ಪೆರಾಕ್ ಬೈಕಿನ ಬೆಲೆಯನ್ನು ಹೆಚ್ಚಿಸಿದ ಜಾವಾ ಮೋಟಾರ್‌ಸೈಕಲ್

ಜಾವಾ ಮೋಟಾರ್‌ಸೈಕಲ್ ಕಂಪನಿಯು ಇತ್ತೀಚೆಗೆ ಭಾರತದಲ್ಲಿ ತನ್ನ ಬಾಬರ್ ಶೈಲಿಯ ಪೆರಾಕ್ ಬೈಕಿನ ಬೆಲೆಯನ್ನು ಹೆಚ್ಚಿಸಿದೆ. ಜಾವಾ ಪೆರಾಕ್ ಬೈಕಿನ ಹಿಂದಿನ ಬೆಲೆಗೆ ಹೋಲಿಸಿದರೆ ಹೊಸದಾಗಿ ರೂ.2,987 ಗಳವರೆಗೆ ಹೆಚ್ಚಿಸಲಾಗಿದೆ.

ಪೆರಾಕ್ ಬೈಕಿನ ಬೆಲೆಯನ್ನು ಹೆಚ್ಚಿಸಿದ ಜಾವಾ ಮೋಟಾರ್‌ಸೈಕಲ್

ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಈ ಜಾವಾ ಪೆರಾಕ್ ಬೈಕಿನ ಬೆಲೆಯು ರೂ.1,97,487 ಗಳಾಗಿದೆ. ಬೆಲೆ ಏರಿಕೆಯ ಹೊರತಾಗಿ ಪೆರಾಕಿ ಬೈಕಿನಲ್ಲಿ ಉಳಿದಂತೆ ಯಾವುದೇ ಬದಲಾವಣೆಗಳು ಇರುವುದಿಲ್ಲ. ಜಾವಾ ಪೆರಾಕ್ ಬಾಬಾರಿ ಶೈಲಿಯ ಅತ್ಯಂತ ಉತ್ತಮ ಬೈಕ್ ಆಗಿದೆ. ಜಾವಾ ಪೆರಾಕ್ ಬೈಕಿಗೆ ಭಾರತೀಯ ಮಾರುಕಟ್ಟೆಯಲ್ಲಿ ಯಾವುದೇ ನೇರ ಪ್ರತಿಸ್ಪರ್ಧಿಗಳಿಲ್ಲ.

ಪೆರಾಕ್ ಬೈಕಿನ ಬೆಲೆಯನ್ನು ಹೆಚ್ಚಿಸಿದ ಜಾವಾ ಮೋಟಾರ್‌ಸೈಕಲ್

ಜಾವಾ ಮೋಟಾರ್‌ಸೈಕಲ್ ದೇಶಿಯ ಮಾರುಕಟ್ಟೆಯಲ್ಲಿ ಜಾವಾ ಸ್ಟ್ಯಾಂಡರ್ಡ್, ಜಾವಾ 42 ಹಾಗೂ ಜಾವಾ ಪೆರಾಕ್ ಎಂಬ ಮಾದರಿಗಳನ್ನು ಮಾರಾಟ ಮಾಡಲಾಗುತ್ತಿದೆ. ಜಾವಾ ಮೋಟಾರ್‌ಸೈಕಲ್ ಹಲವು ವರ್ಷಗಳ ನಂತರ 2018ರಲ್ಲಿ ಭಾರತೀಯ ಮಾರುಕಟ್ಟೆಗೆ ಮತ್ತೆ ಕಾಲಿಟ್ಟಿತು.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಪೆರಾಕ್ ಬೈಕಿನ ಬೆಲೆಯನ್ನು ಹೆಚ್ಚಿಸಿದ ಜಾವಾ ಮೋಟಾರ್‌ಸೈಕಲ್

ಬಾಬರ್‌ ಶೈಲಿಯ ವಿಶಿಷ್ಟವಾದ ಜಾವಾ ಪೆರಾಕ್ ಬೈಕ್ ಉದ್ದವಾದ ವ್ಹೀಲ್‌ಬೇಸ್ ಮತ್ತು ಕಡಿಮೆ-ಸ್ಲಂಗ್ ಪ್ರೊಫೈಲ್ ಅನ್ನು ಹೊಂದಿದೆ. ಅದರ ಬಾರ್-ಎಂಡ್ ರೌಂಡ್ ಮೀರರ್ ಗಳು, ಫ್ಲೋಟಿಂಗ್ ಶೈಲಿಯ ಸಿಂಗಲ್-ಪೀಸ್ ಸೀಟ್, ಅಂಡರ್ ಸೀಟ್ ಟೈಲ್ ಲ್ಯಾಂಪ್, ಫೆಂಡರ್‌ಗಳು ಮತ್ತು ಡ್ಯುಯಲ್ ಸ್ಲ್ಯಾಷ್-ಕಟ್ ಎಕ್ಸಾಸ್ಟ್ ಅನ್ನು ಹೊಂದಿದೆ.

