Just In
- 59 min ago
ಮಕ್ಕಳಿಗಾಗಿ 60-70 ಕಿ.ಮೀ ಮೈಲೇಜ್ ನೀಡುವ ಮಿನಿ ಎಲೆಕ್ಟ್ರಿಕ್ ಜೀಪ್ ತಯಾರಿಸಿದ ತಂದೆ
- 1 hr ago
ಮಿನಿ ಎಂಪಿವಿ ಕಾರು ಮಾರಾಟದಲ್ಲಿ ರೆನಾಲ್ಟ್ ಟ್ರೈಬರ್ ಹೊಸ ಮೈಲಿಗಲ್ಲು
- 3 hrs ago
ಎಕ್ಸ್ಯುವಿ700 ಬಿಡುಗಡೆಯ ನಂತರ ತಾತ್ಕಾಲಿಕವಾಗಿ ಮಾರಾಟದಿಂದ ಸ್ಥಗಿತವಾಗಲಿದೆ ಎಕ್ಸ್ಯುವಿ500
- 3 hrs ago
ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ ರಾಯಲ್ ಎನ್ಫೀಲ್ಡ್ ಹಂಟರ್ ಬೈಕ್
Don't Miss!
- News
ಮಂಗಳೂರು; ಇಂದಿನಿಂದ ರಂಝಾನ್ ಉಪವಾಸ ಆಚರಣೆ
- Movies
ಕಹಿಯೇ ಹೆಚ್ಚಿದ್ದರು ಸಿಹಿಯಾಗಿ ಯುಗಾದಿ ಶುಭಾಶಯ ಕೋರಿದ ಸಿನಿ ತಾರೆಯರು
- Sports
19 ವರ್ಷದ ಈ ಬ್ಯಾಟ್ಸ್ಮನ್ ಬಾರಿಸಿರೋ 8 ಐಪಿಎಲ್ ಸಿಕ್ಸರ್ ಸಾಮಾನ್ಯದ್ದಲ್ಲ!
- Lifestyle
ಅಧ್ಯಯನ: ಸ್ಥೂಲಕಾಯದವರ ಸ್ಮರಣಾ ಶಕ್ತಿ ಕಾಪಾಡುತ್ತೆ ಬೆಣ್ಣೆಹಣ್ಣು
- Finance
ಏಪ್ರಿಲ್ 13ರ ಬಿಟ್ಕಾಯಿನ್ ರೇಟ್ ಎಷ್ಟಿದೆ?
- Education
WCL Recruitment 2021: 44 ಮೆಡಿಕಲ್ ಸ್ಪೆಷಲಿಸ್ಟ್ ಮತ್ತು ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೀರೋ 100 ಮಿಲಿಯನ್ ಬೈಕ್ ಮಾದರಿಗಳ ಮೇಲೆ ಆಕರ್ಷಕ ಆಫರ್ ಘೋಷಣೆ
ಹೀರೋ ಮೋಟೊಕಾರ್ಪ್ ಕಂಪನಿಯು ಬೈಕ್ ಉತ್ಪಾದನೆಯಲ್ಲಿನ ಹೊಸ ಸಾಧನೆಗಾಗಿ ಇತ್ತೀಚೆಗೆ ತನ್ನ ಬೈಕ್ ಮತ್ತು ಸ್ಕೂಟರ್ ಮಾದರಿಗಳಲ್ಲಿ 100 ಮಿಲಿಯನ್ ಎಡಿಷನ್ ಬಿಡುಗಡೆ ಮಾಡಿದ್ದು, ಸೀಮಿತ ಅವಧಿಗೆ ಖರೀದಿಗೆ ಲಭ್ಯವಿರಲಿರುವ ಸ್ಪೆಷಲ್ ಎಡಿಷನ್ ಮಾದರಿಗಳ ಮೇಲೆ ಆಕರ್ಷಕ ಆಫರ್ ನೀಡಲಾಗುತ್ತಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಎಕ್ಸ್‌ಟ್ರಿಮ್ 160ಆರ್, ಎಕ್ಸ್‌ಪಲ್ಸ್ 200, ಎಕ್ಸ್‌ಟ್ರಿಮ್ 200ಎಸ್, ಎಕ್ಸ್‌ಪಲ್ಸ್ 200ಟಿ, ಪ್ಯಾಶನ್ ಪ್ರೋ, ಸ್ಲೈಂಡರ್ ಐ ಸ್ಮಾರ್ಟ್, ಗ್ಲ್ಯಾಮರ್, ಸ್ಲೈಂಡರ್ ಪ್ಲಸ್, ಹೆಚ್‍ಎಫ್ ಡಿಲಕ್ಸ್, ಸೂಪರ್ ಸ್ಲೈಂಡರ್, ಡೆಸ್ಟಿನಿ 125, ಮ್ಯಾಸ್ಟ್ರೊ ಎಡ್ಜ್ 125, ಮ್ಯಾಸ್ಟ್ರೊ ಎಡ್ಜ್ 110, ಪ್ರೆಷರ್ ಪ್ಲಸ್ ಆವೃತ್ತಿಗಳನ್ನು ಮಾರಾಟ ಮಾಡುತ್ತಿರುವ ಹೀರೋ ಮೊಟೋಕಾರ್ಪ್ ಕಂಪನಿಯು ಇತ್ತೀಚೆಗೆ 10 ಕೋಟಿ ಬೈಕ್ ಉತ್ಪಾದನಾ ಸಂಭ್ರಮಕ್ಕಾಗಿ ಪ್ರಮುಖ ಬೈಕ್ ಮತ್ತು ಸ್ಕೂಟರ್‌ಗಳಲ್ಲಿ ಸ್ಪೆಷಲ್ ಎಡಿಷನ್‌ಗಳನ್ನು ಪರಿಚಯಿಸಿದೆ.

