ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Triumph Rocket 3 221 ಸ್ಪೆಷಲ್ ಎಡಿಷನ್

ಬ್ರಿಟಿಷ್ ದ್ವಿಚಕ್ರ ತಯಾರಕ ಕಂಪನಿಯಾದ ಟ್ರಯಂಫ್ ಮೋಟರ್‌ಸೈಕಲ್ ತನ್ನ ಹೊಸ ರಾಕೆಟ್ 3 221 ಸ್ಪೆಷಲ್ ಎಡಿಷನ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಟ್ರಯಂಫ್ ರಾಕೆಟ್ 3 221 ಸ್ಪೆಷಲ್ ಎಡಿಷನ್ ಇದೇ ತಿಂಗಳ 21 ರಂದು ಬಿಡುಗಡೆಯಾಗಲಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Triumph Rocket 3 221 ಸ್ಪೆಷಲ್ ಎಡಿಷನ್

ಹೊಸ ಟ್ರಯಂಫ್ ರಾಕೆಟ್ 3 221 ಸ್ಪೆಷಲ್ ಎಡಿಷನ್ ಮಾದರಿಯು ಆರ್ ಮತ್ತು ಜಿಟಿ ಎಂಬ ಎರಡೂ ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಈ ಹೊಸ ಟ್ರಯಂಫ್ ರಾಕೆಟ್ 3 221 ಸ್ಪೆಷಲ್ ಎಡಿಷನ್ ಬೈಕಿನಲ್ಲಿ 2,458 ಸಿಸಿ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 165 ಬಿಹೆಚ್‍ಪಿ ಪವರ್ ಮತ್ತು 221 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇದು ಉತ್ಪಾದನಾ ಬೈಕಿನಲ್ಲಿ ಅತ್ಯಧಿಕವಾಗಿದೆ. ಈ ಸ್ಪೆಷಲ್ ಎಡಿಷನ್ ಬೈಕ್ ಗಳು ಇಂಧನ ಟ್ಯಾಂಕ್‌ನಲ್ಲಿ '221' ಡಿಕಾಲ್‌ಗಳನ್ನು ಹೊಂದಿವೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Triumph Rocket 3 221 ಸ್ಪೆಷಲ್ ಎಡಿಷನ್

ಡಿಕಾಲ್‌ಗಳು ಇಂಧನ ಟ್ಯಾಂಕ್‌ನಲ್ಲಿ ಎಂಜಿನ್ ವಿಶೇಷಣಗಳನ್ನು ಸಹ ಒಳಗೊಂಡಿವೆ. ಇವುಗಳು ಇಂಧನ ಟ್ಯಾಂಕ್‌ನಲ್ಲಿ 2458 ಸಿಸಿ ಎಂಜಿನ್, 167 ಪಿಎಸ್ ಪವರ್, 85.9 ಎಂಎಂ ಸ್ಟ್ರೋಕ್ ಮತ್ತು 110.2 ಎಂಎಂ ಬೋರ್ ಅನ್ನು ಒಳಗೊಂಡಿವೆ. ಈ ಬೈಕಿನಲ್ಲಿ ರೆಡ್ ಹಾಪರ್ ಬೇಸ್ ಪೇಂಟ್ ಅನ್ನು ಬಳಸಿದರೆ ಫ್ಲೈಸ್ಕ್ರೀನ್, ಸೈಡ್ ಪ್ಯಾನೆಲ್‌ಗಳು, ಹಿಂಬದಿ ವಿಭಾಗ, ರೇಡಿಯೇಟರ್ ಕೌಲ್‌ಗಳು ಮತ್ತು ಹೆಡ್‌ಲ್ಯಾಂಪ್ ಕೌಲ್‌ಗಳು ಸ್ಯಾಪಿಯರ್ ಬ್ಲ್ಯಾಕ್ ಬಣ್ಣವನ್ನು ಪಡೆಯುತ್ತವೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Triumph Rocket 3 221 ಸ್ಪೆಷಲ್ ಎಡಿಷನ್

ಈ ಹೊಸ ಬೈಕಿನಲ್ಲಿ ಹೀಟೆಡ್ ಗ್ರಿಪ್, ಟಾರ್ಕ್ ಅಸಿಸ್ಟೆಡ್ ಕ್ಲಚ್, ಎಲ್ಇಡಿ ಹೆಡ್‌ಲ್ಯಾಂಪ್‌, ಟೇಲ್‌ಲೈಟ್‌, ಎಕ್ಸ್ ಟೆಂಡೆಡ್ ಫ್ಲೈ ಸ್ಕ್ರೀನ್, ಅಡ್ಜಸ್ಟಬಲ್ ಫುಟ್‌ಪೆಗ್‌, ಹಗುರ ತೂಕದ 20 ಸ್ಪೋಕ್ ಅಲ್ಯೂಮಿನಿಯಂ ವ್ಹೀಲ್ ಸೇರಿದಂತೆ ಹಲವು ಸ್ಟಾಂಡರ್ಡ್ ಫೀಚರ್‍‍ಗಳನ್ನು ಹೊಂದಿರುತ್ತದೆ,

