ಕ್ಲಾಸಿಕ್ ಬೈಕ್‌ಗಳನ್ನು ಹೊಸ ಬಣ್ಣಗಳಲ್ಲಿ ಪರಿಚಯಿಸಿದ ಜಾವಾ ಮೋಟಾರ್‌ಸೈಕಲ್ಸ್

ಭಾರತವು 1971ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧದಲ್ಲಿ ಜಯಗಳಿಸಿತ್ತು. ಈ ಯುದ್ಧದಲ್ಲಿ ಜಯಗಳಿಸಿ 50 ವರ್ಷಗಳಾಗಿದೆ. ಈ ವಿಜಯದ 50ನೇ ವಾರ್ಷಿಕೋತ್ಸವವನ್ನು ಆಚರಿಸಲು ಜಾವಾ ಮೋಟಾರ್‌ಸೈಕಲ್ಸ್ ತನ್ನ ಕ್ಲಾಸಿಕ್ ಜಾವಾ ಬೈಕ್ ಅನ್ನು ಎರಡು ಹೊಸ ಬಣ್ಣಗಳಲ್ಲಿ ಬಿಡುಗಡೆಗೊಳಿಸಿದೆ.

ಕ್ಲಾಸಿಕ್ ಬೈಕ್‌ಗಳನ್ನು ಹೊಸ ಬಣ್ಣಗಳಲ್ಲಿ ಪರಿಚಯಿಸಿದ ಜಾವಾ ಮೋಟಾರ್‌ಸೈಕಲ್ಸ್

ಈ ಎರಡೂ ಬೈಕ್‌ಗಳ ಬೆಲೆ ಎಕ್ಸ್‌ಶೋರೂಂ ದರದಂತೆ ರೂ.1.93 ಲಕ್ಷಗಳಾಗಿದೆ. ಈ ಬೈಕ್‌ಗಳು ಜಾವಾ ಕಂಪನಿಯ ಎಲ್ಲಾ ಮಾರಾಟಗಾರರಲ್ಲಿ ಲಭ್ಯವಿರಲಿವೆ. ಜಾವಾ ಕಂಪನಿಯು ತನ್ನ ಬೈಕ್‌ಗಳನ್ನು ಖಾಕಿ ಹಾಗೂ ಮಿಡ್ನೈಟ್ ಗ್ರೇ ಬಣ್ಣಗಳಲ್ಲಿ ಪರಿಚಯಿಸಿದೆ. ಈ ಬಣ್ಣಗಳು ಭಾರತೀಯ ಸೇನೆಯ ಶಕ್ತಿ ಹಾಗೂ ಧೈರ್ಯದ ಸಂಕೇತಗಳಾಗಿವೆ.

ಕ್ಲಾಸಿಕ್ ಬೈಕ್‌ಗಳನ್ನು ಹೊಸ ಬಣ್ಣಗಳಲ್ಲಿ ಪರಿಚಯಿಸಿದ ಜಾವಾ ಮೋಟಾರ್‌ಸೈಕಲ್ಸ್

ಈ ಬೈಕ್‌ಗಳಲ್ಲಿ ಸೇನೆಯ ಲಾಂಛನ ಹಾಗೂ 1971ರ ವಿಜಯವನ್ನು ಸೂಚಿಸುವ ಲಾರೆಲ್ ಮಾಲೆ ನೀಡಲಾಗಿದೆ. ಭಾರತದ ತ್ರಿವರ್ಣ ಧ್ವಜದ ಪಟ್ಟೆಗಳನ್ನು ಹೊಂದಿರುವ ಪ್ಯೂಯಲ್ ಟ್ಯಾಂಕ್ ಮಧ್ಯದಲ್ಲಿ ಈ ಚಿಹ್ನೆಯನ್ನು ನೀಡಲಾಗಿದೆ.

ಕ್ಲಾಸಿಕ್ ಬೈಕ್‌ಗಳನ್ನು ಹೊಸ ಬಣ್ಣಗಳಲ್ಲಿ ಪರಿಚಯಿಸಿದ ಜಾವಾ ಮೋಟಾರ್‌ಸೈಕಲ್ಸ್

ಈ ಬೈಕ್‌ಗಳು ಖಾಕಿ ಹಾಗೂ ಮಿಡ್ನೈಟ್ ಗ್ರೇ ಬಣ್ಣಗಳ ಜೊತೆಗೆ ಸೇನೆಯ ಲಾಂಛನವನ್ನು ಹೊಂದಿರುವ ಮೊದಲ ಉತ್ಪಾದನಾ ಬೈಕ್‌ಗಳಾಗಿವೆ ಎಂದು ಜಾವಾ ಮೋಟಾರ್‌ಸೈಕಲ್ಸ್ ಕಂಪನಿ ಹೇಳಿದೆ.

