ವೇಗವಾಗಿ ಚಲಿಸುವ, ಹೆಚ್ಚು ವ್ಯಾಪ್ತಿ ನೀಡುವ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ Eeve

ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಈ ಕಾರಣಕ್ಕೆ ದೇಶಿಯ ಮಾರುಕಟ್ಟೆಯಲ್ಲಿ ಹೊಸ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳು ಬಿಡುಗಡೆಯಾಗುತ್ತಿವೆ. ಭಾರತದಲ್ಲಿರುವ ಹಲವು ಎಲೆಕ್ಟ್ರಿಕ್ ವೆಹಿಕಲ್ ಸ್ಟಾರ್ಟ್ ಅಪ್ ಕಂಪನಿಗಳಲ್ಲಿ ಇವೆ (Eeve) ಸಹ ಸೇರಿದೆ. ಕಂಪನಿಯು ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿ ಕೆಲವು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿದೆ.

ವೇಗವಾಗಿ ಚಲಿಸುವ, ಹೆಚ್ಚು ವ್ಯಾಪ್ತಿ ನೀಡುವ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ Eeve

ಇವೆ ಕಂಪನಿಯು 2020ರ ಡಿಸೆಂಬರ್‌ ತಿಂಗಳಿನಲ್ಲಿ ಆಟ್ರಿಯೋ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿತ್ತು. ಈಗ ಕಂಪನಿಯು ತನ್ನ ಸೋಲ್ (Soul) ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಎಲೆಕ್ಟ್ರಿಕ್ ಸ್ಕೂಟರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 1.40 ಲಕ್ಷಗಳಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರಿನಲ್ಲಿ ಅತ್ಯಾಧುನಿಕ ಫೀಚರ್ ಗಳನ್ನು ನೀಡಲಾಗಿದೆ.

ವೇಗವಾಗಿ ಚಲಿಸುವ, ಹೆಚ್ಚು ವ್ಯಾಪ್ತಿ ನೀಡುವ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ Eeve

ಇವೆ ಸೋಲ್ ಎಲೆಕ್ಟ್ರಿಕ್ ಸ್ಕೂಟರ್‌ ಐಒಟಿ ಫಂಕ್ಷನ್, ಆ್ಯಂಟಿ ಥೆಫ್ಟ್ ಲಾಕ್ ಸಿಸ್ಟಂ, ಜಿಪಿಎಸ್ ನ್ಯಾವಿಗೇಶನ್, ಯುಎಸ್‌ಬಿ ಪೋರ್ಟ್, ಕೀಲೆಸ್ ಎಂಟ್ರಿ, ರಿವರ್ಸ್ ಮೋಡ್, ಸೆಂಟ್ರಲ್ ಬ್ರೇಕಿಂಗ್ ಸಿಸ್ಟಂ, ಜಿಯೋ ಟ್ಯಾಗಿಂಗ್, ಜಿಯೋ ಫೆನ್ಸಿಂಗ್ ಸೇರಿದಂತೆ ಹಲವಾರು ಫೀಚರ್ ಗಳನ್ನು ಹೊಂದಿದೆ. ಇವೆ ಸೋಲ್ ಎಲೆಕ್ಟ್ರಿಕ್ ಸ್ಕೂಟರಿನ ಸೀಟಿನ ಅಡಿಯಲ್ಲಿ ಎರಡು ಲಿಥಿಯಂ ಫೆರಸ್ ಫಾಸ್ಫೇಟ್ (LFP) ಬ್ಯಾಟರಿ ಪ್ಯಾಕ್‌ಗಳನ್ನು ಅಳವಡಿಸಲಾಗಿದೆ.

ವೇಗವಾಗಿ ಚಲಿಸುವ, ಹೆಚ್ಚು ವ್ಯಾಪ್ತಿ ನೀಡುವ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ Eeve

ಈ ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದ ನಂತರ ಸುಮಾರು 120 ಕಿ.ಮೀಗಳವರೆಗೆ ಚಲಿಸಬಹುದು. ಈ ಸ್ಕೂಟರ್ ಅನ್ನು ಇಕೋ ಮೋಡ್‌ನಲ್ಲಿ 40 ಕಿ.ಮೀ ವೇಗದಲ್ಲಿ ಚಾಲನೆ ಮಾಡಿದರೆ 120 ಕಿ.ಮೀಗಳವರೆಗೆ ಚಲಿಸಬಹುದು. ಬೇರೆ ಎರಡು ಮೋಡ್‌ಗಳಲ್ಲಿ ವೇಗದ ಹೆಚ್ಚಳದಿಂದಾಗಿ ಈ ಎಲೆಕ್ಟ್ರಿಕ್ ಸ್ಕೂಟರಿನ ವ್ಯಾಪ್ತಿ ಕಡಿಮೆಯಾಗುತ್ತದೆ. ಇವೆ ಸೋಲ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು 3ರಿಂದ 4 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಮಾಡಬಹುದು.