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Triumph Rocket 3 221 ಸ್ಪೆಷಲ್ ಎಡಿಷನ್

ಈ ಹೊಸ ಸ್ಪೆಷಲ್ ಎಡಿಷನ್ ಅಲ್ಯುಮಿನಿಯಂ ಚಾಸೀಸ್ ಅನ್ನು ಸಹ ಹೊಂದಿದೆ. ಇದು ಬೃಹತ್ ಎಂಜಿನ್‍‍ನ ಒತ್ತಡ ನಿವಾರಿಸುವಂತೆ ಕಾರ್ಯನಿರ್ವಹಿಸುತ್ತದೆ. ಇದರ ಜೊತೆಗೆ ಸಸ್ಪೆಂಷನ್ ಹಾಗೂ ಬ್ರೇಕ್‍‍ಗಳನ್ನು ಕೂಡ ಒಳಗೊಂಡಿರುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Triumph Rocket 3 221 ಸ್ಪೆಷಲ್ ಎಡಿಷನ್

ಈ ಹೊಸ ಬೈಕಿನಲ್ಲಿ ಸಸ್ಪೆಂಷನ್‍‍ಗಳಿಗಾಗಿ ಮುಂಭಾಗದಲ್ಲಿ 47 ಎಂಎಂ ಶೋವಾ ಯುಎಸ್‍‍ಡಿ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್‍‍ಗಳಿವೆ. ಮುಂಭಾಗದ ಸಸ್ಪೆಂಷನ್ 120 ಎಂಎಂ ಶೋವಾ ಟ್ರಾವೆಲ್‍‍ನೊಂದಿಗೆ ಬಂದರೆ, ಹಿಂಭಾಗವು 107 ಎಂಎಂ ಟ್ರಾವೆಲ್‍‍ನೊಂದಿಗೆ ಬರುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Triumph Rocket 3 221 ಸ್ಪೆಷಲ್ ಎಡಿಷನ್

ಮುಂಭಾಗದ ಸಸ್ಪೆಂಷನ್ ಕಂಪ್ರೆಷನ್ ಹಾಗೂ ರಿಬೌಂಡ್ ಅಡ್ಜಸ್ಟಬಿಲಿಟಿಯೊಂದಿಗೆ ಬರುತ್ತದೆ. ಹಿಂಭಾಗದ ಸಸ್ಪೆಂಷನ್ ರಿಮೋಟ್ ಅಡ್ಜಸ್ಟರ್ ಹೊಂದಿದೆ. ಇನ್ನು ಈ ಹೊಸ ಬೈಕಿನಲ್ಲಿ ಬ್ರೇಕಿಂಗ್‍‍ಗಳಿಗಾಗಿ ಮುಂಭಾಗದಲ್ಲಿ 320 ಎಂಎಂ ಡ್ಯುಯಲ್ ಡಿಸ್ಕ್ ಹಾಗೂ ಹಿಂಭಾಗದಲ್ಲಿ ಸಿಂಗಲ್ 300 ಎಂಎಂ ಡಿಸ್ಕ್ ಬ್ರೇಕ್ ಗಳಿವೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Triumph Rocket 3 221 ಸ್ಪೆಷಲ್ ಎಡಿಷನ್

ಹೊಸ ಟ್ರಯಂಫ್ ರಾಕೆಟ್ 3 221 ಸ್ಪೆಷಲ್ ಎಡಿಷನ್ ಬೈಕಿನಲ್ಲಿ ರೋಡ್, ರೈನ್, ಸ್ಪೋರ್ಟ್ ಮತ್ತು ಸಂಪೂರ್ಣ ಕಾನ್ಫಿಗರ್ ಮಾಡಬಹುದಾದ ರೈಡರ್ ಮೋಡ್‌ಗಳನ್ನು ಹೊಂದಿದೆ. ಇನ್ನು ಈ ಬೈಕಿನಲ್ಲಿ ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್ (ಎಬಿಎಸ್) ಮತ್ತು ಟ್ರ್ಯಾಕ್ಷನ್ ಕಂಟ್ರೋಲ್ ಅನ್ನು ಹೊಂದಿದೆ. ಕೀ ಲೆಸ್ ಇಗ್ನೀಷನ್ ಮತು ಹಿಲ್ ಹೋಲ್ಡ್ ಸಿಸ್ಟಂ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ,

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Triumph Rocket 3 221 ಸ್ಪೆಷಲ್ ಎಡಿಷನ್