ಪೆರಾಕ್ ಬೈಕಿನ ಬೆಲೆಯನ್ನು ಹೆಚ್ಚಿಸಿದ ಜಾವಾ ಮೋಟಾರ್‌ಸೈಕಲ್

ಇನ್ನು ಜಾವಾ ಪೆರಾಕ್ ಬೈಕಿನಲ್ಲಿ ಓಲ್ಡ್ ಸ್ಕೋಲ್ ವಿನ್ಯಾಸದ ರೌಂಡ್ ಅನಲಾಗ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಪಡೆಯುತ್ತದೆ

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಪೆರಾಕ್ ಬೈಕಿನ ಬೆಲೆಯನ್ನು ಹೆಚ್ಚಿಸಿದ ಜಾವಾ ಮೋಟಾರ್‌ಸೈಕಲ್

ಇನ್ನು ಬೈಕಿನ ಹೃದಯ ಭಾಗ ಎಂದು ಹೇಳುವ ಎಂಜಿನ್ ಬಗ್ಗೆ ಹೇಳುವುದಾದರೆ, ಈ ಜಾವಾ ಪೆರಾಕ್ ಬೈಕಿನಲ್ಲಿ 334 ಸಿಸಿ, ಸಿಂಗಲ್ ಸಿಲಿಂಡರ್, ಲಿಕ್ವಿಡ್-ಕೂಲ್ಡ್, ಡಿಒಹೆಚ್‌ಸಿ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ 334 ಸಿಸಿ ಎಂಜಿನ್ 30 ಬಿಹೆಚ್‌ಪಿ ಪವರ್ ಮತ್ತು 31 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಫೀಡ್ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಅಳವಡಿಸಿದೆ.

ಪೆರಾಕ್ ಬೈಕಿನ ಬೆಲೆಯನ್ನು ಹೆಚ್ಚಿಸಿದ ಜಾವಾ ಮೋಟಾರ್‌ಸೈಕಲ್

ಇನ್ನು ಜಾವಾ ಪೆರಾಕ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸಸ್ಪೆಂಕ್ಷನ್ ಸೆಟಪ್ ಅನ್ನು ಒಳಗೊಂಡಿದೆ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಪೆರಾಕ್ ಬೈಕಿನ ಬೆಲೆಯನ್ನು ಹೆಚ್ಚಿಸಿದ ಜಾವಾ ಮೋಟಾರ್‌ಸೈಕಲ್

ಇನ್ನು ಈ ಹೊಸ ಜಾವಾ ಪೆರಾಕ್ ಬೈಕ್ 175 ಕೆಜಿ ತೂಕವನ್ನು ಹೊಂದಿದೆ. ಇನ್ನು ಈ ಬೈಕ್ 14 ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಅಳವಡಿಸಲಾಗಿದೆ. ಈ ಜಾವಾ ಪೆರಾಕ್ ಬೈಕಿನಲ್ಲಿ 18-17-ಇಂಚಿನ ಸ್ಪೋಕ್ ವ್ಹೀಲ್ ಅನ್ನು ಹೊಂದಿವೆ.

ಪೆರಾಕ್ ಬೈಕಿನ ಬೆಲೆಯನ್ನು ಹೆಚ್ಚಿಸಿದ ಜಾವಾ ಮೋಟಾರ್‌ಸೈಕಲ್

ಜಾವಾ ಪೆರಾಕ್ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದೆ. ಆದರೆ ಇದೀಗ ಈ ಬೆಲೆ ಏರಿಕೆಯಿಂದ ಜಾವಾ ಪೆರಾಕ್ ತುಸು ದುಬಾರಿಯಾಗಿದೆ. ಇದರಿಂದಾಗಿ ಜಾವಾ ಪೆರಾಕ್ ಮಾರಾಟದ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದನ್ನು ಕಾದು ನೋಡಬೇಕು.

Most Read Articles

Kannada
English summary
Jawa Perak Becomes More Expensive. Read In Kannada.
Story first published: Monday, February 1, 2021, 9:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X