ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಟೀಸರ್ ಬಿಡುಗಡೆ ಮಾಡಿದ ಅರ್ಥ್ ಎನರ್ಜಿ

ಮುಂಬೈ ಮೂಲದ ಹೊಸ ವಾಹನ ಉತ್ಪಾದನಾ ಕಂಪನಿಯಾಗಿರುವ ಅರ್ಥ್ ಎನರ್ಜಿ ಶೀಘ್ರದಲ್ಲೇ ವಿವಿಧ ಮಾದರಿಯ ಹಲವು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡುತ್ತಿದ್ದು, ಜನವರಿ 26ರಂದು ಹೊಸ ವಾಹನಗಳನ್ನು ಅನಾವರಣಗೊಳಿಸಿಲಿರುವ ಕಂಪನಿಯು ಹೊಸ ದ್ವಿಚಕ್ರ ವಾಹನಗಳ ಟೀಸರ್ ಬಿಡುಗಡೆ ಮಾಡಿದೆ.

ಹೊಸ ಇವಿ ದ್ವಿಚಕ್ರ ವಾಹನಗಳ ಟೀಸರ್ ಬಿಡುಗಡೆ ಮಾಡಿದ ಅರ್ಥ್ ಎನರ್ಜಿ

ಹೆಚ್ಚುತ್ತಿರುವ ಇಂಧನ ಬೆಲೆಗಳ ಪರಿಣಾಮ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹಲವಾರು ಹೊಸ ಆಟೋ ಕಂಪನಿಗಳು ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನ ಮಾದರಿಗಳನ್ನು ಪರಿಚಯಿಸುತ್ತಿರುವುದು ಮಾರುಕಟ್ಟೆಯಲ್ಲಿ ಭಾರೀ ಬದಲಾವಣೆಗೆ ಕಾರಣವಾಗುತ್ತಿದೆ. ಹೊಸ ಮಾದರಿಯ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಸಾಂಪ್ರಾದಾಯಿಕ ವಾಹನ ಮಾರಾಟ ಮಾಡುತ್ತಿರುವ ಕಂಪನಿಗಳಿಂತಲೂ ಸ್ಟಾರ್ಟ್-ಅಪ್ ಕಂಪನಿಗಳ ಹೊಸ ಎಲೆಕ್ಟ್ರಿಕ್ ವಾಹನ ಉತ್ಪನ್ನಗಳೇ ಸದ್ಯ ಮಾರುಕಟ್ಟೆಯಲ್ಲಿ ಹೆಚ್ಚು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿವೆ.

ಹೊಸ ಇವಿ ದ್ವಿಚಕ್ರ ವಾಹನಗಳ ಟೀಸರ್ ಬಿಡುಗಡೆ ಮಾಡಿದ ಅರ್ಥ್ ಎನರ್ಜಿ

ಮುಂಬೈ ಮೂಲದ ಅರ್ಥ್ ಎನರ್ಜಿ ಕಂಪನಿಯು ಕೂಡಾ ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಆರು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಅಭಿವೃದ್ದಿ ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದು, ಇದೇ ತಿಂಗಳು 26ರಂದು ಮೂರು ಹೊಸ ದ್ವಿಚಕ್ರಗಳನ್ನು ಮೊದಲ ಹಂತದಲ್ಲಿ ಅನಾವರಣಗೊಳಿಸಿ ಮಾರಾಟಕ್ಕೆ ಚಾಲನೆ ನೀಡಲಿದೆ.

ಹೊಸ ಇವಿ ದ್ವಿಚಕ್ರ ವಾಹನಗಳ ಟೀಸರ್ ಬಿಡುಗಡೆ ಮಾಡಿದ ಅರ್ಥ್ ಎನರ್ಜಿ

ಅರ್ಥ್ ಎನರ್ಜಿ ಕಂಪನಿಯು ಮುಂಬೈನಲ್ಲಿಯೇ ಹೊಸ ವಾಹನ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದ್ದು, ಹೊಸ ವಾಹನಗಳ ಅನಾವರಣದ ನಂತರ ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ. ಮಾಹಿತಿಗಳ ಪ್ರಕಾರ ಇದೇ ತಿಂಗಳು 26ರಂದು ಹೊಸ ಇವಿ ವಾಹನಗಳನ್ನು ಅನಾವರಣಗೊಳಿಸಿ ಮುಂಬರುವ ಫೆಬ್ರುವರಿ ಆರಂಭದಲ್ಲಿ ಮಾರಾಟಕ್ಕೆ ಚಾಲನೆ ನೀಡಲಿದೆ.