ವೇಗವಾಗಿ ಚಲಿಸುವ, ಹೆಚ್ಚು ವ್ಯಾಪ್ತಿ ನೀಡುವ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ Eeve

ಈ ಸ್ಕೂಟರಿನಲ್ಲಿರುವ ಬ್ಯಾಟರಿಗಳನ್ನು ಹೊರ ತೆಗೆದು ಬದಲಾಯಿಸಬಹುದು. ಅವುಗಳನ್ನು ಮನೆ ಅಥವಾ ಕಚೇರಿಗಳಲ್ಲಿ ಸುಲಭವಾಗಿ ಚಾರ್ಜ್ ಮಾಡಬಹುದು. ಇವೆ ಸೋಲ್ ಎಲೆಕ್ಟ್ರಿಕ್ ಸ್ಕೂಟರಿನೊಂದಿಗೆ ಮೂರು ವರ್ಷಗಳ ಸ್ಟಾಂಡರ್ಡ್ ವಾರಂಟಿ ನೀಡಲಾಗುತ್ತದೆ. ಇವೆ ಕಂಪನಿಯು ಸಂಶೋಧನೆ, ಅಭಿವೃದ್ಧಿ, ವಿನ್ಯಾಸ, ಉತ್ಪಾದನೆ, ಕಾರ್ಯತಂತ್ರದ ಸಹಯೋಗ, ಪೂರೈಕೆ ಸರಪಳಿ ಹಾಗೂ ಸ್ಕೂಟರ್‌ಗಳ ಪಾಲುದಾರಿಕೆಗಾಗಿ ಸುಮಾರು ರೂ. 80 ಕೋಟಿ ಹೂಡಿಕೆ ಮಾಡಿರುವುದಾಗಿ ಹೇಳಿದೆ.

ವೇಗವಾಗಿ ಚಲಿಸುವ, ಹೆಚ್ಚು ವ್ಯಾಪ್ತಿ ನೀಡುವ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ Eeve

ಇವೆ ಕಂಪನಿಯು ಭಾರತದಲ್ಲಿ ಹೆಚ್ಚಿನ ವೇಗದ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಂಪನಿಯು ಹೂಡಿಕೆಗೆ ಮುಂದಾಗಿದೆ. ಕಂಪನಿಯು 2027 ರ ವೇಳೆಗೆ 2 ಮಿಲಿಯನ್ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದೆ. ಮಾರುಕಟ್ಟೆಯಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಕಂಪನಿಯು ಹಲವು ಮಾದರಿಗಳನ್ನು ಬಿಡುಗಡೆಗೊಳಿಸುತ್ತಿದೆ.

ವೇಗವಾಗಿ ಚಲಿಸುವ, ಹೆಚ್ಚು ವ್ಯಾಪ್ತಿ ನೀಡುವ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ Eeve

ಇವೆ ಇಂಡಿಯಾ ಪೂರ್ವ ಭಾರತದಲ್ಲಿರುವ ಮೊದಲ ಎಲೆಕ್ಟ್ರಿಕ್ ವಾಹನ ಕಂಪನಿಯಾಗಿದೆ. ಇದರ ಕೇಂದ್ರ ಕಛೇರಿ ಒಡಿಶಾ ರಾಜ್ಯದಲ್ಲಿದೆ. ಇವೆ ಇಂಡಿಯಾ ದೇಶಾದ್ಯಂತ 63 ಡೀಲರ್ ನೆಟ್‌ವರ್ಕ್ ಅನ್ನು ನಿರ್ವಹಿಸುತ್ತಿದ್ದು, ಈ ವರ್ಷ 200 ಹೊಸ ಸ್ಥಳಗಳಲ್ಲಿ ಶೋರೂಂಗಳನ್ನು ತೆರೆಯಲು ಮುಂದಾಗುತ್ತಿದೆ. ಇವೆ ಇಂಡಿಯಾ ಕಂಪನಿಯು ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ತಯಾರಿಸುತ್ತದೆ.

ವೇಗವಾಗಿ ಚಲಿಸುವ, ಹೆಚ್ಚು ವ್ಯಾಪ್ತಿ ನೀಡುವ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ Eeve

ಇವೆ ಸ್ಕೂಟರ್‌ಗಳು ಕೃತಕ ಬುದ್ಧಿಮತ್ತೆ ಹಾಗೂ ಸ್ಮಾರ್ಟ್ ಬ್ಯಾಟರಿ ನಿರ್ವಹಣೆಯಂತಹ ಹಲವು ಹೊಸ ಫೀಚರ್ ಗಳನ್ನು ಹೊಂದಿವೆ. ಇವೆ ಕಂಪನಿಯು PlugNgo ಕಂಪನಿಯ ಸಹಭಾಗಿತ್ವದಲ್ಲಿ ಚಾರ್ಜಿಂಗ್ ಕೇಂದ್ರಗಳನ್ನು ಸಹ ತೆರೆಯುತ್ತಿದೆ. ಸದ್ಯಕ್ಕೆ ಜರ್ಮನಿಯಿಂದ ಪಡೆಯಲಾದ ಬಾಷ್‌ ಎಲೆಕ್ಟ್ರಿಕ್ ಮೋಟರ್‌ಗಳನ್ನು ಕಂಪನಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಲ್ಲಿ ಬಳಸಲಾಗುತ್ತಿದೆ.