ಕ್ಲಾಸಿಕ್ ಬೈಕ್‌ಗಳನ್ನು ಹೊಸ ಬಣ್ಣಗಳಲ್ಲಿ ಪರಿಚಯಿಸಿದ ಜಾವಾ ಮೋಟಾರ್‌ಸೈಕಲ್ಸ್

ಈ ಬೈಕ್‌ಗಳಲ್ಲಿರುವ ಖಾಕಿ ಹಾಗೂ ಮಿಡ್ನೈಟ್ ಗ್ರೇ ಬಣ್ಣಗಳು ಮ್ಯಾಟ್ ಫಿನಿಶಿಂಗ್ ಹೊಂದಿದ್ದರೆ, ಉಳಿದ ಮೆಕಾನಿಕಲ್ ಭಾಗಗಳು ಬ್ಲಾಕ್ ಥೀಮ್ ಫಿನಿಶಿಂಗ್ ಹೊಂದಿವೆ. ಈ ಬ್ಲಾಕ್ ಥೀಮ್'ಗೆ ಹೊಂದಾಣಿಕೆಯಾಗಲು ಎಂಜಿನ್ ಬ್ರಷ್ಡ್ ಫಿನ್ಸ್ ಹಾಗೂ ಬ್ಲ್ಯಾಕೌಟ್ ಸ್ಪೋಕ್ ರಿಮ್'ಗಳನ್ನು ನೀಡಲಾಗಿದೆ.

ಕ್ಲಾಸಿಕ್ ಬೈಕ್‌ಗಳನ್ನು ಹೊಸ ಬಣ್ಣಗಳಲ್ಲಿ ಪರಿಚಯಿಸಿದ ಜಾವಾ ಮೋಟಾರ್‌ಸೈಕಲ್ಸ್

ಹೊಸ ಬಣ್ಣವನ್ನು ಹೊಂದಿರುವ ಈ ಬೈಕ್‌ಗಳಲ್ಲಿ ಸುಧಾರಿತ ಸೀಟುಗಳನ್ನು ನೀಡಲಾಗಿದೆ. ಇವುಗಳು ರಿ ಡಿಸೈನ್ ಮಾಡಲಾದ ಸೀಟ್ ಪ್ಯಾನ್ ಹಾಗೂ ಕುಷನ್ ಹೊಂದಿದ್ದು ಬೈಕ್ ಸವಾರನಿಗೆ ಆರಾಮದಾಯಕ ಅನುಭವವನ್ನು ನೀಡುತ್ತವೆ.

ಕ್ಲಾಸಿಕ್ ಬೈಕ್‌ಗಳನ್ನು ಹೊಸ ಬಣ್ಣಗಳಲ್ಲಿ ಪರಿಚಯಿಸಿದ ಜಾವಾ ಮೋಟಾರ್‌ಸೈಕಲ್ಸ್

ರಿಟರ್ನ್ ಸಸ್ಪೆಂಷನ್ ಹಾಗೂ ಫ್ರೇಮ್ ಸೆಟಪ್'ಗಳು ಇತರ ರೈಡಿಂಗ್ ಹಾಗೂ ಹ್ಯಾಂಡ್ಲಿಂಗ್ ಫೀಚರ್'ಗಳೊಂದಿಗೆ ಹೆಚ್ಚು ಗ್ರೌಂಡ್ ಕ್ಲಿಯರೆನ್ಸ್ ನೀಡುತ್ತವೆ. ಹೊಸ ಬಣ್ಣಗಳು ಈ ಬೈಕ್‌ಗಳ ಡ್ಯುಯಲ್ ಎಬಿಎಸ್ ಆವೃತ್ತಿಯಲ್ಲಿ ಮಾತ್ರ ಲಭ್ಯವಿರಲಿವೆ ಎಂಬುದು ಗಮನಾರ್ಹ.

ಕ್ಲಾಸಿಕ್ ಬೈಕ್‌ಗಳನ್ನು ಹೊಸ ಬಣ್ಣಗಳಲ್ಲಿ ಪರಿಚಯಿಸಿದ ಜಾವಾ ಮೋಟಾರ್‌ಸೈಕಲ್ಸ್

ಹೊಸ ಬಣ್ಣವನ್ನು ಹೊಂದಿರುವ ಈ ಎರಡೂ ಬೈಕುಗಳಲ್ಲಿ 293 ಸಿಸಿ ಲಿಕ್ವಿಡ್ ಕೂಲ್ಡ್ ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 27.33 ಬಿಹೆಚ್‌ಪಿ ಪವರ್ ಹಾಗೂ 27.02 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.

ಕ್ಲಾಸಿಕ್ ಬೈಕ್‌ಗಳನ್ನು ಹೊಸ ಬಣ್ಣಗಳಲ್ಲಿ ಪರಿಚಯಿಸಿದ ಜಾವಾ ಮೋಟಾರ್‌ಸೈಕಲ್ಸ್

ಈ ಎಂಜಿನ್ ಅನ್ನು ಆರು ಸ್ಪೀಡಿನ ಟ್ರಾನ್ಸ್'ಮಿಷನ್ ಯುನಿಟ್'ನೊಂದಿಗೆ ಜೋಡಿಸಲಾಗಿದೆ. ತನ್ನ ಪ್ರಮುಖ ಬೈಕ್ ಅನ್ನು ಖಾಕಿ ಹಾಗೂ ಮಿಡ್ನೈಟ್ ಗ್ರೇ ಬಣ್ಣಗಳಲ್ಲಿ ಬಿಡುಗಡೆಗೊಳಿಸುವ ಮೂಲಕ ಜಾವಾ ಮೋಟಾರ್‌ಸೈಕಲ್ಸ್ ಕಂಪನಿಯು ಭಾರತೀಯ ಸೇನೆಯ ಸುವರ್ಣ ವಿಜಯ್ ವರ್ಷ ಆಚರಣೆಯಲ್ಲಿ ಭಾಗಿಯಾಗುತ್ತಿದೆ.

Most Read Articles

Kannada
English summary
Jawa Motorcycles launches classic bikes in new color options. Read in Kannada.
Story first published: Tuesday, July 13, 2021, 10:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X