ರಿಫ್ಲೆಕ್ಟರ್‌ಗಳಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ವಾಹನಗಳನ್ನು ರಿಕಾಲ್ ಮಾಡಿದ ಹೋಂಡಾ ಮೋಟಾರ್‌ಸೈಕಲ್

ಹೋಂಡಾ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು, ಕೆಲವು ತೊಂದರೆಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ತನ್ನ ಹಲವು ಬೈಕ್ ಹಾಗೂ ಸ್ಕೂಟರ್‌ಗಳನ್ನು ರಿಕಾಲ್ ಮಾಡಿದೆ. ರಿಕಾಲ್ ಮಾಡಲಾದ ಬೈಕ್'ಗಳಲ್ಲಿ ಹೋಂಡಾ ಸಿಬಿ 300 ಆರ್ ಹಾಗೂ ಹೋಂಡಾ ಹೈನೆಸ್ ಸಿಬಿ 350 ಬೈಕುಗಳು ಸೇರಿವೆ.

ರಿಫ್ಲೆಕ್ಟರ್‌ಗಳಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ವಾಹನಗಳನ್ನು ರಿಕಾಲ್ ಮಾಡಿದ ಹೋಂಡಾ ಮೋಟಾರ್‌ಸೈಕಲ್

ಈ ಬೈಕುಗಳನ್ನು ಕಂಪನಿಯ ಬಿಗ್‌ವಿಂಗ್ ಶೋರೂಂಗಳ ಮೂಲಕ ಮಾರಾಟ ಮಾಡಲಾಗುತ್ತದೆ. ಈ ಬೈಕುಗಳ ಜೊತೆಗೆ ಹೋಂಡಾ ಹಾರ್ನೆಟ್ 2.0, ಎಕ್ಸ್-ಬ್ಲೇಡ್, ಸಿಬಿ ಶೈನ್, ಆಕ್ಟಿವಾ 5 ಜಿ, ಆಕ್ಟಿವಾ 6 ಜಿ ಹಾಗೂ ಆಕ್ಟಿವಾ 125 ಸೇರಿದಂತೆ ಹಲವಾರು ಮಾದರಿಗಳನ್ನು ರಿಕಾಲ್ ಮಾಡಲಾಗಿದೆ.

ರಿಫ್ಲೆಕ್ಟರ್‌ಗಳಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ವಾಹನಗಳನ್ನು ರಿಕಾಲ್ ಮಾಡಿದ ಹೋಂಡಾ ಮೋಟಾರ್‌ಸೈಕಲ್

ಹೋಂಡಾ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು 2019ರ ನವೆಂಬರ್ ಹಾಗೂ 2021ರ ಜನವರಿ ನಡುವೆ ಉತ್ಪಾದನೆಯಾದ ಈ ವಾಹನಗಳ ಮಾದರಿಗಳನ್ನು ರಿಕಾಲ್ ಮಾಡಿದೆ. ಈ ಅವಧಿಯಲ್ಲಿ ತಮ್ಮ ವಾಹನದ ರಿಫ್ಲೆಕ್ಟರ್‌ಗಳನ್ನು ಬದಲಿಸಿದ ಗ್ರಾಹಕರ ವಾಹನಗಳನ್ನು ಸಹ ರಿಕಾಲ್ ಮಾಡಲಾಗಿದೆ.

ರಿಫ್ಲೆಕ್ಟರ್‌ಗಳಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ವಾಹನಗಳನ್ನು ರಿಕಾಲ್ ಮಾಡಿದ ಹೋಂಡಾ ಮೋಟಾರ್‌ಸೈಕಲ್

ಈ ರಿಕಾಲ್ ಬಗ್ಗೆ ಮಾತನಾಡಿರುವ ಕಂಪನಿಯು ದೋಷಯುಕ್ತ ಬಿಡಿ ಭಾಗಗಳಿಂದ ಯಾವುದೇ ದೊಡ್ಡ ಸಮಸ್ಯೆಗಳನ್ನು ಉಂಟಾಗುವುದಿಲ್ಲವೆಂದು ಹೇಳಿದೆ. ರಿಕಾಲ್ ಮಾಡಲಾದ ವಾಹನಗಳಲ್ಲಿ ರಿಫ್ಲೆಕ್ಸ್ ರಿಫ್ಲೆಕ್ಟರ್‌ಗಳನ್ನು ತಪ್ಪಾಗಿ ಅಳವಡಿಸಲಾಗಿದೆ.

ರಿಫ್ಲೆಕ್ಟರ್‌ಗಳಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ವಾಹನಗಳನ್ನು ರಿಕಾಲ್ ಮಾಡಿದ ಹೋಂಡಾ ಮೋಟಾರ್‌ಸೈಕಲ್

ಇದರಿಂದ ಬೆಳಕಿನ ಪ್ರತಿಫಲನಕ್ಕೆ ಕಾರಣವಾಗಬಹುದು. ರಾತ್ರಿ ವೇಳೆ ಚಾಲನೆ ಮಾಡುವಾಗ ಬೆಳಕಿನ ಪ್ರತಿಫಲನದ ಒಟ್ಟಾರೆ ನಷ್ಟವು ದೊಡ್ಡ ಸಮಸ್ಯೆಯನ್ನುಂಟು ಮಾಡುವುದಿಲ್ಲ. ಆದರೆ ಮುನ್ನೆಚ್ಚರಿಕೆಯಾಗಿ ಈ ವಾಹನಗಳನ್ನು ರಿಕಾಲ್ ಮಾಡಲಾಗುತ್ತಿದೆ ಎಂದು ಕಂಪನಿ ಹೇಳಿದೆ.