ಟ್ರಯಂಫ್ ಮೋಟಾರ್‌ಸೈಕಲ್ಸ್ ಜಾಗತಿಕವಾಗಿ ತನ್ನ ಹೊಸ ಟೈಗರ್ 1200 ಬೈಕ್ ಅನ್ನು ಇತ್ತೀಚೆಗೆ ಅನಾವರಣಗೊಳಿಸಿತ್ತು. ಈ ಹೊಸ ಟ್ರಯಂಫ್ ಟೈಗರ್ 1200 ಬೈಕ್ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಹೊಸ ಟ್ರಯಂಫ್ ಟೈಗರ್ 1200 ಬೈಕ್ ಕ್ಲಾಸ್ ಲೀಡಿಂಗ್ ಹ್ಯಾಂಡ್ಲಿಂಗ್‌ನೊಂದಿಗೆ ಗಮನಾರ್ಹವಾಗಿ ಹಗುರವಾದ, ಹೆಚ್ಚು ಶಕ್ತಿಶಾಲಿಯಾಗಿದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Triumph Rocket 3 221 ಸ್ಪೆಷಲ್ ಎಡಿಷನ್

ಈ ಹೊಸ ಟೈಗರ್ 1200 ಸಂಪೂರ್ಣವಾಗಿ ಹೊಸ ಬೈಕ್ ಆಗಿದ್ದು, ಹೆಚ್ಚು ಪವರ್, ಹೊಸ ಚಾಸಿಸ್ ಮತ್ತು ಕಡಿಮೆ ತೂಕದೊಂದಿಗೆ ಹೊಸ ಟ್ರಿಪಲ್ ಎಂಜಿನ್ ಅನ್ನು ಒಳಗೊಂಡಿದೆ. ಟೈಗರ್ 900 ನಂತೆ, 2022ರ ಟ್ರಯಂಫ್ ಟೈಗರ್ 1200 ಬೈಕ್ ಅನ್ನು ಎರಡು ಮಾದರಿಗಳಲ್ಲಿ ನೀಡಲಾಗುವುದು, ಟೈಗರ್ 1200 ಜಿಟಿ ಮಾದರಿಯು ಹೆಚ್ಚು ರಸ್ತೆ-ಆಧಾರಿತವಾಗಿದೆ, ಆದರೆ ಟೈಗರ್ 1200 ರ್‍ಯಾಲಿ ಮಾದರಿಯು ಹೆಚ್ಚು ಆಫ್-ರೋಡ್ ಆಧಾರಿತವಾಗಿರುತ್ತದೆ.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Triumph Rocket 3 221 ಸ್ಪೆಷಲ್ ಎಡಿಷನ್

ಹೊಸ ಟ್ರಯಂಫ್ ಟೈಗರ್ 1200 ಜಿಟಿ 19-ಇಂಚಿನ ಮುಂಭಾಗ ಮತ್ತು 18-ಇಂಚಿನ ಹಿಂಬದಿಯು ಅಲ್ಯೂಮಿನಿಯಂ ವ್ಹೀಲ್ ಗಳನ್ನು ಹೊಂದಿವೆ. ಆದರೆ ರ್‍ಯಾಲಿ ಮಾದರಿಯು ಎಲ್ಲಾ ರೀತಿ ಕಠಿಣ ಭೂಪ್ರದೇಶಗಳಲ್ಲಿಯು ಚಲಿಸುವಂತೆ ವಿನ್ಯಾಸಗೊಳಿಸಲಾಗಿದೆ, ಇದರ ಮುಂಭಾಗ 21-ಇಂಚಿನ ಮತ್ತು ಹಿಂಭಾಗ 18-ಇಂಚಿನ ಟ್ಯೂಬ್‌ಲೆಸ್ ಸ್ಪೋಕ್ಡ್ ವ್ಹೀಲ್ ಗಳನ್ನು ಹೊಂದಿವೆ. ಹೊಸ ಟ್ರಯಂಫ್ ಟೈಗರ್ 1200 ಬೈಕ್ ಮುಂದಿನ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ. ಇನ್ನು ಈ ಹೊಸ ಬೈಕ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ಅಂದಾಜು ರೂ.15 ಲಕ್ಷವಾಗಿರಬಹುದು.

ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಹೊಸ Triumph Rocket 3 221 ಸ್ಪೆಷಲ್ ಎಡಿಷನ್

ಇನ್ನು ಹೊಸ ಟ್ರಯಂಫ್ ರಾಕೆಟ್ 3 221 ಸ್ಪೆಷಲ್ ಎಡಿಷನ್ ಬೈಕಿನಲ್ಲಿ ಸ್ಟೈಲಿಂಗ್ ಪರಿಷ್ಕರಣೆಗಳಿಗೆ ಸೀಮಿತವಾಗಿವೆ. ವಿಶೇಷಣಗಳು, ವಿನ್ಯಾಸ, ಹಾರ್ಡ್‌ವೇರ್, ಎಲೆಕ್ಟ್ರಾನಿಕ್ಸ್ ಮತ್ತು ವೈಶಿಷ್ಟ್ಯಗಳು ಆಯಾ ಸ್ಟ್ಯಾಂಡರ್ಡ್ ಮಾದರಿಗೆ ಹೋಲುತ್ತವೆ. ಈ ಹೊಸ ಸ್ಪೆಷಲ್ ಎಡಿಷನ್ ಮಾದರಿಯು ಇದೇ ತಿಂಗಳು ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

Most Read Articles

Kannada
English summary
New triumph rocket 3 221 special edition launch details revealed
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X