ಎಕ್ಸ್‌ಟ್ರಿಮ್ 160ಆರ್, ಪ್ಯಾಶನ್ ಪ್ರೋ, ಸ್ಲೈಂಡರ್ ಐ ಸ್ಮಾರ್ಟ್, ಸೂಪರ್ ಸ್ಲೈಂಡರ್, ಡೆಸ್ಟಿನಿ 125, ಮ್ಯಾಸ್ಟ್ರೊ ಎಡ್ಜ್ 125 ಆವೃತ್ತಿಗಳಲ್ಲಿ 100 ಮಿಲಿಯನ್ ಸಂಭ್ರಮದ ಮಾದರಿಗಳನ್ನು ಬಿಡುಗಡೆ ಮಾಡಿದ್ದು, ಸಂಭ್ರಮಾಚರಣೆ ಬ್ಯಾಡ್ಜ್ ಮತ್ತು ಬಣ್ಣದ ಆಯ್ಕೆ ಹೊರತುಪಡಿಸಿ ಸ್ಪೆಷಲ್ ಎಡಿಷನ್‌ಗಳು ಸ್ಟ್ಯಾಂಡರ್ಡ್ ಮಾದರಿಯಂತಿವೆ.

ಸ್ಟ್ಯಾಂಡರ್ಡ್ ಮಾದರಿಗಿಂತಲೂ ತುಸು ದುಬಾರಿ ಬೆಲೆ ಹೊಂದಿರುವ 100 ಮಿಲಿಯನ್ ಎಡಿಷನ್‌ಗಳು ಗ್ರಾಹಕರನ್ನು ಆಕರ್ಷಿಸುತ್ತಿದ್ದು, ಹೀರೋ ಮೋಟೊಕಾರ್ಪ್ ಕಂಪನಿಯು ಸೀಮಿತ ಅವಧಿಗೆ ಲಭ್ಯವಿರುವ ಮಾದರಿಗಳ ಮೇಲೆ ಗರಿಷ್ಠ ರೂ.3,500ರ ತನಕ ಕ್ಯಾಶ್‌ಬ್ಯಾಕ್ ಆಫರ್ ನೀಡುತ್ತಿದೆ.