ರಿಫ್ಲೆಕ್ಟರ್‌ಗಳಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ವಾಹನಗಳನ್ನು ರಿಕಾಲ್ ಮಾಡಿದ ಹೋಂಡಾ ಮೋಟಾರ್‌ಸೈಕಲ್

ಮಾರಾಟಗಾರರು ದೋಷಯುಕ್ತ ರಿಫ್ಲೆಕ್ಟರ್‌ಗಳನ್ನು ಗುರುತಿಸುವಂತೆ ಕ್ರಮ ಕೈಗೊಳ್ಳಲಾಗಿದೆ. ಈ ಕ್ರಮಗಳು ಕಂಪನಿಗಳ ಉತ್ಪನ್ನ ಹಾಗೂ ಸೇವೆಗಳ ಗುಣಮಟ್ಟವನ್ನು ಸುಧಾರಿಸಲಿವೆ.

ರಿಫ್ಲೆಕ್ಟರ್‌ಗಳಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ವಾಹನಗಳನ್ನು ರಿಕಾಲ್ ಮಾಡಿದ ಹೋಂಡಾ ಮೋಟಾರ್‌ಸೈಕಲ್

ಗ್ರಾಹಕರು ಹೋಂಡಾ ಮೋಟಾರ್‌ಸೈಕಲ್ ಅಂಡ್ ಸ್ಕೂಟರ್ ಪ್ರೈ ಲಿಮಿಟೆಡ್ ಹಾಗೂ ಹೋಂಡಾ ಬಿಗ್ ವಿಂಗ್ ವೆಬ್‌ಸೈಟ್ ಮೂಲಕ ಈ ರಿಕಾಲ್ ಬಗೆಗಿನ ವಿವರಗಳನ್ನು ಪರಿಶೀಲಿಸಬಹುದು.

ರಿಫ್ಲೆಕ್ಟರ್‌ಗಳಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ವಾಹನಗಳನ್ನು ರಿಕಾಲ್ ಮಾಡಿದ ಹೋಂಡಾ ಮೋಟಾರ್‌ಸೈಕಲ್

ಮಾಹಿತಿಗಳ ಪ್ರಕಾರ ಈ ದೋಷಯುಕ್ತ ಭಾಗದ ಸಂಖ್ಯೆ 33741 ಕೆಪಿಎಲ್ 902 ಆಗಿದೆ. ಗ್ರಾಹಕರು 17 ಅಂಕಿಯ ವಿಶಿಷ್ಟ ವಾಹನ ಗುರುತಿನ ಸಂಖ್ಯೆ (ವಿಐಎನ್) / ಫ್ರೇಮ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.

ರಿಫ್ಲೆಕ್ಟರ್‌ಗಳಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ವಾಹನಗಳನ್ನು ರಿಕಾಲ್ ಮಾಡಿದ ಹೋಂಡಾ ಮೋಟಾರ್‌ಸೈಕಲ್

ಈ ಮೂಲಕ ತಮ್ಮ ವಾಹನವು ಈ ರಿಕಾಲ್'ಗೆ ಒಳಪಡುತ್ತದೆಯೇ ಎಂಬುದನ್ನು ತಿಳಿಯಬಹುದು. ವಾಹನದ ಆರ್‌ಸಿ ಬುಕ್, ವಿಮೆ ಪ್ರಮಾಣಪತ್ರ ಹಾಗೂ ಸೇಲ್ಸ್ / ಸರ್ವೀಸ್ ಇನ್ ವಾಯ್ಸ್'ಗಳಲ್ಲಿ ವಿಐಎನ್ ಅನ್ನು ಕಾಣಬಹುದು.

ರಿಫ್ಲೆಕ್ಟರ್‌ಗಳಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ವಾಹನಗಳನ್ನು ರಿಕಾಲ್ ಮಾಡಿದ ಹೋಂಡಾ ಮೋಟಾರ್‌ಸೈಕಲ್

ಹೋಂಡಾ ಮೋಟಾರ್‌ಸೈಕಲ್ ಕಂಪನಿಯ ಮಾರಾಟಗಾರರು ಎಸ್‌ಎಂಎಸ್, ಫೋನ್ ಕಾಲ್ ಹಾಗೂ ಇ-ಮೇಲ್‌ ಮುಖಾಂತರ ರಿಕಾಲ್'ಗೆ ಒಳಪಡುವ ವಾಹನಗಳ ಮಾಲೀಕರನ್ನು ಸಂಪರ್ಕಿಸಿ ಮಾಹಿತಿ ನೀಡುತ್ತಿದ್ದಾರೆ.

ರಿಫ್ಲೆಕ್ಟರ್‌ಗಳಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ವಾಹನಗಳನ್ನು ರಿಕಾಲ್ ಮಾಡಿದ ಹೋಂಡಾ ಮೋಟಾರ್‌ಸೈಕಲ್

ಇದರ ಜೊತೆಗೆ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು 2020ರ ನವೆಂಬರ್ 25ರಿಂದ 2020ರ ಡಿಸೆಂಬರ್ 12ರವರೆಗೆ ತಯಾರಾದ ಸಿಬಿ 350 ಬೈಕುಗಳನ್ನು ಸಹ ರಿಕಾಲ್ ಮಾಡುತ್ತಿದೆ. ಈ ಬೈಕಿನ ಗೇರ್‌ಬಾಕ್ಸ್‌ನ ನಾಲ್ಕನೇ ಗೇರ್‌ನ ಕೌಂಟರ್ ಶಾಫ್ಟ್‌ನಲ್ಲಿ ತೊಂದರೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಈ ಬೈಕುಗಳನ್ನು ರಿಕಾಲ್ ಮಾಡಲಾಗುತ್ತಿದೆ.

Most Read Articles

Kannada
English summary
Honda Motorcycle recalls its vehicles due to faulty reflector. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X