ಹೊಸ ಫೀಚರ್‌ನೊಂದಿಗೆ ಅಪ್‌ಡೇಟ್ ಆದ ಮೈಡುಕಾಟಿ ಆ್ಯಪ್

ಮೈಡುಕಾಟಿ ಆ್ಯಪ್ ಒಂದು ಮೊಬೈಲ್ ಅಪ್ಲಿಕೇಶನ್‌ ಆಗಿದ್ದು, ಇದು ಐಒಎಸ್ ಮತ್ತು ಆಂಡ್ರಾಯ್ಡ್ ಸ್ಮಾರ್ಟ್ ಪೋನ್ ಗಳಲ್ಲಿಯು ಲಭ್ಯವಿದೆ. ಮೈಡುಕಾಟಿ ಆ್ಯಪ್ ಅನ್ನು ಆಪಲ್ ಸ್ಟೋರ್ ಹಾಗೂ ಗೂಗಲ್ ಪ್ಲೇಸ್ಟೋರ್‌ನಿಂದ ಉಚಿತವಾಗಿ ಡೌನ್‌ಲೋಡ್ ಮಾಡಬಹುದು.

ಹೊಸ ಫೀಚರ್‌ನೊಂದಿಗೆ ಅಪ್‌ಡೇಟ್ ಆದ ಮೈಡುಕಾಟಿ ಆ್ಯಪ್

ಡುಕಾಟಿ ಈ ಅಪ್ಲಿಕೇಶನ್ ಅನ್ನು ನವೀಕರಿಸಿದ್ದಾರೆ ಮತ್ತು ಹೊಸ ನಿರ್ವಹಣೆ(ಮೈಂಟನ್ಸ್) ವಿಭಾಗವನ್ನು ಸೇರಿಸಿದ್ದಾರೆ. ಹೊಸ ನಿರ್ವಹಣೆ ವಿಭಾಗದ ಪರಿಚಯವು ತನ್ನ ಗ್ರಾಹಕರಿಗೆ ಮೇಲೆ ಡುಕಾಟಿ ಕಂಪನಿಗೆ ಇರುವ ಬದ್ಧತೆಯನ್ನು ತಿಳಿಸುತ್ತದೆ. ಗ್ರಾಹಕರ ಅಗತ್ಯವಾದ ಎಲ್ಲಾ ಮಾಹಿತಿ ಮತ್ತು ಸೇವೆಗಳನ್ನು ಒದಗಿಸುತ್ತದೆ. ಈ ವಿಭಾಗದಲ್ಲಿ, ಗ್ರಾಹಕರು ಜುಲೈ 2019 ರಿಂದ ಅಧಿಕೃತ ಡುಕಾಟಿ ನೆಟ್‌ವರ್ಕ್‌ನೊಂದಿಗೆ ತಮ್ಮ ಎಲ್ಲಾ ನಿರ್ವಹಣಾ ಕಾರ್ಯಗಳ ವಿವರಗಳನ್ನು ನೋಡಬಹುದು.

ಹೊಸ ಫೀಚರ್‌ನೊಂದಿಗೆ ಅಪ್‌ಡೇಟ್ ಆದ ಮೈಡುಕಾಟಿ ಆ್ಯಪ್

ಈ ಹೊಸ ಫೀಚರ್ ಮೂಲಕ ಗ್ರಾಹಕರು ಜುಲೈ 2019 ರಿಂದ ಅಧಿಕೃತ ಡುಕಾಟಿ ನೆಟ್‌ವರ್ಕ್‌ನೊಂದಿಗೆ ತಮ್ಮ ಬೈಕಿನಲ್ಲಿ ನಡೆಸುವ ಎಲ್ಲಾ (ಮೈಟೆನ್ಸ್) ನಿರ್ವಹಣಾ ಕಾರ್ಯಗಳ ಮಾಹಿತಿಯನ್ನು ತಿಳಿಯಬಹುದು.

ಹೊಸ ಫೀಚರ್‌ನೊಂದಿಗೆ ಅಪ್‌ಡೇಟ್ ಆದ ಮೈಡುಕಾಟಿ ಆ್ಯಪ್

ಇದರೊಂದಿಗೆ ಭವಿಷ್ಯಕ್ಕಾಗಿ ನಿಗದಿಯಾಗಿರುವ ನವೀಕರಣಗಳು ಮತ್ತು ಯಾವುದೇ ಅಭಿಯಾನಗಳ ಬಗ್ಗೆ ಸರಿಯಾದ ಸಮಯದಲ್ಲಿ ತಿಳಿದುಕೊಳ್ಳಲು ಸಾಧ್ಯವಿದೆ. ಹೊಸ ನಿರ್ವಹಣೆ ವಿಭಾಗದ ಜೊತೆಗೆ, ಅಪ್ಲಿಕೇಶನ್ ಇತರ ಹಲವು ವೈಶಿಷ್ಟ್ಯಗಳನ್ನು ಸಹ ನೀಡುತ್ತದೆ

ಹೊಸ ಫೀಚರ್‌ನೊಂದಿಗೆ ಅಪ್‌ಡೇಟ್ ಆದ ಮೈಡುಕಾಟಿ ಆ್ಯಪ್

ಹೊಸ ನಿರ್ವಹಣೆ ವಿಭಾಗದ ಜೊತೆಗೆ, ಅಪ್ಲಿಕೇಶನ್ ಇತರ ಹಲವು ವೈಶಿಷ್ಟ್ಯಗಳನ್ನು ಸಹ ನೀಡುತ್ತದೆ. ಇನ್ನು ಮೈಡುಕಾಟಿ ಆ್ಯಪ್ ಮೂಲಕ ಜಿಯೋಲೋಕಲೈಸೇಶನ್ ಆಧಾರದ ಮೇಲೆ ಹತ್ತಿರದ ಡೀಲರುಗಳನ್ನು ಹುಡುಕಲು, ಲಭ್ಯವಿರುವ ಸೇವೆಗಳನ್ನು ಸಂಪರ್ಕಿಸಿ ಮತ್ತು ಅವರನ್ನು ತ್ವರಿತವಾಗಿ ಸಂಪರ್ಕಿಸಲು ಅಥವಾ ಟೆಸ್ಟ್ ಡೈವ್ ಗಾಗಿ ಅಪಾಯಿಂಟ್ಮೆಂಟ್ ಪಡೆಯಲು ಸಾಧ್ಯವಿದೆ.