ಸ್ಪೆಷಲ್ ಎಡಿಷನ್‌ಗಳ ಮೇಲಿನ ಆಫರ್‌ಗಳು ಸ್ಟಾಕ್ ಲಭ್ಯವಿರುವ ತನಕ ಲಭ್ಯವಿರಲಿದ್ದು, ಸ್ಟ್ಯಾಂಡರ್ಡ್ ಬೈಕ್ ಮಾದರಿಗಳ ಮೇಲೆ ಯಾವುದೇ ವಿಶೇಷ ಆಫರ್ ನೀಡುತ್ತಿಲ್ಲ. ಆದರೆ 100 ಮಿಲಿಯನ್ ಎಡಿಷನ್ ಖರೀದಿಸುವ ಗ್ರಾಹಕರಿಗೆ ಹೊಸ ಆಫರ್‌ಗಳು ಮತ್ತು ಆಕರ್ಷಿಸುತ್ತಿವೆ. 100 ಮಿಲಿಯನ್ ಹೀರೋ ಬೈಕ್ ಮಾದರಿಗಳು ಹೊಸ ಪೇಟಿಂಗ್ ಆಯ್ಕೆಯೊಂದಿಗೆ ಬ್ರಾಂಡ್ ಅಂಬಾಸಿಡರ್ ನಟ ಶಾರುಖ್ ಖಾನ್ ಹಸ್ತಾಕ್ಷರ ಹೊಂದಿರುವ ಬ್ಯಾಡ್ಜ್ ಪಡೆದುಕೊಂಡಿದ್ದು, ಸ್ಟ್ಯಾಂಡರ್ಡ್ ಮಾದರಿಯಲ್ಲೇ ಬಹುತೇಕ ತಾಂತ್ರಿಕ ಅಂಶಗಳಿವೆ.

ಇನ್ನು ಹೀರೋ ಮೋಟೊಕಾರ್ಪ್ ಕಂಪನಿಯು ಭಾರತದಲ್ಲಿ ಬೈಕ್ ಉತ್ಪಾದನೆಯ ಆರಂಭಿಸಿದ 36 ವರ್ಷಗಳ ಅವಧಿಯಲ್ಲಿ ಇದುವರೆಗೆ ಬರೋಬ್ಬರಿ 10 ಕೋಟಿ ಬೈಕ್ ಉತ್ಪಾದನೆಯನ್ನು ಪೂರ್ಣಗೊಳಿಸುವ ಮೂಲಕ ಹೊಸ ದಾಖಲೆಗೆ ಕಾರಣವಾಗಿದೆ.

1984ರಲ್ಲಿ ಹೀರೋ ಹೋಂಡಾ ಮೋಟಾರ್ ಸೈಕಲ್ಸ್ ಲಿಮಿಟೆಡ್ ಹೆಸರಿನಲ್ಲಿ ಆರಂಭಗೊಂಡಿದ್ದ ಕಂಪನಿಯು ಜಪಾನ್ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ಜೊತೆಗೂಡಿ ಆಟೋ ಉತ್ಪಾದನಾ ವಲಯದಲ್ಲಿ ಮೊದಲ ಕಾರ್ಯಾಚರಣೆ ಆರಂಭಿಸಿತ್ತು.

2000ನೇ ಇಸವಿ ಹೊತ್ತಿಗೆ ವಿಶ್ವದ ಪ್ರಮುಖ ಬೈಕ್ ಉತ್ಪಾದನಾ ಕಂಪನಿಯಾಗಿ ಗುರುತಿಸಿಕೊಂಡಿದ್ದ ಹೀರೋ-ಹೋಂಡಾ ಕಂಪನಿಯು ಬರೋಬ್ಬರಿ 26 ವರ್ಷಗಳ ನಂತರ 2010ರಲ್ಲಿ ಸಹಭಾಗಿತ್ವ ಯೋಜನೆಯಿಂದ ಹಿಂದೆ ಸರಿದು ಸ್ವತಂತ್ರ ಕಾರ್ಯಾಚರಣೆ ಆರಂಭಿಸಿದ್ದವು.

