ಅನಾವರಣವಾಯ್ತು 2021ರ ಎಂವಿ ಅಗಸ್ಟಾ ಬ್ರೂಟೇಲ್ ಮತ್ತು ಡ್ರ್ಯಾಗ್‌ಸ್ಟರ್ ಬೈಕುಗಳು

ಇಟಲಿಯ ಸೂಪರ್‌ಬೈಕ್ ತಯಾರಕ ಕಂಪನಿಯಾದ ಎಂವಿ ಅಗಸ್ಟಾ ತನ್ನ ಹೊಸ ಬ್ರೂಟೇಲ್ ಮತ್ತು ಡ್ರ್ಯಾಗ್‌ಸ್ಟರ್ ಬೈಕುಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಈ ಎರಡೂ ಬೈಕುಗಳು ಸುಧಾರಿತ ಎಲೆಕ್ಟ್ರಾನಿಕ್ಸ್ ಮತ್ತು ಹೊಸ ಫೀಚರ್ ಅಪ್ದೇಟ್ ಗಳನ್ನು ಪಡೆದುಕೊಂಡಿದೆ.

ಅನಾವರಣವಾಯ್ತು 2021ರ ಎಂವಿ ಅಗಸ್ಟಾ ಬ್ರೂಟೇಲ್ ಮತ್ತು ಡ್ರ್ಯಾಗ್‌ಸ್ಟರ್ ಬೈಕುಗಳು

ಎಂವಿ ಅಗಸ್ಟಾ ಕಂಪನಿಯು ತನ್ನ ಬ್ರೂಟೇಲ್ ಮತ್ತು ಡ್ರ್ಯಾಗ್‌ಸ್ಟರ್ ಬೈಕುಗಳನ್ನು ಯುರೋ -5 ಮಾಲಿನ್ಯ ನಿಮಕ್ಕೆ ಅನುಗುಣವಾಗಿ ನವೀಕರಿಸಲಾಗುತ್ತದೆ. 2021ರ ಬ್ರೂಟೇಲ್ ಮತ್ತು ಡ್ರ್ಯಾಗ್‌ಸ್ಟರ್ ಬೈಕುಗಳು ಐಎಂಯು ಸಿಸ್ಟಂ ಅನ್ನು ಪಡೆಯುತ್ತದೆ. ಇನ್ನು ಈ ಹೊಸ ಬೈಕುಗಳು ವ್ಹೀಲಿ ಅಕಂಟ್ರೋಲ್ ಮತ್ತು ಎಬಿಎಸ್ ಅನ್ನು ಹೊಂದಿದೆ. ಇದರೊಂದಿಗೆ ಬ್ರೂಟೇಲ್ ಕ್ರೂಸ್ ಕಂಟ್ರೋಲ್ ಅನ್ನು ಪಡೆಯುತ್ತದೆ.

ಅನಾವರಣವಾಯ್ತು 2021ರ ಎಂವಿ ಅಗಸ್ಟಾ ಬ್ರೂಟೇಲ್ ಮತ್ತು ಡ್ರ್ಯಾಗ್‌ಸ್ಟರ್ ಬೈಕುಗಳು

ಎಂವಿ ಅಗಸ್ಟಾ ಬ್ರೂಟೇಲ್ ಮತ್ತು ಡ್ರ್ಯಾಗ್‌ಸ್ಟರ್ ಬೈಕುಗಳು ಹೊಸ 5.5-ಇಂಚಿನ ಟಿಎಫ್‌ಟಿ ಡಿಸ್ ಪ್ಲೇಯನ್ನು ಪಡೆಯುತ್ತದೆ. ಈ ಡಿಸ್ ಪ್ಲೇಯೊಂದಿಗೆ ಎಂವಿ ರೈಡ್ ಅಪ್ಲಿಕೇಶನ್ ಮೂಲಕ ಸ್ಮಾರ್ಟ್‌ಫೋನ್‌ಗೆ ಜೋಡಿಸಬಹುದಾಗಿದೆ. ಇನ್ನು ಈ ಬೈಕುಗಳಲ್ಲಿ ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಸಿಸ್ಟಂ ಅನ್ನು ನೀಡಿದೆ. ಇನ್ನು 2021ರ ಬ್ರೂಟೇಲ್ ಮತ್ತು ಡ್ರ್ಯಾಗ್‌ಸ್ಟರ್ ಬೈಕುಗಳಲ್ಲಿ ಉಳಿದ ಹಿಂದಿನ ಮಾದರಿಯಲ್ಲಿದ್ದ ಫೀಚರ್ ಗಳನ್ನು ಮುಂದುವರೆಸಲಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಅನಾವರಣವಾಯ್ತು 2021ರ ಎಂವಿ ಅಗಸ್ಟಾ ಬ್ರೂಟೇಲ್ ಮತ್ತು ಡ್ರ್ಯಾಗ್‌ಸ್ಟರ್ ಬೈಕುಗಳು

ಇನ್ನು ಬೈಕಿನ ಹೃದಯ ಭಾಗ ಎಂದೇ ಹೇಳುವ ಎಂಜಿನ್ ಬಗ್ಗೆ ಹೇಳುವುದಾದರೆ, ಈ 2021ರ ಎಂವಿ ಅಗಸ್ಟಾ ಬ್ರೂಟೇಲ್ ಮತ್ತು ಡ್ರ್ಯಾಗ್‌ಸ್ಟರ್ ಬೈಕುಗಳಲ್ಲಿ 798 ಸಿಸಿ 3-ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗುತ್ತದೆ.