ವೇಗವಾಗಿ ಚಲಿಸುವ, ಹೆಚ್ಚು ವ್ಯಾಪ್ತಿ ನೀಡುವ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ Eeve

ಇನ್ನು ಸ್ಕೂಟರ್ ನಲ್ಲಿರುವ ಬ್ಯಾಟರಿಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಆದರೆ ರಬ್ಬರ್, ಪ್ಲಾಸ್ಟಿಕ್ ಹಾಗೂ ಇತರ ಉಪಕರಣಗಳನ್ನು ಭಾರತದಲ್ಲಿಯೇ ಉತ್ಪಾದಿಸಲಾಗುತ್ತದೆ. ಭಾರತೀಯ ಗ್ರಾಹಕರು ಎಲೆಕ್ಟ್ರಿಕ್ ಸ್ಕೂಟರ್‌ಗಳತ್ತ ಮುಖ ಮಾಡುತ್ತಿರುವುದರಿಂದ, ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆಗಳಿವೆ.

ವೇಗವಾಗಿ ಚಲಿಸುವ, ಹೆಚ್ಚು ವ್ಯಾಪ್ತಿ ನೀಡುವ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ Eeve

ಇವೆ ಸೋಲ್ ಎಲೆಕ್ಟ್ರಿಕ್ ಸ್ಕೂಟರ್ ಹೆಚ್ಚಿನ ವೇಗದೊಂದಿಗೆ ಹೆಚ್ಚು ದೂರ ಚಲಿಸುತ್ತದೆ. Ather Energy, Ola Electric ಹಾಗೂ Simple Energyಯಂತಹ ತಮ್ಮ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಈ ವಿಭಾಗದಲ್ಲಿ ಬಿಡುಗಡೆ ಮಾಡಿವೆ. ಬೆಲೆಯನ್ನು ಕೈಗೆಟುಕುವ ದರದಲ್ಲಿ ಇವೆ ಸೋಲ್ ಎಲೆಕ್ಟ್ರಿಕ್ ಸ್ಕೂಟರ್ ಈ ವಿಭಾಗದಲ್ಲಿ ಬಲವಾದ ಹಿಡಿತವನ್ನು ಹೊಂದುವ ಸಾಧ್ಯತೆಗಳಿವೆ.

ವೇಗವಾಗಿ ಚಲಿಸುವ, ಹೆಚ್ಚು ವ್ಯಾಪ್ತಿ ನೀಡುವ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ Eeve

ಇವೆ ಸೋಲ್ ಎಲೆಕ್ಟ್ರಿಕ್ ಸ್ಕೂಟರ್ ದೇಶಿಯ ಮಾರುಕಟ್ಟೆಯಲ್ಲಿ Ather 450X, Ola S1, Simple One ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಪೈಪೋಟಿ ನೀಡುತ್ತದೆ. ಕರೋನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಜನರು ಸಾರ್ವಜನಿಕ ವಾಹನಗಳಿಗೆ ಬದಲು ಸ್ವಂತ ವಾಹನಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಆದರೆ ಗಗನಕ್ಕೇರಿರುವ ಪೆಟ್ರೋಲ್, ಡೀಸೆಲ್ ಬೆಲೆ ಜನರ ಆಸೆಗೆ ತಣ್ಣೀರೆರಚಿದೆ.

ವೇಗವಾಗಿ ಚಲಿಸುವ, ಹೆಚ್ಚು ವ್ಯಾಪ್ತಿ ನೀಡುವ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ Eeve

ಈ ಹಿನ್ನೆಲೆಯಲ್ಲಿ ಜನರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಅದರಲ್ಲೂ ವಿಶೇಷವಾಗಿ ಎಲೆಕ್ಟ್ರಿಕ್ ಸ್ಕೂಟರ್ ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ದೇಶಿಯ ಮಾರುಕಟ್ಟೆಯಲ್ಲಿ ಬಜಾಜ್, ಟಿವಿಎಸ್ ಮೋಟಾರ್ ನಂತಹ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಬಿಡುಗಡೆಗೊಳಿಸಿ ಮಾರಾಟ ಮಾಡುತ್ತಿವೆ.

ವೇಗವಾಗಿ ಚಲಿಸುವ, ಹೆಚ್ಚು ವ್ಯಾಪ್ತಿ ನೀಡುವ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಿದ Eeve

ಈ ಕಂಪನಿಗಳು ಮಾತ್ರವಲ್ಲದೇ ಕೆಲವು ಸ್ಟಾರ್ಟ್ ಅಪ್ ಕಂಪನಿಗಳು ಸಹ ತಮ್ಮ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿ ಮಾರಾಟ ಮಾಡುತ್ತಿವೆ.

Most Read Articles

Kannada
English summary
Eeve india launches high speed soul electric scooter details
Story first published: Thursday, December 16, 2021, 14:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X