1985ರಲ್ಲಿ ಹರಿಯಾಣದ ಧರುಹೆರ ಎಂಬಲ್ಲಿ ಮೊದಲ ಬೈಕ್ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದ್ದ ಹೀರೋ-ಹೋಂಡಾ ಕಂಪನಿಯು ಸಹಭಾಗಿತ್ವದ ಯೋಜನೆಯ ಅಡಿಯಲ್ಲಿ ಮೊದಲ ಬೈಕ್ ಮಾದರಿಯಾಗಿ ಸಿಡಿ100 ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿದ್ದವು.
MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಹೊಸ ಬೈಕ್ ಉತ್ಪಾದನೆ ಆರಂಭಿಸಿ ಕೆಲವೇ ದಿನಗಳಲ್ಲಿ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಂಡ ಹೀರೋ ಹೋಂಡಾ ಕಂಪನಿಗಳು 1987ರ ಹೊತ್ತಿಗೆ 1 ಲಕ್ಷ ಯುನಿಟ್ ಮಾರಾಟ ಗುರಿ ಸಾಧಿಸಿದವು. ತದನಂತರ ಬೈಕ್ ಉತ್ಪಾದನೆಯಲ್ಲಿ ಹಲವಾರು ದಾಖಲೆಗಳನ್ನು ಸರಿಗಟ್ಟಿದ್ದ ಸಹಭಾಗಿತ್ವ ಕಂಪನಿಗಳು 2004ರ ಹೊತ್ತಿಗೆ 1 ಕೋಟಿ ಬೈಕ್ ಉತ್ಪಾದನೆ ಗುರಿ ತಲುಪುವ ಮೂಲಕ ವಿಶ್ವದ ಮುಂಚೂಣಿ ಬೈಕ್ ಕಂಪನಿಯಾಗಿ ಹೊರಹೊಮ್ಮಿದವು.

ತದನಂತರ ಬೈಕ್ ಮಾರಾಟದಲ್ಲಿ ಹಲವಾರು ದಾಖಲೆಗಳಿಗೆ ಕಾರಣವಾದ ಸಹಭಾಗಿತ್ವ ಕಂಪನಿಗಳಾದ ಹೀರೋ ಹೋಂಡಾ ಕಂಪನಿಗಳು ಕಾರಣಾಂತರಗಳಿಂದ 2010ರಲ್ಲಿ ಸ್ವತಂತ್ರ ಕಾರ್ಯಾಚರಣೆ ಆಂಭಿಸಿದವು. ಸಹಭಾಗಿತ್ವದ ಯೋಜನೆಯಿಂದ ಹಿಂದೆ ಸರಿದ ನಂತರ ಹೀರೋ ಮೋಟೋಕಾರ್ಪ್ ಕಂಪನಿಯಾಗಿ ಸ್ವತಂತ್ರ ಕಾರ್ಯಾಚರಣೆ ಆರಂಭಿಸಿ 2013ರ ಹೊತ್ತಿಗೆ 5 ಕೋಟಿ ಬೈಕ್ ಉತ್ಪಾದನಾ ಗುರಿ ಸಾಧಿಸಿತು.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

2014 ರಿಂದ ಇತ್ತೀಚೆಗೆ ವಿವಿಧ ಹೊಸ ಬೈಕ್ ಮಾದರಿಗಳ ಮೂಲಕ ಕೇವಲ 7 ವರ್ಷಗಳಲ್ಲಿ 5 ಕೋಟಿ ಬೈಕ್‌ಗಳನ್ನು ಉತ್ಪಾದನೆ ಮಾಡಿದೆ. ಒಟ್ಟು 34 ವರ್ಷಗಳಲ್ಲಿ 10 ಕೋಟಿ ಬೈಕ್ ಮಾದರಿಗಳನ್ನು ಉತ್ಪಾದನೆ ಮಾಡಿರುವ ಹೀರೋ ಮೋಟೊಕಾರ್ಪ್ ಕಂಪನಿಯು ಭಾರತ ಸೇರಿದಂತೆ ವಿಶ್ವದ ಪ್ರಮುಖ 40 ರಾಷ್ಟ್ರಗಳಲ್ಲಿ ಬೈಕ್ ಮಾರಾಟ ಜಾಲ ಹೊಂದಿದ್ದು, ಪ್ರತಿ 4.5 ಸೇಕೆಂಡುಗಳಲ್ಲಿ 1 ಬೈಕ್ ಮಾದರಿಯನ್ನು ನಿರ್ಮಾಣ ಮಾಡುವಷ್ಟು ಅತಿ ದೊಡ್ಡ ಬೈಕ್ ಕಂಪನಿಯಾಗಿ ಗುರುತಿಸಿಕೊಂಡಿದೆ.