2021ರ ಹೋಂಡಾ ಸನ್‌ ಚೇಸರ್ಸ್ ಅಡ್ವೆಂಚರ್ ರೈಡ್ ಮೊದಲ ದಿನದ ಝಲಕ್

ಹೋಂಡಾ ಮೋಟಾರ್‌ಸೈಕಲ್ಸ್ ಮತ್ತು ಸ್ಕೂಟರ್ಸ್ ಇಂಡಿಯಾ ಕಂಪನಿಯ ತನ್ನ ಮೊದಲ ಆವೃತ್ತಿಯ 'ಹೋಂಡಾ ಸನ್‌ ಚೇಸರ್ಸ್ 2021' ಕಾರ್ಯಕ್ರಮವನ್ನು ಇತ್ತೀಚೆಗೆ ಅರುಣಾಚಲಪ್ರದೇಶದಲ್ಲಿ ಹಮ್ಮಿಕೊಂಡಿತ್ತು.

ಅರುಣಾಚಲಪ್ರದೇಶದ ಪ್ರವಾಸೋದ್ಯಮ ಇಲಾಖೆಯ ಸಹಯೋಗದಲ್ಲಿ 2021ರ ಸನ್‌ ಚೇಸರ್ಸ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಅಡ್ವೆಂಚರ್ ಟೂರರ್ ವಿಭಾಗದಲ್ಲಿ ತನ್ನ ಹೊಸ ಹೈನೆಸ್ ಸಿಬಿ 350 ಮಾದರಿಯ ರೈಡಿಂಗ್ ಕೌಶಲ್ಯವನ್ನು ಗ್ರಾಹಕರಿಗೆ ಪ್ರಸ್ತುತಪಡಿಸುವುದರ ಜೊತೆಗೆ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶ ಹೊಂದಿತ್ತು.

ಅರುಣಾಚಲಪ್ರದೇಶದ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಟ್ಟು 800 ಕಿ.ಮೀ ಪ್ರಯಾಣವನ್ನು ಆಯೋಜಿಸಿದ್ದ ಹೋಂಡಾ ಮೋಟಾರ್‌ಸೈಕಲ್ಸ್ ಮತ್ತು ಸ್ಕೂಟರ್ಸ್ ಇಂಡಿಯಾ ಕಂಪನಿಯ ಒಟ್ಟು 11 ಜನ ಆಟೋಮೊಬೈಲ್ ಪತ್ರಕರ್ತರಿಗೆ ವಿಶೇಷ ಆಹ್ವಾನ ನೀಡಿತ್ತು.

ಮೊದಲ ದಿನದ ರೈಡ್‌ನಲ್ಲಿ ರುಕ್ಸಿನ್‌ನಿಂದ ಆರಂಭವಾದ ಬೊಮ್ಜಿರ್‌ನಲ್ಲಿ ಅಂತ್ಯಗೊಂಡಿತು. 11 ಅನುಭವಿ ಬೈಕ್ ಸವಾರರ ತಂಡದಲ್ಲಿ ಡ್ರೈವ್‌ಸ್ಪಾರ್ಕ್ ತಂಡದ ಮುಖ್ಯಸ್ಥ ಜೊಬೊ ಕುರುವಿಲ್ಲಾ ಸಹ ಒಬ್ಬರಾಗಿದ್ದು, ಮೊದಲ ದಿನ ರೈಡ್ ಅನುಭವವನ್ನು ಈ ವಿಡಿಯೋದಲ್ಲಿ ನೋಡೋಣ.

ಇನ್ನು ಕ್ಲಾಸಿಕ್ ಬೈಕ್ ಮಾರಾಟದಲ್ಲಿ ಸದ್ಯ ಗ್ರಾಹಕರನ್ನ ಸೆಳೆಯುತ್ತಿರುವ ಹೈನೆಸ್ ಸಿಬಿ 350 ಬೈಕ್ ಮಾದರಿಯು ರಾಂಗ್ ರೈಡ್ ಉದ್ದೇಶಗಳಿಗೆ ಸೂಕ್ತವಾದ ಕ್ಲಾಸಿಕ್ ಬೈಕ್ ಮಾದರಿಯಾಗಿದ್ದು, ಹೊಸ ಬೈಕಿನಲ್ಲಿ ಅರುಣಾಚಲಪ್ರದೇಶದ ರೈಡಿಂಗ್ ಅನುಭವಗಳನ್ನು ಡ್ರೈವ್‌ಸ್ಪಾರ್ಕ್ ತಂಡವು ಹಂತ-ಹಂತವಾಗಿ ಹಂಚಿಕೊಳ್ಳಲಿದೆ.

Most Read Articles

Kannada
English summary
Honda CB350 Sunchasers Ride organised by Honda in Arunachal Pradesh. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X