ಅನಾವರಣವಾಯ್ತು 2021ರ ಎಂವಿ ಅಗಸ್ಟಾ ಬ್ರೂಟೇಲ್ ಮತ್ತು ಡ್ರ್ಯಾಗ್‌ಸ್ಟರ್ ಬೈಕುಗಳು

ಈ ಎಂಜಿನ್ ಹೊಸ ಡಿಎಲ್‌ಸಿ-ಲೇಪಿತ ಟ್ಯಾಪೆಟ್‌ಗಳು ಮತ್ತು ವಾಲ್ವ್ ಗೈಡ್‌ಗಳು, ಹೊಸ ಪಿಸ್ಟನ್ ರಾಡ್ ಮತ್ತು ಕೌಂಟರ್‌ಶಾಫ್ಟ್ ಬೇರಿಂಗ್‌ಗಳು ಮತ್ತು ಹೊಸ ಫ್ಯೂಯಲ್ ಇಂಜೆಕ್ಟರ್‌ಗಳನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಅನಾವರಣವಾಯ್ತು 2021ರ ಎಂವಿ ಅಗಸ್ಟಾ ಬ್ರೂಟೇಲ್ ಮತ್ತು ಡ್ರ್ಯಾಗ್‌ಸ್ಟರ್ ಬೈಕುಗಳು

ಇನ್ನು ಈ 798ಸಿಸಿ ಎಂಜಿನ್ 12,300 ಆರ್‌ಪಿಎಂನಲ್ಲಿ 140 ಬಿಹೆಚ್‍ಪಿ ಪವರ್ ಮತ್ತು 10,250 ಆರ್‌ಪಿಎಂನಲ್ಲಿ 87 ಎನ್‌ಎಂ ಟಾರ್ಕ್ ಅನ್ನು ಉತ್ಪದಿಸುತ್ತದೆ. ಈ ಎರಡು ಬೈಕುಗಳು ಒಂದೇ ಮಾದರಿಯಲ್ಲಿ ಪವರ್ ಮತ್ತು ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಅನಾವರಣವಾಯ್ತು 2021ರ ಎಂವಿ ಅಗಸ್ಟಾ ಬ್ರೂಟೇಲ್ ಮತ್ತು ಡ್ರ್ಯಾಗ್‌ಸ್ಟರ್ ಬೈಕುಗಳು

ಇನ್ನು ಎಂವಿ ಅಗಸ್ಟಾ ಬ್ರೂಟೇಲ್ ಮತ್ತು ಡ್ರ್ಯಾಗ್‌ಸ್ಟರ್ ಬೈಕುಗಳು ಗಂಟೆಗೆ 244 ಕಿಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇನ್ನು ಈ ಹೊಸ ಎರಡು ಬೈಕುಗಳು 16.5 ಲೀಟರ್ ಸಾಮರ್ಥ್ಯದ ಫ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ. ಇನ್ನು ಈ ಬೈಕುಗಳು 175 ಕೆಜಿ ತೂಕವನ್ನು ಹೊಂದಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಅನಾವರಣವಾಯ್ತು 2021ರ ಎಂವಿ ಅಗಸ್ಟಾ ಬ್ರೂಟೇಲ್ ಮತ್ತು ಡ್ರ್ಯಾಗ್‌ಸ್ಟರ್ ಬೈಕುಗಳು

ಇದಲ್ಲದೆ, ಬೈಕ್‌ಗಳು ಹೆಚ್ಚು ನಿಖರ ಮತ್ತು ಸುಗಮ ಗೇರ್‌ಶಿಫ್ಟ್‌ಗಳನ್ನು ಹೊಂದಿವೆ ಎಂದು ಹೇಳಲಾಗುತ್ತದೆ, ಎಲೆಕ್ಟ್ರಾನಿಕ್ ಬೈ-ಡ್ರೈಕ್ಷನಲ್ ಕ್ವಿಕ್‌ಶಿಫ್ಟರ್ ಸಹಾಯದಿಂದ ಮತ್ತು ಯುರೋ 5 ನಿಯಮಗಳಗೆ ಅನುಗುಣವಾಗಿ ನವೀಕರಿಸಲು ಎಕ್ಸಾಸ್ಟ್ ಸಿಸ್ಟಂ ಅನ್ನು ಬದಲಾವಣೆಗಳನ್ನು ಮಾಡಲಾಗಿದೆ.

ಅನಾವರಣವಾಯ್ತು 2021ರ ಎಂವಿ ಅಗಸ್ಟಾ ಬ್ರೂಟೇಲ್ ಮತ್ತು ಡ್ರ್ಯಾಗ್‌ಸ್ಟರ್ ಬೈಕುಗಳು

2021ರ ಬ್ರೂಟೇಲ್ ಮತ್ತು ಡ್ರ್ಯಾಗ್‌ಸ್ಟರ್ ಬೈಕುಗಳು ಎಸ್‌ಸಿಎಸ್ ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿದೆ. ಇನ್ನು ಈ ಬೈಕುಗಳು ವಿಶಾಲವಾದ 200/55-ವಿಭಾಗದ ಹಿಂಭಾಗದ ಟೈರ್ ಅನ್ನು ಸಹ ಹೊಂದಿದೆ, ಇನ್ನು ಈ ಬೈಕುಗಳ ಸೀಟನ್ನು ಮರುವಿನ್ಯಾಸಗೊಳಿಸಲಾಗಿದೆ.

Most Read Articles

Kannada
English summary
2021 MV Agusta Brutale, Dragster revealed. Read In Kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X