ನು ಬಿಡುಗಡೆಗೊಳಿಸಿದ ಡುಕಾಟಿ

ವಿ 4 ಎಸ್ ಬೈಕಿನ ಮುಂಭಾಗದಲ್ಲಿ ಎಲೆಕ್ಟ್ರಾನಿಕ್ ಆಗಿ ಅಡ್ಜಸ್ಟ್ ಮಾಡಬಹುದಾದ ಓಹ್ಲಿನ್ಸ್ ಎನ್ಐಎಕ್ಸ್ 30 ಯುಎಸ್‌ಡಿ ಫೋರ್ಕ್ ಹಾಗೂ ಹಿಂಭಾಗದಲ್ಲಿ ಓಹ್ಲಿನ್ಸ್ ಟಿಟಿಎಕ್ಸ್ 36 ಮೊನೊ ಶಾಕ್ ಯುನಿಟ್'ಗಳನ್ನು ನೀಡಲಾಗಿದೆ.

MOST READ:ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ದುಬಾರಿ ಬೆಲೆಯ ಸ್ಟ್ರೀಟ್‌ಫೈಟರ್ ಬೈಕುಗಳನ್ನು ಬಿಡುಗಡೆಗೊಳಿಸಿದ ಡುಕಾಟಿ

ಈ ಎರಡೂ ಬೈಕ್'ಗಳಲ್ಲಿ ಬ್ರೇಕಿಂಗ್'ಗಾಗಿ ಮುಂಭಾಗದಲ್ಲಿ ಡ್ಯುಯಲ್ 330 ಎಂಎಂ ಸೆಮಿ-ಫ್ಲೋಟಿಂಗ್ ಡಿಸ್ಕ್ ಮೂಲಕ ರೇಡಿಯಲ್-ಮೌಂಟೆಡ್ ಬ್ರೆಂಬೊ ಮೊನೊಬ್ಲೋಕ್ ಸ್ಟೈಲ್ಮಾ ಎಂ 4.30 4 ಪಿಸ್ಟನ್ ಕ್ಯಾಲಿಪರ್‌ ಹಾಗೂ ಹಿಂಭಾಗದಲ್ಲಿ ಎರಡು ಪಿಸ್ಟನ್ ಕ್ಯಾಲಿಪರ್‌ಗಳನ್ನು ನೀಡಲಾಗಿದೆ.

ದುಬಾರಿ ಬೆಲೆಯ ಸ್ಟ್ರೀಟ್‌ಫೈಟರ್ ಬೈಕುಗಳನ್ನು ಬಿಡುಗಡೆಗೊಳಿಸಿದ ಡುಕಾಟಿ

ಸ್ಟ್ಯಾಂಡರ್ಡ್ ಸ್ಟ್ರೀಟ್‌ಫೈಟರ್ ವಿ 4 ಬೈಕ್ ಐದು-ಸ್ಪೋಕ್ 17 ಇಂಚಿನ ಅಲಾಯ್ ವ್ಹೀಲ್‌ಗಳನ್ನು ಹೊಂದಿದ್ದರೆ, ವಿ 4 ಎಸ್ ಬೈಕ್ ಹಗುರವಾದ ಮಾರ್ಚೆಸಿನಿ 3-ಸ್ಪೋಕ್ ಖೋಟಾ ಅಲ್ಯೂಮಿನಿಯಂ ಅಲಾಯ್ ವ್ಹೀಲ್‌ಗಳನ್ನು ಹೊಂದಿದೆ.

MOST READ:ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ದುಬಾರಿ ಬೆಲೆಯ ಸ್ಟ್ರೀಟ್‌ಫೈಟರ್ ಬೈಕುಗಳನ್ನು ಬಿಡುಗಡೆಗೊಳಿಸಿದ ಡುಕಾಟಿ

ಈ ಎರಡೂ ಬೈಕ್'ಗಳು ಎರಡೂ ಬದಿಗಳಲ್ಲಿ ಪಿರೆಲ್ಲಿ ಡಯಾಬ್ಲೊ ರೊಸ್ಸೊ ಕೊರ್ಸಾ 2 ಪರ್ಫಾರ್ಮೆನ್ಸ್ ಟಯರ್‌ಗಳನ್ನು ಹೊಂದಿವೆ. ಈ ಬೈಕ್'ಗಳು ದೇಶಿಯ ಮಾರುಕಟ್ಟೆಯಲ್ಲಿ ಟ್ರಯಂಫ್ ಸ್ಪೀಡ್ ಟ್ರಿಪಲ್ 1200 ಆರ್‌ಎಸ್ ಹಾಗೂ ಕವಾಸಕಿ ನಿಂಜಾ ಝಡ್ ಹೆಚ್ 2 ಬೈಕುಗಳಿಗೆ ಪೈಪೋಟಿ ನೀಡುತ್ತವೆ.

Most Read Articles

Kannada
Read more on ಡುಕಾಟಿ ducati
English summary
Ducati launches new Streetfighter V4 and V4S bikes in India. Read in Kannada.
Story first published: Thursday, May 13, 2021, 18:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X