ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲು ಸಜ್ಜಾದ ಗೊಗೊರೊ

ತೈವಾನ್‌ನ ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ಕಂಪನಿಯಾದ ಗೊಗೊರೊ ತನ್ನ ಗೊಗೊರೊ ವಿವಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತದಲ್ಲಿ ನೋಂದಾಯಿಸಿದೆ. ಕಂಪನಿಯು ಈ ಸ್ಕೂಟರ್ ಅನ್ನು 2019ರಲ್ಲಿ ಪರಿಚಯಿಸಿತ್ತು.

ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲು ಸಜ್ಜಾದ ಗೊಗೊರೊ

ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ವಿದೇಶಗಳಲ್ಲಿ ಮಾರಾಟ ಮಾಡಲಾಗುತ್ತದೆ. ಭಾರತದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್ ಇತ್ತೀಚೆಗೆ ಮೂಲಸೌಕರ್ಯ ಹಾಗೂ ಇತರ ಸೌಲಭ್ಯಗಳನ್ನು ಒದಗಿಸುವುದಕ್ಕಾಗಿ ಗೊಗೊರೊ ಜೊತೆ ಒಪ್ಪಂದ ಮಾಡಿಕೊಂಡಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲು ಸಜ್ಜಾದ ಗೊಗೊರೊ

ಇದರ ಅಡಿಯಲ್ಲಿ ಹೀರೋ ಮೋಟೊಕಾರ್ಪ್‌ ಕಂಪನಿಯ ಮುಂಬರುವ ಎಲೆಕ್ಟ್ರಿಕ್ ಸ್ಕೂಟರ್‌ಗಳು ಗೊಗೊರೊದ ಇವಿ ಪ್ಲಾಟ್‌ಫಾರಂ ಆಧಾರದ ಮೇಲೆ ತಯಾರಾಗಲಿವೆ. ಗೊಗೊರೊ ವಿವಾ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಹೀರೋ ಮೋಟೊಕಾರ್ಪ್ ಮಳಿಗೆಗಳಲ್ಲಿ ಮಾತ್ರ ಮಾರಾಟಲಾಗುವುದು ಎಂದು ವರದಿಗಳಾಗಿವೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲು ಸಜ್ಜಾದ ಗೊಗೊರೊ

ವ್ಯಾಪ್ತಿ

ಗೊಗೊರೊ ವಿವಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಯುವ ಗ್ರಾಹಕರನ್ನು ಆಕರ್ಷಿಸುವಂತೆ ವಿನ್ಯಾಸಗೊಳಿಸಲಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಫ್ಲೇರ್ಡ್ ಕಲರ್ ಹಾಗೂ ಆಕರ್ಷಕ ವಿನ್ಯಾಸವನ್ನು ಹೊಂದಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲು ಸಜ್ಜಾದ ಗೊಗೊರೊ

30 ಕಿ.ಮೀ ವೇಗದಲ್ಲಿ ಸಾಗುವ ಈ ಎಲೆಕ್ಟ್ರಿಕ್ ಸ್ಕೂಟರ್ ಪೂರ್ತಿಯಾಗಿ ಚಾರ್ಜ್ ಆದ ನಂತರ ಸುಮಾರು 85 ಕಿ.ಮೀಗಳವರೆಗೆ ಚಲಿಸುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರಿನಲ್ಲಿ 3 ಕಿ.ವ್ಯಾ ಮೋಟರ್ ಅಳವಡಿಸಲಾಗಿದೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲು ಸಜ್ಜಾದ ಗೊಗೊರೊ

ಈ ಮೋಟರ್ 115 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಸ್ಕೂಟರ್ ಒಟ್ಟಾರೆಯಾಗಿ ಸರಳವಾದ ವಿನ್ಯಾಸವನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಹಲವಾರು ಫೀಚರ್'ಗಳನ್ನು ಹೊಂದಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲು ಸಜ್ಜಾದ ಗೊಗೊರೊ

ಇವುಗಳಲ್ಲಿ ಎಲ್ಇಡಿ ಲೈಟಿಂಗ್, ಸ್ಮಾರ್ಟ್ ಫೋನ್ ಸಾಮರ್ಥ್ಯದ ಎಲ್‌ಸಿ‌ಡಿ ಇನ್ಸ್'ಟ್ರೂಮೆಂಟ್ ಕನ್ಸೋಲ್, ಎರಡು ರೈಡ್ ಮೋಡ್, ರಿಜನರೇಟಿವ್ ಬ್ರೇಕಿಂಗ್ ಹಾಗೂ ಕೀ ಲೆಸ್ ಇಗ್ನಿಷನ್'ನಂತಹ ಫೀಚರ್'ಗಳು ಸೇರಿವೆ.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲು ಸಜ್ಜಾದ ಗೊಗೊರೊ