ಹೊಸ ಇವಿ ದ್ವಿಚಕ್ರ ವಾಹನಗಳ ಟೀಸರ್ ಬಿಡುಗಡೆ ಮಾಡಿದ ಅರ್ಥ್ ಎನರ್ಜಿ

ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಟೀಸರ್ ಅರ್ಥ್ ಎನರ್ಜಿ ಕಂಪನಿಯು ಹೊಸ ಉತ್ಪನ್ನಗಳ ಬಗೆಗೆ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲವಾದರೂ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಹೊಸ ದ್ವಿಚಕ್ರ ವಾಹನಗಳ ಕೆಲವು ಪ್ರಮುಖ ತಾಂತ್ರಿಕ ಅಂಶಗಳು ಗ್ರಾಹಕರ ಗಮನಸೆಳೆಯುತ್ತಿವೆ. ಅರ್ಥ್ ಎನರ್ಜಿ ಕಂಪನಿಯು ಗ್ರಾಹಕರ ಬೇಡಿಕೆಯೆಂತೆ ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡಬಲ್ಲ ಆಕರ್ಷಕ ಎಲೆಕ್ಟ್ರಿಕ್ ಸ್ಕೂಟರ್ ಜೊತೆಗೆ ಎಲೆಕ್ಟ್ರಿಕ್ ಬೈಕ್ ಮಾದರಿಗಳನ್ನು ಸಿದ್ದಪಡಿಸುತ್ತಿದೆ.

ಹೊಸ ಇವಿ ದ್ವಿಚಕ್ರ ವಾಹನಗಳ ಟೀಸರ್ ಬಿಡುಗಡೆ ಮಾಡಿದ ಅರ್ಥ್ ಎನರ್ಜಿ

ಹೊಸ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗಾಗಿ ಗರಿಷ್ಠ ಶೇ.96 ರಷ್ಟು ದೇಶಿಯ ಮಾರುಕಟ್ಟೆಯಲ್ಲಿ ಉತ್ಪಾದನೆಗೊಂಡ ಬಿಡಿಭಾಗಗಳನ್ನೇ ಬಳಕೆ ಮಾಡುತ್ತಿರುವುದಾಗಿ ಹೇಳಿಕೊಂಡಿರುವ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಹೊಸ ಉತ್ಪನ್ನಗಳನ್ನು ಸಿದ್ದಪಡಿಸುತ್ತಿದೆ.

MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಹೊಸ ಇವಿ ದ್ವಿಚಕ್ರ ವಾಹನಗಳ ಟೀಸರ್ ಬಿಡುಗಡೆ ಮಾಡಿದ ಅರ್ಥ್ ಎನರ್ಜಿ

ಜೊತೆಗೆ ಹೊಸ ಎಲೆಕ್ಟ್ರಿಕ್ ವಾಹನ ಮಾದರಿಗಳ ಪ್ರಮುಖ ತಾಂತ್ರಿಕ ಅಂಶವಾಗಿರುವ ಲೀಥಿಯಂ ಅಯಾನ್ ಬ್ಯಾಟರಿ ಉತ್ಪನ್ನವನ್ನು ತಾನೇ ಉತ್ಪಾದನೆ ಮಾಡುತ್ತಿರುವುದಾಗಿ ಹೇಳಿಕೊಂಡಿರುವ ಅರ್ಥ್ ಎನರ್ಜಿ ಕಂಪನಿಯು ಇನ್‌ಹೌಸ್ ಬ್ಯಾಟರಿ ಬಳಕೆ ಮಾಡಲಿದೆ.

ಹೊಸ ಇವಿ ದ್ವಿಚಕ್ರ ವಾಹನಗಳ ಟೀಸರ್ ಬಿಡುಗಡೆ ಮಾಡಿದ ಅರ್ಥ್ ಎನರ್ಜಿ

ಇನ್ ಹೌಸ್ ಬ್ಯಾಟರಿ ಸಂಪನ್ಮೂನದಿಂದಾಗಿ ಇವಿ ವಾಹನಗಳ ಬೆಲೆಯನ್ನು ಪೆಟ್ರೋಲ್ ಮಾದರಿಗಳಿಂತಲೂ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಬಹುದಾಗಿ ಹೇಳಿಕೊಂಡಿರುವ ಅರ್ಥ್ ಎನರ್ಜಿ ಕಂಪನಿಯು ಅತ್ಯುತ್ತಮ ಬ್ಯಾಟರಿ ತಂತ್ರಜ್ಞಾನ ಬಳಕೆ ಮಾಡಿರುವ ಸುಳಿವು ನೀಡಿದೆ.

MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಹೊಸ ಇವಿ ದ್ವಿಚಕ್ರ ವಾಹನಗಳ ಟೀಸರ್ ಬಿಡುಗಡೆ ಮಾಡಿದ ಅರ್ಥ್ ಎನರ್ಜಿ

ಅರ್ಥ್ ಎನರ್ಜಿ ಕಂಪನಿಯು ಭಾರತದಲ್ಲಿ ಮೊದಲ ಇವಿ ವಾಹನ ಮಾದರಿಯಾಗಿ ಗ್ಲೆಡೆ ಎನ್ನುವ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದ್ದು, ಪ್ರತಿ ಚಾರ್ಜ್‌ಗೆ 100 ರಿಂದ 120 ಕಿ.ಮೀ ಮೈಲೇಜ್‌ನೊಂದಿಗೆ ಅರ್ಥ್ ಎನರ್ಜಿ ಎಲೆಕ್ಟ್ರಿಕ್ ವಾಹನಗಳು ರಸ್ತೆಗಳಿಯಲಿವೆ.

Most Read Articles

Kannada
English summary
Earth Energy EV Upcoming Vehicles Teased Ahead Of Launch This Month. Read in Kannada.
Story first published: Friday, January 22, 2021, 18:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X