ಹೊಸ ಫೀಚರ್‌ನೊಂದಿಗೆ ಅಪ್‌ಡೇಟ್ ಆದ ಮೈಡುಕಾಟಿ ಆ್ಯಪ್

ಈ ಅಪ್ಲಿಕೇಶನ್ ಅಧಿಕೃತ ಡುಕಾಟಿ ಕ್ಲಬ್‌ಗಳ (ಡಿಒಸಿ) ಕಮ್ಯೂನಿಟಿಗಾಗಿ ಒಂದು ವಿಭಾಗವನ್ನು ಕಾಯ್ದಿರಿಸಲಾಗಿದೆ. ಅಲ್ಲಿ ಕ್ಲಬ್‌ಗಳ ಸದಸ್ಯರು ಡುಕಾಟಿ ಬಗ್ಗೆ ತಮ್ಮಗೆ ಇರುವ ಕ್ರೇಜ್ ಬಗ್ಗೆ ಹಂಚಿಕೊಳ್ಳಬಹುದು. ಇನ್ನು ಅವರಿಗೆ ಕಾಯ್ದಿರಿಸಿದ ಪ್ರಯೋಜನಗಳನ್ನು ಪಡೆಯಬಹುದು.

ಹೊಸ ಫೀಚರ್‌ನೊಂದಿಗೆ ಅಪ್‌ಡೇಟ್ ಆದ ಮೈಡುಕಾಟಿ ಆ್ಯಪ್

ಇನ್ನು ಇಟಲಿ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಡುಕಾಟಿ ಇತ್ತೀಚೆಗೆ ತನ್ನ ಪಾನಿಗಲೆ ವಿ4 ಸೂಪರ್‌ಬೈಕ್‌ಗಾಗಿ ಪರ್ಫಾಮೆನ್ಸ್ ಅಕ್ಸೆಸರೀಸ್ ಅನ್ನು ಪರಿಚಯಿಸಿತು. ಡುಕಾಟಿ ಪಾನಿಗಲೆ ವಿ4 ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಅಂತ್ಯತ ಜನಪ್ರಿಯ ಸೂಪರ್‌ಬೈಕ್‌ಗಳಲ್ಲಿ ಒಂದಾಗಿದೆ.

ಹೊಸ ಫೀಚರ್‌ನೊಂದಿಗೆ ಅಪ್‌ಡೇಟ್ ಆದ ಮೈಡುಕಾಟಿ ಆ್ಯಪ್

ಡುಕಾಟಿ ಪಾನಿಗಲೆ ವಿ4 ಪರ್ಫಾಮೆನ್ಸ್ ಅಕ್ಸೆಸರೀಸ್ ಗಳನ್ನು ಸೆಂಟ್ರೊ ಸ್ಟೈಲ್ ಡುಕಾಟಿ ವಿನ್ಯಾಸಗೊಳಿಸಿದ್ದು, ಗರಿಷ್ಠ ಪರ್ಫಾಮೆನ್ಸ್ ಖಚಿತಪಡಿಸಿಕೊಳ್ಳಲು ಮತ್ತು ಬೈಕಿಗೆ ವಿಶಿಷ್ಟ ರೇಸಿಂಗ್ ಲುಕ್ ಅನ್ನು ನೀಡಿದೆ.

ಹೊಸ ಫೀಚರ್‌ನೊಂದಿಗೆ ಅಪ್‌ಡೇಟ್ ಆದ ಮೈಡುಕಾಟಿ ಆ್ಯಪ್

ಈ ಪರ್ಫಾಮೆನ್ಸ್ ಅಕ್ಸೆಸರೀಸ್ ಪಟ್ಟಿಯಲ್ಲಿ ಸೂಪರ್‌ಬೈಕ್ ವಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಸ್ಕಾಟ್ ರೆಡ್ಡಿಂಗ್ ಮತ್ತು ಮೈಕೆಲ್ ರಿನಾಲ್ಡಿ ಬಳಸಿದ ಪ್ಯಾನಿಗಲೆ ವಿ4 ಆರ್ ಮೇಲೆ ಅಳವಡಿಸಲಾಗಿರುವ ಎಕ್ಸಾಸ್ಟ್ ಅನ್ನು ಆಧರಿಸಿ ಡುಕಾಟಿ ಕಾರ್ಸ್ ತಂತ್ರಜ್ಞರು ಅಭಿವೃದ್ಧಿಪಡಿಸಿದ ಸಂಪೂರ್ಣ ಟೈಟಾನಿಯಂ ಅಕ್ರಪೋವಿಕ್ ಎಕ್ಸಾಸ್ಟ್ ಸಿಸ್ಟಂ ಸಹ ಸೇರಿದೆ.

Most Read Articles

Kannada
Read more on ಡುಕಾಟಿ ducati
English summary
Ducati Adds Maintenance Section In MyDucati App. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X