ಈ ಸ್ಕೂಟರ್ ಬ್ಯಾಟರಿ ವಿನಿಮಯ ತಂತ್ರಜ್ಞಾನವನ್ನು ಸಹ ಬೆಂಬಲಿಸುತ್ತದೆ. ಇದರಿಂದ ಕೆಲವೇ ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಿದ ಬ್ಯಾಟರಿಯನ್ನು ಈ ಸ್ಕೂಟರ್'ನಲ್ಲಿ ಸ್ವ್ಯಾಪ್ ಮಾಡಬಹುದು.

ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲು ಸಜ್ಜಾದ ಗೊಗೊರೊ

ಈ ಸ್ಕೂಟರ್ ಹ್ಯಾಂಡಲ್ ಬಾರ್‌ನಲ್ಲಿಯೇ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಹೊಂದಿದೆ. ಈ ಸ್ಕೂಟರ್ ಕಡಿಮೆ ತೂಕ ಹಾಗೂ ಕಡಿಮೆ ಎತ್ತರವನ್ನು ಹೊಂದಿದೆ. ಈ ಸ್ಕೂಟರ್‌ 10 ಇಂಚಿನ ವ್ಹೀಲ್‌ಬೇಸ್, 740 ಎಂಎಂ ಎತ್ತರದ ಸೀಟ್ ಹಾಗೂ 80 ಕೆ.ಜಿ ತೂಕವನ್ನು ಹೊಂದಿದೆ.

MOST READ:ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲು ಸಜ್ಜಾದ ಗೊಗೊರೊ

ಈ ಸ್ಕೂಟರ್ 21.6 ಲೀಟರ್ ಸ್ಟೋರೆಜ್ ಸ್ಪೇಸ್ ಹೊಂದಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಕೀಲೆಸ್ ಹಾಗೂ ಬೇಸಿಕ್ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಕೀಲೆಸ್ ಮಾದರಿಯು ಒಟ್ಟು 10 ಬಣ್ಣಗಳಲ್ಲಿ ಲಭ್ಯವಿರಲಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲು ಸಜ್ಜಾದ ಗೊಗೊರೊ

ಇನ್ನು ಬೇಸಿಕ್ ಮಾದರಿಯು ಕೇವಲ 3 ಬಣ್ಣಗಳಲ್ಲಿ ಲಭ್ಯವಿರಲಿದೆ. ಹೀರೋ ಮೋಟೊಕಾರ್ಪ್ ಕಂಪನಿಯು ಭಾರತದಲ್ಲಿ ಎಲೆಕ್ಟ್ರಿಕ್ ಮೊಬಿಲಿಟಿಯನ್ನು ವೇಗಗೊಳಿಸಲು ಗೊಗೊರೊ ಬ್ಯಾಟರಿ ವಿನಿಮಯ ವೇದಿಕೆಯೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ.

MOST READ:ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲು ಸಜ್ಜಾದ ಗೊಗೊರೊ

ಈ ಸಹಭಾಗಿತ್ವವು ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್ ಹಾಗೂ ಬ್ಯಾಟರಿ ವಿನಿಮಯ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಗೊಗೊರೊ ಕಂಪನಿಗಳನ್ನು ಒಟ್ಟುಗೂಡಿಸಲಿದೆ.

ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸಲು ಸಜ್ಜಾದ ಗೊಗೊರೊ

ಗೊಗೊರೊ ಕಂಪನಿಯು ನಗರ ಪ್ರದೇಶಗಳಲ್ಲಿ ಬ್ಯಾಟರಿ ವಿನಿಮಯ ಹಾಗೂ ಸ್ಮಾರ್ಟ್ ಮೊಬಿಲಿಟಿಯನ್ನು ಒದಗಿಸುತ್ತದೆ. ಈ ಎರಡೂ ಕಂಪನಿಗಳ ಸಹಭಾಗಿತ್ವದ ನಂತರ ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರಾಟವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.

Most Read Articles

Kannada
English summary
Gogoro to launch its electric scooter in India. Read in Kannada.
Story first published: Saturday, May 22, 2021, 10:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X